ಬ್ರೇಕಿಂಗ್ ನ್ಯೂಸ್
23-11-22 09:16 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಜನಪ್ರಿಯ ಸ್ಮಾರ್ಟ್‌ಟಿವಿ ಬ್ರ್ಯಾಂಡ್‌ಗಳಲ್ಲಿ ಒಂದಾದ ವಿಯು (Vu) ದೇಶದಲ್ಲಿ ತನ್ನ ಮತ್ತೊಂದು ಬಜೆಟ್ ಸ್ಮಾರ್ಟ್‌ಟಿವಿಯನ್ನು ಪರಿಚಯಿಸಿದೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ Vu ಬಿಡುಗಡೆ ಮಾಡಿದ್ದ Glo LED TV ಸರಣಿಯಲ್ಲಿ 50, 55 ಮತ್ತು 65-ಇಂಚಿನ ಮೂರು ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಾಗಿತ್ತು. ಇದೀಗ ಇದೇ ಸರಣಿಯಲ್ಲಿ 43 ಇಂಚಿನಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಟಿವಿಯನ್ನು ಪರಿಚಯಿಸಲಾಗಿದೆ. ಈ ಹೊಸ ಸ್ಮಾರ್ಟ್‌ಟಿವಿ 30 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಬರುತ್ತಿದೆ.! ಹಾಗಾದರೆ, ಹೊಸದಾಗಿ ಬಿಡುಗಡೆಯಾಗಿರುವ 43-ಇಂಚಿನ Glo LED TV ಸ್ಮಾರ್ಟ್‌ಟಿವಿ ಹೇಗಿದೆ ಮತ್ತು ವೈಶಿಷ್ಟ್ಯಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
Vu Glo LED TV 43-inch ಸ್ಮಾರ್ಟ್‌ಟಿವಿಯ ವೈಶಿಷ್ಟ್ಯಗಳು
43-ಇಂಚಿನ ಈ ಹೊಸ Glo LED TV ಸ್ಮಾರ್ಟ್‌ಟಿವಿ 4K ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದೆ. ಇದರ ಡಿಸ್‌ಪ್ಲೆಯು 400-ನಿಟ್ ಬ್ರೈಟ್‌ನೆಸ್, HDR10, ಡಾಲ್ಬಿ ವಿಷನ್, MEMC ಮತ್ತು ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು 94 ಪ್ರತಿಶತ ಕಲರ್ ಗ್ಯಾಮೆಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ FIFA 2022 ಮತ್ತು ICC ODI ವರ್ಲ್ಡ್ ಕಪ್ 2023 ರ ಸಮಯದಲ್ಲಿ, ಸುಧಾರಿತ ಕ್ರಿಕೆಟ್ ಮೋಡ್‌ನಲ್ಲಿ 100% ಬಾಲ್ ಗೋಚರತೆ ಮತ್ತು ಲೈವ್ ಸ್ಟೇಡಿಯಂ ಅನುಭವವನ್ನು ಒದಗಿಸುತ್ತದೆ ಎಂದು Vu ಕಂಪೆನಿ ಹೇಳಿಕೊಂಡಿದೆ.
Vu Glo LED TV ಸ್ಮಾರ್ಟ್‌ಟಿವಿಯಲ್ಲಿ Vu Glo AI ಕ್ವಾಡ್-ಕೋರ್ ಪ್ರೊಸೆಸರ್ ಮತ್ತು ಡ್ಯುಯಲ್-ಕೋರ್ GPU ಜೊತೆಗೆ 2GB RAM ಮತ್ತು 16GB ಆಂತರಿಕ ಸಂಗ್ರಹಣೆ ನೀಡಲಾಗಿದೆ. Google TV-ಆಧಾರಿತವಾಗಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಟಿವಿಯಲ್ಲಿ Netflix, Prime Video ಮತ್ತು ಇತರ OTT ಅಪ್ಲಿಕೇಶನ್‌ಗಳನ್ನು ಮೊದಲೇ ಲೋಡ್ ಮಾಡಲಾಗಿದೆ. ಗೇಮಿಂಗ್‌ಗಾಗಿ ವೇರಿಯಬಲ್ ರಿಫ್ರೆಶ್ ರೇಟ್ (VRR) ಮತ್ತು ಸ್ವಯಂ ಕಡಿಮೆ ಲೇಟೆನ್ಸಿ ಮೋಡ್ (ALLM) ವೈಶಿಷ್ಟ್ಯಗಳು ಇರುವುದನ್ನು ನಾವು ನೋಡಬಹುದು.
84W ಆಡಿಯೊ ಔಟ್‌ಪುಟ್ ನೀಡುವ ಈ ಸ್ಮಾರ್ಟ್‌ಟಿವಿಯಲ್ಲಿ ಅಂತರ್ನಿರ್ಮಿತ ಸಬ್ ವೂಫರ್ ಸಹ ಇದೆ. ಇದು ಡಾಲ್ಬಿ ಆಡಿಯೊ ಮತ್ತು ಡಾಲ್ಬಿ ಅಟ್ಮಾಸ್ ಎರಡಕ್ಕೂ ಬೆಂಬಲ ಒದಗಿಸಲಿದೆ. ಸಂಪರ್ಕಕ್ಕಾಗಿ, Vu Glo LED TV ಯಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, ಮೂರು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು ಮತ್ತು ಈಥರ್ನೆಟ್ ಪೋರ್ಟ್ ವೈಶಿಷ್ಟ್ಯಗಳಿವೆ. Glo LED TV ಸರಣಿಯಲ್ಲಿ ಬಿಡುಗಡೆಯಾಗಿರುವ ಎಲ್ಲಾ ವಿಭಿನ್ನ ಗಾತ್ರದ ಮಾದರಿಯ ಸ್ಮಾರ್ಟ್‌ಟಿವಿಗಳು ಇದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ.
Vu Glo LED TV 43-inch ಸ್ಮಾರ್ಟ್‌ಟಿವಿ ಬೆಲೆ ಮತ್ತು ಲಭ್ಯತೆ
43-ಇಂಚಿನ ಈ ಹೊಸ Vu Glo LED TV ಸ್ಮಾರ್ಟ್‌ಟಿವಿಯನ್ನು 29,999 ರೂ.ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹಾಗೂ ಇದೇ ನವೆಂಬರ್ 17 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಬರುತ್ತಿದೆ.
Vu Glo 43-Inch Led Tv Launched In India Under Rs 30,000.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm