ಬ್ರೇಕಿಂಗ್ ನ್ಯೂಸ್
29-06-22 07:35 pm Source: Vijayakarnataka ಡಿಜಿಟಲ್ ಟೆಕ್
Realme ಒಡೆತನದ ಜನಪ್ರಿಯ TechLife ಬ್ರ್ಯಾಂಡ್ Dizo ಭಾರತದಲ್ಲಿ Dizo Buds P ಹೆಸರಿನ ಸಂಪೂರ್ಣ ವೈರ್‌ಲೆಸ್ ಇಯರ್‌ಬಡ್‌ಗಳ ಹೊಚ್ಚಹೊಸ ಸೆಟ್ ಅನ್ನು ಪರಿಚಯಿಸಿದೆ. ನೋಡಲು ಆಪಲ್‌ನ ಏರ್‌ಪಾಡ್‌ಗಳ ರೀತಿಯ ವಿನ್ಯಾಸದಲ್ಲಿ 13mm ಡೈನಾಮಿಕ್ ಬಾಸ್ ಬೂಸ್ಟ್ + ಡ್ರೈವರ್‌ಗಳನ್ನು ಹೊತ್ತು ಹೊಸ Dizo Buds P ಇಯರ್‌ಬಡ್‌ಗಳು ಬಿಡುಗಡೆಗೊಂಡಿದ್ದು, ನಾಯ್ಸ್ ಕ್ಯಾನ್ಸಲೇಷನ್, 40 ಗಂಟೆಗಳ ಪ್ಲೇಬ್ಯಾಕ್ ಟೈಮ್, ಆಡಿಯೋ ಮತ್ತು ವಿಶ್ಯವಲ್ ಸಿಂಕ್ರೊನೈಸೇಶನ್ ಮತ್ತು ಸ್ಮಾರ್ಟ್ ಟಚ್ ಕಂಟ್ರೋಲ್‌ಗಳ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ದೇಶದಲ್ಲಿ ಕೇವಲ 1,299 ಬೆಲೆಯಲ್ಲಿ ಬಿಡುಗಡೆಗೊಂಡಿರುವ ಹೊಸ Dizo Buds P ವೈರ್‌ಲೆಸ್ ಇಯರ್‌ಬಡ್‌ಗಳ ಸಾಧನವು ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
Dizo Buds P ವೈರ್‌ಲೆಸ್ ಇಯರ್‌ಬಡ್‌ಗಳ ವೈಶಿಷ್ಟ್ಯಗಳು
ನೂತನ Dizo Buds P ವೈರ್‌ಲೆಸ್ ಇಯರ್‌ಬಡ್‌ಗಳು ಅರ್ಧ-ಇಯರ್ ವಿನ್ಯಾಸದೊಂದಿಗೆ ರಚನೆಯಾಗಿದ್ದು, ಇದರ ಬಡ್ಸ್ ಭಾಗಶಃ ಕಿವಿಯ ವಿನ್ಯಾಸವನ್ನು ಹೊಂದಿವೆ. ನೋಡಲು ಆಪಲ್ ಏರ್‌ಪಾಡ್ಸ್ ಗಳಂತೆಯೇ ಕಾಂಡ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ Dizo Buds P ಸಾಧನವನ್ನು ಪರಿಚಯಿಸಲಾಗಿದೆ. ಈ ನೂತನ ಸಾಧನವು 13mm ಡೈನಾಮಿಕ್ ಬಾಸ್ ಬೂಸ್ಟ್ + ಡ್ರೈವರ್‌ಗಳನ್ನು ಹೊಂದಿದ್ದು, ಬಾಸ್ ಕಾರ್ಯಕ್ಷಮತೆಗಾಗಿ ಬಾಸ್ ಬೂಸ್ಟ್ + ಅಲ್ಗಾರಿದಮ್‌ಗೆ ಬೆಂಬಲವಿದೆ. ಹೆಚ್ಚುವರಿಯಾಗಿ, ಬಡ್ಸ್ P 88ms ಸೂಪರ್ ಲೋ ಲೇಟೆನ್ಸಿ ಗೇಮಿಂಗ್ ಮೋಡ್ ಅನ್ನು ಹೊಂದಿದ್ದು, ಆಟಗಳನ್ನು ಆಡುವಾಗ ಆಡಿಯೋ ಮತ್ತು ದೃಶ್ಯ ಸಿಂಕ್ರೊನೈಸೇಶನ್ ಅನ್ನು ಸುಧಾರಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. IPX4 ರೇಟಿಂಗ್ ನಲ್ಲಿ ಈ ಸಾಧನವು ಬೆವರು ಮತ್ತು ನೀರಿನ ಪ್ರತಿರೋಧವನ್ನು ಹೊಂದಿದೆ.

Dizo Buds P ವೈರ್‌ಲೆಸ್ ಇಯರ್‌ಬಡ್‌ಗಳು ANC ಗೆ ಬೆಂಬಲವನ್ನು ಹೊಂದಿಲ್ಲದಿದ್ದರೂ, ಕರೆಗಳ ಸಮಯದಲ್ಲಿ ಹೆಚ್ಚುವರಿ ಶಬ್ದಗಳನ್ನು ತೊಡೆದುಹಾಕಲು Noise Cancellation (ENC) ತಂತ್ರಜ್ಞಾನವಿದೆ. Dizo Buds P ಸಾಧನದ ಇಯರ್‌ಬಡ್‌ಗಳಲ್ಲಿ ಟಚ್ ಕಂಟ್ರೋಲ್‌ಗಳು ಸಹ ಲಭ್ಯವಿದ್ದು, ಡಬಲ್-ಟ್ಯಾಪ್ ಮೂಲಕ ಪ್ಲೇ/ಪಾಸ್/ಕರೆ ಉತ್ತರಿಸುವ/ಕರೆ ತಿರಸ್ಕರಿಸುವ ಟ್ರಿಪಲ್-ಟ್ಯಾಪ್ ಟ್ರ್ಯಾಕ್ ಸ್ಕಿಪ್ ಆಗಿ ಕಾರ್ಯನಿರ್ವಹಿಸುತ್ತದೆ. ಕರೆ ತಿರಸ್ಕರಿಸಲು ಇದರ ಎರಡೂ ಇಯರ್‌ಬಡ್ಗಳನ್ನು 2 ಸೆಕೆಂಡುಗಳ ಕಾಲ ದೀರ್ಘವಾಗಿ ಒತ್ತಬೇಕು. ಇದೆ ರೀತಿ ಗೇಮ್ ಆಡುವ ವೇಳೆ ಈ ಎರಡೂ ಇಯರ್‌ಬಡ್‌ಗಳ ಮೇಲೆ 2 ಸೆಕೆಂಡುಗಳ ಕಾಲ ದೀರ್ಘವಾಗಿ ಒತ್ತಿದರೆ ಗೇಮ್ ಮೋಡ್ ಅನ್ನು ಸಕ್ರಿಯಗೊಳಿಸಬಹದು ಅಥವಾ ನಿಷ್ಕ್ರಿಯಗೊಳಿಸಬಹುದು ಎಂದು Dizo ಕಂಪೆನಿಯು ತಿಳಿಸಿದೆ.

Dizo Buds P ಸಾಧನದ ಚಾರ್ಜಿಂಗ್ ಕೇಸ್ ಗರಿಷ್ಠ 480mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ, ಇದರ ಪ್ರತಿಯೊಂದು ಇಯರ್‌ಬಡ್‌ಗಳು 40mAh ಬ್ಯಾಟರಿಯನ್ನು ಹೊಂದಿವೆ. ಈ ಇಯರ್‌ಬಡ್‌ಗಳು ಒಟ್ಟು 40 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಒದಗಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು Dizo Buds P ಸಾಧನವು ಒಂದೇ ಚಾರ್ಜ್ ನಲ್ಲಿ 7 ಗಂಟೆಗಳವರೆಗೆ ಪ್ಲೇಟೈಮ್ ಮತ್ತಿ 10 ನಿಮಿಷಗಳಲ್ಲಿ 4-ಗಂಟೆಗಳ ಆಟದ ಸಮಯವನ್ನು ಒದಗಿಸುವುದಾಗಿ ಕಂಪೆನಿ ಹೇಳಿಕೊಂಡಿದೆ. USB ಟೈಪ್-C ಪೋರ್ಟ್ ಮೂಲಕ ಚಾರ್ಜಿಂಗ್ ಕೇಸ್ ವೇಗವಾಗಿ ಚಾರ್ಜ್ ಆಗುವ ಭರವಸೆಸಯನ್ನು ಸಹ ನೀಡಲಾಗಿದ್ದು, 1,299 ಬೆಲೆಯ ಈ ಸಾಧನವನ್ನು ಜುಲೈ 5 ರಿಂದ ಫ್ಲಿಪ್‌ಕಾರ್ಟ್ ಮೂಲಕ ಡೈನಮೋ ಬ್ಲಾಕ್, ಶ್ಯಾಡಿ ಬ್ಲೂ ಮತ್ತು ಮಾರ್ಬಲ್ ವೈಟ್ ಮೂರು ಬಣ್ಣಗಳಲ್ಲಿ ಖರೀದಿಸಬಹುದು.
Dizo Buds P Wireless Earbuds Launched In India Price, Specifications.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm