ಬ್ರೇಕಿಂಗ್ ನ್ಯೂಸ್
15-12-22 06:43 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಬಹುಬೇಡಿಕೆಯ ಸ್ಮಾರ್ಟ್‌ವಾಚ್‌ಗಳಲ್ಲಿ ಒಂದಾದ OnePlus ಕಂಪೆನಿಯ ಜನಪ್ರಿಯ Nord Watch ಬೆಲೆ ಇದೀಗ ಇಳಿಕೆಯಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಷ್ಟೇ ದೇಶದ ಮಾರುಕಟ್ಟೆಗೆ ಪರಿಚಯವಾಗಿರುವ Nord Watch ಬೆಲೆಯಲ್ಲಿ 500 ರೂ. ಇಳಿಕೆಯಾಗಿದ್ದು, ಇದೀಗ 4,999 ರೂ.ಗೆ ಬದಲಾಗಿ 4,499 ರೂ.ಗಳಿಗೆ Nord Watch ಸಾಧನವನ್ನು ಖರೀದಿಸಬಹುದು. ICICI ಕ್ರೆಡಿಟ್ ಕಾರ್ಡ್ ಗ್ರಾಹಕರು ಈ ಸ್ಮಾರ್ಟ್‌ವಾಚ್ ಮೇಲೆ ಹೆಚ್ಚುವರಿ 500 ರೂ. ರಿಯಾಯಿತಿ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.
OnePlus Nord Watch ಸಾಧನದ ವೈಶಿಷ್ಟ್ಯಗಳು
OnePlus Nord Watch ಸಾಧನವು 1.78-ಇಂಚಿನ HD (368x448 ಪಿಕ್ಸೆಲ್‌ಗಳು) AMOLED ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 60Hz ರಿಫ್ರೆಶ್ ರೇಟ್ ಸಾಮರ್ಥ್ಯ ಮತ್ತು 500 nits ವರೆಗಿನ ಬ್ರೈಟ್‌ನೆಸ್ ಸಾಮರ್ಥ್ಯದಲ್ಲಿದೆ . ಹುಡ್ ಅಡಿಯಲ್ಲಿ, SF32LB555V4O6 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಈ Nord Watch ಸಾಧನವು RTOS ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು OnePlus ಕಂಪೆನಿ ತಿಳಿಸಿದೆ.
OnePlus Nord Watch ಸಾಧನದ ಪ್ರಮುಖ ವೈಶಿಷ್ಟ್ಯಗಳಲ್ಲಿ, 3-ಆಕ್ಸಿಸ್ ಅಕ್ಸೆಲೆರೊಮೀಟರ್, ಆಂತರಿಕ ಜಿಪಿಎಸ್ ಬೆಂಬಲ, ಹೃದಯ ಬಡಿತ ಮತ್ತು ಒತ್ತಡದ ಮೇಲ್ವಿಚಾರಣೆ ಮತ್ತು ನಿದ್ರೆ ಟ್ರ್ಯಾಕಿಂಗ್ ನಂತಹ ವೈಶಿಷ್ಟ್ಯಗಳಿವೆ. ಈ ಸಾಧನವು 105 ಸ್ಪೋರ್ಟ್ಸ್ ಮೋಡ್‌ಗಳಿಗೆ ಬೆಂಬಲವನ್ನು ಹೊಂದಿದ್ದು, ರನ್ನಿಂಗ್ ಮತ್ತು ವಾಕಿಂಗ್ ಸಮಯ ಮತ್ತು ಪರಿಣಾಮಗಳನ್ನು ಸ್ವಯಂಚಾಲಿತವಾಗಿ ಟ್ರ್ಯಾಕ್ ಮಾಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ.
OnePlus Nord Watch ಸಾಧನದಲ್ಲಿ 10 ದಿನಗಳ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ 230mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಮ್ಯಾಗ್ನೆಟಿಕ್ ಚಾರ್ಜರ್ ಜೊತೆಗೆ ಬಂದಿರುವ ಈ ಸಾಧನವು ಒಂದು ವಾರದವರೆಗೆ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ದೈನಂದಿನ ನಡಿಗೆಯನ್ನು ಟ್ರ್ಯಾಕ್ ಮಾಡಲು ಹಾಗೂ ಯಾವುದೇ ಅಧಿಸೂಚನೆಗಳನ್ನು ಆನ್ ಮಾಡದೇ ಇದ್ದರೆ ಬ್ಯಾಟರಿ ಇನ್ನಷ್ಟು ಸಮಯ ಬಾಳಿಕೆ ಬರಲಿದೆ ಎನ್ನಲಾಗಿದೆ.
OnePlus Nord Watch ಸಾಧನದ ಸಂಪರ್ಕದ ಆಯ್ಕೆಯಲ್ಲಿ, ಇದು ಬ್ಲೂಟೂತ್ 5.2 ಸಂಪರ್ಕವನ್ನು ಹೊಂದಿದೆ. Android 6 ಮತ್ತು iOS 11 ನಂತರದ ಸಾಧನಗಳಲ್ಲಿ ಕಾರ್ಯನಿರ್ವಹಿಸುವ ಈ ಸಾಧನವು blood oxygen level (SpO2) ಮತ್ತು nonlinear vibration ವೈಬ್ರೆಷನ್ ಮೋಟಾರ್ ಹೊಂದಿರುವುನ್ನು ನಾವು ಗಮನಿಸಬಹುದು. ಇನ್ನು ಈ ಸ್ಮಾರ್ಟ್‌ವಾಚ್‌ನ ಬಲಭಾಗದಲ್ಲಿ ಪವರ್ ಬಟನ್ ನೀಡಿಲಾಗಿದ್ದು, ಪ್ರೀಮಿಯಂ ಲುಕ್ ಹೊಂದಿದೆ.
Oneplus Nord Watch Price Drops From Rs, 4999 To Rs, 4499.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm