ಬ್ರೇಕಿಂಗ್ ನ್ಯೂಸ್
12-08-22 07:57 pm Source: Vijayakarnataka ಡಿಜಿಟಲ್ ಟೆಕ್
ವಿಶ್ವದ ಟೆಕ್ ದೈತ್ಯ ಕಂಪೆನಿಗಳಲ್ಲಿ ಒಂದಾದ ಚೀನಾ ಮೂಲದ ಜನಪ್ರಿಯ ಮೊಬೈಲ್ ಕಂಪೆನಿ OPPO ಕೇವಲ 16 ಸಾವಿರ ರೂ.ಗಳ ಬೆಲೆಯಲ್ಲಿ 50-ಇಂಚಿನ ಸ್ಮಾರ್ಟ್‌ಟಿವಿಯೊಂದನ್ನು ಪರಿಚಯಿಸಿದೆ. OPPO ಕಂಪೆನಿ ಕಳೆದ ತಿಂಗಳಷ್ಟೇ ಪರಿಚಯಿದ್ದ OPPO K9x ಸ್ಮಾರ್ಟ್ ಟಿವಿ ಸರಣಿಯಲ್ಲಿ ಹೊಸದಾಗಿ ಪರಿಚಯಿಸಿರುವ 50-ಇಂಚಿನ ಮಾದರಿಯ ಟಿವಿ ಇದಾಗಿದ್ದು, ಈ ಸಾಧನವು 4K ರೆಸಲ್ಯೂಶನ್, 60Hz ರಿಫ್ರೆಶ್ ರೇಟ್, ಕ್ವಾಡ್-ಕೋರ್ ಮೀಡಿಯಾ ಟೆಕ್ ಚಿಪ್‌ಸೆಟ್ (Quad Core media Chipset) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ನೂತನ OPPO K9x 50-Inch ಸ್ಮಾರ್ಟ್‌ಟಿವಿ ಹೇಗಿದೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬೆಲ್ಲಾ ಮಾಹಿಯನ್ನು ತಿಳಿಯೋಣ ಬನ್ನಿ .
OPPO K9x 50-ಇಂಚಿನ ಸ್ಮಾರ್ಟ್ ಟಿವಿಯ ವಿಶೇಷತೆಗಳು
ನೂತನ OPPO K9x 50 ಸ್ಮಾರ್ಟ್‌ಟಿವಿಯ ಹೆಸರಿನಲ್ಲಿಯೇ ತಿಳಿದುಬರುವಂತೆ, ಈ ಸ್ಮಾರ್ಟ್‌ಟಿವಿಯು 50 ಇಂಚಿನ ಎಲ್ಇಡಿ-ಬ್ಯಾಕ್ಲಿಟ್ ಪ್ಯಾನೆಲ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯು 60Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿದ್ದು, ಇದರ ಜೊತೆಗೆ blue-light ರೆಡ್ಯೂಸಿಂಗ್ ಟೆಕ್ನಾಲಜಿ, ಫುಲ್ 4K ರೆಸಲ್ಯೂಶನ್, 280nits ಮತ್ತು ಡೆಲ್ಟಾ E≈2 ಪೀಕ್ ಬ್ರೈಟ್‌ನೆಸ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. Oppo ಕಂಪನಿ ಹೇಳಿರುವಂತೆ, 10.7 ಶತಕೋಟಿ ಬಣ್ಣಗಳನ್ನು ಬಂಬಲಿಸುವ ಈ ಸ್ಮಾರ್ಟ್‌ಟಿವಿಯು ಪ್ರಮುಖ ಪ್ರೀಮಿಯಂ ಫ್ಲಾಗ್‌ಶಿಪ್ ಸ್ಮಾರ್ಟ್‌ಟಿವಿಗಳಂತಹ ಬಣ್ಣದ ನಿಖರತೆಯನ್ನು ಹೊಂದಿದೆ. ಇದು ಎಲ್ಲಾ ಸನ್ನಿವೇಶಗಳಲ್ಲಿ ಚಿತ್ರದ ಗುಣಮಟ್ಟವನ್ನು ಫ್ರೇಮ್-ಬೈ-ಫ್ರೇಮ್ ಸುಧಾರಣೆಗೆ ಅನುಮತಿಸುತ್ತದೆ ಮತ್ತು ಕಂಪನಿಯು ಸ್ವತಃ ಅಭಿವೃದ್ಧಿಪಡಿಸಿದ AI PQ ಅಲ್ಗಾರಿದಮ್ ಅನ್ನು ಹೊಂದಿದೆ.
ಹುಡ್ ಅಡಿಯಲ್ಲಿ, OPPO K9x 50 ಸ್ಮಾರ್ಟ್‌ಟಿವಿಯು ಕ್ವಾಡ್-ಕೋರ್ MediaTek ಚಿಪ್‌ಸೆಟ್ ಅನ್ನು ಹೊಂದಿದ್ದು, ಈ ಪ್ರೊಸೆಸರ್ ಅನ್ನು 2GB RAM ಮತ್ತು 16GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ ಮತ್ತು ColorOS ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಟಿವಿಯು ಯಾವುದೇ ಬ್ಲೋಟ್‌ವೇರ್ ಇಲ್ಲದೆ ಕೆಲಸ ಮಾಡುತ್ತದೆ ಎಂದು OPPO ತಿಳಿಸಿದೆ. OPPO K9x 50 ಸ್ಮಾರ್ಟ್‌ಟಿವಿಯ ಕನೆಕ್ಟಿವಿಟಿ ಆಯ್ಕೆಗಳಲ್ಲಿ, 3 HDMI ಪೋರ್ಟ್‌ಗಳು, Ethernet ಪೋರ್ಟ್, ವೈರ್‌ಲೆಸ್ ಸಂಪರ್ಕಕ್ಕಾಗಿ ಡ್ಯುಯಲ್-ಬ್ಯಾಂಡ್ ವೈ-ಫೈ, Xiaobu ವಾಯ್ಸ್ ಅಸಿಸ್ಟೆಂಟ್ ನಂತಹ ವೈಶಿಷ್ಟ್ಯಗಳಿವೆ. ಇಷ್ಟೇ ಅಲ್ಲದೇ, ಈ ಸ್ಮಾರ್ಟ್‌ಟಿವಿ ಇದು 20W ಸಾಮರ್ಥ್ಯದ ಎರಡು ಇಂಟಿಗ್ರೇಟೆಡ್ ಸ್ಪೀಕರ್‌ಗಳನ್ನು ಹೊಂದಿದ್ದು, ಇದು ಡಿಸ್‌ಪ್ಲೇ ವ್ಯಾಲ್ಯೂಮ್ ಧ್ವನಿಯಾಗಿರುವ ಡಾಲ್ಬಿ ಸೌಂಟ್ ಅನ್ನು ಸಹ ಬೆಂಬಲಿಸುತ್ತದೆ.
OPPO K9x 50-ಇಂಚಿನ ಸ್ಮಾರ್ಟ್ ಟಿವಿ ಬೆಲೆ, ಲಭ್ಯತೆ
ನೂತನ OPPO K9x 50-ಇಂಚಿನ ಸ್ಮಾರ್ಟ್‌ಟಿವಿ ಇದೀಗ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಈ ಸ್ಮಾರ್ಟ್‌ಟಿವಿಯ ಬೆಲೆಯನ್ನು 1399 ಯುವಾನ್ ($207)(16,491 ರೂ.) ಗಳಿಗೆ ನಿಗಧಿಪಡಿಸಲಾಗಿದೆ. ಇಷ್ಟೇ ಅಲ್ಲದೇ, ಈ ಸ್ಮಾರ್ಟ್‌ಟಿವಿ ಮೇಲೆ ಉಡಾವಣಾ ಕೊಡುಗೆಯನ್ನು ಸಹ ಘೋಷಿಸಿ, 1299 ಯುವಾನ್ (ಸುಮಾರು $192) ಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಚೀನಾದ OPPO ಸ್ಟೋರ್ ವೆಬ್‌ಸೈಟ್ ಮೂಲಕ ಚೀನಾದಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಭಾರತದಲ್ಲಿ ನೂತನ OPPO K9x 50-ಇಂಚಿನ ಸ್ಮಾರ್ಟ್‌ಟಿವಿಯು ಶೀಘ್ರದಲ್ಲೇ ಬಿಡುಗಡೆಯಾಗಬಹುದಾದ ನಿರೀಕ್ಷೆ ಇದ್ದರೂ ಸಹ OPPO ಕಂಪೆನಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಒದಗಿಸಿಲ್ಲ.
Oppo K9x Smart Tv With 50 Inch 4k Display Launched.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm