ಬ್ರೇಕಿಂಗ್ ನ್ಯೂಸ್
13-01-23 07:42 pm Source: Vijayakarnataka ಡಿಜಿಟಲ್ ಟೆಕ್
2023ರ ಹೊಸ ವರ್ಷದ ಆರಂಭ ಮತ್ತು ಗಣರಾಜ್ಯ ದಿನ ಕೊಡುಗೆಗಳಿಂದಾಗಿ ಹೊಸ iPhone 14 ಸ್ಮಾರ್ಟ್‌ಫೋನ್ ಸಾಧನವನ್ನು ಖರೀದಿಸಲು ಇಚ್ಚಿಸುವ ಗ್ರಾಹಕರಿಗೆ ಸುಗ್ಗಿಕಾಲ ಶುರುವಾಗಿದೆ. ಅಮೆಜಾನ್ ಸಂಸ್ಥೆ 2023ರ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟವನ್ನು ಘೋಷಿಸಿದ ಕೆಲ ಸಮಯದಲ್ಲಿ ಪ್ರತಿಸ್ಪರ್ಧಿ ಸಂಸ್ಥೆ Flipkart ಬಹುಬೇಡಿಕೆಯ iPhone 14 ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳನ್ನು ಒದಗಿಸಿದೆ. ಇದೀಗ Flipkart ಒದಗಿಸಿರುವ ಕೊಡುಗೆಗಳಿಂದಾಗಿ 79,900 ರೂ. ಬೆಲೆಯ ಬೇಸಿಕ್ iPhone 14 ಸ್ಮಾರ್ಟ್‌ಫೋನ್ ಸಾಧನವನ್ನು ಕೇವಲ 47,990 ರೂ. ಬೆಲೆಯಲ್ಲಿ ಖರೀದಿಸಬಹುದು. ಹಾಗಾದರೆ, Flipkart ತಾಣದಲ್ಲಿ ಬೇಸಿಕ್ iPhone 14 ಸ್ಮಾರ್ಟ್‌ಫೋನ್ ಸಾಧನ ಮೇಲೆ ಲಭ್ಯವಿರುವ ಕೊಡುಗೆಗಳು ಯಾವುವು ನೋಡೋಣ ಬನ್ನಿ.
ನಾವೆಲ್ಲರೂ ತಿಳಿದಿರುವಂತೆ, ದೇಶದಲ್ಲಿ iPhone 14 ಸರಣಿಯಲ್ಲಿನ ಬೇಸಿಕ್ ಸ್ಮಾರ್ಟ್‌ಫೋನ್ 79,900 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಆದರೆ, ಇದೀಗ Flipkart ತಾಣದಲ್ಲಿ ಶೇಕಡಾ 5 ರಷ್ಟು ರಿಯಾಯಿತಿಯೊಂದಿಗೆ 73,990 ರೂ. ಬೆಲೆಯಲ್ಲಿ ಮಾರಾಟಕ್ಕಿಡಲಾಗಿದೆ. ಜೊತೆಗೆ 23,000 ವರೆಗೆ ವಿನಿಮಯ ರಿಯಾಯಿತಿ ಮತ್ತು ಆಯ್ದ ಸ್ಮಾರ್ಟ್‌ಫೋನ್‌ಗಳ ವಿನಿಮಯದ ಮೇಲೆ 3,000 ರೂ. ರಿಯಾಯಿತಿಯನ್ನು ಒದಗಿಸಲಾಗಿದೆ. ಈ ಎಲ್ಲಾ ರಿಯಾಯಿತಿಗಳಿಂದಾಗಿ ಬೇಸಿಕ್ iPhone 14 ಸಾಧನದ ಬೆಲೆ 47,990 ರೂ.ಗೆ ಇಳಿಕೆಯಾಗುತ್ತದೆ. ಇಷ್ಟೇ ಅಲ್ಲದೇ, 2023ರ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಂತೆಯೇ Flipkart ಸಂಸ್ಥೆ ಕೂಡ ರಿಪಬ್ಲಿಕ್ ಡೇ ಸೇಲ್ ಆರಂಭಿಸುವ ಸೂಚನೆ ಇದ್ದು, ಮತ್ತಷ್ಟು ಬ್ಯಾಂಕ್ ರಿಯಾಯಿತಿ ಕೊಡುಗೆಗಳು ಸಹ ದೊರೆಯುವ ನಿರೀಕ್ಷೆಯಿದೆ.
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2023 ಸೇಲ್
ಭಾರತದ ಅತಿದೊಡ್ಡ ಇ-ಕಾಮರ್ಸ್ ಜಾಲತಾಣ Amazon ಸಂಸ್ಥೆ ದೇಶದಲ್ಲಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ (Republic Day Sale 2023) ಮಾರಾಟದ ದಿನಾಂಕವನ್ನು ಪ್ರಕಟಿಸಿದೆ. ಇದೇ ಜನವರಿ 14 ರಿಂದ ದೇಶದಲ್ಲಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟವು ಆರಂಭವಾಗಲಿದ್ದು, ಜನವರಿ 14 ರಂದು Amazon prime ಗ್ರಾಹಕರಿಗೆ ಮತ್ತು ಜನವರಿ 15 ರಿಂದ ಜನವರಿ 20 ರವರೆಗೆ ಎಲ್ಲಾ ಸಾಮಾನ್ಯ ಬಳಕೆದಾರರು ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದ ಕೊಡುಗೆಗಳನ್ನು ಪಡೆಯಬಹುದು. ಈ ಮಾರಾಟದ ಸಮಯದಲ್ಲಿ ಎಲ್ಲಾ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಹಲವಾರು ಗ್ಯಾಜೆಟ್‌ಗಳು ಸೇರಿದಂತೆ ತನ್ನೆಲ್ಲಾ ಉತ್ಪನ್ನಗಳ ಮೇಲೆ ಭರ್ಜರಿ ಕೊಡುಗೆಗಳನ್ನು ಒದಗಿಸುವುದಾಗಿ ಅಮೆಜಾನ್ ಸಂಸ್ಥೆ ತಿಳಿಸಿದೆ.
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದ ಸಮಯದಲ್ಲಿ Apple, OnePlus ಮತ್ತು Samsung ಸೇರಿದಂತೆ ಇತರ ಹಲವಾರು ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಅಮೆಜಾನ್ ದೊಡ್ಡ ರಿಯಾಯಿತಿಗಳನ್ನು ನೀಡಲಿದೆ. ಇಷ್ಟೇ ಅಲ್ಲದೇ, ಈ ಮಾರಾಟದ ವೇಳೆ ಬ್ಯಾಂಕ್ ಆಫ್ ಇಂಡಿಯಾ ಪಾಲುದಾರಿಕೆಯ ಜೊತೆಗೆ ಹೆಚ್ಚುವರಿ 10% ಪ್ರತಿಶತ ತ್ವರಿತ ರಿಯಾಯಿತಿ ಸಹ ದೊರೆಯುವುದರಿಂದ, SBI ಗ್ರಾಹಕರು ಹೆಚ್ಚು ಕೊಡುಗೆಗಳನ್ನು ಪಡೆಯಲಿದ್ದಾರೆ ಎಂದು ಅಮೆಜಾನ್ ಸಂಸ್ಥೆ ಹೇಳಿದೆ. ಅಮೆಜಾನ್ ಇಲ್ಲಿ ನಿಖರವಾದ ಡೀಲ್‌ಗಳನ್ನು ಬಹಿರಂಗಪಡಿಸದಿದ್ದರೂ ಸಹ ಐಫೋನ್ 13 ಮತ್ತು ಐಫೋನ್ 14 ಸೇರಿದಂತೆ ಆಪಲ್ ಐಫೋನ್‌ಗಳು ಈ ಮಾರಾಟದ ಸಮಯದಲ್ಲಿ ಭಾರೀ ರಿಯಾಯಿತಿಯಲ್ಲಿ ಮಾರಾಟವಾಗಲಿದೆ ಎಂದು ಟೀಸರ್ ಸುಳಿವು ನೀಡಿದೆ.
2023ರ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆಯೋಜನೆಯಾಗಿರುವ ಐದು ದಿನಗಳ ಮಾರಾಟದಲ್ಲಿ Apple, iQoo, OnePlus, Samsung, Realme ಮತ್ತು Xiaomi ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ 40% ರಿಯಾಯಿತಿ ದೊರೆಯಲಿದೆ ಎಂದು Amazon ಸಂಸ್ಥೆ ಹೇಳಿದೆ. ಪ್ರಸ್ತುತ, ಮೈಕ್ರೊಸೈಟ್‌ಗಳ ಮೂಲಕ iphone 13, Realme Narzo 50 Pro 5G, Redmi A1, ಮತ್ತು OnePlus Nord CE 2 Lite 5G ಸ್ಮಾರ್ಟ್‌ಫೋನ್‌ಗಳು ಬೆಲೆ ರಿಯಾಯಿತಿ ಪಡೆಯಲಿವೆ ಎಂದು ಸೂಚಿಸಲಾಗಿದೆ. ಇಷ್ಟೇ ಅಲ್ಲದೇ, ಈ ಮಾರಾಟದಲ್ಲಿ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಇಯರ್‌ಬಡ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿ ಇರಲಿದೆ ಎಂದು Amazon ಸಂಸ್ಥೆ ತಿಳಿಸಿದೆ.
Grab The Deal Iphone 14 Gets Price Cut From Rs 79,990 To Rs 47,990 On Flipkart.
03-02-25 10:38 pm
HK News Desk
BY Vijayendra: ನಾನೇ ಮತ್ತೆ ಅಧ್ಯಕ್ಷನಾಗುತ್ತೇನೆ,...
03-02-25 08:36 pm
ಸಿದ್ದರಾಮಯ್ಯ ಬೇನಾಮಿ ಹೆಸರಲ್ಲಿ ಅಕ್ರಮ ಆಸ್ತಿ ಮಾಡಿದ...
03-02-25 08:20 pm
BJP Shivaraj Tangadagi, BJP: 'ಶುಭವಾಗಲಿ' ಬರೆಯಲ...
03-02-25 03:18 pm
CM Siddaramaiah: ದಿಢೀರ್ ಮಂಡಿ ನೋವು ; ಸಿಎಂ ಸಿದ್...
02-02-25 02:31 pm
03-02-25 11:01 pm
HK News Desk
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
ಎರ್ನಾಕುಲಂ ಜಿಲ್ಲೆಯಲ್ಲಿ ಒಂದೇ ದಿನ 27 ಬಾಂಗ್ಲಾ ದೇಶ...
01-02-25 09:35 pm
2025ರ ಕೇಂದ್ರ ಬಜೆಟ್ ಗುಂಡಿನ ಗಾಯಕ್ಕೆ ಹಾಕಿದ ಬ್ಯಾಂ...
01-02-25 05:51 pm
03-02-25 07:38 pm
Mangalore Correspondent
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
Kotekar Bank Robbery, Murgan D Devar: ಕೋಟೆಕಾರ...
01-02-25 02:32 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am