ಬ್ರೇಕಿಂಗ್ ನ್ಯೂಸ್
11-11-22 07:57 pm Source: Vijayakarnataka ಡಿಜಿಟಲ್ ಟೆಕ್
ಗೇಮಿಂಗ್ ಪ್ರಿಯರ ಅಚ್ಚುಮೆಚ್ಚಿನ ಗ್ಯಾಜೆಟ್ 'ಸೋನಿ ಪ್ಲೇಸ್ಟೇಷನ್ 5' (Sony’s PlayStation 5-PS5) ಗೇಮಿಂಗ್ ಕನ್ಸೋಲ್ ಮತ್ತೆ ಮಾರಾಟಕ್ಕೆ ಬಂದಿದೆ. ದೇಶದಲ್ಲಿ ಪ್ಲೇಸ್ಟೇಷನ್ 5 ಸಾಧನ ಬೆಲೆ ಏರಿಕೆಯಾದ ನಂತರ ಮೊದಲ ಬಾರಿಗೆ ಇಂದಿನಿಂದ (ನವೆಂಬರ್ 11) ಮಾರಾಟಕ್ಕೆ ಇಡಲಾಗಿದ್ದು, ಕಳೆದ ಆಗಸ್ಟ್‌ನಲ್ಲಿ ಇದ್ದಂತೆಯೇ ಪ್ಲೇಸ್ಟೇಷನ್ ಸಾಧನವು ವಿಶೇಷ ಆಕ್ಷನ್ RPG ಹಾರಿಜಾನ್ ಫರ್ಬಿಡನ್ ವೆಸ್ಟ್‌ನೊಂದಿಗೆ ಪ್ಯಾಕೇಜ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿರುತ್ತವೆ ಎಂದು ಸೋನಿ ಕಂಪೆನಿ ತಿಳಿಸಿದೆ.
ಸೋನಿ ಪ್ಲೇಸ್ಟೇಷನ್ 5 ನಲ್ಲಿ ಲಭ್ಯವಿರುವ ಬ್ಲೂ-ರೇ PS5 ಮತ್ತು ಡಿಸ್ಕ್-ಲೆಸ್ PS5 ಎರಡೂ ಗೇಮಿಂಗ್ ಕನ್ಸೋಲ್ಗಳನ್ನು ಮಾರಾಟಕ್ಕಿಡಲಾಗಿದ್ದು, 4K ಬ್ಲೂ-ರೇ-ಸಜ್ಜಿತ PS5 ಹೊಂದಿರುವ HFW ಬಂಡಲ್ ಗೇಮಿಂಗ್ ಕನ್ಸೋಲ್ ಈಗ ₹54,990 ರೂ. ಬೆಲೆಯಲ್ಲಿ ಮತ್ತು HFW ಬಂಡಲ್ ಡಿಜಿಟಲ್ ಆವೃತ್ತಿಯು ₹44,990 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ಕಳೆದ ವಾರವಷ್ಟೇ ಬ್ಲೂ-ರೇ PS5 ಮತ್ತು ಡಿಸ್ಕ್-ಲೆಸ್ PS ಎರಡೂ ಗೇಮಿಂಗ್ ಕನ್ಸೋಲ್‌ಗಳ ಬೆಲೆಗಳನ್ನು 5000 ರೂ.ಗಳಷ್ಟು ಹೆಚ್ಚಿಸಲಾಗಿದೆ.
Sony PS5 ಗೇಮಿಂಗ್ ಕನ್ಸೋಲ್ 120fps ವರೆಗೆ 8K ಗೇಮಿಂಗ್ ಬೆಂಬಲವನ್ನು ನೀಡುತ್ತದೆ. ಇದು 120Hz ರಿಫ್ರೆಶ್ ದರದಲ್ಲಿ 4K ಟಿವಿ ಗೇಮಿಂಗ್ ಅನ್ನು ಸಹ ಬೆಂಬಲಿಸುತ್ತದೆ.ಇದರಲ್ಲಿ HDR ಟಿವಿ ತಂತ್ರಜ್ಞಾನದ ಬೆಂಬಲವೂ ಇದೆ. ಸೋನಿಯ ಮುಂದಿನ ಪೀಳಿಗೆಯು ಟೆಂಪೆಸ್ಟ್ 3D ಆಡಿಯೊಟೆಕ್‌ಗೆ ಬೆಂಬಲವನ್ನು ಹೊಂದಿದ್ದು, ಇದು ತಲ್ಲೀನಗೊಳಿಸುವ ಗೇಮಿಂಗ್ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಹ್ಯಾಪ್ಟಿಕ್ಸ್ ಪ್ರತಿಕ್ರಿಯೆಯನ್ನು ಸುಧಾರಿಸಲು ಸಾಧನವು ಡ್ಯುಯಲ್ ಸೆನ್ಸ್ ನಿಯಂತ್ರಕದೊಂದಿಗೆ ಸಹ ಬರುತ್ತದೆ.
ಸೋನಿ ಪ್ಲೇಸ್ಟೇಶನ್ 5 ಗ್ಯಾಜೆಟ್ ಖರೀದಿಸುವುದು ಹೇಗೆ?
ಅಮೆಜಾನ್, ಕ್ರೋಮಾ, ಫ್ಲಿಪ್‌ಕಾರ್ಟ್, ರಿಲಯನ್ಸ್ ಡಿಜಿಟಲ್, ಸೋನಿ ಸೆಂಟರ್ ಮತ್ತು ವಿಜಯ್ ಸೇಲ್ಸ್ ಇ-ಕಾಮರ್ಸ್ ತಾಣಗಳಲ್ಲಿ 'ಸೋನಿ ಪ್ಲೇಸ್ಟೇಷನ್ 5' ಕನ್ಸೋಲ್ಗಳನ್ನು ಮಾರಾಟಕ್ಕಿಡಲಾಗಿದೆ. ನೀವು Amazon ನಲ್ಲಿ PS5 ಸಾಧನವನ್ನು ಖರೀದಿಸುವುದಾದರೆ Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ 5% ಕ್ಯಾಶ್‌ಬ್ಯಾಕ್‌ಗೆ ಸಿಗಲಿದೆ. ಹಾಗೂ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ 1,500 ರೂ.ವರೆಗಿನ 7.5% ಪ್ರತಿಶತ ತ್ವರಿತ ರಿಯಾಯಿತಿ ಸಹ ದೊರೆಯಲಿದೆ.
Sony Ps5 India Restock Sale Today November 11.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm