ಬ್ರೇಕಿಂಗ್ ನ್ಯೂಸ್
03-09-22 07:04 pm Source: Vijayakarnataka ಡಿಜಿಟಲ್ ಟೆಕ್
ಭಾರತದ ನಂ.1 ಗ್ಯಾಜೆಟ್ಸ್ ಬ್ರ್ಯಾಂಡ್ Xiaomi ಇದೀಗ ದೇಶದಲ್ಲಿ ತನ್ನ ವಿನೂತನ Smart TV X ಸರಣಿಯನ್ನು ಬಿಡುಗಡೆಗೊಳಿಸಿದೆ. ದೇಶದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನಷ್ಟೇ ಅಲ್ಲದೇ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲೂ ದಿಗ್ಗಜನಾಗುವ ನಿಟ್ಟಿನಲ್ಲಿ ಈ ಹೊಸ ಸ್ಮಾರ್ಟ್‌ಟಿವಿಗಳನ್ನು Xiaomi ಪರಿಚಯಿಸಿದ್ದು, ಕೇವಲ 28,999 ರೂ.ಗೆ ಅತ್ಯಾಧುನಿಕ ವೈಶಿಷ್ಟ್ಯಗಳುಳ್ಳ 43-ಇಂಚಿನ ಸ್ಮಾರ್ಟ್‌ಟಿವಿ, 28,999 ರೂ.ಗೆ 50-ಇಂಚಿನ ಸ್ಮಾರ್ಟ್‌ಟಿವಿ ಹಾಗೂ 39,999 ರೂ.ಗೆ 55-ಇಂಚಿನ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಗೆ ತಂದಿದೆ. ಈ ಮೂರು ಸ್ಮಾರ್ಟ್‌ಟಿವಿಗಳು ಡಾಲ್ಬಿ ಆಡಿಯೊ, DTS-HD ಜೊತೆಗೆ DTS: ವರ್ಚುವಲ್ X ತಂತ್ರಜ್ಞಾನದೊಂದಿಗೆ 30W ಸ್ಪೀಕರ್‌ಗಳನ್ನು ಹೊಂದಿದ್ದು, ಇತರೆ ಏನೆಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿವೆ ಎಂಬುದನ್ನು ತಿಳಿಯೋಣ ಬನ್ನಿ.
Xiaomi Smart TV X ಸರಣಿಯ ವೈಶಿಷ್ಟ್ಯಗಳು
ಮೊದಲೇ ಹೇಳಿದಂತೆ, Xiaomi Smart TV X ಸರಣಿಯಲ್ಲಿ 43-ಇಂಚಿನ, 50-ಇಂಚಿನ ಮತ್ತು 55-ಇಂಚಿನ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಾಗಿದೆ. ಈ ಮೂರು ಸ್ಮಾರ್ಟ್‌ಟಿವಿಗಳು 4K ಅಲ್ಟ್ರಾ-HD (3,840x2,160 ಪಿಕ್ಸೆಲ್‌ಗಳು) ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇಯನ್ನು ಹೊಂದಿದ್ದು, ಇವುಗಳ ಡಿಸ್‌ಪ್ಲೇಯು MEMC ಎಂಜಿನ್, ಡಾಲ್ಬಿ ವಿಷನ್, 94 ಪ್ರತಿಶತ DCI-P3 ಕಲರ್ ಗ್ಯಾಮೆಟ್ ಮತ್ತು HDR10 ಮತ್ತು HLG ಗೆ ಬೆಂಬಲದೊಂದಿಗೆ ಶಕ್ತವಾಗಿವೆ. ಇಷ್ಟೇ ಅಲ್ಲದೇ, ಉತ್ತಮ ಚಿತ್ರ ಗುಣಮಟ್ಟಕ್ಕಾಗಿ Xiaomi ನ ಆಂತರಿಕ ವಿವಿಡ್ ಪಿಕ್ಚರ್ ಎಂಜಿನ್ (VPE) ಇಮೇಜ್ ಪ್ರೊಸೆಸಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಹುಡ್ ಅಡಿಯಲ್ಲಿ, Xiaomi Smart TV X ಸರಣಿ ಸ್ಮಾರ್ಟ್‌ಟಿವಿಗಳು ಕ್ವಾಡ್-ಕೋರ್ A55 ಪ್ರೊಸೆಸರ್ ಅನ್ನು ಹೊಂದಿದ್ದು,ಇದನ್ನು Mali G52 MC1 GPU, 2GB RAM ಮತ್ತು 8GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.
ಕನೆಕ್ಟಿವಿಟಿ ವಿಭಾಗದಲ್ಲಿ, Xiaomi Smart TV X ಸರಣಿ ಸ್ಮಾರ್ಟ್‌ಟಿವಿಗಳು ಎರಡು HDMI 2.1, ಎರಡು USB ಪೋರ್ಟ್‌ಗಳು ಮತ್ತು AVI ಇನ್‌ಪುಟ್, 3.5mm ಆಡಿಯೊ ಜ್ಯಾಕ್ ಮತ್ತು ಎತರ್ನೆಟ್ ಪೋರ್ಟ್ ವೈಶಿಷ್ಟ್ಯಗಳನ್ನು ಹೊಂದಿವೆ. ಇವಿಷ್ಟೇ ಅಲ್ಲದೇ, ಸ್ಮಾರ್ಟ್ ಟಿವಿ ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ v5.0 ಸಂಪರ್ಕವನ್ನು ಸಹ ಪಡೆದಿವೆ. ಈ ಎರಡೂ ಸ್ಮಾರ್ಟ್‌ಟಿವಿಗಳು ಡಾಲ್ಬಿ ಆಡಿಯೊ, DTS-HD ಜೊತೆಗೆ DTS: ವರ್ಚುವಲ್ X ತಂತ್ರಜ್ಞಾನದೊಂದಿಗೆ 30W ಸ್ಪೀಕರ್‌ಗಳಳನ್ನು ಹೊಂದಿರುವುದಾಗಿ ಕಂಪೆನಿ ತಿಳಿಸಿದೆ. ಇತರ ವೈಶಿಷ್ಟ್ಯಗಳಲ್ಲಿ, ಅಂತರ್ನಿರ್ಮಿತ Chromecast ಜೊತೆಗೆ ಕ್ವಿಕ್ ಮ್ಯೂಟ್, ಕ್ವಿಕ್ ಸೆಟ್ಟಿಂಗ್‌ಗಳು ಮತ್ತು ಕ್ವಿಕ್ ವೇಕ್‌ನೊಂದಿಗೆ ರಿಮೋಟ್ ಅನ್ನು ನೀಡಲಾಗಿದೆ. 15 ಕ್ಕೂ ಹೆಚ್ಚು ಭಾಷೆಗಳು, ಯುನಿವರ್ಸಲ್ ಸರ್ಚ್, ಕಿಡ್ಸ್ ಮೋಡ್ ಮತ್ತು YouTube ಕಂಟೆಂಟ್ ವೈಶಿಷ್ಟ್ಯಗಳನ್ನು ಸಹ ನೋಡಬಹುದಾಗಿದೆ.
ಭಾರತದಲ್ಲಿ Xiaomi Smart TV X ಸರಣಿಯ ಬೆಲೆ ಮತ್ತು ಲಭ್ಯತೆ
ಈ ಮೊದಲೇ ಹೇಳಿದಂತೆ, ಭಾರತದಲ್ಲಿ Xiaomi Smart TV X ಸರಣಿಯಲ್ಲಿ 43-ಇಂಚಿನ, 50-ಇಂಚಿನ ಮತ್ತು 55-ಇಂಚಿನ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಾಗಿದೆ. ಇವುಗಳಲ್ಲಿ ಕೇವಲ 28,999 ರೂ.ಗೆ ಅತ್ಯಾಧುನಿಕ ವೈಶಿಷ್ಟ್ಯಗಳುಳ್ಳ 43-ಇಂಚಿನ ಸ್ಮಾರ್ಟ್‌ಟಿವಿ ಹಾಗೂ 28,999 ರೂ.ಗೆ 50-ಇಂಚಿನ ಸ್ಮಾರ್ಟ್‌ಟಿವಿ ಹಾಗೂ 39,999 ರೂ.ಗೆ 55-ಇಂಚಿನ ಸ್ಮಾರ್ಟ್‌ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ಇದೇ ಸೆಪ್ಟೆಂಬರ್ 14 ರಿಂದ Mi.com, Mi Homes, Flipkart ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ Xiaomi Smart TV X ಸರಣಿ ಸ್ಮಾರ್ಟ್‌ಟಿವಿಗಳು ಖರೀದಿಗೆ ಲಭ್ಯವಿರುತ್ತವೆ ಎಂದು
Xiaomi Smart Tv X Series With 4k Resolution Launched In India.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
05-08-25 10:39 pm
Bangalore Correspondent
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm