ಬ್ರೇಕಿಂಗ್ ನ್ಯೂಸ್
17-01-23 07:46 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಗೆ ಇಂದು Tecno ಕಂಪೆನಿಯ ಪ್ರೀಮಿಯಂ 'Tecno Phantom X2 Pro 5G ಸ್ಮಾರ್ಟ್‌ಫೋನ್ ಎಂಟ್ರಿ ನೀಡಿದೆ. ಈ ತಿಂಗಳ ಆರಂಭದಲ್ಲಿ ದೇಶದಲ್ಲಿ Tecno Phantom X2 5G ಸ್ಮಾರ್ಟ್‌ಫೋನ್ ಪರಿಚಯಿಸಿದ್ದ Tecno ಕಂಪೆನಿ ಇಂದು ಇದರ ಪ್ರೊ ಮಾದರಿಯಾಗಿ ಹೊಸ Tecno Phantom X2 Pro 5G ಸ್ಮಾರ್ಟ್‌ಫೋನನ್ನು ಬಿಡುಗಡೆಗೊಳಿಸಿದ್ದು, ಈ ಹೊಸ ಸ್ಮಾರ್ಟ್‌ಫೋನ್ MediaTek Dimensity 9000 ಪ್ರೊಸೆಸರ್, 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 6.8-ಇಂಚಿನ ಫುಲ್ HD+ 120Hz AMOLED ಡಿಸ್‌ಪ್ಲೇಯಂತಹ ಪ್ರೀಮಿಯಂ ವೈಶಿಷ್ಟ್ಯಗಳ ಜೊತೆಗೆ ಬಾಕ್ಸ್‌ನಲ್ಲಿ 45W ಚಾರ್ಜರ್‌ನೊಂದಿಗೆ ಬಿಡುಗಡೆಯಾಗಿದೆ. ಹಾಗಾದರೆ, ಹೊಸ Tecno Phantom X2 Pro 5G ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
Tecno Phantom X2 Pro 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ನೂತನ Tecno Phantom X2 Pro 5G ಸ್ಮಾರ್ಟ್‌ಫೋನ್ 6.8-ಇಂಚಿನ ಫುಲ್-HD+ ಕರ್ವ್ಡ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್ ವೈಶಿಷ್ಟ್ಯಗಳ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಪಡೆದಿದೆ. ಹುಡ್ ಅಡಿಯಲ್ಲಿ, 12GB RAM ಮತ್ತು 256GB ಮೆಮೊರಿಯೊಂದಿಗೆ ಜೋಡಿಸಲಾದ ಶಕ್ತಿಯುತ MediaTek Dimensity 9000 ಪ್ರೊಸೆಸರ್ ಮತ್ತು Mali-G710 MC10 GPU ಅಳವಡಿಸಲಾಗಿರುವ ಈ ಸ್ಮಾರ್ಟ್‌ಫೋನಿನಲ್ಲಿ ಆಂತರಿಕ ಮೆಮೊರಿಯನ್ನು 5GB ವರೆಗೆ ವರ್ಚುವಲ್ RAM ಸ್ವಯಂ ಹೆಚ್ಚಿಸಿಕೊಳ್ಳಬಹುದಾದ 'ಮೆಮೊರಿ ಫ್ಯೂಷನ್' ವೈಶಿಷ್ಟ್ಯವಿದೆ. ಬ್ಯಾಟರಿ ವಿಭಾಗದಲ್ಲಿ, ಬಾಕ್ಸ್‌ನಲ್ಲಿ 45W ಚಾರ್ಜರ್‌ನೊಂದಿಗೆ ಈ ಸ್ಮಾರ್ಟ್‌ಫೋನ್ 5,160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, ಹೊಸ Tecno Phantom X2 Pro 5G ಸ್ಮಾರ್ಟ್‌ಫೋನ್ ಇಮ್ಯಾಜಿಕ್ 790 ಇಮೇಜ್ ಸಿಗ್ನಲ್ ಪ್ರೊಸೆಸರ್ (ISP) ಸಾಮರ್ಥ'ದ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು 50-ಮೆಗಾಪಿಕ್ಸೆಲ್ ಪ್ರತಿಫಲಿತ ಪೋಟ್ರೇಟ್ ಲೆನ್ಸ್, ಜೊತೆಗೆ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 13-ಮೆಗಾಪಿಕ್ಸೆಲ್ ಸೆಕೆಂಡರಿ ಮತ್ತು 13-ಮೆಗಾಪಿಕ್ಸೆಲ್ ಸಂವೇದಕಗಳನ್ನು ಹೊಂದಿದೆ. ಈ ಕ್ಯಾಮೆರಾ ಸೆಟಪ್ 2.5x ಆಪ್ಟಿಕಲ್ ಜೂಮ್ ಒದಗಿಸಲಿದೆ ಮತ್ತು 4K ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, HDR ಬೆಂಬಲವಿರುವ 32-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನುಳಿದಂತೆ, 11 ಬ್ಯಾಂಡ್‌ಗಳಿಗೆ 5G ಬೆಂಬಲ, ವೈ-ಫೈ 6 ಮತ್ತು ಬ್ಲೂಟೂತ್ 5.3 ವೈರ್‌ಲೆಸ್ ಸಂಪರ್ಕದಂತಹ ವೈಶಿಷ್ಟ್ಯಗಳಿವೆ.
ಭಾರತದಲ್ಲಿ Tecno Phantom X2 Pro 5G ಸ್ಮಾರ್ಟ್‌ಫೋನಿನ ಬೆಲೆ, ಲಭ್ಯತೆ
ನೂತನ Tecno Phantom X2 Pro 5G ಸ್ಮಾರ್ಟ್‌ಫೋನನ್ನು ದೇಶದಲ್ಲಿ ಒಂದೇ 12GB + 256GB ಸ್ಟೋರೇಜ್ ಮಾದರಿಯಲ್ಲಿ 49,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿದೆ. ಅಮೆಜಾನ್ ವೆಬ್‌ಸೈಟ್ ಮೂಲಕ ಇಂದಿನಿಂದಲೇ ಮುಂಗಡವಾಗಿ ಬುಕ್ ಮಾಡಬಹುದಾದ Tecno Phantom X2 Pro 5G ಸ್ಮಾರ್ಟ್‌ಫೋನನ್ನು ಗ್ರಾಹಕರು ಮಾರ್ಸ್ ಆರೆಂಜ್ ಮತ್ತು ಸ್ಟಾರ್‌ಡಸ್ಟ್ ಗ್ರೇ ಎರಡು ಬಣ್ಣಗಳಲ್ಲಿ ಖರೀದಿಸಬಹುದು.
Tecno Phantom X2 Pro 5g With Launched In India Price, Specifications.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 06:54 pm
Mangalore Correspondent
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
Ullal, Mangalore: ಸಮುದ್ರ ಮಧ್ಯದಲ್ಲೇ ಪೋರ್ಚುಗೀಸರ...
17-09-25 01:34 pm
Dharmasthala, Lakshmish Tolpadi, Mangalore: ಧ...
16-09-25 07:48 pm
Ex IPS Kempaiah, Professor Umeshchandra, Mang...
16-09-25 07:02 pm
17-09-25 06:04 pm
Mangalore Correspondent
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm