ಬ್ರೇಕಿಂಗ್ ನ್ಯೂಸ್
27-10-22 07:56 pm Source: Vijayakarnataka ಡಿಜಿಟಲ್ ಟೆಕ್
OnePlus ಸಹ-ಸಂಸ್ಥಾಪಕ ಕಾರ್ಲ್ ಪೀ ಹೊಸದಾಗಿ ಸ್ಥಾಪಿಸಿರುವ 'ನಥಿಂಗ್' ಕಂಪನಿಯಿಂದ ಜಾಗತಿಕವಾಗಿ ಇಂದು ಮೂರನೇ ಉತ್ಪನ್ನವು ಬಿಡುಗಡೆಯಾಗಿದೆ. ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಏಕಕಾಲದಲ್ಲಿ 'Nothing Ear Stick' ಎಂಬ ಟ್ರೂ ವೈರ್‌ಲೆಸ್ ಇಯರ್‌ಬಡ್ ಸಾಧನವನ್ನು ಪರಿಚಯಸಿಲಾಗಿದ್ದು, ಈ ಹೊಸ ಸಾಧನವು ಒಂದೇ ಚಾರ್ಜ್‌ನಲ್ಲಿ 7 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸಲಿದೆ ಎಂದು ನಥಿಂಗ್ ಕಂಪೆನಿ ತಿಳಿಸಿದೆ.
ಸಂಗೀತ ಪ್ರಿಯರಿಗೆ ಇಷ್ಟವಾಗುವ ರೀತಿ ಈ ಹೊಸ 'Nothing Ear Stick' ಸಾಧನವನ್ನು ಪರಿಚಯಿಸಲಾಗಿದೆ. ಕಂಪೆನಿಯ ಮೊದಲ ಇಯರ್‌ಬಡ್ ಸಾಧನ 'ನಥಿಂಗ್ ಇಯರ್ 1' ಸಾಧನಕ್ಕಿಂತ ಈ ಹೊಸ 'Nothing Ear Stick' ಸಾಧನವು ಸಾಕಷ್ಟು ಹಗುರವಾಗಿದೆ ಮಾತ್ರವಲ್ಲದೇ ಮತ್ತಷ್ಟು ವಿಶೇಷ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ ಎಂದು ನಥಿಂಗ್ ಕಂಪೆನಿ ಹೇಳಿಕೊಂಡಿದೆ. ಹಾಗಾದರೆ, ಈ ಹೊಸ ಇಯರ್‌ಬಡ್ ಸಾಧನ ಹೇಗಿದೆ ನೋಡೋಣ ಬನ್ನಿ.
'Nothing Ear Stick' ಸಾಧನದ ವೈಶಿಷ್ಟ್ಯಗಳು
ನೂತನ 'Nothing Ear Stick' ಸಾಧನವು ಇತರ ಇಯರ್‌ಬಡ್‌ಗಳಿಗೆ ಹೋಲಿಸಿದರೆ ವಿಶಿಷ್ಟ ವಿನ್ಯಾಸದೊಂದಿಗೆ ಬಿಡುಗಡೆಯಾಗಿದೆ. ಸಾಮಾನ್ಯ ಇಯರ್‌ಬಡ್‌ಗಳ ಕೇಸ್‌ಗಳಿಗೆ ಒದಗಿಸಲಾದ ಫ್ಲಿಪ್ ಓಪನಿಂಗ್‌ಗಿಂತ ಭಿನ್ನವಾಗಿ, ನಥಿಂಗ್ ಇಯರ್ ಸ್ಟಿಕ್ ಕೇಸ್ ಟ್ವಿಸ್ಟ್ ಓಪನಿಂಗ್‌ನೊಂದಿಗೆ ಬಂದಿದೆ. ಇದು ನೋಡಲು ಅತ್ಯಾಕರ್ಷಕವಾಗಿ ಕಾಣುತ್ತಿದೆ.
'Nothing Ear Stick' ಸಾಧನವು ಶಕ್ತಿಯುತವಾದ 12.6mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಸಂಗೀತದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ. ಧೂಳು, ನೀರು ಮತ್ತು ಬೆವರು ನಿರೋಧಕತೆಗಾಗಿ IP54- ಪ್ರಮಾಣೀಕರಿಸಲ್ಪಟ್ಟಿರುವ ಈ ಇಯರ್‌ಬಡ್‌ಗಳು ಇನ್-ಇಯರ್ ಡಿಟೆಕ್ಷನ್ ವೈಶಿಷ್ಟ್ಯವನ್ನು ಸಹ ಒಳಗೊಂಡಿವೆ ಎಂದು ಕಂಪೆನಿ ತಿಳಿಸಿದೆ.
'Nothing Ear Stick' ಸಾಧನ ಬ್ಯಾಟರಿ ಬಾಳಿಕೆ ಬಗ್ಗೆ ನೋಡುವುದಾದರೆ, ಇದರಲ್ಲಿನ ಇಯರ್‌ಬಡ್‌ಗಳು ಒಂದೇ ಚಾರ್ಜ್‌ನಲ್ಲಿ 7 ಗಂಟೆಗಳವರೆಗೆ ಆಲಿಸುವ ಸಮಯ ಮತ್ತು 3 ಗಂಟೆಗಳವರೆಗೆ ಟಾಕ್ ಟೈಮ್ ಸಾಮರ್ಥ್ಯವನ್ನು ಹೊಂದಿವೆ. ಇದರ ಕೇಸ್ 29 ಗಂಟೆಗಳವರೆಗೆ ಆಲಿಸುವ ಸಮಯವನ್ನು ಮತ್ತು 12 ಗಂಟೆಗಳವರೆಗೆ ಟಾಕ್ ಟೈಮ್ ನೀಡಲಿದೆ.
'Nothing Ear Stick' ಸಾಧನದ ಬೆಲೆ ಮತ್ತು ಲಭ್ಯತೆ
ದೇಶದ ಮಾರುಕಟ್ಟೆಯಲ್ಲಿ 'Nothing Ear Stick' ಸಾಧನವನ್ನು 8,499 ರೂ. ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದೇ ನವೆಂಬರ್ 4 ರಿಂದ ಮಾರಾಟ ಕಂಪೆನಿಯ ಅಧಿಕೃತ ವೆಬ್‌ಸೈಟ್ ಹಾಗೂ ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ 'Nothing Ear Stick' ಸಾಧನವನ್ನು ಏಕೈಕ ಬಿಳಿ ಬಣ್ಣದಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಇದಕ್ಕೂ ಮೊದಲು ಈಗಿನಿಂದಲೇ ಈ ಇಯರ್‌ಬಡ್ ಸಾಧನವನ್ನು ಮುಂಗಡವಾಗಿ ಆರ್ಡರ್ ಮಾಡಬಹುದು.
Nothing Ear Stick Launched In India Full Details.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm