ಬ್ರೇಕಿಂಗ್ ನ್ಯೂಸ್
02-08-22 08:05 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಮ್ಯೂಸಿಕ್ ಪ್ರಿಯರಿಗಾಗಿ ಜನಪ್ರಿಯ ಎಲೆಕ್ಟ್ರಾನಿಕ್ ಬ್ರ್ಯಾಂಡ್ OnePlus ತನ್ನ ನೂತನ OnePlus Nord Buds CE ಇಯರ್‌ಬಡ್ ಸಾಧನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಚಾರ್ಜಿಂಗ್ ಕೇಸ್‌ನೊಂದಿಗೆ 20 ಗಂಟೆಗಳವರೆಗೆ ಮತ್ತು ಕೇಸ್ ಇಲ್ಲದೆ 4.5 ಗಂಟೆಗಳವರೆಗೆ ಆಲಿಸುವ ಸಮಯವನ್ನು ಹೊಂದಿರುವ ಈ ಹೊಸ OnePlus Nord Buds CE ಇಯರ್‌ಬಡ್ ಸಾಧನವು ಅತ್ಯಂತ ಕಡಿಮೆ 2,299 ರೂ.ಗಳ ಬೆಲೆಯಲ್ಲಿ ಬಿಡುಗಡೆಗೊಂಡಿದ್ದು, ಇದೇ ಆಗಸ್ಟ್ 4 ರಂದು ಮಧ್ಯಾಹ್ನ 12 ಗಂಟೆಯಿಂದ ದೇಶದಲ್ಲಿ ಮಾರಾಟಕ್ಕೆ ಬರುತ್ತಿದೆ. ಹಾಗಾದರೆ, ನೂತನ OnePlus Nord Buds CE ಇಯರ್‌ಬಡ್ ಸಾಧನದ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ವಿಶೇಷತೆಗಳೇನು ಎಂಬುದನ್ನು ತಿಳಿಯೋಣ ಬನ್ನಿ.
OnePlus ನಾರ್ಡ್ ಬಡ್ಸ್ CE ವಿಶೇಷಣಗಳು
ಒನ್‌ಪ್ಲಸ್ ಕಂಪೆನಿಯ ಹೊಸ OnePlus Nord Buds CE ಸಾಧನವು ಇಯರ್‌ಫೋನ್‌ಗಳು 20Hz ನಿಂದ 20,000Hz ಆವರ್ತನ ಪ್ರತಿಕ್ರಿಯೆಯ 13.4mm ಡೈನಾಮಿಕ್ ಡ್ರೈವರ್‌ಗಳನ್ನು ಒಳಗೊಂಡಿದೆ. ಕರೆಗಳಿಗಾಗಿ AI ಶಬ್ದ ರದ್ದತಿ ತಂತ್ರಜ್ಞಾನವನ್ನು ಮತ್ತು ನೀರಿನ ಪ್ರತಿರೋಧಕ್ಕಾಗಿ IPX4 ರೇಟಿಂಗ್ ಅನ್ನು ಹೊಂದಿರುವ ಈOnePlus Nord Buds CE ಸಾಧನವು ಬ್ಲೂಟೂತ್ ಆವೃತ್ತಿ 5.2 ರಲ್ಲಿ ಸುಮಾರು 10m ವರೆಗಿನ ವೈರ್‌ಲೆಸ್ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಲಿದೆ. ಸೌಂಡ್ ಮಾಸ್ಟರ್ ಈಕ್ವಲೈಸರ್ ಜೊತೆಗೆ AAC ಮತ್ತು SBC ಆಡಿಯೊಗಳಿಗೆ ಬೆಂಬಲವನ್ನು ನೀಡಲಿದೆ. ಇನ್ನು ಈ TWS ಇಯರ್‌ಫೋನ್ ಬಡ್‌ಗಳು ಸುಮಾರು 3.5g ತೂಕವನ್ನು ಹೊಂದಿದ್ದರೆ, ಚಾರ್ಜಿಂಗ್ ಕೇಸ್‌ನೊಂದಿಗೆ ಸಾಧನವು ಸುಮಾರು 33g ತೂಗುತ್ತದೆ. ಬಾಕ್ಸ್‌ನಲ್ಲಿ,ಚಾರ್ಜಿಂಗ್ ಕೇಸ್ ಮತ್ತು ಇಯರ್‌ಬಡ್‌ಗಳ ಹೊರತಾಗಿ, ಖರೀದಿದಾರರು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಕೇಬಲ್ ಮತ್ತು ನಾರ್ಡ್ ಎಮೋಜಿ ಸ್ಟಿಕ್ಕರ್ ಅನ್ನು ಸಹ ಪಡೆಯುತ್ತಾರೆ.
20 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ!
OnePlus Nord Buds CE ಸಾಧನವನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದಾಗ, 50 ಪರ್ಸೆಂಟ್ ವಾಲ್ಯೂಮ್‌ನಲ್ಲಿ 4.5 ಗಂಟೆಗಳವರೆಗೆ ಆಲಿಸುವ ಸಮಯವನ್ನು ಮತ್ತು 3 ಗಂಟೆಗಳವರೆಗೆ ಫೋನ್ ಕರೆಯ ಸಮಯವನ್ನು ನೀಡುತ್ತದೆ. ಚಾರ್ಜಿಂಗ್ ಕೇಸ್‌ನೊಂದಿಗೆ ಸಾಧನವನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದಾಗ ಮತ್ತು 50 ಪರ್ಸೆಂಟ್ ವಾಲ್ಯೂಮ್‌ನಲ್ಲಿ ಪ್ಲೇ ಮಾಡಿದಾಗ ಇವು 20 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತವೆ ಎಂದು OnePlus ಕಂಪೆನಿ ಹೇಳಿಕೊಂಡಿದೆ. OnePlus Nord Buds CE ಸಾಧನದ ಎರಡು ಬಡ್‌ಗಳು ತಲಾ ಒಂದು 27mAh ಬ್ಯಾಟರಿಯನ್ನು ಹೊಂದಿವೆ ಮತ್ತು ಇವುಗಳ ಚಾರ್ಜಿಂಗ್ ಕೇಸ್ 300mAh ಬ್ಯಾಟರಿಯನ್ನು ಹೊಂದಿದೆ. ಒಟ್ಟಾರೆಯಾಗಿ Nord Buds CE TWS ಇಯರ್‌ಫೋನ್‌ಗಳು ಈ ಕೇಸ್‌ನೊಂದಿಗೆ ಸೇರಿ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 81 ನಿಮಿಷಗಳವರೆಗೆ ಪ್ಲೇಬ್ಯಾಕ್ ನೀಡಬಹುದು ಎಂದು OnePlus ಕಂಪೆನಿ ತಿಳಿಸಿದೆ.
ಭಾರತದಲ್ಲಿ OnePlus Nord Buds CE ಸಾಧನದ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ OnePlus Nord Buds CE ಸಾಧನವನ್ನು 2,299 ರೂ.ಗಳ (ಎಂಆರ್‌ಪಿ ಬೆಲೆ 2,699) ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದೇ ಆಗಸ್ಟ್ 4 ರಂದು OnePlus Nord CE ಅಧಿಕೃತ OnePlus ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ತಾಣಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ ಮೂನ್‌ಲೈಟ್ ವೈಟ್ ಮತ್ತು ಮಿಸ್ಟಿ ಗ್ರೇ ಎರಡು ಬಣ್ಣದ ಆಯ್ಕೆಗಳಲ್ಲಿ OnePlus Nord Buds CE ಸಾಧನವನ್ನು ಖರೀದಿಸಬಹುದು.
Oneplus Nord Buds Ce True Wireless Earbuds For Rs 2,299.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm