ಬ್ರೇಕಿಂಗ್ ನ್ಯೂಸ್
27-05-22 09:14 pm Source: Vijayakarnataka ಡಿಜಿಟಲ್ ಟೆಕ್
ಚೀನಾದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಗೊಂಡಿರುವ Realme Pad X ಟ್ಯಾಬ್ಲೆಟ್ ಅನ್ನು ಭಾರತದಲ್ಲಿ ಪರಿಚಯಿಸುವ ಬಗ್ಗೆ ರಿಯಲ್‌ಮಿ ಕಂಪೆನಿಯ ಉಪಾಧ್ಯಕ್ಷ ಮಾಧವ್ ಶೇಠ್ ಅವರು ತಿಳಿಸಿದ್ದಾರೆ. ದೇಶದಲ್ಲಿ Realme Pad X ಟ್ಯಾಬ್ಲೆಟ್ ಅನ್ನು ತರುವ ಕುರಿತು ಟ್ವೀಟ್ ಒಂದನ್ನು ಮಾಡಿರುವ ಶೇಠ್ ಅವರು, ತಮ್ಮ ಟ್ವೀಟ್‌ನಲ್ಲಿ, ಚೀನಾದಲ್ಲಿ ಟ್ಯಾಬ್ಲೆಟ್ ಅನ್ನು ಘೋಷಿಸಿದ ಸ್ವಲ್ಪ ಸಮಯದ ನಂತರ, ದೇಶದಲ್ಲಿಯೂ Realme Pad X ಅನ್ನು ಪ್ರಾರಂಭಿಸಲು ಬಯಸುತ್ತೀರಾ ಎಂದು ಬಳಕೆದಾರರನ್ನು ಕೇಳಿದ್ದಾರೆ. ಅಷ್ಟೇ ಅಲ್ಲದೇ "ಈ ಪೋಸ್ಟ್ 300 ರಿಟ್ವೀಟ್ ಮಾಡಿದರೆ ನಾವು ಅದನ್ನು ಭಾರತಕ್ಕೆ ತರುತ್ತೇವೆ!" ಎಂದು ಹೇಳಿದ್ದಾರೆ. ಇದರಿಂದಾಗಿ ದೇಶದಲ್ಲಿ ರಿಯಲ್‌ಮಿ ಕಂಪೆನಿಯ ಇತ್ತೀಚಿನ Realme Pad X ಟ್ಯಾಬ್ಲೆಟ್ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.
ಕಳೆದ ಗುರುವಾರವಷ್ಟೇ ಚೀನಾದಲ್ಲಿ Realme Pad X ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಲಾಗಿದ್ದು, ಅಲ್ಲಿನ್ನು ಈ ಸಾಧನವು ಪ್ರೀ-ಬುಕ್ ಮಾಡಲಷ್ಟೇ ಲಭ್ಯವಿದೆ. 6GB RAM ನೊಂದಿಗೆ ಜೋಡಿಸಲಾದ Snapdragon 695 SoC ಪ್ರೊಸೆಸರ್ , 11-ಇಂಚಿನ 2K ಡಿಸ್‌ಪ್ಲೇ, ಕ್ವಾಡ್ ಸ್ಪೀಕರ್ ಸೆಟಪ್, 33W ವೇಗದ ಚಾರ್ಜಿಂಗ್ ಬೆಂಬಲವಿರುವ 8,340mAh ಬ್ಯಾಟರಿ ಮತ್ತು ಮ್ಯಾಗ್ನೆಟಿಕ್ ಸ್ಟೈಲಸ್ ಮತ್ತು ಸ್ಮಾರ್ಟ್ ಕೀಬೋರ್ಡ್‌ಗೆ ಬೆಂಬಲದ ವೈಶಿಷ್ಟ್ಯಗಳಲ್ಲಿ ಬಿಡುಗಡೆಯಾಗಿರುವ Realme Pad X ಟ್ಯಾಬ್ಲೆಟ್ ಈಗಾಗಲೇ ಎಲ್ಲರ ಗಮನಸೆಳೆದಿದೆ. ಹಾಗಾದರೆ, ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಎಂಟ್ರಿ ನೀಡಲಿರುವ ನೂತನ Realme Pad X ಟ್ಯಾಬ್ಲೆಟ್ ಹೊಂದಿರುವ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

Realme Pad X ವಿಶೇಷಣಗಳು
ನೂತನ Realme Pad X ಟ್ಯಾಬ್ಲೆಟ್ 11-ಇಂಚಿನ 2K (2,048 x 1,080 ಪಿಕ್ಸೆಲ್‌ಗಳು) ರೆಸಲ್ಯೂಶನ್ LCD ಡಿಸ್ಪ್ಲೇ ಜೊತೆಗೆ 450 nits ಗರಿಷ್ಠ ಬ್ರೈಟ್‌ನೆಸ್ ಮತ್ತು DC ಡಿಮ್ಮಿಂಗ್ ಬೆಂಬಲವನ್ನು ಹೊಂದಿದೆ. 6GB RAM ಮತ್ತು 128GB ಮೆಮೊರಿಯೊಂದಿಗೆ ಸ್ನಾಪ್ಡ್ರಾಗನ್ 695 SoC ನಿಂದ ಚಾಲಿತವಾಗಿರುವ ಈ ಸಾಧನವು Realme UI 3.0 ನಲ್ಲಿ ಕಾರ್ಯನಿರ್ವಹಿಸುತ್ತದೆ. SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಣೆ ಹಾಗೂ ಬಳಕೆಯಾಗದ ಮೆಮೊರಿಯನ್ನು ಬಳಸಿಕೊಂಡು RAM ಅನ್ನು 11GB ಹೆಚ್ಚಿಸಲು ಈ ಟ್ಯಾಬ್ಲೆಟ್ ಅನುಮತಿಸುತ್ತದೆ. ಕ್ಯಾಮೆರಾ ವಿಭಾಗದಲ್ಲಿ, Realme Pad X ಸಾಧನವು 13-ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 105-ಡಿಗ್ರಿ ವೀಕ್ಷಣೆಯನ್ನು ಒದಗಿಸುವ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.
![]()
ಟ್ಯಾಬ್ಲೆಟ್‌ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ v5.0 ಮತ್ತು USB ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿವೆ. 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 8,340mAh ಬ್ಯಾಟರಿಯನ್ನು Realme Pad X ಟ್ಯಾಬ್ಲೆಟ್ ನಲ್ಲಿ ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಕ್ವಾಡ್ ಸ್ಪೀಕರ್‌ಗಳು ಮತ್ತು ಮ್ಯಾಗ್ನೆಟಿಕ್ ಸ್ಟೈಲಸ್ ಮತ್ತು ಸ್ಮಾರ್ಟ್ ಕೀಬೋರ್ಡ್ ಬೆಂಬಲವನ್ನು ತರಲಾಗಿದೆ. ಪ್ರಸ್ತುತ ಚೀನಾದಲ್ಲಿ ಬ್ರೈಟ್ ಗ್ರೀನ್ ಚೆಸ್‌ಬೋರ್ಡ್, ಸೀ ಸಾಲ್ಟ್ ಬ್ಲೂ ಮತ್ತು ಸ್ಟಾರ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಪೂರ್ವ-ಬುಕಿಂಗ್‌ಗೆ ಲಭ್ಯವಿರುವ Realme Pad X ಟ್ಯಾಬ್ಲೆಟ್ 4GB RAM + 64GB ಸ್ಟೋರೇಜ್ ಮಾದರಿಗೆ CNY 1,299 (ಸುಮಾರು ರೂ. 15,000) ಮತ್ತು 6GB RAM + 128GB ಸ್ಟೋರೇಜ್ ಮಾದರಿಗೆ CNY 1599 (ಸರಿಸುಮಾರು ರೂ. 18,400) ಬೆಲೆಗಳನ್ನು ಹೊಂದಿದೆ.
Realme Pad X India Launch Teased By Madhav Sheth.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
21-07-26 08:03 pm
Mangaluru Staffer
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm
ಉಕ್ರೇನ್ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ;...
21-07-26 11:47 am
ತ್ರಿಪುರಾ ಡಿಜಿಪಿ ಅನುರಾಗ್ ಧನಕರ್ ಕಚೇರಿಯಲ್ಲಿ ಗುಂಡ...
20-07-26 10:17 pm