ಬ್ರೇಕಿಂಗ್ ನ್ಯೂಸ್
28-05-22 08:27 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ Boat ದೇಶದಲ್ಲಿ ತನ್ನ ನೂತನ Boat Wave Neo ಎಂಬ ಹೊಸ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸಿದೆ. ಕಳೆದ ಮಾರ್ಚ್ ತಿಂಗಳಿನಲ್ಲಷ್ಟೇ Boat Wave Pro ಮತ್ತು Boat Wave Lite ಎಂಬ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಿರುವ Boat ಕಂಪೆನಿ, ಇದೀಗ ತನ್ನ Wave ಸರಣಿಯಲ್ಲಿ ಮೂರನೇ ಸ್ಮಾರ್ಟ್‌ವಾಚ್ ಆಗಿ Boat Wave Neo ಸ್ಮಾರ್ಟ್‌ವಾಚ್ ಅನ್ನು 2000 ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ತಂದಿದೆ. ಹಾಗಾದರೆ, ಬಜೆಟ್ ಬೆಲೆಯಲ್ಲಿ ಪ್ರಾರಂಭಿಸಲಾಗಿರುವ ಹೊಸ Boat Wave Neo ಸ್ಮಾರ್ಟ್‌ವಾಚ್ ಬಗ್ಗೆ ಸಂಪುರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ನೂತನ Boat Wave Neo ಸ್ಮಾರ್ಟ್‌ವಾಚ್ ನಲ್ಲಿ 2.5D ಬಾಗಿದ ಗಾಜಿನ ಪರದೆಯ 1.69-ಇಂಚಿನ ಪೂರ್ಣ ಟಚ್ ಸ್ಕ್ರೀನ್ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಈ ಡಿಸ್‌ಪ್ಲೇಯು 454x454 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 550ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಸಾಕಷ್ಟು ಹಗುರವಾಗಿ ಕೇವಲ 35 ಗ್ರಾಂ ತೂಗುವ ಬೋಟ್‌ನ ಈ ಹೊಸ ಸ್ಮಾರ್ಟ್‌ವಾಚ್‌ನಲ್ಲಿ 24/7 ಹೃದಯ ಬಡಿತ ಸಂವೇದಕ, ರಕ್ತ-ಆಮ್ಲಜನಕದ ಮಟ್ಟವನ್ನು ಅಳೆಯಲು SpO2 ಮಾನಿಟರ್, ಒತ್ತಡ ಟ್ರ್ಯಾಕರ್, ಅಕ್ಸೆಲೆರೊಮೀಟರ್ ಮತ್ತು ಸ್ಲೀಪ್ ಟ್ರ್ಯಾಕರ್ ವೈಶಿಷ್ಟ್ಯಗಳನ್ನು ತರಲಾಗಿದ್ದು, ಅನೇಕ ಕ್ರೀಡೆ-ಸಂಬಂಧಿತ ವೈಶಿಷ್ಟ್ಯಗಳನ್ನು ಮತ್ತು ಆರೋಗ್ಯ ಮತ್ತು ಫಿಟ್‌ನೆಸ್ ಸಂಬಂಧಿತ ವೈಶಿಷ್ಟ್ಯಗಳನ್ನು ಈ ವಾಚ್ ಒದಗಿಸುತ್ತದೆ.

ಕ್ರೀಡೆ-ಸಂಬಂಧಿತ ವೈಶಿಷ್ಟ್ಯಗಳನ್ನು ಪರಿಗಣಿಸಿದಂತೆ, Boat Wave Neo ಸ್ಮಾರ್ಟ್‌ವಾಚ್ ವಾಕಿಂಗ್, ರನ್ನಿಂಗ್, ಕ್ಲೈಂಬಿಂಗ್, ಯೋಗ, ಬಾಸ್ಕೆಟ್‌ಬಾಲ್, ಸೈಕ್ಲಿಂಗ್, ಹೈಕಿಂಗ್, ಸ್ಕಿಪ್ಪಿಂಗ್, ಬ್ಯಾಡ್ಮಿಂಟನ್ ಮತ್ತು ಈಜು ಸೇರಿದಂತೆ 10 ಕ್ರೀಡಾ ವಿಧಾನಗಳನ್ನು ಹೊಂದಿದೆ. ದೈನಂದಿನ ಚಟುವಟಿಕೆಗಳಾದ ಪ್ರಯಾಣಿಸಿದ ದೂರ, ಸುಟ್ಟ ಕ್ಯಾಲೋರಿಗಳು ಮತ್ತು ಹೆಚ್ಚಿನದನ್ನು ನೀವು ಪರಿಶೀಲಿಸಬಹುದಾದ ಕಾರಣ ಈ ಸಾಧನವು ಫಿಟ್‌ನೆಸ್ ಟ್ರ್ಯಾಕರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇಷ್ಟೇ ಅಲ್ಲದೇ, ಕರೆ ಎಚ್ಚರಿಕೆಗಳು, SMS, ಹವಾಮಾನ ನವೀಕರಣಗಳು, ಕುಳಿತುಕೊಳ್ಳುವ ಜ್ಞಾಪನೆಗಳು, ಅಲಾರಮ್‌ಗ, ಸಂಗೀತ ನಿಯಂತ್ರಣ, ಕ್ಯಾಮೆರಾ ನಿಯಂತ್ರಣ, ಬ್ಲೂಟೂತ್ ಸಂಪರ್ಕ ಮತ್ತು ಹೆಚ್ಚಿನವುಗಳಂತಹ ಬಹು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬಂದಿದೆ.

Boat ಕಂಪನಿಯು ಹೇಳಿಕೊಂಡಿರುಂವತೆ, ಈ ನೂತನ Boat Wave Neo ಸ್ಮಾರ್ಟ್‌ವಾಚ್ ಒಂದೇ ಚಾರ್ಜ್‌ನಲ್ಲಿ ಸಾಧನವು 7 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿಗೆ ಬೆಂಬಲವನ್ನು ನೀಡುತ್ತದೆ. ಈ ಸ್ಮಾರ್ಟ್ ವಾಚ್ ಅನ್ನು ಬೋಟ್ ಹಬ್ ಅಪ್ಲಿಕೇಶನ್‌ಗೆ ಸುಲಭವಾಗಿ ಸಂಪರ್ಕಿಸಬಹುದಾಗಿದ್ದು, ಎಲ್ಲಾ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಬೆಂಬಲವನ್ನು ನೀಡಲಿದೆ ಎಂದು ಕಂಪೆನಿ ತಿಳಿಸಿದೆ. ಭಾರತದಲ್ಲಿ Boat Wave Neo ಸ್ಮಾರ್ಟ್‌ವಾಚ್ 1,799 ರೂ. ಬೆಲೆಯಲ್ಲಿ ಲಭ್ಯವಿದ್ದು, ಇದೇ ಮೇ 27 ರಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್ ಮೂಲಕ ಕಪ್ಪು, ನೀಲಿ ಮತ್ತು ಬರ್ಗಂಡಿ ಬಣ್ಣಗಳಲ್ಲಿ ಮಾರಾಟಕ್ಕೆ ಬರುತ್ತಿದೆ.
Boat Wave Neo Budget Smartwatch Launched In India.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
26-01-26 05:05 pm
HK News Desk
ರೌಡಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ; ಪೊಲೀಸರ ಕೈಗೆ...
24-01-26 11:23 pm
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
26-01-26 03:03 pm
HK News Desk
ಅಮಾನ್ಯ ನೋಟಿನ 400 ಕೋಟಿ ದರೋಡೆ ಪ್ರಕರಣ ; ಗುಜರಾತ್...
25-01-26 10:11 pm
Indias Biggest Robbery in Belagavi: ಇಡೀ ದೇಶದಲ...
25-01-26 09:48 am
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm