ಬ್ರೇಕಿಂಗ್ ನ್ಯೂಸ್
16-06-22 07:50 pm Source: Vijayakarnataka ಡಿಜಿಟಲ್ ಟೆಕ್
ಆಪಲ್ ಈ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದ MacBook Pro 2022 ಸಾಧನದ ಪ್ರೀ ಬುಕ್ಕಿಂಗ್ ನಾಳೆಯಿಂದ ಆರಂಭವಾಗುತ್ತಿದೆ. WWDC 2022 ಕಾರ್ಯಕ್ರಮದಲ್ಲಿ ಸುಧಾರಿತ CPU, GPU ಮತ್ತು ಉತ್ತಮ ಶಕ್ತಿ ದಕ್ಷತೆಯೊಂದಿಗಿನ Apple M2 ಸಿಲಿಕಾನ್ ಚಿಪ್‌ಸೆಟ್ ಹೊತ್ತು ಬಿಡುಗಡೆಯಾಗಿರುವ MacBook Pro 2022 ಸಾಧನವನ್ನು ಜೂನ್ 17 ರಿಂದ ಮಧ್ಯಾಹ್ನ 5:30 ರಿಂದ ಬುಕ್ ಮಾಡಲು ಅವಕಾಶವನ್ನು ಕಲ್ಪಿಸಲಾಗಿದ್ದು, ಇದೇ ಜೂನ್ 24 ರಂದು ಮಾರಾಟಕ್ಕೆ ತರಲಾಗುತ್ತಿದೆ ಎಂದು ಆಪಲ್ ತಿಳಿಸಿದೆ. ಇನ್ನು ಭಾರತದಲ್ಲಿ 13-ಇಂಚಿನ MacBook Pro 2022 ಸಾಧನದ ಬೆಲೆಗಳು 1,29,900 ರೂ.ಗಳಿಂದ ಆರಂಭವಾಗಿದ್ದು, ಮೂರು RAM ಮತ್ತು ನಾಲ್ಕು ಶೇಖರಣಾ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ ಎಂದು ತಿಳಿಸಲಾಗಿದೆ.
MacBook Pro 2022 ಸಾಧನದ ಖರೀದಿದಾರರು 8GB RAM, 16GB RAM ಮತ್ತು 24GB RAM, ಹಾಗೆಯೇ 256GB, 512GB, 1TB ಮತ್ತು 2TB SSD ಸಂಗ್ರಹಣೆ ಮಾದರಿಗಳಲ್ಲಿ ಸಾಧನವನ್ನು ಖರೀದಿಸಬಹುದಾಗಿದೆ. ಇವುಗಳಲ್ಲಿ 24GB RAM ಮತ್ತು 2TB SSD ಸಂಗ್ರಹಣೆಯನ್ನು ಹೊಂದಿರುವ MacBook Pro 2022 ಸಾಧನವು 2,49,900 ರೂ.ಗಳ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಲಿದೆ. ಗ್ರಾಹಕರು ಸರಳವಾಗಿ ಆಪಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಗತ್ಯದ ಮಾದರಿ ಮತ್ತು ಕಾನ್ಫಿಗರೇಶನ್ ಅನ್ನು ಆಯ್ಕೆ ಮಾಡಬಹುದು. ಅಥವಾ ಆಪಲ್‌ನ ಅಧಿಕೃತ ಆನ್‌ಲೈನ್ ಅಂಗಡಿಗೆ ಭೇಟಿ ನೀಡಿ M2 ಪ್ರೊಸೆಸರ್ ಅನ್ನು ಬಳಸುವ ನೂತನ MacBook Pro 2022 ಸಾಧನವನ್ನು ಖರೀದಿಸಬಹುದು ಎಂದು ಆಪಲ್ ಕಂಪೆನಿ ತಿಳಿಸಿದೆ.
13-ಇಂಚಿನ MacBook Pro 2022 ಹೊಸ Apple M2 ಪ್ರೊಸೆಸರ್ ಅನ್ನು ಪಡೆದಿದೆ. Apple M2 ಪ್ರೊಸೆಸರ್‌ನಿಂದ ಚಾಲಿತವಾಗಿರುವ MacBook Pro 2022 ಹೊಸ ಸಾಧನವು ಕಳೆದ Apple M21 MacBook Pro ಪ್ರೊಸೆಸರ್ ಮಾದರಿ ಸಾಧನಕ್ಕಿಂತ ಶೇ 39 ರಷ್ಟು ವೇಗವಾಗಿದೆ ಎಂದು ಆಪಲ್ ತಿಳಿಸಿದೆ. ಈ ಹೊಸ ಮ್ಯಾಕ್‌ಬುಕ್ ಪ್ರೊ ಸಾಧನವು ಒಂದೇ ಚಾರ್ಜ್‌ನಲ್ಲಿ 20 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನುಳಿದಂತೆ 720p ಫೇಸ್‌ಟೈಮ್ ಕ್ಯಾಮೆರಾ, ಟಚ್-ಬಾರ್, ಏರ್ ಡಾಲ್ಬಿ ಅಟ್ಮಾಸ್‌ಗೆ ಬೆಂಬಲದೊಂದಿಗೆ ಸ್ಪೀಕರ್‌ಗಳು, 8ಕೆ ವೀಡಿಯೊ ಪ್ಲೆ ಸಾಮರ್ಥ್ಯ ಮತ್ತುಇತರ ವಿಷಯಗಳ ಜೊತೆಗೆ ಹಿಂದಿನ ಆವೃತ್ತಿಯ ಅದೇ ಸಂಖ್ಯೆಯ ಕನೆಕ್ಟರ್‌ಗಳಂತಹ ಕೆಲವು ತಂತ್ರಜ್ಞಾನವನ್ನು MacBook Pro 2022 ಸಾಧನದಲ್ಲಿ ಉಳಿಸಿಕೊಳ್ಳಲಾಗಿದೆ.
WWDC 2022 ಕಾರ್ಯಕ್ರಮದಲ್ಲಿ ಸುಧಾರಿತ CPU, GPU ಮತ್ತು ಉತ್ತಮ ಶಕ್ತಿ ದಕ್ಷತೆಯೊಂದಿಗಿನ Apple M2 ಸಿಲಿಕಾನ್ ಚಿಪ್‌ಸೆಟ್ ಅನ್ನು ಪರಿಚಯಿಸಲಾಯಿತು. ಕಳೆದ Apple M1 ಚಿಪ್‌ಸೆಟ್‌ಗೆ ಹೋಲಿಸಿದರೆ 25 ಪ್ರತಿಶತ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುವ ದಕ್ಷತೆಯಲ್ಲಿ ಈ ಹೊಸ 2nd ಜೆಟ್ ಚಿಪ್‌ಸೆಟ್ ಅನ್ನು ತಯಾರಿಸಲಾಗಿದ್ದು, ಈ ಚಿಪ್‌ಸೆಟ್ 10-ಕೋರ್ GPU ವನ್ನು ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. Apple M2 ಚಿಪ್ ಇದೀಗ LPDDR5 24GB RAMವರೆಗೆ ಬೆಂಬಲಿಸುತ್ತದೆ ಮತ್ತು ಎರಡನೇ ತಲೆಮಾರಿನ 5nm ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲ್ಪಟ್ಟಿದೆ. ಇದರಿಂದ ಈ ಪ್ರೊಸೆಸರ್ 18 ಪ್ರತಿಶತ ವೇಗದ CPU ಮತ್ತು 35 ಪ್ರತಿಶತ ವೇಗದ GPU ಅನ್ನು 100GB/s ನ ಗರಿಷ್ಠ ಮೆಮೊರಿ ಬ್ಯಾಂಡ್‌ವಿಡ್ತ್ ನೊಂದಿಗೆ ಬಳಕೆಗೆ ಸಿದ್ದವಾಗಿದೆ ಎಂದು ಆಪಲ್ ಹೇಳಿದೆ.
Apple M2 Powered Macbook Pro India Pre Booking Starts From June 17.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am