ಬ್ರೇಕಿಂಗ್ ನ್ಯೂಸ್
07-01-23 07:00 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮಾರುಕಟ್ಟೆಗೆ ಇತ್ತೀಚಿಗಷ್ಟೇ Fire-Boltt rocket ಎಂಬ ಸ್ಮಾರ್ಟ್‌ವಾಚ್ ಸಾಧನವನ್ನು ಪರಿಚಯಿಸಿದ್ದ ಜನಪ್ರಿಯ ವೇರಿಯಬಲ್ ಟೆಕ್ ಕಂಪೆನಿ Fire-Boltt ಇದೀಗ ಮತ್ತೊಂದು ಬಜೆಟ್ ಬೆಲೆಯ ಸ್ಮಾರ್ಟ್‌ವಾಚ್ ಒಂದನ್ನು ಪರಿಚಯಸಿದೆ. ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ವಾಚ್ ಒಂದನ್ನು ಹುಡುಕುತ್ತಿರುವ ಯುವ ಗ್ರಾಹಕರಿಗಾಗಿ Fire-Boltt Ninja Pro Plus ಎಂಬ ಹೆಸರಿನಲ್ಲಿ ಈ ಹೊಸ ಸ್ಮಾರ್ಟ್‌ವಾಚ್ ಸಾಧನವನ್ನು ಬಿಡುಗಡೆಗೊಳಿಸಲಾಗಿದ್ದು, ಇದು ಬ್ಲೂಟೂತ್ ಕಾಲಿಂಗ್ ಫೀಚರ್ ಮತ್ತು 120 ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿರುವ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ನೂತನ Fire-Boltt Ninja Pro Plus ಸ್ಮಾರ್ಟ್‌ವಾಚ್ ಸಾಧನ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
Fire-Boltt Ninja Pro Plus ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳು.
ನೂತನ Fire-Boltt Ninja Pro Plus ಸ್ಮಾರ್ಟ್‌ವಾಚ್ ಸಾಧನವು 240 x 286 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 1.83-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ ಹಾಗೂ IP67-ಪ್ರಮಾಣೀಕೃತ ನೀರು ಮತ್ತು ಧೂಳು ನಿರೋಧಕ ಶಕ್ತಿಯೊಂದಿಗೆ ಬಂದಿದೆ. ಡ್ಯುಯಲ್ ಥೀಮ್‌ಗಳು ಮತ್ತು ಬಹು ವಾಚ್ ಫೇಸ್‌ಗಳೊಂದಿಗೆ ಬಂದಿರುವ ಈ ಸ್ಮಾರ್ಟ್‌ವಾಚ್ ಸಾಧನವು ಬಳಕೆದಾರರ ಆಯ್ಕೆ ಮತ್ತು ಉಡುಪಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಲು ಅನುಮತಿಸುತ್ತದೆ ಮತ್ತು ಸ್ಪಷ್ಟ ದೃಶ್ಯಗಳನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೇ, ಈ ಸ್ಮಾರ್ಟ್‌ವಾಚ್ ಸಾಧನವು ಬಳಕೆದಾರರಿಗೆ ವಾಯ್ಸ್ ಆಕ್ಟಿವ್ ಅಸಿಸ್ಟೆಂಟ್ ಸಹಾಯದಿಂದ ಹಲವಾರು ವೈಶಿಷ್ಟ್ಯಗಳನ್ನು ಸರ್ಚ್ ಮಾಡಲು, ಲಿಸ್ಟ್‌ಗಳನ್ನು ಮಾಡಲು, ರಿಮೈಂಡರ್‌ಗಳನ್ನು ಸೆಟ್ ಮಾಡುವುದಕ್ಕೆ ಅವಕಾಶ ನೀಡಲಿದೆ ಎಂದು ಕಂಪೆನಿ ತಿಳಿಸಿದೆ. .
ಇನ್ನು ಈ Fire-Boltt Ninja Pro Plus ಸ್ಮಾರ್ಟ್‌ವಾಚ್ ಸಾಧನದ ಹೆಲ್ತ್ ಫೀಚರ್‌ಗಳಲ್ಲಿ Spo2 ಮಾನಿಟರಿಂಗ್, ಹೃದಯ ಬಡಿತ ಟ್ರ್ಯಾಕಿಂಗ್, ಸ್ಲೀಪ್ ಮಾನಿಟರಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. ಬಳಕೆದಾರರಿಗೆ ಕ್ಯಾಮರಾ, ಸಂಗೀತ, ಹವಾಮಾನ ನವೀಕರಣಗಳು ಮತ್ತು ಹೆಚ್ಚಿನದನ್ನು ನಿಯಂತ್ರಿಸಲು ಅನುಮತಿಸುತ್ತದೆ. ಬ್ಲೂಟೂತ್ ಕರೆಗಳನ್ನು ಬೆಂಬಲವನ್ನು ಹೊಂದಿರುವ ಈ ಸ್ಮಾರ್ಟ್‌ವಾಚ್ ಕಾಲ್‌ಗಳನ್ನು ರಿಸಿವ್ ಮಾಡುವುದಕ್ಕೆ ಮತ್ತು ಕಾಲ್ ಮಾಡುವುದಕ್ಕೆ ಅನುಮತಿಸಲಿದೆ. ಉಳಿದಂತೆ, ಟೈಮ್‌ಪೀಸ್ ಕ್ಯಾಮೆರಾ ಕಂಟ್ರೋಲ್, ಮ್ಯೂಸಿಕ್ ಕಂಟ್ರೋಲ್ ಮತ್ತು ವೆದರ್ ಅಪ್‌ಡೇಟ್‌ಗಳನ್ನು ಸಹ ನೀಡಲಿರುವ ಈ ಸ್ಮಾರ್ಟ್‌ವಾಚ್ ಸಾಧನವು ಸುಲಭವಾಗಿ ಕಾಲ್ ಮಾಡುವಂತಹ ಡಯಲ್ ಪ್ಯಾಡ್, ಕಾಲ್ ಹಿಸ್ಟರಿ ಮತ್ತು ಕಂಟ್ಯಾಕ್ಟ್‌ಗಳನ್ನು ಸಿಂಕ್ ಮಾಡುವ ಫೀಚರ್ಸ್‌ಗಳನ್ನು ಸಹ ಹೊಂದಿದೆ.
![]()
Fire-Boltt Ninja Pro Plus ಸ್ಮಾರ್ಟ್‌ವಾಚ್
ಮೊದಲೇ ಹೇಳಿದಂತೆ, ನೂತನ Fire-Boltt Ninja Pro Plus ಸ್ಮಾರ್ಟ್‌ವಾಚ್ ಸಾಧನವು ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿದ್ದು, 1,799 ರೂ. ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಕಪ್ಪು, ನೀಲಿ, ಹಸಿರು, ಗೋಲ್ಡ್ ಬ್ಲಾಕ್, ಪಿಂಕ್, ಸಿಲ್ವರ್ ಮತ್ತು ಡಾರ್ಕ್ ಗ್ರೇ ಸೇರಿದಂತೆ ಹಲವಾರು ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ವಾಚ್ ಸಾಧನವನ್ನು ಅಮೆಜಾನ್ ಇ-ಕಾಮರ್ಸ್ ತಾಣ ಮತ್ತು ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು.
Fire-Boltt Launches Ninja Pro Plus Smartwatch With Bluetooth Calling.
11-09-26 02:59 pm
HK News Staffer
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm