ಬ್ರೇಕಿಂಗ್ ನ್ಯೂಸ್
05-08-22 08:39 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಗೆ ಇತ್ತೀಚೆಗಷ್ಟೆ ಪರಿಚಿತಗೊಂಡಿರುವ ಬಹುನಿರೀಕ್ಷಿತ Realme C30 ಬಜೆಟ್ ಸ್ಮಾರ್ಟ್‌ಫೋನ್ ಇಂದು ಎರಡನೆ ಬಾರಿಗೆ ಮಾರಾಟಕ್ಕೆ ಬರುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ Realme C30 ಸ್ಮಾರ್ಟ್‌ಪೋನಿನ ಮಾರಾಟ ಆರಂಭವಾಗುತ್ತಿದ್ದು, ಕೇವಲ ₹5,999 ರೂ. ಆಫರ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ. Realme C30 ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ ₹6,749 ರೂ.ಗಳಾಗಿವೆ. ಆದರೆ, ICICI ಬ್ಯಾಂಕ್ ಗ್ರಾಹಕರಿಗೆ ಮತ್ತು ಏರ್‌ಟೆಲ್ ಗ್ರಾಹಕರಿಗೆ 750 ವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದ್ದು, ₹5,999 ರೂ. ಆಫರ್ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಹಾಗಾದರೆ, ನೂತನ Realme C30 ಬಜೆಟ್ ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ತಿಳಿಯೊಣ ಬನ್ನಿ.
Realme C30 ಸ್ಮಾರ್ಟ್‌ಪೋನಿನ ವೈಶಿಷ್ಟ್ಯಗಳು
ನೂತನ Realme C30 ಸ್ಮಾರ್ಟ್‌ಫೋನ್ 6.5-ಇಂಚಿನ HD+ (720x1,600 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 20:9 ಆಕಾರದಲ್ಲಿ 88.7 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿದೆ. ಹುಡ್ ಅಡಿಯಲ್ಲಿ, 1. 82GHz ಆಕ್ಟಾ-ಕೋರ್ Unisoc T612 SoC ಪ್ರೊಸೆಸರ್ ಅನ್ನು ಈ Realme C30 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದ್ದು, ಇದನ್ನು 3GB RAM ನೊಂದಿಗೆ ಜೋಡಿಸಿಲಾಗಿದೆ. ಇನ್ನು 32GB ಆನ್‌ಬೋರ್ಡ್ UFS 2.2 ಸ್ಟೋರೇಜ್ ಅನ್ನು ಹೊಂದಿರುವ Realme C30 ಸ್ಮಾರ್ಟ್‌ಫೋನ್ ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಆಂತರಿಕ ಮೆಮೊರಿಯನ್ನು ಮೂಲಕ ವಿಸ್ತರಣೆಯನ್ನು ಬೆಂಬಲಿಸುತ್ತದೆ ಹಾಗೂ Android 11 (Go ಆವೃತ್ತಿ) ಬೆಂಬಲದೊಂದಿಗೆ Realme UI Go ಆವೃತ್ತಿಯಲ್ಲಿ ಕೆಲಸ ನಿರ್ವಹಿಸಲಿದೆ.
Realme C30 ಸ್ಮಾರ್ಟ್‌ಫೋನ್ HDR ಮೋಡ್ ಗೆ ಬೆಂಬಲವನ್ನು ಒಳಗೊಂಡಿರುವ ಒಂದೇ 8-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾದೊಂದಿಗೆ ಬಂದಿದೆ. ಇದು LED ಫ್ಲ್ಯಾಷ್‌ನೊಂದಿಗೆ ಜೋಡಿಯಾಗಿದೆ. ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5.0, GPS/ A-GPS, ಮೈಕ್ರೋ-USB ಮತ್ತು 3.5mm ಹೆಡ್‌ಫೋನ್ ಜ್ಯಾಕ್ ವೈಶಿಷ್ಟ್ಯಗಳು ಸೇರಿವೆ. ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಮತ್ತು ಸಾಮೀಪ್ಯ ಸಂವೇದಕವನ್ನು ಒಳಗೊಂಡಿರುವ Realme C30 ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು, ಇದು 45 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ಹೊಂದಿದೆ ಎಂದು Realme ಕಂಪೆನಿ ಹೇಳಿಕೊಂಡಿದೆ.
ಭಾರತದಲ್ಲಿ Realme C30 ಫೋನ್ ಬೆಲೆ
ಮೊದಲೇ ಹೇಳಿದಂತೆ, ಭಾರತದಲ್ಲಿ ಇದೀಗ Realme C30 ಆರಂಭಿಕ ಬೆಲೆ 7,749 ರೂ.ಗಳಾಗಿವೆ. 2GB RAM ಮಾದರಿಯ Realme C30 ಸ್ಮಾರ್ಟ್‌ಪೋನ್ ₹6,749 ರೂ.ಗಳಿಗೆ ಮತ್ತು 3GB RAM ಮಾದರಿಯು ₹ 7,549 ರೂ.ಗಳಿಗೆ ದೊರೆಯುತ್ತಿವೆ ಮತ್ತು ಹೆಚ್ಚುವರಿ ಕೊಡುಗೆಗಳನ್ನು ನೀಡಲಾಗುತ್ತಿದೆ. Bamboo Green, Denim Black ಮತ್ತು Lake Blue ಬಣ್ಣಗಳಲ್ಲಿ ಲಭ್ಯವಿರುವ ಈ ಸಾಧನವನ್ನು Flipkart, Realme.com ಮತ್ತು ದೇಶದ ಪ್ರಮುಖ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಬಹುದು.
ರಿಯಲ್‌ಮಿC30 ಸ್ಪೆಸಿಫಿಕೇಶನ್ಸ್
ಪರ್ಫಾಮೆನ್ಸ್ | Unisoc T612 |
ಡಿಸ್‌ಪ್ಲೇ | 6.5 inches (16.51 cm) |
ಸ್ಟೋರೇಜ್ | 32 GB |
ಕ್ಯಾಮರಾ | 8 MP |
ಬ್ಯಾಟರಿ | 5000 mAh |
ಭಾರತದಲ್ಲಿ ಬೆಲೆ | 7499 |
ರ‍್ಯಾಮ್ | 2 GB |
Realme C30 To Go On Sale Today Check Price, Offers And Other Details.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am