ಬ್ರೇಕಿಂಗ್ ನ್ಯೂಸ್
16-09-22 07:38 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಒಂದಾದ Realme ದೇಶದಲ್ಲಿಂದು ತನ್ನ ವಿನೂತನ 'Realme GT Neo 3T' ಸ್ಮಾರ್ಟ್‌ಫೋನನ್ನು ಬಿಡುಗಡೆಗೊಳಿಸಿದೆ. ಬಜೆಟ್ ಬೆಲೆಯಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳನ್ನು ಎದುರುನೊಡುತ್ತಿರುವ ಗ್ರಾಹಕರಿಗಾಗಿ Realme GT Neo 3T ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿದ್ದು, 120Hz ರಿಫ್ರೆಶ್ ರೇಟ್, 6.62-ಇಂಚಿನ E4 AMOLED ಡಿಸ್‌ಪ್ಲೇ, 80W ಸೂಪರ್‌ಡಾರ್ಟ್ ಚಾರ್ಜಿಂಗ್ ತಂತ್ರಜ್ಞಾನ ಮತ್ತು Qualcomm Snapdragon 870 ಪ್ರೊಸೆಸರ್ ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊತ್ತು ಮಾರುಕಟ್ಟೆಗೆ ಬಂದಿದೆ. ಹಾಗಾದರೆ, ನೂತನ Realme GT Neo 3T ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
Realme GT Neo 3T ಸ್ಮಾರ್ಟ್‌ಫೋನಿನ ವಿಶೇಷಣಗಳು
ನೂತನ Realme GT Neo 3T ಸ್ಮಾರ್ಟ್‌ಫೋನಿನಲ್ಲಿ 6.62-ಇಂಚಿನ ಫುಲ್ HD+ (1,080x2,400 ಪಿಕ್ಸೆಲ್‌ಗಳು) E4 AMOLED ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಈ ಡಿಸ್‌ಪ್ಲೆಯು 120Hz ರಿಫ್ರೆಶ್ ಸಾಮರ್ಥ್ಯವನ್ನು ಹೊಂದಿದ್ದು, 1,300 ನಿಟ್ ಬ್ರೈಟ್‌ನೆಸ್ ಮತ್ತು HDR10+ ಬೆಂಬಲವನ್ನು ಪಡೆದಿದೆ ಎಂದು Realme ಕಂಪೆನಿ ಹೇಳಿಕೊಂಡಿದೆ. ಹುಡ್ ಅಡಿಯಲ್ಲಿ, Qualcomm Snapdragon 870 ಪ್ರೊಸೆಸರ್ ನಿಂದ ಚಾಲಿತವಾಗಿರುವ Realme GT Neo 3T ಸ್ಮಾರ್ಟ್‌ಫೋನನ್ನು 8GB ವರೆಗೆ LPDDR4x RAM ನೊಂದಿಗೆ ಜೋಡಿಸಲಾಗಿದೆ. ಇಷ್ಟೇ ಅಲ್ಲದೇ, ಈ ಸ್ಮಾರ್ಟ್‌ಫೋನ್ ಡೈನಾಮಿಕ್ RAM ವಿಸ್ತರಣೆ ತಂತ್ರಜ್ಞಾನದೊಂದಿಗೆ ಆಂತರಿಕ ಮೆಮೊರಿಯನ್ನು ಹೆಚ್ಚುವರಿ 5GB RAM ಆಗಿ ಉಪಯೋಗಿಸಿಕೊಳ್ಳುತ್ತದೆ. ಗೇಮಿಂಗ್ ಪ್ರಿಯರಿಗಾಗಿ, ಶಾಖವನ್ನು ಪರಿಣಾಮಕಾರಿಯಾಗಿ ಹೊರಹಾಕಲು ಡೈಮಂಡ್ ಥರ್ಮಲ್ ಜೆಲ್ ಹೊಂದಿರುವ ಎಂಟು ಕೂಲಿಂಗ್ ಲೇಯರ್‌ಗಳನ್ನು ಒಳಗೊಂಡ ಸ್ಟೇನ್‌ಲೆಸ್ ಸ್ಟೀಲ್ ವೇಪರ್ ಕೂಲಿಂಗ್ ಸಿಸ್ಟಮ್ ಪ್ಲಸ್ ವೈಶಿಷ್ಟ್ಯವು ಈ ಸ್ಮಾರ್ಟ್‌ಫೋನಿನಲ್ಲಿದೆ.

ಫೋಟೊಗಳು ಮತ್ತು ವಿಡಿಯೋಗಳಿಗಾಗಿ, Realme GT Neo 3T ಸ್ಮಾರ್ಟ್‌ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ತರಲಾಗಿದೆ. ಇದು f/1.8 ಅಪರ್ಚರ್ ಲೆನ್ಸ್‌ನೊಂದಿಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ಅಪರ್ಚರ್ ಲೆನ್ಸ್‌ನೊಂದಿಗೆ 119 ಡಿಗ್ರಿಗಳ ಫೀಲ್ಡ್-ಆಫ್-ವ್ಯೂ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು f/2.4 ಅಪರ್ಚರ್ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾಗಳನ್ನು ಹೊಂದಿದೆ. ಮುಂಭಾಗದಲ್ಲಿ f/2.45 ಅಪರ್ಚರ್ ಲೆನ್ಸ್‌ನೊಂದಿಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಸಂಪರ್ಕ ಆಯ್ಕೆಗಳಲ್ಲಿ, Wi-Fi, 5G, 4G LTE, ಬ್ಲೂಟೂತ್ v5.2, NFC, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳನ್ನು ನೋಡಬಹುದು. ಇನ್ನುಳಿದಂತೆ, ಈ ಫೋನಿನಲ್ಲಿ 80W ಸೂಪರ್‌ಡಾರ್ಟ್ ಚಾರ್ಜ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿ, Dolby Atmos ಜೊತೆಗೆ ಡ್ಯುಯಲ್-ಸ್ಪೀಕರ್‌ಗಳು, 256GB UFS 3.1 ಆಂತರಿಕ ಮೆಮೊರಿ ಮತ್ತು ಅಂಡರ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಹಾಗೂ ಫೇಸ್ ಅನ್‌ಲಾಕ್ ವೈಶಿಷ್ಟ್ಯಗಳನ್ನು ನೋಡಬಹುದು.

Realme GT Neo 3T ಸ್ಮಾರ್ಟ್‌ಫೋನಿನ ಬೆಲೆಗಳು ಮತ್ತು ಲಭ್ಯತೆ
ಭಾರತದಲ್ಲಿ Realme GT Neo 3T ಸ್ಮಾರ್ಟ್‌ಫೋನ್ ಮೂರು ಮಾದರಿಗಳಲ್ಲಿ ಬಿಡುಗಡೆಗೊಂಡಿದೆ. ಇದರ ಬೇಸ್ 6GB RAM + 128GB ಸ್ಟೋರೇಜ್ ಮಾದರಿ ಫೋನನ್ನು 29,999 ರೂ.ಗಳ ಆರಂಭಿಕ ಬೆಲೆಯಲ್ಲಿ, ನಂತರದ 8GB RAM + 128GB ಸ್ಟೋರೇಜ್ ಆವೃತ್ತಿಯನ್ನು 31,999 ರೂ. ಬೆಲೆಯಲ್ಲಿ ಮತ್ತು ಟಾಪ್-ಆಫ್-ಲೈನ್ 8GB RAM + 256GB ಸ್ಟೋರೇಜ್ ಮಾದರಿಯನ್ನು 33,999 ರೂ.ಬೆಲೆಯಲ್ಲಿ ಪರಿಚಯಿಸಲಾಗಿದೆ. ಆದರೆ, ಈ ಸ್ಮಾರ್ಟ್‌ಫೋನಿನ ಮೊದಲ ಮಾರಾಟದ ಸಮಯದಲ್ಲಿ 7,000 ರೂ.ಗಳಷ್ಟು ರಿಯಾಯಿತಿಯನ್ನು ಒದಗಿಸುವುದಾಗಿ ಕಂಪೆನಿ ತಿಳಿಸಿದೆ. ಇದೇ ಸೆಪ್ಟೆಂಬರ್ 23 ರಿಂದ Realme.com ಮತ್ತು Flipkart ತಾಣಗಳಲ್ಲಿ Realme GT Neo 3T ಸ್ಮಾರ್ಟ್‌ಫೋನ್ ಮೊದಲ ಮಾರಾಟಕ್ಕೆ ಬರುತ್ತಿದ್ದು, ಡ್ಯಾಶ್ ಯಲ್ಲೋ, ಡ್ರಿಫ್ಟಿಂಗ್ ವೈಟ್ ಮತ್ತು ಶೇಡ್ ಬ್ಲ್ಯಾಕ್. ಯಲ್ಲೋ ಮತ್ತು ವೈಟ್ ಬಣ್ಣಗಳಲ್ಲಿ ಸ್ಮಾರ್ಟ್‌ಫೋನನ್ನು ಖರೀದಿಸಬಹುದು.
Realme Gt Neo 3t Launched In India Price, Specifications.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 09:28 pm
HK News Desk
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm