ಬ್ರೇಕಿಂಗ್ ನ್ಯೂಸ್
16-07-22 07:51 pm Source: Vijayakarnataka ಡಿಜಿಟಲ್ ಟೆಕ್
ಸ್ಮಾರ್ಟ್ ಪರಿಕರಗಳ ತಯಾರಿಕೆಯಲ್ಲೂ ಹೆಸರಾಂತ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಜನಪ್ರಿಯ ಮೊಬೈಲ್ ಕಂಪೆನಿ Xiaomi ದೇಶದಲ್ಲಿಂದು ತನ್ನ ವಿನೂತನ ಸ್ಮಾರ್ಟ್ ಸ್ಪೀಕರ್ (IR ಕಂಟ್ರೋಲ್) ಅನ್ನು ಪರಿಚಯಿಸಿದೆ. IR (InfraRed remote control) ನಿಯಂತ್ರಣ ವೈಶಿಷ್ಟ್ಯದೊಂದಿಗೆ ಸ್ಪೀಕರ್ ಒಂದನ್ನು ಹುಡುಕುತ್ತಿರುವ ಗ್ರಾಹಕರಿಗಾಗಿ ಕೈಗೆಟುಕುವ ಬೆಲೆಯಲ್ಲಿ ಈ ಸ್ಮಾರ್ಟ್‌ಸ್ಪೀಕರ್ ಅನ್ನು ಬಿಡುಗಡೆಗೊಳಿಸಲಾಗಿದ್ದು, Xiaomi ಸ್ಮಾರ್ಟ್ ಸ್ಪೀಕರ್ ಎಲ್ಇಡಿ ಡಿಜಿಟಲ್ ಕ್ಲಾಕ್ ಡಿಸ್‌ಪ್ಲೇ ಮತ್ತು ಅಂತರ್ಗತ Chromecast ಮತ್ತು Google ಅಸಿಸ್ಟೆಂಟ್ ಬೆಂಬಲವನ್ನು ಸಹ ಹೊಂದಿದೆ. ಹಾಗಾದರೆ, Xiaomi ಹೊಸದಾಗಿ ಬಿಡುಗಡೆಗೊಳಿಸಿರುವ ವಿನೂತನ ಸ್ಮಾರ್ಟ್ ಸ್ಪೀಕರ್ (IR ಕಂಟ್ರೋಲ್) ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
IR (InfraRed remote control) ನಿಯಂತ್ರಣದೊಂದಿಗೆ ಬಿಡುಗಡೆಗೊಂಡಿರುವ ಈ ಹೊಸ Xiaomi ಸ್ಮಾರ್ಟ್ ಸ್ಪೀಕರ್ ಗೃಹೋಪಯೋಗಿ ಉಪಕರಣಗಳಿಗೆ ಧ್ವನಿ ರಿಮೋಟ್ ಕಂಟ್ರೋಲ್ ಆಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಈ ಸಾಧನವು ಅಂತರ್ಗತ IR ಟ್ರಾನ್ಸ್ಮಿಟರ್ ಮಾಡ್ಯೂಲ್‌ನೊಂದಿಗೆ ಬಂದಿದೆ. ಇದು Google ಅಸಿಸ್ಟೆಂಟ್‌ನೊಂದಿಗೆ ಸಂಯೋಜಿಸಿದಾಗ ನಿಮ್ಮ ಧ್ವನಿಯನ್ನು ಬಳಸಿಕೊಂಡು ಸ್ಮಾರ್ಟ್ ಅಲ್ಲದ ಸಾಧನಗಳನ್ನು ನಿಯಂತ್ರಿಸಲು ನಿಮಗೆ ಅನುಮತಿಸುತ್ತದೆ. ಇದಲ್ಲದೇ, ಈ ಸ್ಮಾರ್ಟ್ ಸ್ಪೀಕರ್ ಅಂತರ್ಗತ Chromecast ಗೆ ಬೆಂಬಲದೊಂದಿಗೂ ಸಹ ಬರುತ್ತದೆ. ಜೊತೆಗೆ ಸ್ಪೀಕರ್‌ನಲ್ಲಿರುವ ಭೌತಿಕ ನಿಯಂತ್ರಣ ಬಟನ್‌ಗಳನ್ನು ಪ್ಲೇ ಮಾಡಲು/ವಿರಾಮಗೊಳಿಸಲು, ವಾಲ್ಯೂಮ್ ಅಪ್/ಡೌನ್ ಮಾಡಲು ಅಥವಾ ಆಡಿಯೊವನ್ನು ಮ್ಯೂಟ್ ಮಾಡಲು ಬಳಸಬಹುದು.
Xiaomi ಸ್ಮಾರ್ಟ್ ಸ್ಪೀಕರ್ (IR ಕಂಟ್ರೋಲ್) ಎಲ್ಇಡಿ ಡಿಜಿಟಲ್ ಕ್ಲಾಕ್ ಡಿಸ್‌ಪ್ಲೇಯನ್ನು ಸಹ ಹೊಂದಿದ್ದು, ಇದು ಅಡಾಪ್ಟಿವ್ ಬ್ರೈಟ್ನೆಸ್ ಅನ್ನು ಬೆಂಬಲಿಸುತ್ತದೆ, ಇದು ಡಿಎನ್‌ಡಿ ಮೋಡ್‌ನಲ್ಲಿ ಇರಿಸಿದಾಗ ಬೆಳಕನ್ನು ಮಂದಗೊಳಿಸುತ್ತದೆ. ಸುತ್ತುವರಿದ ಬೆಳಕನ್ನು ಅವಲಂಬಿಸಿ ಹೊಳಪಿನ ಮಟ್ಟಗಳು ಸ್ವಯಂಚಾಲಿತವಾಗಿ ಬದಲಾಗುತ್ತವೆ. ಅಲಾರಂ ಇರಿಸುವಾಗ ಬಳಕೆದಾರರು ಬಯಸಿದ ಹಾಡುಗಳು ಮತ್ತು ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ. 1.5-ಇಂಚಿನ ಪೂರ್ಣ ಶ್ರೇಣಿಯ ಡ್ರೈವರ್ ಗಳನ್ನು ಹೊಂದಿರುವ ಈ ಸ್ಟಫಕರ್ ಫೀಲ್ಡ್ ವಾಯ್ಸ್ ವೇಕ್ ಅಪ್ ಬೆಂಬಲವನ್ನು ಹೊಂದಿರುವ ಎರಡು ಮೈಕ್‌ಗಳನ್ನು ಹೊಂದಿದೆ. ಸುಮಾರು 628 ಗ್ರಾಂ ತೂಕವನ್ನು ಹೊಂದಿರುವ Xiaomi ಕಂಪೆನಿಯ ಈ ಸ್ಮಾರ್ಟ್ ಸ್ಪೀಕರ್ ಅನ್ನು ಸ್ಮಾರ್ಟ್ ಹೋಮ್ ಕಲ್ಪನೆಗೆ ಹೇಳಿ ಮಾಡಿಸಿದಂತಿದೆ
ಭಾರತದಲ್ಲಿ Xiaomi ಸ್ಮಾರ್ಟ್ ಸ್ಪೀಕರ್ (IR ಕಂಟ್ರೋಲ್) ಬೆಲೆ
ದೇಶದಲ್ಲಿ Xiaomi ಸ್ಮಾರ್ಟ್ ಸ್ಪೀಕರ್ (IR ಕಂಟ್ರೋಲ್) ಅನ್ನು 5,999 ರೂ.ಗಳ MRP ಬೆಲೆ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ, ಪರಿಚಯಾತ್ಮಕ ಕೊಡುಗೆಯಾಗಿ ಈ ಸಾಧನವನ್ನು ಪ್ರಸ್ತುತ 4,999 ರೂ.ಗಳಿಗೆ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ. ಈ ಸ್ಮಾರ್ಟ್ ಸ್ಪೀಕರ್ ಅನ್ನು Xiaomi ನ ಅಧಿಕೃತ ವೆಬ್‌ಸೈಟ್, Flipkart ಮತ್ತು ಕಂಪೆನಿಯ ಪಾಲುದಾರಿಕೆಯನ್ನು ಹೊಂದಿರುವ ಇತರೆ ಚಿಲ್ಲರೆ ಅಂಗಡಿಗಳಲ್ಲಿಯೂ ಖರೀದಿಸಬಹುದಾಗಿದ್ದು, ಈ ಸ್ಪೀಕರ್ ಕಪ್ಪು ಬಣ್ಣದ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ ಎಂದು ಕಂಪೆನಿ ಹೇಳಿದೆ.
Xiaomi Smart Speaker With Ir Control Launched In India.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 10:56 pm
HK News Desk
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm