ಬ್ರೇಕಿಂಗ್ ನ್ಯೂಸ್
23-06-22 09:30 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ Daiwa ಇಂದು ತನ್ನ ಎರಡು ಹೊಸ ಸ್ಮಾರ್ಟ್‌ಟಿವಿಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. Daiwa D32HCA1 ಎಂಬ ಹೆಸರಿನಲ್ಲಿ 32-ಇಂಚಿನ ಮತ್ತು Daiwa D43FCA1 ಹೆಸರಿನಲ್ಲಿ 43-ಇಂಚಿನ Daiwa ಕಂಪೆನಿಯ ಎರಡು ಹೊಸ ಸ್ಮಾರ್ಟ್‌ಟಿವಿಗಳು ಬಿಡುಗಡೆಗೊಂಡಿದ್ದು, ಇವು ಬೆಜೆಲ್-ಲೆಸ್ ವಿನ್ಯಾಸ, ಗೂಗಲ್ ಅಸಿಸ್ಟೆಂಟ್‌ಗೆ ಬೆಂಬಲ, A-53 ಕ್ವಾಡ್-ಕೋರ್ ಪ್ರೊಸೆಸರ್ ಮತ್ತು 20W ಸರೌಂಡ್ ಸೌಂಡ್ ಸ್ಟಿರಿಯೊ ಸ್ಪೀಕರ್ ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿವೆ. ವಿಶೇಷವಾಗಿ, 32-ಇಂಚಿನ Daiwa D32HCA1 ಸ್ಮಾರ್ಟ್‌ಟಿವಿ ಬೆಲೆ ಕೇವಲ 12,490 ರೂ.ಗಳಾಗಿದ್ದು, ಈ ಕೆಳಗೆ ಎರಡೂ ಸ್ಮಾರ್ಟ್‌ಟಿವಿಗಳ ಸಂಪೂರ್ಣ ವೈಶಿಷ್ಟ್ಯಗಳು ಮತ್ತು ಬೆಲೆಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ
Daiwa ಕಂಪೆನಿಯ ಹೊಸ 43-ಇಂಚಿನ ಮತ್ತು 32-ಇಂಚಿನ ಸ್ಮಾರ್ಟ್‌ಟಿವಿಗಳ ವೈಶಿಷ್ಟ್ಯಗಳು
Daiwa ಕಂಪೆನಿಯ 43-ಇಂಚಿನ ಸ್ಮಾರ್ಟ್‌ಟಿವಿ 1920*1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಹಾಗೂ 32-ಇಂಚಿನ ಸ್ಮಾರ್ಟ್‌ಟಿವಿಯು 1366*768 ಪಿಕ್ಸೆಲ್‌ಗಳ ಬೆಂಬಲದೊಂದಿಗೆ A+ ಗ್ರೇಡ್ DLED ಪ್ಯಾನೆಲ್ ಅನ್ನು ಹೊಂದಿವೆ. ಇದರಲ್ಲಿ 32-ಇಂಚಿನ ಸ್ಮಾರ್ಟ್‌ಟಿವಿ 16.7 ಮಿಲಿಯನ್ ಬಣ್ಣಗಳನ್ನು ಬೆಂಬಲಿಸದ್ದರೆ, 43-ಇಂಚಿನ ಮಾದರಿಯು 1.07 ಬಿಲಿಯನ್ ಬಣ್ಣಗಳನ್ನು ಬೆಂಬಲಿಸಲಿದೆ. ಈ ಎರಡೂ ಸ್ಮಾರ್ಟ್ ಟಿವಿಗಳು ADS ಡಿಸ್‌ಪ್ಲೇಯೊಂದಿಗೆ (ಅಡ್ವಾನ್ಸ್ಡ್ ಸೂಪರ್ ಡೈಮೆನ್ಷನ್ ಸ್ವಿಚ್) ಶಕ್ತವಾಗಿದ್ದು, ಇದರಿಂದ ಈ ಸ್ಮಾರ್ಟ್‌ಟಿವಿಗಳು ಇಹೆಚ್ಚಿನ ಹೊಳಪು, ಪ್ರಸರಣ ಮತ್ತು ಕಾಂಟ್ರಾಸ್ಟ್ ಅನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. A-53 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿಗಳು ಸಿನಿಮಾ ಮೋಡ್ ಮತ್ತು ಕ್ರಿಕೆಟ್ ಮೋಡ್‌ಗೆ ಬೆಂಬಲಿಸುತ್ತವೆ.
ಧ್ವನಿಗಾಗಿ, 32-ಇಂಚಿನ ಮಾದರಿಯು 20W ಸರೌಂಡ್ ಸೌಂಡ್ ಸ್ಟಿರಿಯೊ ಸ್ಪೀಕರ್‌ಗಳನ್ನು ಮತ್ತು 43-ಇಂಚಿನ ಮಾದರಿಯು FHD ಸ್ಟೀರಿಯೋ ಸರೌಂಡ್ ಸೌಂಡ್ ಬಾಕ್ಸ್ ಸ್ಪೀಕರ್‌ಗಳನ್ನು ಹೊಂದಿವೆ. ಸಂಪರ್ಕದ ಆಯ್ಕೆಗಳಲ್ಲಿ, 2 HDMI ಪೋರ್ಟ್‌ಗಳು, ಬ್ಲೂಟೂತ್ ಸಂಪರ್ಕಕ್ಕೆ ಬೆಂಬಲ, Wi-Fi ಸಂಪರ್ಕ, ಈಥರ್ನೆಟ್ ವೈಶಿಷ್ಟ್ಯಗಳಿವೆ. ಈ ಸ್ಮಾರ್ಟ್ ಟಿವಿಗಳು ಕ್ಲೌಡ್ ಟಿವಿ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. Daiwa ತನ್ನದೇ ಆದ 'The BIGWALL' UI ಅನ್ನು ನೀಡುತ್ತದೆ, ಇದು ಟಿವಿಯಲ್ಲಿ ಅಪ್ಲಿಕೇಶನ್‌ಗಳ ಬಂಡಲ್ ಅನ್ನು ನೀಡುತ್ತದೆ. ಇದರಲ್ಲಿ ಬಳಕೆದಾರರು ತಮ್ಮ ನೆಚ್ಚಿನ TV ಪ್ಲಾಟ್‌ಫಾರ್ಮ್‌ಗಳಾದ SonyLIV, Disney+ Hotstar ಮತ್ತು ಹೆಚ್ಚಿನ ಓಟಿಟಿ ಚಾನೆಲ್‌ಗಳ ವಿಷಯವನ್ನು ಸ್ಟ್ರೀಮ್ ಮಾಡಬಹುದು. ಇನ್ನು ಈ ಎರಡೂ ಮಾದರಿ ಸ್ಮಾರ್ಟ್‌ಟಿವಿಗಳು Android 9 TV OS ನಲ್ಲಿ ರನ್ ಆಗುತ್ತವೆ.
Daiwa ಕಂಪೆನಿಯ ಹೊಸ 43-ಇಂಚಿನ ಮತ್ತು 32-ಇಂಚಿನ ಸ್ಮಾರ್ಟ್‌ಟಿವಿಗಳ ಬೆಲೆಗಳು
Daiwa ಕಂಪೆನಿಯ 32-ಇಂಚಿನ (D32HCA1) ಮಾದರಿಯ ಸ್ಮಾರ್ಟ್‌ಟಿವಿ 12,490 ರೂ.ಗಳಿಗೆ ಹಾಗೂ 43-ಇಂಚಿನ (D43FCA1) ಸ್ಮಾರ್ಟ್‌ಟಿವಿ ಬೆಲೆ 21,990 ರೂ.ಗಳಿಗೆ ಬಿಡುಗಡೆಯಾಗಿದೆ. ಗ್ರಾಹಕರು ಈ ಎರಡೂ ಸ್ಮಾರ್ಟ್‌ಟಿವಿಗಳ ಮೇಲೆ 12 ತಿಂಗಳ ಅಥವಾ ಒಂದು ವರ್ಷ ವಾರಂಟಿಯನ್ನು ಪಡೆಯಲಿದ್ದಾರೆ ಹಾಗೂ ಈ ಸ್ಮಾರ್ಟ್‌ಟಿವಿಗಳ ಪ್ಯಾನಲ್ ಮೇಲೆ ಹೆಚ್ಚು ಹೆಚ್ಚುವರಿ 12 ತಿಂಗಳ ವಾರಂಟಿ ನೀಡಲಾಗುವುದು ಎಂದು Daiwa ಕಂಪೆನಿ ತಿಳಿಸಿದೆ.
Daiwa Brings New 43 Inch And 32 Inch Smart Tvs In India.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am