ಬ್ರೇಕಿಂಗ್ ನ್ಯೂಸ್
06-12-22 09:48 pm Source: Vijayakarnataka ಡಿಜಿಟಲ್ ಟೆಕ್
ಕೈಗೆಟಕುವ ದರದಲ್ಲಿ ಅಲ್ಟ್ರಾ ಹೆಚ್‌ಡಿ 4K ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಮತ್ತು ಸ್ಟೀರಿಯೋ ಸಿಸ್ಟಮ್‌ಗಳನ್ನು ಪರಿಚಯಿಸುವ ಮೂಲಕ ಹೆಸರುಗಳಿಸಿರುವ ಜನಪ್ರಿಯ ಟೆಕ್ ಬ್ರ್ಯಾಂಡ್ ಬ್ಲೂಪಂಕ್ಟ್ (Blaupunkt) ಇದೀಗ ಭಾರತದಲ್ಲಿ ತನ್ನ ಹೊಸ ಇಯರ್‌ಬಡ್ಸ್ ಸಾಧನವನ್ನು ಪರಿಚಯಿಸಿದೆ. ಭಾರತದಲ್ಲಿ ಸ್ಮಾರ್ಟ್ ಉತ್ಪನ್ನಗಳಿಗೆ ಇರುವ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು Blaupunkt BTW20 ಎಂಬ ಹೆಸರಿನ ಇಯರ್‌ಬಡ್ ಸಾಧನವನ್ನು ಪರಿಚಯಿಸಲಾಗಿದ್ದು, ಈ ಸಾಧನವು ಬರೋಬ್ಬರಿ 30 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್, ಜೊತೆಗೆ ಅತ್ಯುತ್ತಮ ಬೇಸ್ ಸೌಂಡ್ ಅನುಭವ ಸೇರಿಂದಂತೆ ಪ್ರಮುಖ ಫೀಚರ್ಸ್‌ಗಳನ್ನು ಹೊತ್ತು ಮಾರುಕಟ್ಟೆಗೆ ಕಾಲಿಟ್ಟಿದೆ. ಹಾಗಾದರೆ, ಹೊಸ Blaupunkt BTW20 ಇಯರ್‌ಬಡ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
Blaupunkt BTW20 ಇಯರ್‌ಬಡ್ ವೈಶಿಷ್ಟ್ಯಗಳು!
ನೂತನ Blaupunkt BTW20 ಇಯರ್‌ಬಡ್ ಸಾಧನವು ಇನ್ ಇಯರ್ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ವಾಟರ್, ಬೆವರು ಹಾಗೂ ಡಸ್ಟ್ ಪ್ರತಿರೋಧದ IPX5 ರೇಟಿಂಗ್ ಹೊಂದಿರುವ ಈ ಇಯರ್‌ಬಡ್ ಸಾಧನವು ಸ್ಪರ್ಶ ನಿಯಂತ್ರಣಗಳನ್ನು ಹೊಂದಿದೆ. ಇದರಿಂದ ಟಚ್ ಸೆಟ್ಟಿಂಗ್‌ಗಳ ಮೂಲಕ ನೀವು ಇಯರ್‌ಬಡ್‌ಗಳ ಒಟ್ಟಾರೆ ಕಾರ್ಯವನ್ನು ನಿಯಂತ್ರಿಸಬಹುದು. ಈ ಸ್ಪರ್ಷ ನಿಯಂತ್ರಣಗಳಿಂದ ನೀವು Google Assistant ಮತ್ತು Siri ವಾಯ್ಸ್ ಅಸಿಸ್ಟೆಂಟ್ ಆಕ್ಟಿವ್ ಮಾಡಬಹುದು. ಇನ್ನು ಈ ಇಯರ್‌ಬಡ್ ಸಾಧನವು ಒಂದು ಅಂತರ್ನಿರ್ಮಿತ ಮೈಕ್ರೊಫೋನ್ ಹೊಂದಿದ್ದು, ಇದು ಸುತ್ತುವರಿದ ಧ್ವನಿಯನ್ನು ರದ್ದುಗೊಳಿಸಿ(ಅನವಶ್ಯಕ ಶಬ್ದಗಳ ಅಡಚಣೆ) ANC ಇಯರ್‌ಫೋನ್‌ಗಳು ನೀಡುವಷ್ಟು ಉತ್ತಮವಾದ ಕರೆ ಅನುಭವವನ್ನು ನೀಡಲಿವೆ ಎಂದು Blaupunkt ಕಂಪೆನಿ ಹೇಳಿಕೊಂಡಿದೆ.
ಈ Blaupunkt BTW20 ಇಯರ್‌ಬಡ್ ಸಾಧನದಲ್ಲಿ ಡೀಪ್ ಬೇಸ್ ಆಯ್ಕೆಯ ಜೊತೆಗೆ ಉತ್ತಮ ಹೆಚ್‌ಡಿ ಧ್ವನಿ ಅನುಭವಕ್ಕಾಗಿ 10mm ಡೈನಾಮಿಕ್ ಡ್ರೈವರ್‌ಗಳನ್ನು ನೀಡಲಾಗಿದೆ. ಇವು 20 Hz (Min) - 20 KHz (Max) ಫ್ರೀಕ್ವೆನ್ಸಿ ರೆಸ್ಪಾನ್ಸ್ ರೆಂಜ್ ಹೊಂದಿವೆ. ಈ Blaupunkt BTW20 ಇಯರ್‌ಬಡ್ ಸಾಧನವು ಬ್ಯಾಟರಿ ಸಾಮರ್ಥ್ಯದಲ್ಲೂ ಒಂದು ಕೈ ಮೇಲಿದ್ದು, 30 ಗಂಟೆಗಳ ಒಟ್ಟು ಪ್ಲೇಬ್ಯಾಕ್ ಸಮಯ ಹೊಂದಿದೆ. ಈ ಸಾಧನವನ್ನು ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 30 ನಿಮಿಷಗಳವರೆಗೆ ರನ್‌ಟೈಮ್ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಚಾರ್ಜಿಂಗ್‌ಗಾಗಿ ಯುಎಸ್‌ಬಿ - C ಪೋರ್ಟ್ ನೀಡಲಾಗಿದೆ ಮತ್ತು ಆಕರ್ಷಕ ನೋಟ ಚಾರ್ಜಿಂಗ್ ಕೇಸ್‌ನಲ್ಲಿ ಇಯರ್‌ಬಡ್‌ಗಳ ಬ್ಯಾಟರಿ ಸ್ಥಿತಿಯನ್ನು ಎಲ್ಇಡಿ ಮೂಲಕ ತೋರಿಸುವ ಮತ್ತೊಂದು ವೈಶಿಷ್ಟ್ಯವಿದೆ.
Blaupunkt BTW20 ಇಯರ್‌ಬಡ್ ಬೆಲೆ ಎಷ್ಟು?
ದೇಶದಲ್ಲಿ ಇಯರ್‌ಬಡ್ ಮಾರುಕಟ್ಟೆಗೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟಿರುವ Blaupunkt ಕಂಪೆನಿ ತನ್ನ Blaupunkt BTW20 ಇಯರ್‌ಬಡ್ ಸಾಧನವನ್ನು ಕೇವಲ 1,299 ರೂ. ಗಳ ಆಫರ್ ಬೆಲೆಯಲ್ಲಿ ಮಾರಾಟಕ್ಕೆ ತಂದಿದೆ. ಈ ಇಯರ್‌ಬಡ್ಸ್ ಸಾಧನದ ಮೂಲ ದರ 3,299 ರೂ. ಆದರೆ, ಹೊಸದಾಗಿ ಲಾಂಚ್ ಮಾಡಲಾಗಿರುವ ಕಾರಣ 58 % ಡಿಸ್ಕೌಂಟ್ ನೀಡಲಾಗಿದ್ದು, ನೀವು 1,299 ರೂ. ಗಳಿಗೆ ಖರೀದಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಬಿಳಿ, ಕಪ್ಪು, ನೀಲಿ ಮತ್ತು ಹಸಿರು ಬಣ್ಣದ ನಾಲ್ಕು ಬಣ್ಣದ ಮಾದರಿಗಳಲ್ಲಿ ಬಿಡುಗಡೆಗೊಂಡಿರುವ ಈ ಹೊಸ Blaupunkt BTW20 ಇಯರ್‌ಬಡ್ ಸಾಧನವನ್ನು ಕಂಪೆನಿ ಅಧಿಕೃತ ವೆಬ್‌ಸೈಟ್ ಹಾಗೂ ಇ-ಕಾಮರ್ಸ್ ತಾಣ ಅಮೆಜಾನ್ ನಲ್ಲಿ ಈಗಾಗಲೇ ಮಾರಾಟಕ್ಕಿಡಲಾಗಿದೆ.
Blaupunkt Btw20 Is Here In India Check Out Its Top Features An Price.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm