ಬ್ರೇಕಿಂಗ್ ನ್ಯೂಸ್
22-06-22 08:44 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಲೈಫ್ ಸ್ಟೈಲ್ ಟೆಕ್ ಬ್ರ್ಯಾಂಡ್ Noise ತನ್ನ ಮೊಟ್ಟ ಮೊದಲ ಸ್ಮಾರ್ಟ್‌ಗ್ಲಾಸ್ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. Noise ಬಿಡುಗಡೆ ಮಾಡಿರುವ ಈ ಹೊಸ ಸಾಧನವು ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿದ್ದು, ಈ ಸಾಧನಕ್ಕೆ 'Noise i1' ಎಂದು ಹೆಸರಿಸಿದೆ. ಈ ಸಾಧನವು ಕರೆಗಳನ್ನು ಮಾಡಬಹುದಾದ ಮೈಕ್, ಮ್ಯಾಗ್ನೆಟಿಕ್ ಚಾರ್ಜಿಂಗ್ ಮತ್ತು ಹ್ಯಾಂಡ್ಸ್-ಫ್ರೀ ಧ್ವನಿ ನಿಯಂತ್ರಣ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಈ ಸಾಧನದಲ್ಲಿ ಬಳಕೆದಾರರು ಕರೆಗಳನ್ನು ಸ್ವೀಕರಿಸಲು, ಸಂಗೀತವನ್ನು ನಿರ್ವಹಿಸಲು ಮತ್ತು ಧ್ವನಿ ಸಹಾಯಕವನ್ನು ಸಕ್ರಿಯಗೊಳಿಸಲು ಅನುವು ಮಾಡಿಕೊಡುವಂತಹ ಸ್ಪರ್ಶ ನಿಯಂತ್ರಣಗಳನ್ನು ಸಹ ನೀಡಲಾಗಿದೆ. ಹಾಗಾದರೆ, Noise ಕಂಪೆನಿಯ ಮೊಟ್ಟ ಮೊದಲ 'Noise i1' ಸ್ಮಾರ್ಟ್‌ಗ್ಲಾಸ್ ಸಾಧನವು ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಸಾಧನದ ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಸ್ಮಾರ್ಟ್‌ವಾಚ್ ಮತ್ತು TWS ಸಾಧನಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ Noise ಕಂಪೆನಿಯ ಮೊಟ್ಟ ಮೊದಲ 'Noise i1' ಸ್ಮಾರ್ಟ್‌ಗ್ಲಾಸ್ ಸಾಧನವು ದುಂಡಾಕಾರದ ಲೆನ್ಸ್ ಹಾಗೂ ದಪ್ಪದಾದ ಫ್ರೇಮ್ ಹೊಂದಿರುವ ವಿನ್ಯಾಸದಲ್ಲಿರುವುದನ್ನು ನಾವು ನೋಡಬಹುದು. ಈ ದಪ್ಪದಾದ ಫ್ರೇಮ್‌ನಲ್ಲಿ ಮ್ಯಾಗ್ನೆಟಿಕ್ ಚಾರ್ಜಿಂಗ್ ಸಾಕೆಟ್ ಅನ್ನು ಅಳವಡಿಸಲಾಗಿದೆ ಮತ್ತು ಕರೆಗಳನ್ನು ಸ್ವೀಕರಿಸಲು ಮತ್ತು ತಿರಸ್ಕರಿಸಲು, ಸಂಗೀತವನ್ನು ನಿರ್ವಹಿಸಲು ಮತ್ತು ಧ್ವನಿ ಸಹಾಯಕವನ್ನು ಸಕ್ರಿಯಗೊಳಿಸಲು ಸ್ಪರ್ಶ ನಿಯಂತ್ರಣಗಳಂತಹ ಬಹು-ಕಾರ್ಯಕಾರಿ ವೈಶಿಷ್ಟ್ಯಗಳನ್ನು ಇದೇ ಫ್ರೇಮ್‌ನಿಂದ ನಿರ್ವಹಿಸಬಹುದಾಗಿದೆ. ಇನ್ನು ಈ ಸಾಧನವು ನೇರಳಾತೀತ ವಿಕಿರಣ (UVA/B) ಸನ್‌ಗ್ಲಾಸ್‌ಗಳಲ್ಲಿ ಸೂರ್ಯನ ಕಿರಣಗಳ ವಿರುದ್ಧ ಶೇಕಡಾ 99 ರಷ್ಟು ರಕ್ಷಣೆಯನ್ನು ಹೊಂದಿದೆ ಮತ್ತು ಲ್ಯಾಪ್‌ಟಾಪ್‌ಗಳನ್ನು ಬಳಸುವಾಗ ಕಣ್ಣಿನ ಆಯಾಸವನ್ನು ಕಡಿಮೆ ಮಾಡುವಂತೆ ಈ ಸಾಧನವನ್ನು ನಿರ್ಮಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.
'Noise i1' ಸ್ಮಾರ್ಟ್‌ಗ್ಲಾಸ್ ಒಂದೇ ಚಾರ್ಜ್‌ನಲ್ಲಿ 9 ಗಂಟೆಗಳ ಕಾಲ ಪ್ಲೇಟೈಮ್ ಅನ್ನು ನೀಡುತ್ತದೆ ಮತ್ತು ಕೇವಲ 15 ನಿಮಿಷಗಳ ಚಾರ್ಜ್‌ನಲ್ಲಿ 120 ನಿಮಿಷಗಳ ಪ್ಲೇಟೈಮ್ ಅನ್ನು ಬಳಕೆದಾರರು ಪಡೆಯಬಹುದು ಎಂದು ಕಂಪೆನಿ ಹೇಳಿದೆ. ಸಂಪರ್ಕದಲ್ಲಿ ಬ್ಲೂಟೂತ್ 5.1 ಸಂಪರ್ಕವನ್ನು ಬೆಂಬಲಿಸುವ ಈ ಸ್ಮಾರ್ಟ್‌ಗ್ಲಾಸ್ ಫ್ರೇಮ್‌ಗಳನ್ನು ತೆರೆದ ತಕ್ಷಣವೇ ಸ್ಮಾರ್ಟ್‌ಫೋನಿಗೆ ಸಂಪರ್ಕಗೊಳ್ಳುತ್ತದೆ ಎಂದು ಖಚಿತಪಡಿಸುತ್ತದೆ. ಹಾಗಾಗಿ, ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡುವ ಅಗತ್ಯವನ್ನು ತೆಗೆದುಹಾಕುತ್ತದೆ ಎಂದು ಕಂಪೆನಿ ತಿಳಿಸಿದೆ. ಇದಲ್ಲದೇ, 'Noise i1' ಸ್ಮಾರ್ಟ್‌ಗ್ಲಾಸ್ ಕನೆಕ್ಟ್ ಮಾಡಲಾದ ಸ್ಮಾರ್ಟ್‌ಫೋನ್‌ನಿಂದ 10 ಮೀಟರ್ ದೂರದವರೆಗೆ ಅತ್ಯುತ್ತಮ ಧ್ವನಿ ಗುಣಮಟ್ಟವನ್ನು ನೀಡುತ್ತದೆ ಹಾಗೂ ಸಾಧನದ ವಿನ್ಯಾಸವು ಸುತ್ತಮುತ್ತಲಿನ ಶಬ್ದವನ್ನು ನಿರ್ಬಂಧಿಸುವ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಇದರಿಂದ ನೀವು ಸಂಗೀತದ ಮೇಲೆ ಮಾತ್ರ ಕೇಂದ್ರೀಕರಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ.
“ಭವಿಷ್ಯದ ಮೇಲೆ ಕಣ್ಣಿಟ್ಟು, ಅತ್ಯುತ್ತಮವಾದ ಆಡಿಯೊ ಅನುಭವವನ್ನು ಬಯಸುವ ಯಾರಿಗಾದರೂ ಅಧಿಕೃತ ತಾಂತ್ರಿಕ ಅನುಭವವನ್ನು ನೀಡಲು ನಾವು ನಮ್ಮ ಸ್ಮಾರ್ಟ್ ಕನ್ನಡಕವನ್ನು ವಿನ್ಯಾಸಗೊಳಿಸಿದ್ದೇವೆ ”ಎಂದು Noise ಸಂಸ್ಥೆಯಹ ಸಹ ಸಂಸ್ಥಾಪಕ ಅಮಿತ್ ಖತ್ರಿ ಅವರು ಹೇಳಿದ್ದು, ಭಾರತದಲ್ಲಿ 5,999 ರೂ.ಗಳಿಗೆ ಈ ಸೀಮಿತ ಆವೃತ್ತಿಯ ಸಾಧನವನ್ನು gonoise.com ನಿಂದ ಖರೀದಿಸಬಹುದು ಎಂದು ತಿಳಿಸಿದ್ದಾರೆ. ಇನ್ನು ಈ 'Noise i1' ಸ್ಮಾರ್ಟ್‌ಗ್ಲಾಸ್‌ಗಳು ರೇಬಾನ್ ಸ್ಟೋರೀಸ್‌ನಂತೆ ಕ್ಯಾಮೆರಾಗಳನ್ನು ಹೊಂದಿಲ್ಲ ಎಂಬುದನ್ನು ಗಮನಿಸಿ. ಸ್ಮಾರ್ಟ್ ಕನ್ನಡಕಗಳಲ್ಲಿ ಕ್ಯಾಮೆರಾಗಳನ್ನು ನೀವು ಬಯಸಿದರೆ, Noise i1 ಸಾಧನವು ನಿಮಗಾಗಿ ಅಲ್ಲ ಎಂದು ಹೇಳಬಹುದು. ಆದರೆ, ಈ 'Noise i1' ಸ್ಮಾರ್ಟ್‌ಗ್ಲಾಸ್‌ಗಳು ಕ್ರಾಂತಿಕಾರಿ ಮಾರ್ಗದರ್ಶಿ ಆಡಿಯೋ ವಿನ್ಯಾಸವನ್ನು ಹೊಂದಿದ್ದು, ಅತ್ಯುತ್ತಮ ಸಂಗೀತವನ್ನು ಆಲಿಸಲು ಮತ್ತು ಸ್ಟೈಲಿಶ್ ಗಾಗಿ ಈ ಸಾಧನವು ನಿಮ್ಮ ಆಯ್ಕೆಯಾಗಬಹುದು ಎಂದು ನಾವು ಹೇಳುತ್ತೇವೆ.
Noise Launches Its First Eyewear I1 With A Motion Sensor And Mic.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am