ಬ್ರೇಕಿಂಗ್ ನ್ಯೂಸ್
29-08-22 07:05 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ OnePlus ದೇಶದಲ್ಲಿ ತನ್ನ ವಿನೂತನ OnePlus Nord wired ಇಯರ್‌ಫೋನ್‌ಗಳನ್ನು ಪರಿಚಯಿಸಿದೆ. ದೇಶದಲ್ಲಿ ವೈರ್‌ಲೆಸ್ ಆಡಿಯೊ ವಿಭಾಗದಲ್ಲಿ ಹೆಚ್ಚು ಗಮನಹರಿಸಿರುವ ಜೊತೆಗೆ ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಹೊಂದಾಣಿಯಾಗುವಂತಹ 3.5mm wired ಇಯರ್‌ಫೋನ್‌ಗಳನ್ನು ಒದಗಿಸುವಲ್ಲಿ OnePlus ಮುಂಚೂಣಿಯಲ್ಲಿದ್ದು, ಇದೀಗ ಕೇವಲ 799 ರೂ.ನಲ್ಲಿ ನ OnePlus Nord wired ಇಯರ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ. ಹಾಗಾದರೆ, ಈ ನೂತನ OnePlus Nord wired ಇಯರ್‌ಫೋನ್ ಹೇಗಿದೆ ಮತ್ತು ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ತಿಳಿಯೋಣ ಬನ್ನಿ.
OnePlus Nord wired ಇಯರ್‌ಫೋನ್ ಸಾಧನದ ವೈಶಿಷ್ಟ್ಯಗಳು
ನೂತನ OnePlus Nord wired ಇಯರ್‌ಫೋನ್‌ಗಳು 9.2 ಎಂಎಂ ಆಟೋ ಡ್ರೈವರ್‌ಗಳನ್ನು ಒಳಗೊಂಡಿದ್ದು, 0.42cc ಸೌಂಡ್ ಕ್ಯಾವಿಟಿ ಅನ್ನು ಒಳಗೊಂಡಿರುವ ಈ ಸಾಧನವು ಹೆಚ್ಚು ಪರಿಚಿತವಾದ ಬಾಸ್ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ OnePlus Nord wired ಸಾಧನದಲ್ಲಿ ಕರೆಗಳು, ಮೀಡಿಯಾ ಪ್ಲೇಬ್ಯಾಕ್ ಮತ್ತು ವಾಯ್ಸ್ ಅಸಿಸ್ಟೆಂಟ್ ಅನ್ನು ಕಂಟ್ರೋಲ್ ಮಾಡಲು ಇನ್-ಲೈನ್ ಮೈಕ್ ಮತ್ತು ಬಟನ್‌ಗಳನ್ನು ನೀಡಲಾಗಿದೆ. ಇನ್-ಲೈನ್ ಮೈಕ್ ಮತ್ತು ಬಟನ್‌ಗಳು ಆಡಿಯೋ ಪ್ಲೇಬ್ಯಾಕ್ ಅನ್ನು ಕಂಟ್ರೋಲ್ ಮಾಡಲು ಬಳಕೆದಾರರಿಗೆ ಸಹಾಯ ಮಾಡಲಿದೆ. ಅಂದರೆ ಪ್ಲೇಬ್ಯಾಕ್ ಅನ್ನು ವಿರಾಮಗೊಳಿಸಲು ಬಳಕೆದಾರರು ಅವುಗಳನ್ನು ಅನ್-ಕ್ಲಿಪ್ ಮಾಡಬಹುದಾಗಿದೆ.
ಈ ಇಯರ್‌ಫೋನ್‌ಗಳ ವಿನ್ಯಾಸವು OnePlus ಬುಲೆಟ್ ವೈರ್‌ಲೆಸ್ Z2 ಸಾಧನದಂತೆಯೇ ಇದ್ದು, ನಯವಾದ ಬ್ಲ್ಯಾಕ್ ಫಿನಿಶ್ ಮೂಲಕ ಈ ಸಾಧನವು ಕ್ಲಾಸಿಕ್ ಒನ್‌ಪ್ಲಸ್ ಲುಕ್ ಉಳಿಸಿಕೊಳ್ಳಲು ರೋಮಾಂಚಕ ವೈಬ್ರೆಂಟ್ ರೆಡ್ ಗಳಿಂದ ಪೂರಕವಾಗಿದೆ. ಬೆವರು ಮತ್ತು ನೀರಿನ ಪ್ರತಿರೋಧಕ್ಕಾಗಿ IPX4 ರೇಟಿಂಗ್ ಅನ್ನು ಹೊಂದಿರುವುದರಿಂದ ಇವುಗಳನ್ನು ವ್ಯಾಯಾಮದ ಸಮಯದಲ್ಲಿಯೂ ಬಳಸಲು ಯೋಗ್ಯವಾದ ಸಾಧನವಾಗಿದೆ. ಇಷ್ಟೇ ಅಲ್ಲದೇ, ಬಳಕೆದಾರರಿಗೆ ಆರಾಮದಾಯಕವಾದ ಫಿಟ್ ಅನ್ನು ಪಡೆಯಲು ಮೂರು ಜೋಡಿ ಪರಸ್ಪರ ಬದಲಾಯಿಸಬಹುದಾದ ಸಿಲಿಕಾನ್ ಟಿಪ್ಸ್ ಅನ್ನು ಒಳಗೊಂಡಿದೆ. ಮ್ಯಾಗ್ನೆಟ್‌ಗಳೊಂದಿಗೆ ಬಂದಿರುವ ಇವುವುಗಳನ್ನು ನೀವು ಒಟ್ಟಿಗೆ ಅಂಟಿಸಿದಾಗ ಆಡಿಯೊವನ್ನು ಸ್ಟಾಪ್ ಮಾಡಬಹುದು.
OnePlus Nord wired ಇಯರ್‌ಫೋನ್ ಬೆಲೆ ಮತ್ತು ಲಭ್ಯತೆ
ಮೊದಲೇ ಹೇಳಿದಂತೆ ಭಾರತದಲ್ಲಿ OnePlus Nord wired ಇಯರ್‌ಫೋನ್‌ಗಳನ್ನು ಕೇವಲ 799 ರೂ. ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಇದೇ ಸೆಪ್ಟೆಂಬರ್ 1 ರಿಂದ ಅಮೆಜಾನ್ ಮತ್ತು ಕಂಪೆನಿಯ ಅಧಿಕೃತ ವೆಬ್‌ಸೈಟ್ ನಲ್ಲಿ ಸೇರಿದಂತೆ ಆಯ್ದ ಚಿಲ್ಲರೆ ಅಂಗಡಿಗಳಲ್ಲಿ OnePlus Nord wired ಇಯರ್‌ಫೋನ್‌ಗಳನ್ನು ಖರೀದಿಸಬಹುದು ಎಂದು OnePlus ಕಂಪೆನಿ ತಿಳಿಸಿದೆ.
Oneplus Nord Wired Earphones Launched In India.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm