ಬ್ರೇಕಿಂಗ್ ನ್ಯೂಸ್
05-07-22 08:24 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಆಡಿಯೋ ಉತ್ಪನ್ನಗಳ ತಯಾರಕ ಬ್ರ್ಯಾಂಡ್ 'Noise' ದೇಶದಲ್ಲಿ ತನ್ನ ವಿನೂತನ ವೈರ್‌ಲೆಸ್ ಹೆಡ್‌ಫೋನ್ ಸೆಟ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೆಕ್‌ಬ್ಯಾಂಡ್ ಹೆಡ್‌ಫೋನ್ ಅನ್ನು ಇಷ್ಟಪಡುವ ಜನರಿಗಾಗಿ Noise Flair XL ಎಂಬ ಹೆಸರಿಲ್ಲಿನ ಹೊಸ ವೈರ್‌ಲೆಸ್ ನೆಕ್‌ಬ್ಯಾಂಡ್ ಹೆಡ್‌ಫೋನ್ ಸಾಧನವನ್ನು ಪರಿಚಯಿಸಲಾಗಿದ್ದು, ಈ ಸಾಧನವು ಪ್ರೀಮಿಯಂ ವಿನ್ಯಾಸ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ದೇಶದಲ್ಲಿ ಬಿಡುಗಡೆಗೊಂಡಿರುವ ನೂತನ Noise Flair XL ವೈರ್‌ಲೆಸ್ ಹೆಡ್‌ಫೋನ್ ಹೇಗಿದೆ?, ಈ ಸಾಧನದ ಬೆಲೆ ಎಷ್ಟು?, ಮತ್ತು ಏನೆಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ತಿಳಿಯೋಣ ಬನ್ನಿ.
Noise Flair XL ನೆಕ್‌ಬ್ಯಾಂಡ್ ವೈಶಿಷ್ಟ್ಯಗಳು
Noise Flair XL ನೆಕ್‌ಬ್ಯಾಂಡ್ ಸಾಧನವು ಬಾಸ್ ಪ್ರತಿಕ್ರಿಯೆಯನ್ನು ಹೆಚ್ಚಿಸುವ "TruBass" ವೈಶಿಷ್ಟ್ಯಗಳನ್ನು ಹೊಂದಿರುವುದಾಗಿ Noise ಕಂಪೆನಿ ತಿಳಿಸಿದೆ. ಮೇಲಿನ ಚಿತ್ರದಲ್ಲಿ ಕಾಣಿಸುವಂತೆ ಪ್ರೀಮಿಯಂ ಮತ್ತು ಸ್ಟೈಲಿಶ್ ಆಗಿ ಬಿಡುಗಡೆಗೊಂಡಿರುವ ಈ ಸಾಧನವು ಬೆವರು ಮತ್ತು ನೀರು-ನಿರೋಧಕವಾಗಿ IPX5 ರೇಟಿಂಗ್ ಅನ್ನು ಹೊಂದಿರುವ ಈ ಸಾಧನವನ್ನು ವ್ಯಾಯಾಮದ ಸಮಯದಲ್ಲಿ ಬಳಸುವಂತೆ ನಿರ್ಮಿಸಲಾಗಿದೆ. ಇನ್ನು Noise Flair XL ನೆಕ್‌ಬ್ಯಾಂಡ್ ಸಾಧನ ಒಂದೇ ಚಾರ್ಜ್‌ನಲ್ಲಿ 80 ಗಂಟೆಗಳ ತಡೆರಹಿತ ಆಡಿಯೊ ಆಲಿಸುವಿಕೆಯ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪೆನಿಯು ಹೇಳಿಕೊಂಡಿದ್ದು, USB-C ಕನೆಕ್ಟರ್ ಮೂಲಕ ಕೇವಲ 10 ನಿಮಿಷಗಳ ಚಾರ್ಜಿಂಗ್ ಸಮಯದಲ್ಲಿ 15 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಈ ಸಾಧನವು ಒದಗಿಸುತ್ತದೆ ಎಂದು ಕಂಪೆನಿಯು ಭರವಸೆ ನೀಡಿದೆ.

Noise Flair XL ಇಯರ್‌ಫೋನ್‌ಗಳು ಪರಿಸರದ ಧ್ವನಿ ಕಡಿತ ಸಾಮರ್ಥ್ಯವನ್ನು ಹೊಂದಿದ್ದು, ಆಡಿಯೊ ಗುಣಮಟ್ಟವ ಮತ್ತು ಕರೆ ಸ್ಪಷ್ಟತೆಯನ್ನು ಸುಧಾರಿಸುತ್ತದೆ. ಬ್ಲೂಟೂತ್ 5.2 ಸಂಪರ್ಕವನ್ನು ಹೊಂದಿರುವ ಈ ಸಾಧನವು "ಹೈಪರ್ ಸಿಂಕ್" ವೈಶಿಷ್ಟ್ಯವನ್ನು ಸಹ ಹೊಂದಿದೆ ಎಂದು Noise ತಿಳಿಸಿದೆ. ಈ ವೈಶಿಷ್ಟ್ಯವು ಇಯರ್‌ಬಡ್‌ಗಳನ್ನು ಅವುಗಳ ಮ್ಯಾಗ್ನೆಟಿಕ್ ಇಯರ್ ಟಿಪ್‌ನಿದ ಬೇರ್ಪಡಿಸುವ ಮೂಲಕ ಇತ್ತೀಚಿನ ಸ್ಮಾರ್ಟ್‌ಫೋನ್‌ನೊಂದಿಗೆ ಆಟೊಮ್ಯಾಟಿಕ್ ಆಗಿ ಜೋಡಿಯಾಗಲು ಅನುಮತಿಸುತ್ತದೆ. ಹೆಚ್ಚುವರಿಯಾಗಿ, ಈ ಸಾಧನವು ಡ್ಯುಯಲ್ ಪೇರಿಂಗ್ ಅನ್ನು ಹೊಂದಿದ್ದು, ಇದು ಏಕಕಾಲದಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳೊಂದಿಗೆ ಸಿಂಕ್ ಆಗಲಿದೆ. ಜೊತೆಗೆ ಗೇಮಿಂಗ್ ಮಾಡುವಾಗ ತಡೆರಹಿತ ಸಂಪರ್ಕಕ್ಕಾಗಿ ಕಡಿಮೆ ಲೇಟೆನ್ಸಿ ಮೋಡ್ ವೈಶಿಷ್ಟ್ಯವನ್ನು ಸಹ ಈ ನೆಕ್‌ಬ್ಯಾಂಡ್ ಹೊಂದಿದೆ.

Noise Flair XL ಬೆಲೆ
Noise Flair XL ನೆಕ್‌ಬ್ಯಾಂಡ್ ಇಯರ್‌ಫೋನ್ ಸೆಟ್ ಈಗಾಗಲೇ ಮಾರಾಟಕ್ಕೆ ಬಂದಿದ್ದು, Noise ಕಂಪೆನಿಯ ಅಧಿಕೃತ ವೆಬ್ ಸ್ಟೋರ್ ಮತ್ತು ದೇಶದ ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ನಲ್ಲಿ Noise Flair XL ಸಾಧನವನ್ನು ಖರೀದಿಸಬಹುದು. ಮಿಸ್ಟ್ ಗ್ರೇ, ಬರ್ಗಂಡಿ, ಜೆಟ್ ಬ್ಲ್ಯಾಕ್ ಮತ್ತು ಸ್ಟೋನ್ ಬ್ಲೂ ನಾಲ್ಕು ಬಣ್ಣಗಳಲ್ಲಿ ಲಭ್ಯವಿರುವ Noise Flair XL ನೆಕ್‌ಬ್ಯಾಂಡ್ ಇಯರ್‌ಫೋನ್ 1,499 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
Noise Flair Xl Neckband Earphones Launched In India.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
21-07-26 08:03 pm
Mangaluru Staffer
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm
ಉಕ್ರೇನ್ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ;...
21-07-26 11:47 am
ತ್ರಿಪುರಾ ಡಿಜಿಪಿ ಅನುರಾಗ್ ಧನಕರ್ ಕಚೇರಿಯಲ್ಲಿ ಗುಂಡ...
20-07-26 10:17 pm