ಬ್ರೇಕಿಂಗ್ ನ್ಯೂಸ್
08-08-22 07:50 pm Source: Vijayakarnataka ಡಿಜಿಟಲ್ ಟೆಕ್
ಭಾರತ ಸೇರಿದಂತೆ ವಿಶ್ವದಾದ್ಯಂತ ಇತ್ತೀಚಿಗಷ್ಟೇ ಬಿಡುಗಡೆಗೊಂಡಿರುವ ಬಹುನಿರೀಕ್ಷಿತ OnePlus 10T ಸ್ಮಾರ್ಟ್‌ಫೋನ್ ಇಂದು ( ಆಗಸ್ಟ್ 8) ದೇಶದಲ್ಲಿ ತನ್ನ ಮೊದಲ ಮಾರಾಟಕ್ಕೆ ಸಿದ್ಧವಾಗಿದೆ. ಇಂದು ಮಧ್ಯಾಹ್ನ 12 PM IST ಗಂಟೆಯಿಂದ Amazon ಮತ್ತು OnePlus ಸ್ಟೋರ್‌ಗಳ ಮೂಲಕ OnePlus 10T ಸ್ಮಾರ್ಟ್‌ಫೋನ್ ಅನ್ನು ಮಾರಾಟಕ್ಕಿಡಲಾಗಿದ್ದು, ಅಮೆಜಾನ್ ಗ್ರಾಹಕರು ಶೇ 10% ರಷ್ಟು ತ್ವರಿತ ರಿಯಾಯಿತಿ ಸೇರಿದಂತೆ ಒಟ್ಟು 8000 ರೂ.ಗಳ ಭಾರೀ ಲಾಭವನ್ನು ಪಡೆಯಬಹುದಾಗಿದೆ. ಹಾಗಾದರೆ, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್, 16 GB LPDDR5 RAM, 150W SUPERVOOC ತಂತ್ರಜ್ಞಾನ ಮತ್ತು 50-ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಅದ್ಭುತ ವಿನ್ಯಾಸ ಮತ್ತು ಶಕ್ತಿಯುತ ವೈಶಿಷ್ಟ್ಯಗಳನ್ನು ಹೊಂದಿರುವ ನೂತನ OnePlus 10T ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆಗಳು ಮತ್ತು ರಿಯಾಯಿತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
OnePlus 10T ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ನೂತನ OnePlus 10T ಸ್ಮಾರ್ಟ್‌ಫೋನ್ ಕಡಿಮೆ-ತಾಪಮಾನದ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ತಂತ್ರಜ್ಞಾನವನ್ನು ಆಧರಿಸಿದ 6.7-ಇಂಚಿನ ಫುಲ್ HD+ (1,080x2,412 ಪಿಕ್ಸೆಲ್‌ಗಳು) ಲಿಕ್ವಿಡ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದ್ದು, ಇದರ ಜೊತೆಗೆ 120Hz ವರೆಗೆ ರಿಫ್ರೆಶ್ ರೆಟ್, sRGB ಕಲರ್ ಗ್ಯಾಮೆಟ್, 10-ಬಿಟ್ ಡೀಪ್ ವೈಟ್ ಮತ್ತು HDR10+ ಪ್ರಮಾಣೀಕರಣದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಹುಡ್ ಅಡಿಯಲ್ಲಿ, OnePlus 10T ಸ್ಮಾರ್ಟ್‌ಫೋನ್ Snapdragon 8+ Gen 1 SoC ಪ್ರೊಸೆಸರ್ನಿಂದ ಚಾಲಿತವಾಗಿದ್ದು, 16GB ವರೆಗಿನ LPDDR5 RAM ಮತ್ತು 256GB UFS 3.1 ಡ್ಯುಯಲ್-ಲೇನ್ ಮೆಮೊರಿಯನ್ನು ಹೊಂದಿದೆ. ಇನ್ನು ಗೇಮಿಂಗ್ ಪ್ರಿಯರು ಖುಷಿಯಾಗುವಂತೆ, ಸ್ಮಾರ್ಟ್‌ಫೋನ್ ವೇಪರ್ ಚೇಂಬರ್‌ಗಳಿಗೆ ಹೋಲಿಸಿದರೆ 8 ಡಿಸ್ಸಿಪೇಶನ್ ಚಾನೆಲ್‌ಗಳು ಎರಡು ಪಟ್ಟು ಡಿಸ್ಸಿಪೇಶನ್ ಸಾಮರ್ಥ್ಯವನ್ನು ನೀಡುತ್ತದೆ ಎಂದು ಹೇಳಲಾಗಿರುವ ಮುಂದಿನ ಪೀಳಿಗೆಯ 3D ಕೂಲಿಂಗ್ ಸಿಸ್ಟಂ ಜೊತೆಗೆ ಕ್ರಯೋವೆಲೋಸಿಟಿ ವೇಪರ್ ಚೇಂಬರ್ ಸಹ OnePlus 10T ಸ್ಮಾರ್ಟ್‌ಪೋನಿನಲ್ಲಿದೆ.
ಕ್ಯಾಮೆರಾ ವಿಭಾಗದಲ್ಲಿ, OnePlus 10T ಸ್ಮಾರ್ಟ್‌ಫೋನ್ ಡ್ಯುಯಲ್-LED ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಇರುವ 50-ಮೆಗಾಪಿಕ್ಸೆಲ್ ಸೋನಿ IMX769 ಪ್ರಾಥಮಿಕ ಸಂವೇದಕದ ಜೊತೆಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಹಾಗೂ 119.9 ಡಿಗ್ರಿಗಳ ಕ್ಷೇತ್ರ-ವೀಕ್ಷಣೆಯೊಂದಿಗೆ f/2.2 ಲೆನ್ಸ್ ಸಾಮರ್ಥ್ಯದ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, OnePlus 10T ಸ್ಮಾರ್ಟ್‌ಫೋನಿ ಮುಂಭಾಗದಲ್ಲಿ f/2.4 ಲೆನ್ಸ್‌ನೊಂದಿಗೆ ಜೋಡಿಸಲಾದ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. OnePlus 10T ಸ್ಮಾರ್ಟ್‌ಪೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.3, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳಿವೆ. ಇನ್ನು ಆಂಡ್ರಾಯ್ಡ್ 12 ನಲ್ಲಿ OxygenOS 12.1 ಜೊತೆಗೆ ಕಾರ್ಯನಿರ್ವಹಿಸುವ OnePlus 10T ಫೋನ್ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯ ಎರಡನ್ನೂ ಸಹ ಹೊಂದಿದೆ.
OnePlus 10T ಸ್ಮಾರ್ಟ್‌ಫೋನಿನಲ್ಲಿ 4,800mAh ಸಾಮರ್ಥ್ಯದ ಡ್ಯುಯಲ್-ಸೆಲ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು 150W SuperVOOC ಎಂಡ್ಯೂರೆನ್ಸ್ ಎಡಿಷನ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋಈ ಹೊಸ ವೈರ್ಡ್ ಚಾರ್ಜಿಂಗ್ ತಂತ್ರಜ್ಞಾನವು 19 ನಿಮಿಷಗಳಲ್ಲಿ ಶೂನ್ಯದಿಂದ 100 ಪ್ರತಿಶತದಷ್ಟು ಚಾರ್ಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಸ್ಮಾರ್ಟ್ ಬ್ಯಾಟರಿ ಹೆಲ್ತ್ ಅಲ್ಗಾರಿದಮ್, ಬ್ಯಾಟರಿ ಹೀಲಿಂಗ್ ಟೆಕ್ನಾಲಜಿ, ದಕ್ಷತೆಯನ್ನು ಸುಧಾರಿಸಲು VFC ಟ್ರಿಕಲ್ ಚಾರ್ಜಿಂಗ್ ಆಪ್ಟಿಮೈಸೇಶನ್ ಅಲ್ಗಾರಿದಮ್, ಚಾರ್ಜಿಂಗ್ ನಿರ್ವಹಿಸಲು ಕಸ್ಟಮೈಸ್ ಮಾಡಿದ ಸ್ಮಾರ್ಟ್ ಚಿಪ್ ಮತ್ತು 13 ತಾಪಮಾನ ಸಂವೇದಕಗಳಂತಹ ಬ್ಯಾಟರಿ-ಸಂಬಂಧಿತ ವೈಶಿಷ್ಟ್ಯಗಳೊಂದಿಗೆ ಫೋನ್ ಬರುತ್ತದೆ ಮತ್ತು ಬಾಕ್ಸ್‌ನಲ್ಲಿ 160W SuperVOOC ಪವರ್ ಅಡಾಪ್ಟರ್ ಅನ್ನು ಹೊಂದಿದೆ. ನೂತನ OnePlus OnePlus 10T ಅನ್ನು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಸಜ್ಜುಗೊಂಡಿದ್ದು, Dolby Atmos ನಿಂದ ಬೆಂಬಲಿತವಾಗಿರುವ ಈ ಸ್ಮಾರ್ಟ್‌ಫೋನ್ ಫೋನ್ ಶಬ್ದ ರದ್ದತಿ ಬೆಂಬಲವನ್ನು ಸಹ ಹೊಂದಿದೆ ಎಂದು OnePlus ಕಂಪೆನಿ ತಿಳಿಸಿದೆ.
OnePlus 10T ಸ್ಮಾರ್ಟ್‌ಫೋನಿನ ಬೆಲೆಗಳು ಮತ್ತು ಲಭ್ಯತೆ
ಭಾರತದಲ್ಲಿ OnePlus 10T ಸ್ಮಾರ್ಟ್‌ಫೋನಿನ ಬೆಲೆಗಳು 46,999 ರೂ,ಗಳಿಂದ ಆರಂಭವಾಗಿವೆ. ಒಟ್ಟು ಮೂರು ಮಾದರಿಗಳಲ್ಲಿ ಬಿಡುಗಡೆಗೊಂಡಿರುವ OnePlus 10T ಸ್ಮಾರ್ಟ್‌ಫೋನಿನ ಮೂಲ 12GB RAM + 256GB ಸ್ಟೋರೇಜ್ ಮಾದರಿಯು 46,999 ರೂ.ಗಳಿಗೆ, 6GB RAM + 256GB ಸ್ಟೋರೇಜ್ ಮಾದರಿಯು 54,999ರೂ,ಗಳಿಗೆ ಹಾಗೂ ಇದರ ಟಾಪ್ ಆಫ್‌ಲೈನ್ 16GB RAM + 256GB ಸ್ಟೋರೇಜ್ ಮಾದರಿಯು 55,999 ರೂ. ಬೆಲೆಗಳಲ್ಲಿ ಬಿಡುಗಡೆಗೊಂಡಿವೆ. ಜೇಡ್ ಗ್ರೀನ್ ಮತ್ತು ಮೂನ್‌ಸ್ಟೋನ್ ಬ್ಲಾಕ್ ಎಂಬ ಎರಡು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿರುವ OnePlus 10T ಸ್ಮಾರ್ಟ್‌ಫೋನ್ ಅನ್ನು ಇಂದಿನಿಂದಲೇ ಖರೀದಿಸಬಹುದಾಗಿದ್ದು, ICICI ಬ್ಯಾಂಕ್ ಮತ್ತು SBI ಕಾರ್ಡ್ ಹೊಂದಿರುವ ಅಮೆಜಾನ್ ಗ್ರಾಹಕರು ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ 10% ರಷ್ಟು ತ್ವರಿತ ರಿಯಾಯಿತಿಯನ್ನು ಹಾಗೂ ಯಾವುದೇ ಸ್ಮಾರ್ಟ್‌ಪೋನ್‌ಗಳ ಮೇಲೆ 3000 ಮೌಲ್ಯದ ವಿನಿಮಯ ಬೋನಸ್ ಅನ್ನು ಪಡೆಯಲಿದ್ದಾರೆ.
Oneplus 10t First Sale In India Starts Today: Price, Specifications, Offers Details.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am