ಬ್ರೇಕಿಂಗ್ ನ್ಯೂಸ್
13-12-22 09:30 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಸ್ಟ್ಯಾಂಡ್ ಅಲೋನ್ 5G ತಂತ್ರಜ್ಞಾನ ವ್ಯವಸ್ಥೆಯನ್ನು ತರಲು ಜಾಗತಿಕ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒನ್‌ಪ್ಲಸ್ ಮತ್ತು ದೇಶದ ಅತಿದೊಡ್ಡ ಟೆಲಿಕಾಂ ಬ್ರ್ಯಾಂಡ್ ಜಿಯೋ ಕಂಪೆನಿಗಳು ಕೈಜೊಡಿಸಿವೆ. ಒನ್‌ಪ್ಲಸ್ ಕಂಪೆನಿಯ ಇತ್ತೀಚಿನ ಒನ್‌ಪ್ಲಸ್ 10 ಸರಣಿ, ಒನ್‌ಪ್ಲಸ್ 9R, ಒನ್‌ಪ್ಲಸ್ 8 ಸರಣಿ ಸ್ಮಾರ್ಟ್‌ಫೋನ್‌ಗಳ ಜತೆಗೆ ನಾರ್ಡ್, ನಾರ್ಡ್ 2T, ನಾರ್ಡ್ 2, ನಾರ್ಡ್ CE, ನಾರ್ಡ್ CE 2 ಮತ್ತು ನಾರ್ಡ್ CE 2 ಲೈಟ್ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಜಿಯೋ ಟ್ರೂ 5G ತಂತ್ರಜ್ಞಾನದಿಂದ ಚಾಲಿತವಾಗಿದ್ದು, ಶೀಘ್ರದಲ್ಲೇ ಒನ್‌ಪ್ಲಸ್ 9 ಪ್ರೊ, ಒನ್‌ಪ್ಲಸ್ 9 ಮತ್ತು ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್‌ಗಳು ಕೂಡ ಜಿಯೋ ಟ್ರೂ 5G ನೆಟ್‌ವರ್ಕ್‌ಗೆ ಸಂಪರ್ಕ ಪಡೆಯುತ್ತವೆ ಎಂದು ಜಿಯೋ ಹಾಗೂ ಒನ್‌ಪ್ಲಸ್ ಕಂಪೆನಿಗಳು ಸೇರಿ ತಿಳಿಸಿವೆ
ಜಿಯೋ ಮತ್ತು ಒನ್‌ಪ್ಲಸ್ ತಂಡಗಳು ಭಾರತೀಯ ಗ್ರಾಹಕರಿಗೆ 5G ತಂತ್ರಜ್ಞಾನ ಹೆಚ್ಚು ಸಂಪರ್ಕಿಸುವಂತೆ ಮಾಡಲು ಬ್ಯಾಕ್‌ಎಂಡ್‌ನಲ್ಲಿ ಸಕ್ರಿಯವಾಗಿ ಒಟ್ಟಿಗೆ ಕೆಲಸ ಮಾಡುತ್ತಿವೆ. ಒನ್‌ಪ್ಲಸ್ ತನ್ನ 5G ತಂತ್ರಜ್ಞಾನ ಸೇವೆಗಳನ್ನು ವಿಸ್ತರಿಸುವುದನ್ನು ಮುಂದುವರಿಸಿದೆ. ಡಿಸೆಂಬರ್ 13 ರಿಂದ ಡಿಸೆಂಬರ್ 18 ರವರೆಗೆ ಒನ್‌ಪ್ಲಸ್ ವಾರ್ಷಿಕೋತ್ಸವದ ಮಾರಾಟದ ಅವಧಿಯಲ್ಲಿ ಅರ್ಹ ಒನ್‌ಪ್ಲಸ್ ಮತ್ತು ಜಿಯೋ 5G ಬಳಕೆದಾರರಿಗೆ ಒದಗಿಸಲಾಗುವ ರೂ. 10,800 ಮೌಲ್ಯದ ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನು ಗ್ರಾಹಕರು ಆನಂದಿಸಬಹುದು. ಈ ಅವಧಿಯಲ್ಲಿ ಮೊದಲ 1000 ಮಂದಿಗೆ ಹೆಚ್ಚುವರಿಯಾಗಿ ರೂ. 1499 ಮೌಲ್ಯದ ಪೂರಕ ರೆಡ್ ಕೇಬಲ್ ಕೇರ್ ಯೋಜನೆ ಮತ್ತು ರೂ. 399 ಮೌಲ್ಯದ ಜಿಯೋ ಸಾವನ್ ಪ್ರೊ ಯೋಜನೆ ದೊರೆಯಲಿದೆ ಎಂದು ಒನ್‌ಪ್ಲಸ್ ಕಂಪೆನಿ ತಿಳಿಸಿದೆ.
ಈ ಬಗ್ಗೆ ಒನ್‌ಪ್ಲಸ್ ಇಂಡಿಯಾ ಸಿಇಒ ಮತ್ತು ಭಾರತದ ವಲಯದ ಮುಖ್ಯಸ್ಥ ನವನಿತ್ ನಕ್ರಾ ಅವರು ಮಾತನಾಡಿ, “ಭಾರತದಲ್ಲಿರುವ ನಮ್ಮ ಸಮುದಾಯಕ್ಕೆ 5G ತಂತ್ರಜ್ಞಾನವನ್ನು ತರಲು ಜಿಯೋ ತಂಡದೊಂದಿಗೆ ಸಹಯೋಗ ಹೊಂದಲು ನಾವು ಸಂತೋಷ ಪಡುತ್ತೇವೆ. 5G ಜಾರಿಗೆ ಬರುವುದರೊಂದಿಗೆ ಒನ್‌ಪ್ಲಸ್ 5G ಸಂಶೋಧನೆ ಮತ್ತು ಅಭಿವೃದ್ಧಿ (R&D)ಯಲ್ಲಿ ನಾಯಕತ್ವ ಪ್ರದರ್ಶಿಸುತ್ತಿದೆ ಮತ್ತು ಜಗತ್ತಿನಾದ್ಯಂತ ಗ್ರಾಹಕರಿಗೆ 5G ಸಾಧನಗಳನ್ನು ತರಲು ಉದ್ಯಮದಲ್ಲಿ ವೇಗವಾಗಿ ಮುನ್ನಡೆದಿದೆ. ಒನ್‌ಪ್ಲಸ್ 2020ರಲ್ಲಿ ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳ ಮೊದಲ ಶ್ರೇಣಿಯನ್ನು ಬಿಡುಗಡೆ ಮಾಡಿತು, ಏಪ್ರಿಲ್ 2020ರಲ್ಲಿ ಒನ್‌ಪ್ಲಸ್ 8 ಸರಣಿಯೊಂದಿಗೆ. ಅಂದಿನಿಂದ, ನಮ್ಮ ಎಲ್ಲಾ ಸ್ಮಾರ್ಟ್‌ಫೋನ್‌ಗಳು 5G-ಸಿದ್ಧವಾಗಿಯೇ ಬರುತ್ತಿವೆ" ಎಂದು ಹೇಳಿದ್ದಾರೆ.
ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಸುನಿಲ್ ದತ್ ಅವರು, “ಭಾರತದಲ್ಲಿ ಗಟ್ಟಿಯಾದ 5G ಸಾಧನ ಪರಿಸರ ವ್ಯವಸ್ಥೆಯನ್ನು ಜಿಯೋಗೆ ಸಕ್ರಿಯಗೊಳಿಸಲು ನಮ್ಮೊಂದಿಗೆ ಕೆಲಸ ಮಾಡಿದ ಒನ್‌ಪ್ಲಸ್ ಕಾರ್ಯತಂತ್ರದ ಪಾಲುದಾರರಾಗಿರಲು ನಾವು ಸಂತೋಷಪಡುತ್ತೇವೆ. 5G ಸ್ಮಾರ್ಟ್‌ಫೋನ್‌ನ ನೈಜ ಶಕ್ತಿಯನ್ನು ಜಿಯೋದಂಥ ನಿಜವಾದ 5G ನೆಟ್‌ವರ್ಕ್‌ನಿಂದ ಮಾತ್ರ ಬಿಡುಗಡೆ ಮಾಡಬಹುದು, ಅದು ಸ್ವತಂತ್ರ 5G ನೆಟ್‌ವರ್ಕ್‌ನಂತೆ ರೂಪಿಸಿದೆ. ಒನ್‌ಪ್ಲಸ್ ಸಾಧನಗಳನ್ನು ಬಳಸುವ ಎಲ್ಲ ಜಿಯೋ ಬಳಕೆದಾರರು ಜಿಯೋ ಟ್ರೂ 5G ಅನ್ನು ಹೊಂದಿರುವ ಅಥವಾ ವೇಗವಾಗಿ ಹೊರತರುತ್ತಿರುವ ಪ್ರದೇಶಗಳಲ್ಲಿ ಜಿಯೋ ವೆಲ್‌ಕಮ್ ಆಫರ್ ಅಡಿಯಲ್ಲಿ ನಿಜವಾದ ಅನಿಯಮಿತ 5G ಇಂಟರ್‌ನೆಟ್ ಅನ್ನು ಪಡೆಯಲು ಸಾಧ್ಯವಾಗುತ್ತದೆ" ಎಂದು ಹೇಳಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC)ನಲ್ಲಿ ಜಿಯೋ ಮತ್ತು ಒನ್‌ಪ್ಲಸ್ ಮಧ್ಯದ ನವೀನ 5G ಸಹಯೋಗವನ್ನು ಭಾರತೀಯ ಗ್ರಾಹಕರು ಗಮನಿಸಿದರು, ಇದರಲ್ಲಿ ಅತ್ಯಾಕರ್ಷಕ 5G ಬಳಕೆ ಪ್ರಕರಣಗಳನ್ನು ಅರ್ಹ ಒನ್‌ಪ್ಲಸ್ ಸಾಧನಗಳೊಂದಿಗೆ ಜಿಯೋ ಬಳಕೆದಾರರಿಗೆ ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಕೌಂಟರ್‌ಪಾಯಿಂಟ್ ರೀಸರ್ಚ್ ಇಂಡಿಯಾ ಸ್ಮಾರ್ಟ್‌ಫೋನ್ ಮಾಡೆಲ್ ಟ್ರ್ಯಾಕರ್ 2022ರ ಮೂರನೇ ತ್ರೈಮಾಸಿಕದ ಪ್ರಕಾರ, ಒನ್‌ಪ್ಲಸ್ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೈಗೆಟುಕುವ ಪ್ರೀಮಿಯಂ ವಿಭಾಗದಲ್ಲಿ (ಭಾರತದ ರೂಪಾಯಿ ಲೆಕ್ಕದಲ್ಲಿ 30ರಿಂದ 45 ಸಾವಿರ) ಮುನ್ನಡೆಸಿದೆ, ಜತೆಗೆ ಭಾರತದಲ್ಲಿ 20 ಸಾವಿರದಿಂದ 30 ಸಾವಿರ ಬೆಲೆ ವಿಭಾಗದಲ್ಲಿ ಮೂರನೇ ತ್ರೈಮಾಸಿಕ 2022ರಲ್ಲಿ ರವಾನೆಗೆ ಸಂಬಂಧಿಸಿದಂತೆ ಮುನ್ನಡೆಸಿದೆ.
Oneplus Collaborates With Jio To Bring Stand Alone True 5g Tech Ecosystem In India.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm