ಬ್ರೇಕಿಂಗ್ ನ್ಯೂಸ್
14-12-22 06:55 pm Source: Vijayakarnataka ಡಿಜಿಟಲ್ ಟೆಕ್
ದೈನಂದಿನ ಪ್ರಿಂಟೌಟ್‌ಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಟೆಕ್ ದೈತ್ಯ ಸಂಸ್ಥೆ HP India ದೇಶದ ಮಾರುಕಟ್ಟೆಗೆ ತನ್ನ ಹೊಸ ಶ್ರೇಣಿಯ HP smart tank ಪ್ರಿಂಟರ್‌ಗಳನ್ನು ಪರಿಚಯಿಸಿದೆ. ಇಂದಿನ ಹೈಬ್ರಿಡ್ ಜಗತ್ತಿನಲ್ಲಿ ಭಾರತದಲ್ಲಿರುವ ಮನೆ ಮತ್ತು ಸಣ್ಣ ವ್ಯಾಪಾರಸ್ಥರು ಹೆಚ್ಚೆಚ್ಚು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಕೈಗೆಟುಕುವ ದರ, ಬಳಕೆ ಸ್ನೇಹಿ ಮತ್ತು ಸ್ಮಾರ್ಟ್ ಆದ ಪ್ರಿಂಟರ್ ಪರಿಹಾರಗಳನ್ನು ಬಯಸುತ್ತಿರುವ ಗೃಹ ಬಳಕೆ, ಅತಿ ಸಣ್ಣ ಮತ್ತು ಸಣ್ಣ ವ್ಯಾಪಾರಸ್ಥರಿಗಾಗಿ ಸ್ಮಾರ್ಟ್ ಟ್ಯಾಂಕ್ ಪ್ರಿಂಟರ್‌ಗಳನ್ನು ಬಿಡುಗಡೆ ಮಾಡಿರುವುದಾಗಿ HP India ಸಂಸ್ಥೆ ತಿಳಿಸಿದೆ. ಈ ಹೊಸ HP ಸ್ಮಾರ್ಟ್‌ಟ್ಯಾಂಕ್ ಪ್ರಿಂಟರ್ ಶ್ರೇಣಿಯ ಬೆಲೆ ಕೇವಲ 13326/ ರೂ. ಗಳಿಂದ ಆರಂಭವಾಗಿದ್ದು, ಈ ಕುರಿತಂತೆ ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.
ಹೊಸ HP smart tank ಪ್ರಿಂಟರ್ ಶ್ರೇಣಿಯು ಉನ್ನತೀಕರಿಸಿದ ಗ್ರಾಹಕ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಹೊಸ ಶ್ರೇಣಿಯ ಪ್ರಿಂಟರ್‌ಗಳು ತಡೆರಹಿತವಾದ ಸೆಟಪ್, ಸ್ಮಾರ್ಟ್ ವೈಶಿಷ್ಟ್ಯತೆಗಳು ಹಾಗೂ ಉತ್ತಮ ಸಂಪರ್ಕದ ಜೊತೆಗೆ ಬಂದಿವೆ. ಈ ಹೊಸ ಇಂಕ್ ಪ್ರಿಂಟರ್‌ಗಳಿಂದ 18,000 ಬ್ಲ್ಯಾಕ್ ಪುಟಗಳನ್ನು ಅಥವಾ 6,000 ಕಲರ್ ಪೇಜ್ ಗಳ ಪ್ರಿಂಟೌಟ್ ತೆಗೆದುಕೊಳ್ಳಬಹುದು. ಇವುಗಳಲ್ಲಿನ ಸೆಲ್ಫ್ ಹೀಲಿಂಗ್ ವೈಫೈ, ಸ್ಮಾರ್ಟ್ ಅಪ್ಲಿಕೇಶನ್ ಹಾಗೂ ಸ್ಮಾರ್ಟ್ ಅಡ್ವಾನ್ಸ್ ನಂತಹ ವಿನೂತನವಾದ ವೈಶಿಷ್ಟ್ಯತೆಗಳು ಗ್ರಾಹಕರಿಗೆ ಉತ್ತಮ ಬಳಕೆದಾರ ಸ್ನೇಹಿ ಅನುಭವವನ್ನು ನೀಡುತ್ತವೆ ಎಂದು HP India ಸಂಸ್ಥೆ ತಿಳಿಸಿದೆ. ಈ ಹೊಸ HP smart tank ಪ್ರಿಂಟರ್‌ಗಳು ಏನೆಲ್ಲಾ ಪ್ರಮುಖ ಪ್ರಯೋಜನಗಳನ್ನು ಹೊಂದಿವೆ ಎಂಬ ಪಟ್ಟಿಯನ್ನು ಸಹ ನೀಡಿದೆ.
ಹೊಸ HP smart tank ಶ್ರೇಣಿಯ ಪ್ರಮುಖ ಪ್ರಯೋಜನಗಳು:
ಸ್ಮಾರ್ಟ್ ಅನುಭವ: ಅತ್ಯುತ್ತಮ ದರ್ಜೆಯ HP ಸ್ಮಾರ್ಟ್ ಅಪ್ಲಿಕೇಶನ್ ದೈನಂದಿನ ಪ್ರಿಂಟ್, ಸ್ಕ್ಯಾನ್, ಜೆರಾಕ್ಸ್ ಮತ್ತು ಫ್ಯಾಕ್ಸ್ ಕಾರ್ಯಚಟುವಟಿಕೆಗಳನ್ನು ನಡೆಸಲು ಸೂಕ್ತ ಮಾರ್ಗದರ್ಶನ ನೀಡುವ ಬಟನ್‌ಗಳನ್ನು ಹೊಂದಿದೆ. ಐಡಿಗಳನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ ಮತ್ತು ಐಡಿ ಕಾಪಿ ಬಟನ್ ನೊಂದಿಗೆ ಪ್ರಿಂಟ್ ಅನ್ನು ನೀಡುತ್ತದೆ.
ಸೆಲ್ಫ್ ಹೀಲಿಂಗ್ ವೈಫೈ ಇದೆ ಮತ್ತು ಸ್ಮಾರ್ಟ್ ಆ್ಪ್ ಮತ್ತು ಸ್ಮಾರ್ಟ್ ಅಡ್ವಾನ್ಸ್ ನೊಂದಿಗೆ ಅತ್ಯುತ್ತಮ ಮೊಬಿಲಿಟಿಯನ್ನು ನೀಡುತ್ತದೆ. ಈ ಎರಡು ವೈಶಿಷ್ಟ್ಯತೆಗಳಿಂದಾಗಿ ಅತ್ಯಂತ ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹವಾದ ಸಂಪರ್ಕಗಳನ್ನು ಪಡೆಯುತ್ತದೆ. ಮನೆಯಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಕೆಲಸ ಮಾಡುವುದನ್ನು ಹಾಗೂ ಕಲಿಯುವುದನ್ನು ಮುಂದುವರಿಸುವ ಸಲುವಾಗಿ ಸೂಕ್ಷ್ಮ ಮಾಹಿತಿಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗುವ HP Wolf Essential Security ಸೌಲಭ್ಯವೂ ಇದರಲ್ಲಿದೆ.
ಹೆಚ್ಚಿನ ಪ್ರಮಾಣದ ಪ್ರಿಂಟ್ ಗಳ ಅಗತ್ಯತೆಗಳನ್ನು ಪೂರೈಸುವ ದಿಸೆಯಲ್ಲಿ ಈ ಸ್ಮಾರ್ಟ್ ಟ್ಯಾಂಕ್ ಶ್ರೇಣಿಯ ಪ್ರಿಂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ವೆಚ್ಚ ಪರಿಣಾಮಕಾರಿಯಾಗಿದ್ದು ಕಲರ್ ಮತ್ತು ಮೋನೋ ಪ್ರಿಂಟಿಂಗ್ ನೀಡುತ್ತದೆ. 18000 ಬ್ಲ್ಯಾಕ್ ಅಥವಾ 6,000 ಕಲರ್ ಪ್ರಿಂಟ್ ಗಳನ್ನು ತೆಗೆಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಶೇ.45 ಪೋಸ್ಟ್ ಕನ್ಸೂಮರ್ ರೀಸೈಕಲ್ಡ್ ಕಂಟೆಂಟ್ ಬಳಸಿಕೊಂಡು ಈ ಪ್ರಿಂಟರ್ ವಿನ್ಯಾಸಗೊಳಿಸಲಾಗಿದೆ EPEAT Silver ಮತ್ತು Energy Star ಪ್ರಮಾಣೀಕರಣವನ್ನು ಪಡೆದುಕೊಂಡಿದೆ. Energy ಉಳಿತಾಯ ಮಾಡುವ Auto On/Off ತಂತ್ರಜ್ಞಾನವನ್ನು ಒಳಗೊಂಡಿದೆ. ಇದಕ್ಕೆ ಬಳಕೆದಾರರಿಂದ ಯಾವುದೇ ಹೆಚ್ಚು ಪ್ರಯತ್ನಗಳ ಅಗತ್ಯ ಇರುವುದಿಲ್ಲ. ಇಂಕ್ ಮ್ಯಾನೇಜ್ಮೆಂಟ್ ಸುಸಜ್ಜಿತವಾಗಿದೆ. ಇದರಿಂದಾಗಿ ಸ್ಮಾರ್ಟ್ ಟ್ಯಾಂಕ್ ಪ್ರಿಂಟರ್ ಗಳನ್ನು ಸುಲಭ ಮತ್ತು ಅನುಕೂಲಕರವಾಗಿ ಮ್ಯಾನೇಜ್ ಮಾಡಬಹುದಾಗಿದೆ.
HP smart tank ಶ್ರೇಣಿ ಸಾಧನಗಳ ಬೆಲೆ ಮತ್ತು ಲಭ್ಯತೆ
·HP Smart Tank 580: 18848/ ರೂ.
·HP Smart Tank 520: 15980/ ರೂ.
·HP Smart Tank 210: 13326/ ರೂ.
''ಭಾರತದ ಆರ್ಥೀಕತೆಯ ಪ್ರಗತಿಗೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಸಹಕಾರಿಯಾಗಿವೆ. ಈ ಕ್ಷೇತ್ರದ ಉದ್ದಿಮೆಗಳು ದೇಶದ ಜಿಡಿಪಿಗೆ ಶೇ.30 ರಷ್ಟು ಕೊಡುಗೆ ನೀಡುತ್ತಿವೆ. ಎಂಎಸ್ಎಂಇಗಳು ದೇಶದ ಭವಿಷ್ಯದ ಬಗ್ಗೆ ಆಶಾವಾದಿಯಾಗಿವೆ ಮತ್ತು ಸ್ಪರ್ಧಾತ್ಮಕವಾದ ಪ್ರಯೋಜನವನ್ನು ನೀಡುವ ಸ್ಮಾರ್ಟ್ ತಂತ್ರಜ್ಞಾನದ ಪರಿಹಾರಗಳನ್ನು ಸದಾ ಹುಡುಕುತ್ತಿರುತ್ತವೆ. ಇಂತಹ ಉದ್ದಿಮೆಗಳಿಗೆ ನಮ್ಮ ಹೊಸ ಸ್ಮಾರ್ಟ್ ಟ್ಯಾಂಕ್ ಪ್ರಿಂಟರ್ ಗಳು ಸಹಕಾರಿಯಾಗಲಿವೆ. ಈ ಹೊಸ ಸ್ಮಾರ್ಟ್ ಟ್ಯಾಂಕ್ ಅನ್ನು ವಿಶೇಷವಾಗಿ ಸಣ್ಣ ವ್ಯವಹಾರಗಳು, ಉದ್ದಿಮೆಗಳು ಮತ್ತು ಮನೆಯಲ್ಲೇ ಕುಳಿತು ಹೆಚ್ಚು ಹೆಚ್ಚು ಪ್ರಿಂಟ್ ತೆಗೆಯಲು, ಹೆಚ್ಚು ಸ್ಮಾರ್ಟರ್ ಮತ್ತು ಕೈಗೆಟುಕುವ ದರದಲ್ಲಿ ಪ್ರಿಂಟಿಂಗ್ ಅನುಭವವನ್ನು ಬಯಸುವವರಿಗೆಂದೇ ವಿನ್ಯಾಸಗೊಳಿಸಲಾಗಿದೆ’’ ಎಂದು HP ಇಂಡಿಯಾ ಮಾರ್ಕೆಟ್ ನ ಪ್ರಿಂಟಿಂಗ್ ಸಿಸ್ಟಮ್ಸ್ ನ ಸೀನಿಯರ್ ಡೈರೆಕ್ಟರ್ ಸುನೀಶ್ ರಾಘವನ್ ಅವರು ಹೇಳಿದ್ದಾರೆ.
Hp Launches Its Smart Tank Printers In India Price, Features.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm