ಬ್ರೇಕಿಂಗ್ ನ್ಯೂಸ್
22-09-22 07:45 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಮೊಟೊರೊಲಾ ಕಂಪೆನಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್ Motorola Edge 30 Ultra ಇಂದಿನಿಂದ (ಸೆಪ್ಟೆಂಬರ್ 22) ಮಾರಾಟಕ್ಕೆ ಬಂದಿದೆ. ಜನಪ್ರಿಯ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಬಿಲಿಯನ್ ಡೇಸ್ ಸೇಲ್ ಮಾರಾಟದ ಸಮಯದಲ್ಲಿ Motorola Edge 30 Ultra ಸ್ಮಾರ್ಟ್‌ಫೋನನ್ನು ಮೊದಲ ಮಾರಾಟಕ್ಕೆ ಇಡಲಾಗಿದ್ದು, ಭಾರೀ ರಿಯಾಯಿತಿಯಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ದೇಶದಲ್ಲಿ Motorola Edge 30 Ultra ಸ್ಮಾರ್ಟ್‌ಫೋನ್ ಏಕೈಕ 8GB RAM + 128GB ಸ್ಟೋರೇಜ್ ಮಾದರಿಯಲ್ಲಿ 59,999 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ, ಬಿಗ್ ಬಿಲಿಯನ್ ಡೇಸ್ ಸೇಲ್ ಮಾರಾಟದ ಸಮಯದಲ್ಲಿ ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ 3,000ರೂ. ಗಳ ಇನ್‌ಸ್ಟಂಟ್ ರಿಯಾಯಿತಿ ಹಾಗೂ ಇನ್ನಿತರ ಕೊಡುಗೆಗಳನ್ನು ಜೊತೆಗೂಡಿಸಿ 54,999 ರೂ.ಗಳ ರಿಯಾಯಿತಿ ಬೆಲೆಯಲ್ಲಿ Motorola Edge 30 Ultra ಸ್ಮಾರ್ಟ್‌ಫೋನನ್ನು ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.
![]()
Motorola Edge 30 Ultra ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳು
ನೂತನ Motorola Edge 30 Ultra ಸ್ಮಾರ್ಟ್‌ಫೋನಿನಲ್ಲಿ 144Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.67-ಇಂಚಿನ ಫುಲ್ HD+ (1,080x2,400 ಪಿಕ್ಸೆಲ್‌ಗಳು) ಪೋಲ್ಡ್ ಕರ್ವ್ ಡಿಸ್‌ಪ್ಲೇ ಅಳವಡಿಸಲಾಗಿದೆ. ಈ ಡಿಸ್‌ಪ್ಲೇಯು HDR10+, DCI-P3 ಕಲರ್ ಗ್ಯಾಮೆಟ್ ಮತ್ತು 1250nits ಬ್ರೈಟ್‌ನೆಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಪೋಲ್ಡ್ ಕರ್ವ್ ಡಿಸ್‌ಪ್ಲೇಯು ಎಡ್ಜ್ ಲೈಟಿಂಗ್ ಹೊಂದಿದ್ದು, ಇದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಂಚುಗಳ ಮೂಲಕ ನೋಟಿಫಿಕೇಷನ್ ಮತ್ತು ಕರೆಗಳು ಬಂದಾಗ ಲೈಟ್ ಬ್ಲಿಂಕ್ ಮಾಡುತ್ತದೆ. ಹುಡ್ ಅಡಿಯಲ್ಲಿ, Motorola Edge 30 Ultra ಸ್ಮಾರ್ಟ್‌ಫೋನ್ 8GB LPDDR5 RAM ಮತ್ತು 128GB UFS 3.1 ಮೆಮೊರಿ ಜೊತೆಗೆ Qualcomm Snapdragon 8+ Gen 1 SoC ಪ್ರೊಸೆಸರ್ ಹೊಂದಿದೆ.

Motorola Edge 30 Ultra ಸ್ಮಾರ್ಟ್‌ಫೋನಿನಲ್ಲಿ 200-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಸಂವೇದಕ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು ಅಲ್ಟ್ರಾ-ವೈಡ್ ಆಂಗಲ್ 50-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಸಂವೇದಕ ಮತ್ತು ಟೆಲಿಫೋಟೋ 12-ಮೆಗಾಪಿಕ್ಸೆಲ್ ಸೋನಿ ಸಂವೇದಕಗಳೊಂದಿಗೆ ಜೋಡಿಯಾಗಿದೆ. 16 ಪಿಕ್ಸೆಲ್‌ಗಳನ್ನು ಒಂದು 2.56μm ಅಲ್ಟ್ರಾ ಪಿಕ್ಸೆಲ್‌ಗೆ ಸಂಯೋಜನೆ ಮೂಲಕ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುವ ಈ ಕ್ಯಾಮೆರಾವು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 114 ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಮ್ಯಾಕ್ರೋ ವಿಷನ್, 2x ಜೂಮ್ ಮತ್ತು ಪೋರ್ಟ್ರೇಟ್ ಶಾಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ, 60-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
Motorola Edge 30 Ultra ಸ್ಮಾರ್ಟ್‌ಫೋನಿನ ಸಂಪರ್ಕ ಆಯ್ಕೆಗಳಲ್ಲಿ 5G (13 ಬ್ಯಾಂಡ್‌ಗಳು), 4G LTE, Wi-Fi 6E, ಬ್ಲೂಟೂತ್ v5.2, GPS/AGPS, NFC, ಡಿಸ್ಪ್ಲೇಪೋರ್ಟ್ 1.4, ಮತ್ತು USB ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳಿವೆ. ಅಂಡರ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ ಮತ್ತು ಫೇಸ್ ಅನ್ಲಾಕ್ ಎರಡೂ ಭದ್ರತಾ ವೈಶಿಷ್ಟ್ಯಗಳನ್ನು ತರಲಾಗಿದೆ. 4,610mAh ಬ್ಯಾಟರಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 125W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ ಹೊಂದಿದೆ. ಇನ್ನುಳಿದಂತೆ, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಲೀನಿಯರ್ x-ಆಕ್ಸಿಸ್ ವೈಬ್ರೇಶನ್, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ಮತ್ತು ಮೊಬೈಲ್ಗಾಗಿ ಥಿಂಕ್‌ಶೀಲ್ಡ್ ನಂತಹ ವೈಶಿಷ್ಟ್ಯಗಳನ್ನು ನಾವು ನೋಡಬಹುದು.
Motorola Edge 30 Ultra Go On Sale In India.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
01-10-26 11:46 am
HK News Staffer
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
Smith Machar, Indian pilot: ದುಬೈನಲ್ಲಿ ವಿಮಾನ ಪ...
01-10-26 11:05 am
ಅರಬ್ಬೀ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ರಾಕೆ...
30-09-26 10:49 am
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
01-10-26 08:10 pm
HK News Staffer
Manish Karkada, MRPL: ಎಂಆರ್ ಪಿಎಲ್ ಅಗ್ನಿ ಅವಘಡ...
01-10-26 06:19 pm
MRPL ಸ್ಫೋಟದ ಬೆನ್ನಲ್ಲೇ ನೆಲ್ಲಿದಡಿ ಗುತ್ತು ಚರ್ಚೆ...
01-10-26 03:04 pm
Sowjanya case, STI: ಸೌಜನ್ಯಾ ಪ್ರಕರಣ ಮರುತನಿಖೆ ;...
01-10-26 12:53 pm
Mrpl Fire, Mangalore, ut khadar: MRPL ಸ್ಫೋಟ ಪ...
01-10-26 10:25 am
01-10-26 02:31 pm
HK News Staffer
Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇ...
01-10-26 11:10 am
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ದು...
30-09-26 08:59 pm
ಮಣಿಪಾಲ KMC ಆಸ್ಪತ್ರೆಯಲ್ಲಿ ತೀರ್ಥಹಳ್ಳಿಯ ರೋಗಿ ಆತ್...
30-09-26 08:17 pm
ಉಡುಪಿಯಲ್ಲಿ ಹೆಲ್ಮೆಟ್ ಧರಿಸಿ ದುರ್ಗಾಂಬ ಬಸ್ ಕಳವು ;...
30-09-26 10:33 am