ಬ್ರೇಕಿಂಗ್ ನ್ಯೂಸ್
31-05-22 09:11 pm Source: Vijayakarnataka ಡಿಜಿಟಲ್ ಟೆಕ್
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಮೊಬೈಲ್ ಬ್ರ್ಯಾಂಡ್ iQOO ಇಂದು ದೇಶದಲ್ಲಿ ತನ್ನ ವಿನೂತನ iQOO Neo 6 ಸ್ಮಾರ್ಟ್‌ಫೋನನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಕಳೆದ ತಿಂಗಳು ಚೀನಾದಲ್ಲಿ ಪರಿಚಯಿಸಲಾಗಿದ್ದ iQOO Neo 6 SE ಸ್ಮಾರ್ಟ್‌ಫೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿ iQoo Neo 6 ಸ್ಮಾರ್ಟ್‌ಫೋನನ್ನು ಲಾಂಚ್ ಮಾಡಲಾಗಿದ್ದು, 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.62-ಇಂಚಿನ E4 AMOLED ಡಿಸ್‌ಪ್ಲೇ, Snapdragon 870 SoC ಪ್ರೊಸೆಸರ್, 80W FlashCharge ಬೆಂಬಲದ 4,700mAh ಬ್ಯಾಟರಿ ಮತ್ತು 64-MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊತ್ತು iQoo Neo 6 ಸ್ಮಾರ್ಟ್‌ಫೋನ್ ಎಂಟ್ರಿ ನೀಡಿದೆ. ಹಾಗಾದರೆ, ನೂತನ iQOO Neo 6 ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
iQOO Neo 6 ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು.
ನೂತನ iQOO Neo 6 ಸ್ಮಾರ್ಟ್‌ಫೋನ್ 6.62-ಇಂಚಿನ ಫುಲ್-HD+ (1,080x2,400 ಪಿಕ್ಸೆಲ್‌ಗಳು) E4 AMOLED ಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಸಾಮರ್ಥ್ಯದಲ್ಲಿದೆ. Snapdragon 870 SoC ಪ್ರೊಸೆಸರ್ ಅನ್ನು ಹೊಂದಿರುವ ಈ ಫೋನ್ 12GB ಯ RAM ಮತ್ತು 256GB ವರೆಗಿನ UFS 3.1 ಅಂತರ್ಗತ ಮೆಮೊರಿಯೊಂದಿಗೆ ಜೋಡಿಸಲ್ಪಟ್ಟಿದೆ. ಗೇಮಿಂಗ್ ಪ್ರಿಯರಿಗಾಗಿ iQOO Neo 6 ಸ್ಮಾರ್ಟ್‌ಫೋನಿನ ಸುಧಾರಿತ ಥರ್ಮಲ್ ಮ್ಯಾನೇಜ್‌ಮೆಂಟ್‌ಗಾಗಿ ಲಿಕ್ವಿಡ್ ಕೂಲಿಂಗ್ ವೇಪರ್ ಚೇಂಬರ್ ಅನ್ನು ಅಳವಡಿಸಲಾಗಿದೆ.

iQoo Neo 6 ಸ್ಮಾರ್ಟ್‌ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು f/1.89 ಅಪರ್ಚರ್ ಲೆನ್ಸ್‌ನೊಂದಿಗೆ 64-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL GW1P ಪ್ರಾಥಮಿಕ ಸಂವೇದಕ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ಗೆ ಬೆಂಬಲವನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ f/2,2 ಅಪರ್ಚರ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ ಮತ್ತು f/2.4 ಅಪರ್ಚರ್ ಲೆನ್ಸ್‌ನೊಂದಿಗೆಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾಗಳಿವೆ. ಸೆಲ್ಫಿಗಳಿಗಾಗಿ, ಫೋನಿನಲ್ಲಿ f/2.0 ಅಪರ್ಚರ್ ಲೆನ್ಸ್‌ನೊಂದಿಗೆ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.
iQoo Neo 6 ಸ್ಮಾರ್ಟ್‌ಫೋನಿನಲ್ಲಿರುವ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ 5.2, GPS ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳು ಸೇರಿಕೊಂಡಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಜೊತೆಗೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಮ್ಯಾಗ್ನೆಟೋಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್ ಗಳನ್ನು ಸ್ಮಾರ್ಟ್‌ಫೋನ್ ಒಳಗೊಂಡಿವೆ. ಹಾಗೂ 80W FlashCharge ಬೆಂಬಲದೊಂದಿಗೆ 4,700mAh ಬ್ಯಾಟರಿಯನ್ನು ಸಹ ಅಳವಡಿಸಲಾಗಿದೆ.

ಭಾರತದಲ್ಲಿ iQoo Neo 6 ಬೆಲೆ, ಲಭ್ಯತೆ
ಭಾರತದಲ್ಲಿ iQoo Neo 6 ಆರಂಭಿಕ 8GB + 128GB ಸ್ಟೋರೇಜ್ ಮಾದರಿಯು 29,999 ರೂ.ಬೆಲೆಯಲ್ಲಿ ಬಿಡುಗಡೆಗೊಂಡಿದ್ದರೆ, ಇದರ ಉನ್ನತ-ಮಟ್ಟದ 12GB + 256GB ರೂಪಾಂತರ ಸ್ಮಾರ್ಟ್‌ಫೋನ್ 33,999 ರೂ.ಗಳಿಗೆ ಪರಿಚಯಗೊಂಡಿದೆ. ಸೈಬರ್ ರೇಜ್ ಮತ್ತು ಡಾರ್ಕ್ ನೋವಾ ಬಣ್ಣ ಆಯ್ಕೆಗಳಲ್ಲಿ ಅಮೆಜಾನ್ ಮತ್ತು ಕಂಪನಿಯ ವೆಬ್‌ಸೈಟ್ ಮೂಲಕ ಬಿಡುಗಡೆಯಾದ ಕ್ಷಣದಿಂದಲೇ ಮಾರಾಟಕ್ಕೆ ಬಂದಿರುವ ಈ ಸ್ಮಾರ್ಟ್‌ಫೋನ್ ಮೇಲೆ, ಉಡಾವಣಾ ಕೊಡುಗೆಯಾಗಿ ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಗೂ EMI ಗಳ ಮೇಲೆ 3,000 ರೂ.ಗಳ ಇನ್‌ಸ್ಟಂಟ್ ಡಿಸ್ಕೌಂಟ್ ಅನ್ನು ಪ್ರಕಟಿಸಲಾಗಿದೆ.
Iqoo Neo 6 With 80w Charging Launched In India Price and Specification.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
21-07-26 08:03 pm
Mangaluru Staffer
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm
ಉಕ್ರೇನ್ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ;...
21-07-26 11:47 am
ತ್ರಿಪುರಾ ಡಿಜಿಪಿ ಅನುರಾಗ್ ಧನಕರ್ ಕಚೇರಿಯಲ್ಲಿ ಗುಂಡ...
20-07-26 10:17 pm