ಬ್ರೇಕಿಂಗ್ ನ್ಯೂಸ್
14-01-23 09:09 pm Source: Vijayakarnataka ಡಿಜಿಟಲ್ ಟೆಕ್
ದೇಶದ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಜನಪ್ರಿಯ ವೇರಿಯಬಲ್ ಟೆಕ್ ಬ್ರ್ಯಾಂಡ್ Fire Boltt ತನ್ನ ಮತ್ತೊಂದು ಸ್ಮಾರ್ಟ್‌ವಾಚ್ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ದೇಶದ ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡು Fire Boltt Supernova ಎಂಬ ಹೆಸರಿನಲ್ಲಿ ಈ ಹೊಸ ಸ್ಮಾರ್ಟ್‌ವಾಚ್ ಸಾಧನವನ್ನು ಪರಿಚಯಿಸಲಾಗಿದ್ದು, ಈ ಸ್ಮಾರ್ಟ್‌ವಾಚ್ ಪ್ರೀಮಿಯಂ ಲುಕ್, ಅಮೋಲೆಡ್ ಡಿಸ್‌ಪ್ಲೇ, ಬ್ಲೂಟೂತ್ ಕಾಲ್ ಮತ್ತು ದೀರ್ಘ ಬ್ಯಾಟರಿ ಬಾಳಿಕೆ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ದೇಶದಲ್ಲಿ ನೂತನವಾಗಿ ಬಿಡುಗಡೆಯಾಗಿರುವ ಈ ಹೊಸ Fire Boltt Supernova ಸ್ಮಾರ್ಟ್‌ವಾಚ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
Fire Boltt Supernova ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳು.
ದೇಶದಲ್ಲಿ ಬಿಡುಗಡೆಯಾಗಿರುವ ನೂತನ Fire Boltt Supernova ಸ್ಮಾರ್ಟ್‌ವಾಚ್ ಸಾಧನವು ಟೆಕ್ಸ್ಚರ್ಡ್ ಸ್ಟ್ರಾಪ್ ಮತ್ತು ನಯವಾದ ಲೋಹೀಯ ಬಾಡಿ ಹೊಂದಿರುವ ಸ್ಕ್ವೇರ್ ಡಿಸೈನ್ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಈ ಸಾಧನದಲ್ಲಿ 1.78 ಇಂಚಿನಷ್ಟು ದೊಡ್ಡದಾದ ಆಲ್‌ವೇಸ್ ಆನ್ ಅಮೋಲೆಡ್ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಇದು 368 x 448 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಜೊತೆಗೆ 500nits ಬ್ರೈಟ್‌ನೆಸ್ ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ Fire Boltt Supernova ಸ್ಮಾರ್ಟ್‌ವಾಚ್ ಸಾಧನದಲ್ಲಿ ವೈಯುಕ್ತೀಕರಿಸಿಕೊಳ್ಳಬಹುದಾದ 8 ವಾಚ್ ಫೇಸ್‌ಗಳು, ಸುಲಭ ನ್ಯಾವಿಗೇಷನ್ ಉದ್ದೇಶಕ್ಕೆ ರೊಟೇಟ್ ಕ್ರೌನ್ ಬಟನ್, ತಡೆರಹಿತ ಕರೆ ಅನುಭವಕ್ಕಾಗಿ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.
ಬಳಕೆದಾರರ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 123 ಕ್ಕೂ ವಿವಿಧ ಸ್ಪೋರ್ಟ್ಸ್ ಮೋಡ್ ಆಯ್ಕೆಗಳನ್ನು ಹೊಂದಿರುವ ಈ Fire Boltt Supernova ಸ್ಮಾರ್ಟ್‌ವಾಚ್, ತ್ವರಿತ ಮತ್ತು ಸುಗಮ ಸಂಪರ್ಕಕ್ಕಾಗಿ ಬ್ಲೂಟೂತ್ 5.0 ಆವೃತ್ತಿಯನ್ನು ಬೆಂಬಲಿಸಲಿದೆ. ಜೊತೆಗೆ SPO2, ಡೈನಾಮಿಕ್ ಹೃದಯ ಬಡಿತ, ನಿದ್ರೆ ಮತ್ತು ಇನ್ನಿತರೆ ಆರೋಗ್ಯ ಸಂಬಂಧಿ ವಿಷಯಗಳನ್ನು ಟ್ರ್ಯಾಕ್ ಮಾಡುವ ಈ ಸಾಧನವು ಇನ್‌ಬಿಲ್ಟ್ ವಾಯ್ಸ್ ಅಸಿಸ್ಟೆಂಟ್ ಫೀಚರ್ ಹೊಂದಿದೆ. ಇನ್ನುಳಿದಂತೆ, ಐಓಎಸ್ ಹಾಗೂ ಆಂಡ್ರಾಯ್ಡ್ ಎರಡಕ್ಕೂ ಸಹ ಹೊಂದಿಕೊಳ್ಳುವ ಈ ಸ್ಮಾರ್ಟ್‌ವಾಚ್ ೫ ದಿನಗಳವರೆಗೆ ಬಾಳಿಕೆ ಬರುವ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಮತ್ತು ನೀರು, ಬಿರುಕು ಮತ್ತು ಧೂಳು ನಿರೋಧಕ ರೆಸಿಸ್ಟೆಂಟ್‌ಗಾಗಿ IP67 ರೇಟಿಂಗ್ ಹೊಂದಿರುವ ಈ ಸಾಧನದಲ್ಲಿ ನೋಟಿಫಿಕೇಶನ್‌ಗಳನ್ನು ಸಹ ವೀಕ್ಷಿಸಬಹುದು.
Fire Boltt Supernova ಸ್ಮಾರ್ಟ್‌ವಾಚ್ ಬೆಲೆ ಎಷ್ಟು?
Fire Boltt ಕಂಪೆನಿಯ ಸಹ-ಸಂಸ್ಥಾಪಕರಾದ ಆಯುಷಿ ಮತ್ತು ಅರ್ನವ್ ಕಿಶೋರ್ ಅವರು ತಮ್ಮ ಹೊಸ Supernova ಸ್ಮಾರ್ಟ್‌ವಾಚ್ ಫ್ಯಾಷನ್ ಮತ್ತು ತಂತ್ರಜ್ಞಾನದ ಪರಿಪೂರ್ಣ ಸಮ್ಮಿಳನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇಶದ ಯುವ ಜನತೆಗಾಗಿ ಈ ಹೊಸ ಸಾಧನವನ್ನು ಕೇವಲ 3,499 ರೂ.ಗಳ ಆಫರ್ ಬೆಲೆಯಲ್ಲಿ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ Fire Boltt ಕಂಪೆನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕೆ ಬಂದಿರುವ ಈ ಹೊಸ Fire Boltt Supernova ಸ್ಮಾರ್ಟ್‌ವಾಚ್ ಸಾಧನವು ಹಳದಿ, ಕಿತ್ತಳೆ ಮತ್ತು ನೀಲಿ, ಕಪ್ಪು, ತಿಳಿ ಚಿನ್ನದ ಬಣ್ಣದಂತಹ ಹಲವು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
Fire Boltt Supernova With Bluetooth Calling Feature, Launched In India.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm