ಬ್ರೇಕಿಂಗ್ ನ್ಯೂಸ್
18-06-22 09:28 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರು ನೋಡುತ್ತಿರುವ Samsung Galaxy F13 ಬಜೆಟ್ ಸ್ಮಾರ್ಟ್‌ಫೋನಿನ ಅಧಿಕೃತ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ದೇಶದಲ್ಲಿ ಇದೇ ಜೂನ್ 22 ರಂದು Samsung Galaxy F13 ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುವುದಾಗಿ ಸ್ಯಾಮ್‌ಸಂಗ್ ಕಂಪೆನಿ ಪ್ರಕಟಿಸಿದ್ದು, HD+ LCD ಡಿಸ್‌ಪ್ಲೇ ಮತ್ತು ಬೃಹತ್ 6,000mAh ಬ್ಯಾಟರಿ ವೈಶಿಷ್ಟ್ಯಗಳೊಂದಿಗೆ Samsung Galaxy F13 ಸ್ಮಾರ್ಟ್‌ಫೋನಿನ ಕುರಿತಂತೆ ಅಧಿಕೃತ ಪುಟವೊಂದನ್ನು Samsung ಇಂಡಿಯಾದ ವೆಬ್‌ಸೈಟ್‌ನಲ್ಲಿ ರಚಿಸಲಾಗಿದೆ. ದೇಶದಲ್ಲಿ Samsung Galaxy F13 ಸ್ಮಾರ್ಟ್‌ಫೋನ್ ಮೂರು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ.
Samsung ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತು ಫ್ಲಿಪ್‌ಕಾರ್ಟ್ ಟೀಸರ್ ನಲ್ಲಿ Samsung Galaxy F13 ಸ್ಮಾರ್ಟ್‌ಫೋನ್ ಟೀಸರ್ ಬಿಡುಗಡೆ ಚಿತ್ರವನ್ನು ಪ್ರಕಟಿಸಲಾಗಿದೆ. ಚಿತ್ರದಲ್ಲಿ ತೋರಿಸಿರುವಂತೆ, Samsung Galaxy F13 ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್ ಶೈಲಿಯ ನಾಚ್ ಡಿಸ್‌ಪ್ಲೇ ಮತ್ತು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿರುವುದನ್ನು ನಾವು ನೋಡಬಹುದು. ಇನ್ನು Samsung Galaxy F13 ಸ್ಮಾರ್ಟ್‌ಫೋನ್ HD+ LCD ಡಿಸ್‌ಪ್ಲೇ ಮತ್ತು 5W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬೃಹತ್ 6,000mAh ಬ್ಯಾಟರಿಯನ್ನು ಹೊಂದಿದೆ ಹಾಗೂ ಫೋನಿನಲ್ಲಿರುವ ಆಂತರಿಕ ಮೆಮೊರಿಯಿಂದ 8GB ವರೆಗೆ RAM ಅನ್ನು ಹೆಚ್ಚಿಸಿಕೊಳ್ಳಬಹುದಾದ RAM ಪ್ಲಸ್ ವೈಶಿಷ್ಟ್ಯವನ್ನು ಸಹ Galaxy F13 ಫೋನಿನಲ್ಲಿ ತರಲಾಗಿದೆ.
ಇದಲ್ಲದೇ, Samsung Galaxy F13 ಸ್ಮಾರ್ಟ್‌ಫೋನ್ ಸ್ವಯಂ ಡೇಟಾ ಸ್ವಿಚಿಂಗ್ ವೈಶಿಷ್ಟ್ಯವನ್ನು ಸಹ ಹೊಂದಿರಲಿದೆ. ಈ ವೈಶಿಷ್ಟ್ಯದ ಸಹಾಯದಿಂದ Wi-Fi ಅಥವಾ ಪ್ರಾಥಮಿಕ SIM ಡೇಟಾ ಸಂಪರ್ಕವು ದುರ್ಬಲವಾಗಿದ್ದಾಗ ಈ Samsung ಫೋನ್ ಸ್ವಯಂಚಾಲಿತವಾಗಿ ಎರಡನೇ SIM ನ ಮೊಬೈಲ್ ಡೇಟಾವನ್ನು ಬಳಸುತ್ತದೆ. ಇನ್ನುಳಿದಂತೆ Samsung Galaxy F13 ಸ್ಮಾರ್ಟ್‌ಫೋನ್ ಫೋನ್ ಮೂರು ವಿಭಿನ್ನ ಬಣ್ಣಗಳಲ್ಲಿ ಬರಲಿದೆ ಎಂದು ಪಟ್ಟಿಯು ಸೂಚಿಸುತ್ತದೆ. ಇಷ್ಟು ಇದೀಗ ದೊರೆತಿರುವ ಅಧಿಕೃತ ಮಾಹಿತಿಗಳಾಗಿದ್ದರೆ, ಗೀಕ್‌ಬೆಂಚ್ ಪಟ್ಟಿಯು Samsung Galaxy F13 ನಲ್ಲಿ ಆಕ್ಟಾ-ಕೋರ್ Exynos 850 ಪ್ರೊಸೆಸರ್ ಇರುವಿಕೆಯನ್ನು ಸೂಚಿಸಿದೆ ಹಾಗೂ ಇದು 4GB RAM ಮೂಲಕ ಆಂಡ್ರಾಯ್ಡ್ 12 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಭಾರತದಲ್ಲಿ ಜೂನ್ 22 ರಂದು ಮಧ್ಯಾಹ್ನ 12pm ಗಂಟೆಗೆ Samsung Galaxy F13 ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿರುವುದು ಖಚಿತವಾಗಿದ್ದರೂ ಸಹ ನೂತನ Samsung Galaxy F13 ಸ್ಮಾರ್ಟ್‌ಫೋನಿನ ಬೆಲೆ ವಿವರಗಳು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ನಾವು ಕಳೆದ ವರ್ಷದ Galaxy F12 ಸ್ಮಾರ್ಟ್‌ಫೋನ್ ಬೆಲೆಗಳಲ್ಲೇ Galaxy F13 ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಎದುರುನೋಡಬಹುದು ಎಂದು ಪ್ರಮುಖ ಟೆಕ್ ಮಾಧ್ಯಮಗಳು ಹೇಳಿವೆ. ನೆನಪಿಸಿಕೊಳ್ಳುವುದಾದರೆ, ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾಗಿದ್ದ ಮೂಲ 4GB + 64GB ಸ್ಟೋರೇಜ್ ಕಾನ್ಫಿಗರೇಶನ್ ಸಾಮರ್ಥ್ಯದ Galaxy F12 ಸ್ಮಾರ್ಟ್‌ಫೋನ್ 10,999 ರೂ.ಗಳಿಗೆ ಬಿಡುಗಡೆಯಾಗಿತ್ತು. ಅಂದರೆ, Galaxy F13 ಸ್ಮಾರ್ಟ್‌ಫೋನ್ 10 ರಿಂದ 12 ಸಾವಿರ ಬೆಲೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
Samsung Galaxy F13 India Launch Date Set For June 22.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm