ಬ್ರೇಕಿಂಗ್ ನ್ಯೂಸ್
05-09-22 07:38 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಮೊಟ್ಟ ಮೊದಲ 200 ಮೆಗಾಪಿಕ್ಸೆಲ್ ಕ್ಯಾಮೆರಾ ಸಾಮರ್ಥ್ಯದ ಸ್ಮಾರ್ಟ್‌ಫೋನ್ Motorola Edge 30 Ultra ಬಿಡುಗಡೆಯಾಗುವ ದಿನಾಂಕ ಮತ್ತು ವೈಶಿಷ್ಟ್ಯಗಳ ಮಾಹಿತಿ ಎಲ್ಲವೂ ಇತ್ತೀಚಿಗಷ್ಟೆ ಬಹಿರಂಗವಾಗಿದ್ದವು. ದೇಶದಲ್ಲಿ ಇದೇ ಸೆಪ್ಟೆಂಬರ್ 8 ರಂದು ಬಹುನಿರೀಕ್ಷಿತ Motorola Edge 30 Ultra ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿರುವುದು ಅಧಿಕೃತವಾಗಿ ಖಚಿತವಾಗಿದ್ದು, ಇದೇ ವೇಳೆಯಲ್ಲಿ Motorola Edge 30 Ultra ಸ್ಮಾರ್ಟ್‌ಫೋನಿನ ಪ್ರಮೋಷನಲ್ ವಿಡಿಯೋ ಒಂದು ಲೀಕ್ ಆಗಿದೆ. ಜನಪ್ರಿಯ ಟಿಪ್‌ಸ್ಟರ್ ಇವಾನ್ ಬ್ಲಾಸ್ ಅವರು ಟ್ವಿಟರ್‌ನಲ್ಲಿ Moto Edge 30 Ultra ಸ್ಮಾರ್ಟ್‌ಫೋನಿನ ಪ್ರಮೋಷನಲ್ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ Moto Edge 30 Ultra ಸ್ಮಾರ್ಟ್‌ಫೋನಿನ ವಿನ್ಯಾಸ ಹಾಗೂ ವೈಶಿಷ್ಟ್ಯಗಳೆಲ್ಲವೂ ಬಹುರಂಗಗೊಂಡಿವೆ. ಈ ಕೆಳಗೆ ನೀಡಲಾಗಿರುವ ವಿಡಿಯೋದಲ್ಲಿ ನೀವು Motorola Edge 30 Ultra ಸ್ಮಾರ್ಟ್‌ಫೋನಿನ ವಿನ್ಯಾಸವನ್ನು ಮತ್ತು ಲೇಖನದಲ್ಲಿ ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳನ್ನು ತಿಳಿಯಬಹುದು.
ಇತ್ತೀಚಿಗಷ್ಟೆ ಚೀನಾದಲ್ಲಿ Motorola X30 Pro ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದ್ದ ಅದೇ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ Moto Edge 30 Ultra ಎಂಬ ಹೊಸ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ, ಅದರಂತೆ, Moto Edge 30 Ultra ಸ್ಮಾರ್ಟ್‌ಫೋನಿನಲ್ಲಿ 200 MP ಪ್ರಾಥಮಿಕ Samsung ISOCELL HP1 ಪ್ರಾಥಮಿಕ ಕ್ಯಾಮೆರಾವಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ. ಈ ಕ್ಯಾಮೆರಾವು ಡೀಫಾಲ್ಟ್ ಆಗಿ 12.5 MP ರೆಸಲ್ಯೂಶನ್‌ನಲ್ಲಿ ಫೋಟೋಗಳನ್ನು ಸೆರೆಹಿಡಿಯಲಿದ್ದರೆ, 2x ಆಪ್ಟಿಕಲ್ ಜೂಮ್‌ನೊಂದಿಗೆ 12 MP ಟೆಲಿಫೋಟೋ ಘಟಕದೊಂದಿಗೆ ಜೋಡಿಸಲಾಗಿರುವ 50 MP ಅಲ್ಟ್ರಾವೈಡ್ ಶೂಟರ್ ಜೊತೆಗೆ 200 MP ರೆಸಲ್ಯೂಶನ್‌ನಲ್ಲಿ ಫೋಟೋಗಳನ್ನು ಚಿತ್ರಿಸಬಹುದು ಎಂದು ಮೊಟೊರೊಲಾ ಕಂಪೆನಿ ತಿಳಿಸಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 60 MP ಸಾಮರ್ಥ್ಯದ Omnivision ನ OV60a ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇಷ್ಟು ಕ್ಯಾಮೆರಾ ಸಾಮರ್ಥ್ಯಗಳನ್ನು ಹೊಂದಿರುವ ವಿಶ್ವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ ಎಂಬುದನ್ನು ಸ್ಮಾರ್ಟ್‌ಫೋನ್ ಪ್ರಿಯರು ಗಮನಿಸಬಹುದು.
Moto Edge 30 Ultra ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ನಂತಹ ವೈಶಿಷ್ಟ್ಯಗಳಿವೆ. ಬ್ಯಾಟರಿ ವಿಭಾಗದಲ್ಲಿ, Moto Edge 30 Ultra ಸ್ಮಾರ್ಟ್‌ಫೋನ್ 125W ವೇಗದ ಚಾರ್ಜಿಂಗ್ ಬೆಂಬಲಿಸುವ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು ಕೇವಲ 7 ನಿಮಿಷಗಳಲ್ಲಿ ಬ್ಯಾಟರಿಯನ್ನು 50% ಚಾರ್ಜ್ ಆಗಲಿದೆ ಮತ್ತು 100% ಚಾರ್ಜ್ ಆಗಲು ಕೇವಲ 19 ನಿಮಿಷಗಳನ್ನು ತೆಗೆದುಕೊಳ್ಳಲಿದೆ ಎಂದು ಮೊಟೊರೊಲಾ ಕಂಪೆನಿ ತಿಳಿಸಿದೆ. ಇಷ್ಟೇ ಅಲ್ಲದೇ, ಈ Moto Edge 30 Ultra ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಸಹ ಹೊಂದಿದ್ದು, 50W ಸಾಮರ್ಥ್ಯದ ವೈರ್‌ಲೆಸ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಮೊಟೊರೊಲಾ ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 4nm ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 1+ SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದು ಆಂಡ್ರಾಯ್ಡ್ 12 ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.
ಚೀನಾದಲ್ಲಿ ಬಿಡುಗಡೆಯಾಗಿರುವ ನೂತನ Motorola X30 Pro ಸ್ಮಾರ್ಟ್‌ಫೋನ್ ಅನ್ನು ಕೇವಲ CNY 3,699 (ಸುಮಾರು 43,600 ರೂ.) ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿತ್ತು. 8GB RAM + 128GB ಸ್ಟೋರೇಜ್ ಮಾದರಿಯ Motorola X30 Pro ಸ್ಮಾರ್ಟ್‌ಫೋನ್ ಬೇಸ್ ಮಾಡೆಲ್ ಬೆಲೆ CNY 3,699 (ಸುಮಾರು 43,600 ರೂ) ಗಳಾಗಿದ್ದರೆ, ಇದರ 12GB RAM + 256GB ಸ್ಟೋರೇಜ್ ಮಾಡೆಲ್ CNY 4,199 (ಸುಮಾರು 49,500 ರೂ) ಗಳಿಗೆ. ಹಾಗೂ ಹೈ- ಎಂಡ್ ಮಾಡೆಲ್ 12GB + 512GB ಸ್ಟೋರೇಜ್ ಮಾದರಿಯು CNY 4,499 (ಅಂದಾಜು 53,000 ರೂ) ಬೆಲೆಯನ್ನು ಹೊಂದಿದೆ. ಇನ್ನು ಇದೇ ಬೆಲೆಗಳಲ್ಲಿ Motorola X30 Pro ಸ್ಮಾರ್ಟ್‌ಫೋನ್ ಭಾರತದಲ್ಲಿ Moto Edge 30 Ultra ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
Motorola Edge 30 Ultra Promotional Video Leaked Ahead Of Launch.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 06:11 pm
Mangalore Correspondent
ಪೊಲೀಸರಿಂದ ಅಧಿಕಾರ ದುರುಪಯೋಗ, ದಬ್ಬಾಳಿಕೆ ; ಬೆನ್ನು...
18-09-25 04:31 pm
Mangalore, Traffic Police: ನಂಗೆ ಕೈಮಾಡಲು ನಿಂಗೇ...
18-09-25 02:42 pm
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm