ಬ್ರೇಕಿಂಗ್ ನ್ಯೂಸ್
12-07-22 10:09 pm Source: Vijayakarnataka ಡಿಜಿಟಲ್ ಟೆಕ್
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Redmi ಸುಮಾರು 3 ವರ್ಷಗಳ ನಂತರ ಭಾರತದಲ್ಲಿ ತನ್ನ K- ಸರಣಿಯ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿರುವ ಸುದ್ದಿ ಅಧಿಕೃತವಾಗಿದೆ. ಇದೇ 20 ರಂದು ಐಫೋನ್ 13 ಗಿಂತಲೂ ವೇಗವಾಗಿ ಕಾರ್ಯನಿರ್ವಹಿಸುವ ಹೊಸ Redmi K50i 5G ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು Redmi ಕಂಪೆನಿ ಅಧಿಕೃತವಾಗಿ ತಿಳಿಸಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Redmi K50i 5G ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳ ಯಾವುದೇ ಮಾಹಿತಿಯನ್ನು Redmi ಇನ್ನೂ ಬಹಿರಂಗಪಡಿಸದಿದ್ದರೂ ಸಹ, ನೂತನ Redmi K50i 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ಹೇಗಿರಬಹುದು? ಮತ್ತು Redmi K50i 5G ಫೋನ್ ಐಫೋನ್ 13 ಗಿಂತಲೂ ವೇಗವಾಗಿ ಕಾರ್ಯನಿರ್ವಹಿಸಲಿದೆ ಎಂದು Redmi ಕಂಪೆನಿ ಹೇಳಿಕೊಂಡಿರುವುದು ಏಕೆ ಎಂಬುದನ್ನು ನೋಡೋಣ ಬನ್ನಿ.
Redmi K50i 5G ವದಂತಿಯ ವೈಶಿಷ್ಟ್ಯಗಳು
ವದಂತಿಗಳಂತೆ, ನೂತನ Redmi K50i 5G 1,080 x 2,460 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 6.55-ಇಂಚಿನ IPS LCD FH+ ಡಿಸ್‌ಪ್ಲೇಯಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಈ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್ ಮತ್ತು 270Hz ಟಚ್ ಸ್ಲಾಪಿಂಗ್ ರೇಟ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಹುಡ್ ಅಡಿಯಲ್ಲಿ, Redmi K50i 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಚಿಪ್‌ಸೆಟ್ ಜೊತೆಗೆ 8 ಜಿಬಿ RAM ಮತ್ತು 256 ಜಿಬಿ ಸಂಗ್ರಹಣೆಯೊಂದಿಗೆ ಜೋಡಿಸಲ್ಪಡುತ್ತದೆ. ಕ್ಯಾಮೆರಾ ವಿಷಯಕ್ಕೆ ಬಂದರೆ, Redmi K50i 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದ್ದು, ಇದು 64MP ಪ್ರಾಥಮಿಕ ಸಂವೇದಕ, 8MP ಅಲ್ಟ್ರಾ ವೈಡ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಸಂವೇದಕಗಳನ್ನು ಹಾಗೂ ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ. ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಬಹುದಾದ ಈ ಸ್ಮಾರ್ಟ್‌ಫೋನ್ 67W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರುವ 5,080mAh ಬ್ಯಾಟರಿಯಿಂದ ಬೆಂಬಲಿತವಾಗಿರಬಹುದು ಎಂದು ಹೇಳಲಾಗಿದೆ
ಐಫೋನ್ 13 ಗಿಂತಲೂ ವೇಗವಾಗಿದೆಯಾ ಈ ಫೋನ್?
Redmi K50i 5G ಫೋನ್ ಐಫೋನ್ 13 ಗಿಂತಲೂ ವೇಗವಾಗಿ ಕಾರ್ಯನಿರ್ವಹಿಸಲಿದೆ ಎಂದು Redmi ಕಂಪೆನಿ ಹೇಳಿಕೊಂಡಿದೆ. ಇದಕ್ಕೆ ಕಾರಣವನ್ನೂ ನೀಡಿರುವ Redmi ಕಂಪೆನಿಯು, Redmi K50i 5G ಸ್ಮಾರ್ಟ್‌ಫೋನ್ Apple iPhone 13 ಗಿಂತ ಉತ್ತಮ AnTuTu ಬೆಂಚ್ ಮಾರ್ಕ್ ಸ್ಕೋರ್ ಅನ್ನು ಪಡೆದುಕೊಂಡಿದೆ ಎಂದು ಹೇಳಿಕೊಂಡಿದೆ. Redmi ಇಂಡಿಯಾ ಹಂಚಿಕೊಂಡಿರುವ ಟ್ವೀಟ್ ಪ್ರಕಾರ, Redmi K50i 5G ಸ್ಮಾರ್ಟ್‌ಫೋನ್ 822274 ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಗಿದ್ದರೆ, ಮತ್ತೊಂದೆಡೆ, iPhone 13 ಫೋನಿನಲ್ಲಿರುವ A15 ಬಯೋನಿಕ್ ಚಿಪ್ 782653 ಸ್ಕೋರ್ ಮಾಡಿದೆ. ಹಾಗಾಗಿ, Redmi K50i 5G ಫೋನ್ ಐಫೋನ್ 13 ಗಿಂತಲೂ ವೇಗವಾಗಿ ಕಾರ್ಯನಿರ್ವಹಿಸಲಿದೆ ಎಂದು Redmi ಕಂಪೆನಿ ತಿಳಿಸಿದೆ.
Redmi K50i 5G ನಿರೀಕ್ಷಿತ ಬೆಲೆಗಳು
ಹಲವು ವರದಿಗಳ ಪ್ರಕಾರ, ಭಾರತದಲ್ಲಿ Redmi K50i 5G ಸ್ಮಾರ್ಟ್‌ಫೋನ್ ಎರಡು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಬಿಡುಗಡೆಯಾಗಲಿದೆ. 6GB + 128GB ಮತ್ತು 8GB + 256GB ಎರಡು ಮಾದರಿಯ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 26,999 ರೂ. ಮತ್ತು 31,999 ರೂ.ಗಳ ಬೆಲೆಗಳಲ್ಲಿ ಬಿಡುಗಡೆಯಾಗಬಹುದು ಹಾಗೂ ಜುಲೈ 22 ರಂದು ಮಾರಾಟಕ್ಕೆ ಬಂದ ನಂತರ Redmi K50i 5G ಸ್ಮಾರ್ಟ್‌ಫೋನ್‌ಗಳ ಮೇಲೆ ಸೀಮಿತ ರಿಯಾಯಿತಿಯನ್ನು ಸಹ ಪರಿಚಯಿಸಬಹುದು ಎಂದು ಹೇಳಲಾಗಿದೆ.
Redmi K50i 5g Launching On July 20.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm