ಬ್ರೇಕಿಂಗ್ ನ್ಯೂಸ್
25-06-22 08:48 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಎಲೆಕ್ಟ್ರಾನಿಕ್ ಬ್ರ್ಯಾಂಡ್ Portronics ಭಾರತದಲ್ಲಿ ತನ್ನ ವಿನೂತನ Portronics Dash 12 TWS ಬೂಮ್ ಬಾಕ್ಸ್ ಸ್ಪೀಕರ್ ಅನ್ನು ಬಿಡುಗಡೆಗೊಳಿಸಿದೆ. 60W ಸಾಮರ್ಥ್ಯದ ಎರಡು ಡ್ರೈವರ್‌ಗಳನ್ನು ಹೊಂದಿರುವ, IPX5 ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಮತ್ತು 9 ಗಂಟೆಗಳವರೆಗೆ ಕ್ಲೈಮ್ ಮಾಡಲಾದ ಪ್ಲೇಬ್ಯಾಕ್ ಟೈಮ್ ವೈಶಿಷ್ಟ್ಯಗಳಲ್ಲಿ Portronics Dash 12 TWS ಬೂಮ್‌ಬಾಕ್ಸ್ ಸ್ಪೀಕರ್ ಪರಿಚಯಗೊಂಡಿದ್ದು, ಬಹು-ಬಣ್ಣದ ಎಲ್ಇಡಿ ಲೈಟ್ ಅನ್ನು ಸೂಸುವ ಪ್ರೀಮಿಯಂ ವಿನ್ಯಾಸದಲ್ಲಿ Portronics Dash 12 TWS ಸ್ಪೀಕರ್ ಸಂಗೀತ ಪ್ರಿಯರ ಗಮನಸೆಳೆಯುತ್ತಿದೆ. ಹಾಗಾದರೆ, ನೂತನ Portronics Dash 12 TWS ಬೂಮ್ ಬಾಕ್ಸ್ ಸ್ಪೀಕರ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.
Portronics Dash 12 ವೈಶಿಷ್ಟ್ಯಗಳು
Portronics Dash 12 ಬೂಮ್ ಬಾಕ್ಸ್ TWS ಸ್ಪೀಕರ್ ಎರಡು ಡ್ರೈವರ್‌ಗಳೊಂದಿಗೆ ಪ್ರೀಮಿಯಂ ಎಲ್‌ಇಡಿ ಲೈಟ್ ಬ್ಲಿಂಕ್ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಈ ಸ್ಪೀಕರ್ 120W ಔಟ್‌ಪುಟ್ ಅನ್ನು ಒದಗಿಸಲಿದ್ದು, ಜೋರಾದ ಮತ್ತು ಸ್ಪಷ್ಟವಾದ ಆಡಿಯೊವನ್ನು ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಬೀಟ್ಸ್ ಪ್ಲೇ ಆಗುತ್ತಿರುವ ವೇಳೆ ತಾಳಕ್ಕೆ ತಕ್ಕಂತೆ ಬಹು-ಬಣ್ಣದ ಎಲ್ಇಡಿ ಲೈಟ್‌ಗಳು ಸ್ಟ್ರೋಬ್ ಆಗುತ್ತವೆ. ಕರೋಕೆ ಮೋಡ್‌ಗಾಗಿ ಸ್ಪೀಕರ್‌ಗಳು ಮೈಕ್ರೊಫೋನ್‌ನೊಂದಿಗೆ ಸಂಯೋಜಿಸಲ್ಪಟ್ಟಿವೆ, ಇದು ಹೌಸ್ ಪಾರ್ಟಿಗಳ ಸಮಯದಲ್ಲಿ ಸೂಕ್ತವಾಗಿರಲಿದೆ ಎಂದು ಕಂಪೆನಿ ತಿಳಿಸಿದೆ. ಹಾಗೆಯೇ, ಈ ಸ್ಪೀಕರ್ ಈಕ್ವಲೈಜರ್ ಕಾರ್ಯವನ್ನು ಸಹ ಬೆಂಬಲಿಸಲಿದ್ದು, ಇದು ಬಳಕೆದಾರರಿಗೆ ಬಾಸ್, ಟ್ರೆಬಲ್ ಮತ್ತು ಇತರ ಸಂಗೀತ ಘಟಕಗಳನ್ನು ಸರಿಹೊಂದಿಸಲು ಸಹಾಯ ಮಾಡುತ್ತದೆ.

Portronics Dash 12 TWS ಬೂಮ್ ಬಾಕ್ಸ್ TWS ಸ್ಪೀಕರ್‌ಗಳನ್ನು ಹ್ಯಾಂಡ್ಸ್-ಫ್ರೀ ಆಪರೇಟ್ ಮಾಡಲು ಸಾಧನದಲ್ಲಿ ಅಂತರ್ನಿರ್ಮಿತ ಧ್ವನಿ ಸಹಾಯಕ ವೈಶಿಷ್ಟ್ಯವನ್ನು ಕೂಡ ಸೇರಿಸಲಾಗಿದೆ. 120W ಸಂಯೋಜನೆಯ ಹೆಚ್ಚು ಶಕ್ತಿಶಾಲಿ ಆಡಿಯೊ ಔಟ್‌ಪುಟ್‌ಗಾಗಿ, ಬ್ಲೂಟೂತ್ v5.0 ಮೂಲಕ ಎರಡು ಡ್ಯಾಶ್ 12 ಸ್ಪೀಕರ್‌ಗಳನ್ನು ಒಟ್ಟಿಗೆ ಸಂಪರ್ಕಿಸಲು ಬಳಕೆದಾರರನ್ನು ಸಕ್ರಿಯಗೊಳಿಸುವ TWS ವೈಶಿಷ್ಟ್ಯವಿದೆ. 6,600mAh ನಷ್ಟು ಶಕ್ತಿಶಾಲಿ ಬ್ಯಾಟರಿಯನ್ನು Portronics Dash 12 ಬೂಮ್ ಬಾಕ್ಸ್ TWS ಸ್ಪೀಕರ್ ಹೊಂದಿದ್ದು, ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸಂಪರ್ಕವನ್ನು ಹೊಂದಿದೆ. ಈ ಸ್ಪೀಕರ್ 9 ಗಂಟೆಗಳ ಪ್ಲೇಬ್ಯಾಕ್ ಟೈಮ್ ಅನ್ನು ಹೊಂದಿದ್ದು, ಗರಿಷ್ಠ ವಾಲ್ಯೂಮ್ ನಲ್ಲೂ ಸಹ 5 ಗಂಟೆಗಳವರೆಗೆ ಸಂಗೀತವನ್ನು ಉಣಬಡಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Portronics Dash 12 ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Portronics Dash 12 TWS ಬೂಮ್ ಬಾಕ್ಸ್ ಸ್ಪೀಕರ್ ಅನ್ನು 12,999 ರೂ.ಗಳ ಎಂಆರ್‌ಪಿ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ, ಪರಿಚಯಾತ್ಮಕವಾಗಿ 12 ತಿಂಗಳ ವಾರಂಟಿಯೊಂದಿಗೆ 7,799 ರೂ.ಗಳ ರಿಯಾಯಿತಿ ಬೆಲೆಯಲ್ಲಿ Portronics Dash 12 TWS ಬೂಮ್ ಬಾಕ್ಸ್ ಸ್ಪೀಕರ್ ಅನ್ನು ಖರೀದಿಸಬಹುದು ಎಂದು Portronics ಕಂಪೆನಿ ತಿಳಿಸಿದೆ. Amazon.in ನಲ್ಲಿ 7,499 ರೂ.ಗಳಿಗೆ Portronics Dash 12 TWS ಬೂಮ್ ಬಾಕ್ಸ್ ಸ್ಪೀಕರ್ ಅನ್ನು ಪಟ್ಟಿ ಮಾಡಲಾಗಿದೆ.
Portronics Dash 12 Tws Boombox Speakers Launched In India.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
26-01-26 05:05 pm
HK News Desk
ರೌಡಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ; ಪೊಲೀಸರ ಕೈಗೆ...
24-01-26 11:23 pm
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
26-01-26 03:03 pm
HK News Desk
ಅಮಾನ್ಯ ನೋಟಿನ 400 ಕೋಟಿ ದರೋಡೆ ಪ್ರಕರಣ ; ಗುಜರಾತ್...
25-01-26 10:11 pm
Indias Biggest Robbery in Belagavi: ಇಡೀ ದೇಶದಲ...
25-01-26 09:48 am
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm