ಬ್ರೇಕಿಂಗ್ ನ್ಯೂಸ್
01-06-22 07:38 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್‌ವಾಚ್ ಬ್ರ್ಯಾಂಡ್ Dizo ಭಾರತದಲ್ಲಿ ತನ್ನ ನೂತನ Dizo Watch D ಸ್ಮಾರ್ಟ್‌ವಾಚ್ ಪರಿಚಯಿಸುವ ಬಗ್ಗೆ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ. ಲೋಹದ ಚೌಕಟ್ಟಿನ ಪ್ರೀಮಿಯಂ ವಿನ್ಯಾಸದಲ್ಲಿ ಡೈನಾಮಿಕ್ ಡಿಸ್‌ಪ್ಲೇ, 150 ಕ್ಕೂ ಹೆಚ್ಚು ವರ್ಣರಂಜಿತ ವಾಚ್ ಫೇಸ್‌ಗಳ ಜೊತೆಗೆ, 50m ನೀರಿನ ಪ್ರತಿರೋಧವನ್ನು ಹೊಂದಿರುವ IP ರೇಟಿಂಗ್ ನಂತಹ ವೈಶಿಷ್ಟ್ಯಗಳಲ್ಲಿ ಇದೇ ಜೂನ್ 7 ರಂದು ಮಧ್ಯಾಹ್ನ 12 ಗಂಟೆಗೆ ದೇಶದಲ್ಲಿ Dizo ಬ್ರ್ಯಾಂಡ್‌ನ ನೂತನ ಸ್ಮಾರ್ಟ್‌ವಾಚ್ ಒಂದನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಟೀಸರ್‌ನಲ್ಲಿ ಹೇಳಲಾಗಿದೆ. ಆದರೆ, ಟಿಪ್‌ಸ್ಟಾರ್‌ಗಳು ಈ ನೂತನ Dizo Watch D ಸ್ಮಾರ್ಟ್‌ವಾಚ್ ಹೊಂದಿರಬಹುದಾದ ಇತರೆ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಸಹ ತಿಳಿಸಿದ್ದಾರೆ
ಹೌದು, Dizo ಬ್ರ್ಯಾಂಡ್ ಅಡಿಯಲ್ಲಿ ಈಗಾಗಲೇ Dizo Watch, Watch 2, Watch Pro, Watch 2 Sports i, Watch S ಮತ್ತು Watch R ಸಾಧನಗಳು ಲಭ್ಯವಿವೆ. ಇವುಗಳ ಜೊತೆಗೆ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿರುವಂತಹ Dizo Watch D ಸ್ಮಾರ್ಟ್‌ವಾಚ್ ಹೊಸದಾಗಿ ಸೇರಿಕೊಳ್ಳುತ್ತಿದೆ. ಟಿಪ್‌ಸ್ಟಾರ್‌ಗಳು ತಿಳಿಸಿರುವಂತೆ, ನೂತನ Dizo Watch D ಸ್ಮಾರ್ಟ್‌ವಾಚ್ ಈ ಹಿಂದಿನ Dizo ಸ್ಮಾರ್ಟ್‌ವಾಚ್‌ಗಳ ಪ್ರದರ್ಶನಕ್ಕಿಂತ 15% ನಷ್ಟು ದೊಡ್ಡದಾಗಿದೆ ಎಂದು ಹೇಳಿದ್ದಾರೆ ಹಾಗೂ ಈ ವಾಚ್ ಹೊಂದಿರಲಿರುವ ಇತರೆ ವೈಶಿಷ್ಟ್ಯಗಳು ಯಾವುವು ಎಂಬ ಬಗ್ಗೆ ಮಾಹಿತಿಯನ್ನು ಸಹ ಒದಗಿಸಿದ್ದಾರೆ. ಹಾಗಾದರೆ, ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಹೊಸ Dizo Watch D ಸ್ಮಾರ್ಟ್‌ವಾಚ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.

Twitter-ಆಧಾರಿತ ಟಿಪ್‌ಸ್ಟರ್ TechnoAnkit1 ನಿಂದ ಹಂಚಿಕೊಂಡಿರುವ ಮಾಹಿತಿಗಳಂತೆ, Dizo ಬ್ರ್ಯಾಂಡ್‌ನ ಹೊಸ Dizo Watch D ದೊಡ್ಡ 1.8-ಇಂಚಿನ ಡಿಸ್‌ಪ್ಲೇಯೊಂದಿಗೆ ಬರಬಹುದೆಂದು ಬಹಿರಂಗಪಡಿಸಿದೆ. ಇದು ಬ್ರ್ಯಾಂಡ್‌ನ ಹಿಂದಿನ ಮಾದರಿಗಳಲ್ಲಿನ ಪ್ರದರ್ಶನಕ್ಕಿಂತ 15% ನಷ್ಟು ದೊಡ್ಡದಾಗಿದೆ ಎಂದು ಟಿಪ್‌ಸ್ಟರ್ ಬಹಿರಂಗಪಡಿಸಿದ್ದಾರೆ. ಇಷ್ಟೇ ಅಲ್ಲದೇ, ಈ ಸ್ಮಾರ್ಟ್‌ವಾಚ್‌ನ ಪ್ರದರ್ಶನವು 550 ನಿಟ್‌ಗಳ ಹೊಳಪು ಮತ್ತು ಬಾಗಿದ ಟೆಂಪರ್ಡ್ ಗ್ಲಾಸ್ ಕವರ್‌ನೊಂದಿಗೆ ಬರುವ ಸಾಧ್ಯತೆಯ ಬಗ್ಗೆ ತಿಳಿಸಿದ್ದಾರೆ. ಅಧಿಕೃತ ಟೀಸರ್ ನಲ್ಲಿ ಈಗಾಗಲೇ ವಾಚ್ ಲೋಹದ ಚೌಕಟ್ಟನ್ನು ಬಳ ಡೈನಾಮಿಕ್ ಡಿಸ್‌ಪ್ಲೇ ವೈಶಿಷ್ಟ್ಯವನ್ನು ತರುವ ಬಗ್ಗೆ ಸೂಚಿಸುವುದರಿಂದ ಟಿಪ್‌ಸ್ಟಾರ್ ಅವರಿಂದ ಹೊರಬಿದ್ದಿರುವ ಮಾಹಿತಿಗಳು ನಿಖರವಾಗಿರುವ ಸಂಭವ ಹೆಚ್ಚಿದೆ.

ಇನ್ನು ಈ ನೂತನ ಸ್ಮಾರ್ಟ್ ವಾಚ್ 150 ಕ್ಕೂ ಹೆಚ್ಚು ವರ್ಣರಂಜಿತ ವಾಚ್ ಫೇಸ್‌ಗಳನ್ನು ಹೊಂದಿರುತ್ತದೆ ಎಂದು ಡಿಜೊ ತನ್ನ ಅಧಿಕೃತ ಟೀಸರ್ ನಲ್ಲೇ ದೃಢಪಡಿಸಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಒದಗಿಸಿರುವ ಟಿಪ್‌ಸ್ಟಾರ್‌ಗಳು ಇದು ಕಸ್ಟಮೈಸ್ ಮಾಡಬಹುದಾದ ವಿಜೆಟ್ ಡ್ಯಾಶ್‌ಬೋರ್ಡ್‌ನೊಂದಿಗೆ ಬರಲಿದೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ, ಈ ಸ್ಮಾರ್ಟ್‌ವಾಚ್ಹೃದಯ ಬಡಿತ ಮಾನಿಟರ್, ಚಟುವಟಿಕೆ ಟ್ರ್ಯಾಕರ್ ಮತ್ತು ರಕ್ತದ ಆಮ್ಲಜನಕ ಮಾನಿಟರ್‌ನೊಂದಿಗೆ ಸಾಮಾನ್ಯ ಫಿಟ್‌ನೆಸ್ ಟ್ರ್ಯಾಕಿಂಗ್ ಸಾಮರ್ಥ್ಯಗಳನ್ನು ಹೊಂದಿರುತ್ತದೆ ಎಂದು ಟಿಪ್‌ಸ್ಟಾರ್‌ಗಳು ತಿಳಿಸಿದ್ದಾರೆ. ಇನ್ನು ಈ ಸ್ಮಾರ್ಟ್‌ವಾಚ್ ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ಯಾವುದೇ ವದಂತಿಯ ಮಾಹಿತಿಗಳು ದೊರೆತಿಲ್ಲವಾದುದರಿಂದ, ಇದಕ್ಕಾಗಿ ನಾವು ಜೂನ್ 7 ರಂದು ಮಧ್ಯಾಹ್ನ 12 ಗಂಟೆಯವರೆಗೂ ಕಾಯಲೇಬೇಕು.
Dizo Watch Teased For June 7 Launch.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
26-01-26 05:05 pm
HK News Desk
ರೌಡಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ; ಪೊಲೀಸರ ಕೈಗೆ...
24-01-26 11:23 pm
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
26-01-26 03:03 pm
HK News Desk
ಅಮಾನ್ಯ ನೋಟಿನ 400 ಕೋಟಿ ದರೋಡೆ ಪ್ರಕರಣ ; ಗುಜರಾತ್...
25-01-26 10:11 pm
Indias Biggest Robbery in Belagavi: ಇಡೀ ದೇಶದಲ...
25-01-26 09:48 am
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm