ಬ್ರೇಕಿಂಗ್ ನ್ಯೂಸ್
03-01-23 06:46 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾದ Poco ಕಂಪೆನಿ ಇದು ತನ್ನ ಬಹುನಿರೀಕ್ಷಿತ Poco C50 ಸ್ಮಾರ್ಟ್‌ಫೋನನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ. Poco C-ಸರಣಿಯಲ್ಲಿ ಬಜೆಟ್ ಬೆಲೆಯ ಹೊಸ Poco C50 ಸ್ಮಾರ್ಟ್‌ಫೋನನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ Poco ಕಂಪೆನಿ ಸೋಮವಾರವಷ್ಟೇ ಬಹಿರಂಗಪಡಿಸಿತ್ತು. ಇದೀಗ ಹೊಸ Poco C50 ಸ್ಮಾರ್ಟ್‌ಫೋನಿನ ಅಧಿಕೃತ ವೈಶಿಷ್ಟ್ಯಗಗಳು ಮತ್ತು ಬೆಲೆಗಳನ್ನು ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಮೂಲಕ ಪ್ರಕಟಿಸಲಾಗಿದೆ. ಹಾಗಾದರೆ, ದೇಶದಲ್ಲಿಂದು ಬಿಡುಗಡೆಯಾಗಿರುವ ಹೊಸ Poco C50 ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಸಂಪೂರ್ಣ ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
Poco C50 ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಿರುವಂತೆ, ಹೊಸ Poco C50 ಸ್ಮಾರ್ಟ್‌ಫೋನ್ ವಾಟರ್ ಡ್ರಾಪ್ ನಾಚ್ ಹೊಂದಿರುವ HD+ ಗುಣಮಟ್ಟದ 6.52-ಇಂಚಿನ ಪೂರ್ಣ-ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ, ಇದರ ಡಿಸ್‌ಪ್ಲೇಯು 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿರುವುದು ಖಚಿತವಾಗಿದೆ. ಹುಡ್ ಅಡಿಯಲ್ಲಿ, ಮೀಡಿಯಾಟೆಕ್ ಹಿಲಿಯೋ A22 SoC ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಗೂ ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ, 3GB RAM ಮತ್ತು 32GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುವ ಈ Poco C50 ಸ್ಮಾರ್ಟ್‌ಫೋನಿನ ಆಂತರಿಕ ಮೆಮೊರಿಯನ್ನು SD ಕಾರ್ಡ್ ಸಹಾಯದಿಂದ 512GB ವರೆಗೆ ವಿಸ್ತರಿಸಲು ಸಹ ಅವಕಾಶವಿದೆ.
Poco C50 ಸ್ಮಾರ್ಟ್‌ಫೋನಿನಲ್ಲಿ AI ಜೊತೆಗೆ 8 ಮೆಗಾಪಿಕ್ಸೆಲ್ ಸಾಮರ್ಥ್ಯದ ಸಂವೇದಕವಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಸೆಲ್ಫಿಗಳಿಗಾಗಿ, 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಇದೆ. ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿದ್ದರೂ, ಇದರ ಹಿಂದಿನ ಮತ್ತು ಮುಂಭಾಗದ ಎರಡೂ ಕ್ಯಾಮೆರಾಗಳು 1080p ವೀಡಿಯೊಗಳನ್ನು 30fps ನಲ್ಲಿ ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿವೆ. ಇನ್ನು 10W ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ, 4G LTE, Wi-Fi 802.11/b/g/n, ಬ್ಲೂಟೂತ್ v5, GPS/ A-GPS, ಗ್ಲೋನಾಸ್, Beidou, ಮೈಕ್ರೋ-USB ಪೋರ್ಟ್, 3.5mm ಆಡಿಯೋ ಜ್ಯಾಕ್ ಮತ್ತು ರಿಯರ್ ಫಿಂಗರ್‌ಪ್ರಿಂಟ್ ಸೆನ್ಸಾರ್ ವೈಶಿಷ್ಟ್ಯಗಳು ಇದರಲ್ಲಿವೆ.
Poco C50 ಸ್ಮಾರ್ಟ್‌ಫೋನಿನ ಬೆಲೆ ಎಷ್ಟು?
ಮೊದಲೇ ಹೇಳಿದಂತೆ, ಹೊಸ Poco C50 ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗಳಲ್ಲಿ ದೇಶದಲ್ಲಿ ಬಿಡುಗಡೆಯಾಗಿದೆ. 2GB RAM + 32GB ಸ್ಟೋರೇಜ್ ಮಾದರಿಯ Poco C50 ಸ್ಮಾರ್ಟ್‌ಫೋನ್ 6,499 ರೂ. ಬೆಲೆಯಲ್ಲಿ ಬಿಡುಗಡೆಯಾಗಿದ್ದರೆ, ಇದರ 3GB + 32GB ಆವೃತ್ತಿಯು 7,299 ರೂ. ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದೆ. ಇನ್ನು ಇದೇ ಜನವರಿ 10 ರಿಂದ ದೇಶದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕೆ ಬರಲಿರುವ ಈ ಹೊಸ Poco C50 ಸ್ಮಾರ್ಟ್‌ಫೋನನ್ನು ಗ್ರಾಹಕರು ಕಂಟ್ರಿ ಗ್ರೀನ್ ಮತ್ತು ರಾಯಲ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದು. ನೀವು ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಹುಡುಕುತ್ತಿದ್ದರೆ ಇದು ಯೋಗ್ಯ ಆಯ್ಕೆ ಎನ್ನಬಹುದು.
Poco Launches C50 With 8mp Ai Dual Camera From Rs 6499 In India.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm