ಬ್ರೇಕಿಂಗ್ ನ್ಯೂಸ್
23-08-22 07:50 pm Source: Vijayakarnataka ಡಿಜಿಟಲ್ ಟೆಕ್
ಡಿಜಿಟಲ್ ಸ್ಮಾರ್ಟ್‌ವಾಚ್ಗಳ ಜನಪ್ರಿಯ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಭಾರತೀಯ ಎಲೆಕ್ಟ್ರಾನಿಕ್ ಬ್ರ್ಯಾಂಡ್ Noise ದೇಶದಲ್ಲಿ ತನ್ನ ವಿನೂತನ NoiseFit Core 2 ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ. ಫಿಟ್‌ನೆಸ್ ಮತ್ತು ಔಟ್‌ಡೋರ್ ಎರಡಕ್ಕೂ ವಿಶೇಷವಾಗಿ ವಿನ್ಯಾಸಗೊಳಿಸಿರುವ ಸ್ಮಾರ್ಟ್‌ವಾಚ್ ಇದಾಗಿದ್ದು, 1.28-ಇಂಚಿನ ಸ್ಕ್ರಾಚ್-ರೆಸಿಸ್ಟೆಂಟ್ ಡಿಸ್‌ಪ್ಲೇ, ಹೃದಯ ಬಡಿತ ಮತ್ತು SpO2 ರಕ್ತದ ಆಮ್ಲಜನಕ ಸಂವೇದಕಗಳು ಹಾಗೂ ಅಂತರ್ನಿರ್ಮಿತ ಪೆಡೋಮೀಟರ್ ಸೇರಿದಂತೆ ವಿವಿಧ ಆರೋಗ್ಯ ಮೇಲ್ವಿಚಾರಣಾ ವೈಶಿಷ್ಟ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ನೂತನ NoiseFit Core 2 ಸ್ಮಾರ್ಟ್‌ವಾಚ್ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
NoiseFit Core 2 ಸ್ಮಾರ್ಟ್‌ವಾಚ್ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ನೂತನ NoiseFit Core 2 ಸ್ಮಾರ್ಟ್‌ವಾಚ್ ಬದಲಾಯಿಸಬಹುದಾದ ವಿಶೇಷ 22mm ಸಿಲಿಕೋನ್ ಪಟ್ಟಿಯನ್ನು ಹೊಂದಿದ್ದು, ದುಂಡಾಕಾದರ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ದುಂಡಾಗಿರುವ ಈ ಸ್ಮಾರ್ಟ್ ವಾಚ್ ಡಿಸ್‌ಪ್ಲೇಯು 240x240 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.28-ಇಂಚಿನ ಸ್ಕ್ರ್ಯಾಚ್-ನಿರೋಧಕ ಟಚ್‌ಸ್ಕ್ರೀನ್ ಸಾಮರ್ಥ್ಯದಲ್ಲಿದೆ. 230mAh ಸಾಮರ್ಥದ ಬ್ಯಾಟರಿಯನ್ನು ಹೊಂದಿರುವ ಈ NoiseFit Core 2 ಸ್ಮಾರ್ಟ್‌ವಾಚ್ 30-ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ಹೊಂದಿದ್ದು, ಧೀರ್ಘಕಾಲ ಬಳಕೆಯಲ್ಲೂ 7 ದಿನಗಳವರೆಗೆ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ವಿಶೇಷವಾಗಿ ಈ ಸ್ಮಾರ್ಟ್‌ವಾಚ್ ನಲ್ಲಿ ಮ್ಯಾಗ್ನೆಟಿಕ್ ಚಾರ್ಜರ್ ಅನ್ನು ಅಳವಡಿಸಿರುವುದನ್ನು ನಾವು ನೋಡಬಹುದು.

NoiseFit Core 2 ಸ್ಮಾರ್ಟ್‌ವಾಚ್ 100 ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳೊಂದಿಗೆ ಬಿಡುಗಡೆಯಾಗಿದೆ. ಇಷ್ಟೇ ಅಲ್ಲದೇ, 24/7 ಹೃದಯ ಬಡಿತ ಮಾಪನ, ರಕ್ತದ ಆಮ್ಲಜನಕದ ಟ್ರ್ಯಾಕಿಂಗ್, ಕ್ಯಾಲೋರಿ ಎಣಿಕೆಯಂತಹ ಆರೋಗ್ಯ ಮೇಲ್ವಿಚಾರಣಾ ಹಾಗೂ ಫಿಟ್‌ನೆಸ್ ಆಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. NoiseFit Core 2 ಸ್ಮಾರ್ಟ್‌ವಾಚ್ ವಿಶೇಷಣಗಳಲ್ಲಿ ಸಂದೇಶ ಮತ್ತು ಕರೆ ಅಧಿಸೂಚನೆಗಳು, ಕ್ಯಾಲೆಂಡರ್ ರಿಮೈಂಡರ್ ಮತ್ತು ಕ್ಯಾಮರಾ ನಿಯಂತ್ರಣಗಳಂತಹ ವೈಶಿಷ್ಟ್ಯಗಳಿವೆ. ಇನ್ನು 10 ಮೀಟರ್‌ಗಳವರೆಗಿನ ಬ್ಲೂಟೂತ್ ವ್ಯಾಪ್ತಿಯನ್ನು ಹೊಂದಿರುವ NoiseFit Core 2 ಸಾಧನವು IP68-ರೇಟೆಡ್ ವಾಟರ್-ರೆಸಿಸ್ಟೆಂಟ್ ಅನ್ನು ಹೊಂದಿದೆ ಹಾಗೂ Android 5.0 ಮತ್ತು iOS 11.0 ಮೇಲಿನ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸಲಿದೆ.

ಭಾರತದಲ್ಲಿ NoiseFit Core 2 ಸ್ಮಾರ್ಟ್‌ವಾಚ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ NoiseFit Core 2 ಸ್ಮಾರ್ಟ್‌ವಾಚ್ ಅನ್ನು 3,999 ರೂ. ಎಂಆರ್‌ಪಿ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಕಪ್ಪು, ನೀಲಿ, ಹಸಿರು, ಬೂದು ಮತ್ತು ಗುಲಾಬಿ ಬಣ್ಣಗಳಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪೆನಿ ತಿಳಿಸಿದೆ. ಮುಂಬರುವ ಕೆಲವೇ ದಿನಗಳಲ್ಲಿ ಮಾರಾಟಕ್ಕೆ ಬರುತ್ತಿರುವ ಈ ಸ್ಮಾರ್ಟ್‌ವಾಚ್ ಎಂಆರ್‌ಪಿ ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರಬಹುದು.
Noisefit Core 2 Smartwatch Launched In India.
11-09-26 02:59 pm
HK News Staffer
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
ಹೆಸರಿನಲ್ಲಿ ತಪ್ಪಿದೆ ಎಂದು ದಕ್ಷಿಣ ಕನ್ನಡ ಮಾಜಿ ಜಿಲ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm