ಬ್ರೇಕಿಂಗ್ ನ್ಯೂಸ್
28-11-22 07:11 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ ಪ್ರೀಮಿಯಂ OnePlus 11 ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ನಿಖರ ದಿನಾಂಕ ಯಾವುದು ಎಂಬ ಅಧಿಕೃತ ಮಾಹಿತಿ ಈ ವರೆಗೂ ಘೋಷಣೆಯಾಗಿಲ್ಲ. ಆದರೆ, ಹೊಸ OnePlus 11 ಸ್ಮಾರ್ಟ್‌ಫೋನ್ ಹೊಂದಿರಲಿರುವ ಬಣ್ಣದ ಆಯ್ಕೆಗಳು ಮತ್ತು ಕೆಲವು ಪ್ರಮುಖ ಫೀಚರ್ಸ್ ಈಗಾಗಲೇ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಜನಪ್ರಿಯ ಟಿಪ್‌ಸ್ಟಾರ್ ಮ್ಯಾಕ್ಸ್ ಜಂಬೋರ್ (@MaxJmb) ಅವರು ಹೊಸ OnePlus 11 ಸರಣಿ ಸ್ಮಾರ್ಟ್‌ಫೋನ್ ಗ್ಲೋಸಿ ಗ್ರೀನ್ ಮತ್ತು ಮ್ಯಾಟ್ ಬ್ಲಾಕ್ ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಲಿವೆ ಎಂದು ಹೇಳಿದ್ದಾರೆ, ಹಾಗೆಯೇ, ಮತ್ತೆ ಕೆಲವು ವರದಿಗಳು OnePlus 11 ಸ್ಮಾರ್ಟ್‌ಫೋನ್ ಹೊಂದಿರಬಹುದಾದ ಪ್ರಮುಖ ಫೀಚರ್ಸ್‌ಗಳನ್ನು ಬಹಿರಂಗಪಡಿಸಿವೆ.
OnePlus 11 ಸ್ಮಾರ್ಟ್‌ಫೋನಿನಲ್ಲಿ Snapdragon 8 Gen 2 SoC ಪ್ರೊಸೆಸರ್ ಇರಲಿದೆ ಎಂಬ ಅಧಿಕೃತ ಸುದ್ದಿಯು ಈಗಾಗಲೇ ಹೊರಬಿದ್ದಿದೆ. ಇಷ್ಟೇ ಅಲ್ಲದೇ, OnePlus 11 ಸ್ಮಾರ್ಟ್‌ಫೋನ್ Android 13-ಆಧಾರಿತ OxygenOS 13 ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು 8GB, 12GB RAM ಹಾಗೂ 128GB, 256GB ಮೆಮೊರಿ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಕೆಲವು ವರದಿಗಳಂತೆ, OnePlus 11 ಸ್ಮಾರ್ಟ್‌ಫೋನಿನಲ್ಲಿ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 2K ಡಿಸ್‌ಪ್ಲೇ ಇರಲಿದೆ. ಮತ್ತು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ 5,000mAh ಬ್ಯಾಟರಿ ಸೇರಿದಂತೆ ಹಲವು ಪ್ರೀಮಿಯಂ ವೈಶಿಷ್ಟ್ಯಗಳು ಹಾಗೂ ಅಲರ್ಟ್ ಸ್ಲೈಡರ್ ಮೆಟಲ್ ಪ್ಯಾಕ್ ಮಿಡಲ್ ಫ್ರೇಮ್ ಮತ್ತು ಸೆರಾಮಿಕ್ ಬಾಡಿ ವಿನ್ಯಾಸ ಇರುವ ಬಗ್ಗೆ ತಿಳಿದುಬಂದಿದೆ.
OnePlus 11 ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ IMX890 ಸಂವೇದಕ, 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸಂವೇದಕ ಮತ್ತು 32-ಮೆಗಾಪಿಕ್ಸೆಲ್ ಸಂವೇದಕವನ್ನು ಒಳಗೊಂಡಿರುವ ಹ್ಯಾಸೆಲ್ಬ್ಲಾಡ್-ಬ್ರಾಂಡ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹಾಗೂ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆಟಪ್ ಹೊಂದಿರಬಹುದು ಎಂದು 'ಡಿಜಿಟಲ್ ಚಾಟ್ ಸ್ಟೇಷನ್' ವರದಿ ಸೂಚಿಸಿದೆ. ಡಿಜಿಟಲ್ ಚಾಟ್ ಸ್ಟೇಷನ್ ವರದಿಯು ಪ್ರಕಾರ, ಹೊಸ OnePlus 11 ಸ್ಮಾರ್ಟ್‌ಫೋನ್ ವಿನ್ಯಾಸದ ಮೇಲೆ ಹೆಚ್ಚು ಕೇಂದ್ರೀಕರಿಸಲಾಗಿದೆ ಎಂದು ಹೇಳಿದೆ. ಮೆಟಲ್ ಪ್ಯಾಕ್ ಮಿಡಲ್ ಫ್ರೇಮ್ ಮತ್ತು ಸೆರಾಮಿಕ್ ಬಾಡಿ ವಿನ್ಯಾಸವಿರುವ ಮುಂಭಾಗದಲ್ಲಿ ಇರುವ OnePlus 11 ಸ್ಮಾರ್ಟ್‌ಫೋನಿನ ಕರ್ವ್ಡ್ ಡಿಸ್ಪ್ಲೇಯ ಎಡಮೂಲೆಯಲ್ಲಿ ಹೋಲ್-ಪಂಚ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿಸಿದೆ.
ಜನಪ್ರಿಯ ಚಿಪ್‌ಸೆಟ್ ಬ್ರ್ಯಾಂಡ್ Qualcomm ತನ್ನ ಇತ್ತೀಚಿನ Qualcomm Snapdragon 8 Gen 2 ಪ್ರೊಸೆಸರ್ ಸಾಧನವನ್ನು ಬಿಡುಗಡೆ ಮಾಡಿದೆ. Qualcomm Snapdragon 8 Gen 2 ಪ್ರೊಸೆಸರ್ ಸಾಧನವು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದಲ್ಲಿ ಅದ್ಭುತವಾಗಿದೆ ಎಂದು ಕ್ವಾಲ್ಕಾಮ್ ಸಂಸ್ಥೆ ಹೇಳಿದೆ. Qualcomm Snapdragon 8 Gen 2 ಪ್ರೊಸೆಸರ್ ಸಾಧನವು ಈ ಹಿಂದೆ ಪರಿಚಯಿಸಿದ್ದ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ಗಿಂತ 40% ಹೆಚ್ಚು ಪವರ್‌ಫುಲ್ ಆಗಿದೆ ಎಂದು Qualcomm ಕಂಪೆನಿ ತಿಳಿಸಿದ್ದು, ಹೊಸ ಸಾಧನದಲ್ಲಿ ಹೊಚ್ಚಹೊಸ CPU (ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್)ಆರ್ಕಿಟೆಕ್ಚರ್, ಮೂರು ದಕ್ಷತೆಯ ಕೋರ್‌ಗಳು, ನಾಲ್ಕು ಕಾರ್ಯಕ್ಷಮತೆಯ ಕೋರ್‌ಗಳು ಮತ್ತು ಒಂದು ಪ್ರೈಮ್ ಕೋರ್ ಕ್ರಿಟೆಕ್ಚರ್‌ಗಳನ್ನು ಒಳಗೊಂಡಿದೆ ಎಂದು ಹೇಳಿದೆ.
ಒನ್‌ಪ್ಲಸ್ 11 ಸ್ಪೆಸಿಫಿಕೇಶನ್ಸ್
ಪರ್ಫಾಮೆನ್ಸ್ | Qualcomm SM8250-AC Snapdragon 870 5G (7 nm) |
ಡಿಸ್‌ಪ್ಲೇ | 6.55 inches (16.63 cm) |
ಸ್ಟೋರೇಜ್ | 128 GB |
ಕ್ಯಾಮರಾ | 48 MP + 16 MP + 5 MP + 2 MP |
ಬ್ಯಾಟರಿ | 4500 mAh |
ಭಾರತದಲ್ಲಿ ಬೆಲೆ | 43548 |
ರ‍್ಯಾಮ್ | 8 GB |
Oneplus 11 Tipped To Come In Matte Black And Glossy Green Colour Options.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm