ಬ್ರೇಕಿಂಗ್ ನ್ಯೂಸ್
04-08-22 10:45 pm Source: Vijayakarnataka ಡಿಜಿಟಲ್ ಟೆಕ್
ಇದೇ ಆಗಸ್ಟ್ 10 ರಂದು ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Samsung Galaxy Watch 5 ಸ್ಮಾರ್ಟ್‌ವಾಚ್ ಸರಣಿಯು ಹೊಂದಿರುವ ಕೆಲ ವೈಶಿಷ್ಟ್ಯಗಳು ಮತ್ತು ಬೆಲೆಗಳ ಬಗ್ಗೆ ಮಾಹಿತಿಗಳು ಲೀಕ್ ಆಗಿವೆ. ಜನಪ್ರಿಯ ಟಿಪ್‌ಸ್ಟಾರ್ SnoopyTech ಟ್ಟಟ್ಟರ್ ನಲ್ಲಿ ತಿಳಿಸಿರುವಂತೆ, ನೂತನ Samsung Galaxy Watch 5 ಸ್ಮಾರ್ಟ್‌ವಾಚ್ ವೈರ್‌ಲೆಸ್ ಚಾರ್ಜರ್ ಅನ್ನು ಹೊಂದಿರಲಿದೆ ಮತ್ತು ಕೇವಲ 30 ನಿಮಿಷಗಳ ಚಾರ್ಜ್‌ನಲ್ಲಿ ಸ್ಮಾರ್ಟ್‌ವಾಚ್ ಬ್ಯಾಟರಿಯನ್ನು ಶೇಕಡಾ 45 ರಷ್ಟು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೇ, ಇದರೊಂದಿಗೆ Samsung Galaxy Watch 5 ಸ್ಮಾರ್ಟ್‌ವಾಚ್ ಸರಣಿಯ ಬೆಲೆಗಳ ಬಗ್ಗೆಯೂ ಸಹ ಮಾಹಿತಿ ನೀಡಲಾಗಿದೆ.
ಹೌದು, Samsung Galaxy Watch 5 ಸರಣಿ ಸ್ಮಾರ್ಟ್‌ವಾಚ್‌ಗಳ ಬೆಲೆಗಳು 349 CAD ಗಳಿಂದ ಆರಂಭವಾಗಲಿದ್ದು, ಮೂಲ Samsung Galaxy Watch 5 ಸಾಧನದ 40mm ರೂಪಾಂತರವು 349 CAD (ಅಂದಾಜು ರೂ 21,300) ಗಳಿಗೆ ಮತ್ತು ಇದರ 44mm ರೂಪಾಂತರವು 389 CAD (ಅಂದಾಜು ರೂ 23,800) ಬೆಲೆಯನ್ನು ಹೊಂದಿರಲಿದೆ. ಇನ್ನು ಪ್ರೊ ಮಾದರಿ Galaxy Watch 5 Pro ನ 45mm ರೂಪಾಂತರವು CAD 559 (ಅಂದಾಜು ರೂ 34,200) ಗಳಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಇನ್ನು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಮಾಹಿತಿಯಂತೆ, Samsung Galaxy Watch 5 ಸರಣಿ ಸ್ಮಾರ್ಟ್‌ವಾಚ್‌ಗಳು ಐದು ವಿವಿಧ ಬಣ್ಣದ ಆಯ್ಕೆಗಳೊಂದಿಗೆ ಬರಬಹುದು ಎಂದು ಸೂಚಿಸಲಾಗಿದೆ.
Samsung Galaxy Watch 5 ಸರಣಿ ಸ್ಮಾರ್ಟ್‌ವಾಚ್ ಸರಣಿಯು ಕಪ್ಪು, ಹಸಿರು, ಗುಲಾಬಿ, ನೇರಳೆ ಮತ್ತು ಬೂದು ಬಣ್ಣಗಳಲ್ಲಿ ಬಿಡುಗಡೆಯಾಗಲಿವೆ. ಈ ಸ್ಮಾರ್ಟ್ ವಾಚ್ ಸರಣಿ ಕೂಡ ಕಳೆದ ಪೀಳಿಗೆಯಂತೆಯೇ ವೃತ್ತಾಕಾರದ-ಡಯಲ್ ವಿನ್ಯಾಸವನ್ನು ಹೊಂದಿದೆ ಮತ್ತು ಆರೋಗ್ಯ-ಸಂಬಂಧಿತ ವಿವರಗಳನ್ನು ಪತ್ತೆಹಚ್ಚಲು ಮತ್ತು ನೀಡಲು ಹಲವಾರು ವಿಭಿನ್ನ ಸಂವೇದಕಗಳನ್ನು ಪ್ಯಾಕ್ ಮಾಡುತ್ತದೆ ಎಂದು ವರದಿಯಾಗಿದೆ. ಆದರೆ, Samsung Galaxy Watch 5 ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳ ಬಗ್ಗೆ Samsung ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಇನ್ನು ಇದೇ ಆಗಸ್ಟ್ 10 ರಂದು Samsung ತನ್ನ ಮುಂದಿನ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಅನ್ನು ನಿಗಧಿಪಡಿಸಿರುವುದನ್ನು ನಾವಿಲ್ಲಿ ಗಮನಿಸಬಹುದು.
Samsung Galaxy Watch 5 And Watch 5 Pro Price Leaks Online.
18-08-22 01:02 pm
HK News Desk
'ಸಿದ್ದರಾಮಯ್ಯ ಸಿಎಂ' ಹೇಳಿಕೆಯಿಂದ ಬಿಜೆಪಿಗೆ ಮುಜುಗರ...
18-08-22 12:40 pm
ಬೆಂಗಳೂರಿಗೆ ಬಂದಿಳಿಯಲಿದೆ ವಿಶ್ವದ ಅತಿ ದೊಡ್ಡ ವಿಮಾನ...
17-08-22 10:58 pm
ಮಠ, ದೇಗುಲಗಳಿಗೆ ಕೋಟ್ಯಂತರ ಅನುದಾನ ಬಿಡುಗಡೆ ; ಚುನಾ...
17-08-22 10:31 pm
ಆಂಧ್ರ - ಬೆಂಗಳೂರು ಖಾಸಗಿ ಬಸ್ ಪಲ್ಟಿ ; ಸ್ಥಳದಲ್ಲೇ...
17-08-22 11:41 am
18-08-22 11:01 am
HK News Desk
ಚುನಾವಣೆ ವೇಳೆ ಉಚಿತ ಯೋಜನೆ ಯಾವುದಿರಬೇಕು ; ರಾಜಕೀಯ...
17-08-22 10:43 pm
ಸುಕೇಶ್ ಚಂದ್ರಶೇಖರ್ ಬಹುಕೋಟಿ ಹಗರಣ ; ಪ್ರಕರಣದಲ್ಲಿ...
17-08-22 05:59 pm
ಬಿಜೆಪಿ ಸಂಸದೀಯ ಮಂಡಳಿಗೆ ಬಿಎಸ್ ಯಡಿಯೂರಪ್ಪ ; ನಿತಿ...
17-08-22 05:30 pm
ಪ್ರೇಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಯ ವಿರುದ್ಧವೇ...
17-08-22 02:21 pm
17-08-22 03:44 pm
Mangalore Correspondent
ಹತ್ಯೆ ಆರೋಪಿಗಳ ಆಸ್ತಿ ಮುಟ್ಟುಗೋಲು ; ಫಾಜಿಲ್ ಕೊಲೆ...
17-08-22 01:00 pm
ಹಟ್ಟಿಯಿಂದ ದನ ಕಳವು ; ಐವರನ್ನು ಬಂಧಿಸಿದ ಕಂಕನಾಡಿ ಪ...
16-08-22 11:01 pm
ದಕ್ಷ ಅಧಿಕಾರಿ ಉಡುಪಿ ಎಸ್ಪಿ ವಿಷ್ಣುವರ್ಧನ್ ವರ್ಗ ;...
16-08-22 10:29 pm
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ; ದೆಹಲಿಯಲ್ಲಿ ಎನ...
16-08-22 09:20 pm
18-08-22 12:54 pm
HK News Desk
ದುಬೈನಿಂದ ಅಕ್ರಮ ಚಿನ್ನ ತರುತ್ತಿದ್ದ ಭಟ್ಕಳದ ವ್ಯಕ್ತ...
17-08-22 10:52 pm
ಫಾಜಿಲ್ ಕೊಲೆ ಪ್ರಕರಣ ; ಆರೋಪಿಗಳಿಗೆ ಪರಾರಿಯಾಗಲು ಸ...
17-08-22 10:25 pm
ಬಾನಲ್ಲಿ ಮಧುಚಂದ್ರಕೆ ಸಿನಿಮಾ ಸ್ಟೋರಿ ; ಹೆಂಡ್ತಿ ಗಯ...
17-08-22 12:04 pm
ಶಿವಮೊಗ್ಗದಲ್ಲಿ ಚಾಕು ತೋರಿಸಿ ಪೊಲೀಸರಿಗೆ ಹಲ್ಲೆ ಯತ್...
16-08-22 12:10 pm