ಬ್ರೇಕಿಂಗ್ ನ್ಯೂಸ್
20-01-23 09:45 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಗೆ ಇದೇ ಫೆಬ್ರವರಿ 1 ರಂದು ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Samsung Galaxy S23 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಎದುರುನೋಡುತ್ತಿರುವ ದೇಶದ ಗ್ರಾಹಕರಿಗಾಗಿ ಈಗಾಗಲೇ ಪ್ರೀ-ಬುಕ್ಕಿಂಗ್ ಆರಂಭವಾಗಿದೆ. ಇಷ್ಟೇ ಅಲ್ಲದೇ, Samsung Galaxy S23 ಸರಣಿ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಪ್ರಮುಖ ವೈಶಿಷ್ಟ್ಯಗಳು ಯಾವುವು ಎಂಬ ವದಂತಿಯ ಸುದ್ದಿಗಳು ಸಹ ಹರಿದಾಡಿದ್ದವು. ಇದೀಗ ದೊರೆತಿರುವ ಮತ್ತೊಂದು ಹೊಸಸುದ್ದಿ ಏನೆಂದರೆ, Samsung Galaxy S23 ಸರಣಿ ಸ್ಮಾರ್ಟ್‌ಫೋನ್‌ಗಳ ಆರಂಭಿಕ ಬೆಲೆಯು $799 (ಸುಮಾರು 64,950 ರೂ.) ಗಳಿಂದ ಆರಂಭವಾಗಲಿದೆ ಎಂದು ವರದಿಯಾಗಿದೆ.! ಹೌದು, Galaxy S23 ಸರಣಿಯ ಆಸ್ಟ್ರೇಲಿಯನ್ ಬೆಲೆಯು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಬಗ್ಗೆ ಪ್ರಮುಖ ಮಾಧ್ಯಮಗಳು ತಿಳಿಸಿವೆ.
Samsung Galaxy S23 ಸರಣಿ ಸ್ಮಾರ್ಟ್‌ಫೋನ್‌ಗಳ ಆಸ್ಟ್ರೇಲಿಯನ್ ಬೆಲೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವಂತೆ, Samsung Galaxy S23 ಮೂಲ ಮಾದರಿಯ ಸ್ಮಾರ್ಟ್‌ಫೋನ್ $799(ಸುಮಾರು 64,950 ರೂ.) ಬೆಲೆಯಲ್ಲಿ ಬರಲಿದೆಯಂತೆ, ಇದಕ್ಕಿಂತಲೂ ಸ್ವಲ್ಪ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ Samsung Galaxy S23+ ಮೂಲಕ ಮಾದರಿ ಸ್ಮಾರ್ಟ್‌ಫೋನ್ ಬೆಲೆ $999 (ಸುಮಾರು 81,181 ರೂ.) ಆಗಿರಬಹುದು ಹಾಗೂ ಎಲ್ಲಕ್ಕಿಂತ ಪ್ರೀಮಿಯಂ ಆಗಿರುವ Galaxy S23 Ultra ಮೂಲ ಮಾದರಿಯು $1,199 (ಸುಮಾರು 97,427 ರೂ.) ಆರಂಭಿಕ ಬೆಲೆಯೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. GSMArena ಹಂಚಿಕೊಂಡ ವಿವರಗಳ ಪ್ರಕಾರ, Galaxy S23 ಸರಣಿಯಲ್ಲಿ ನಾವು 512GB ಸ್ಟೋರೇಜ್ ಮಾಡೆಲ್ ಸ್ಮಾರ್ಟ್‌ಫೋನನ್ನು ಸಹ ನೋಡಬಹುದು ಎಂದು ಹೇಳಲಾಗಿದೆ..
ಫೆಬ್ರವರಿ 1, 2023 ರಂದು ದೇಶದಲ್ಲಿ ಬಿಡುಗಡೆಯಾಗಲಿರುವ Samsung Galaxy S23 ಸರಣಿ ಸ್ಮಾರ್ಟ್‌ಪೋನ್‌ಗಳನ್ನು ಮೊದಲೇ ಪಡೆಯಲು ಇಚ್ಚಿಸುವ ಗ್ರಾಹಕರು Samsung ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ ಯಾವುದೇ Galaxy S23, Galaxy S23+, ಮತ್ತು Galaxy S23 Ultra ಸಾಧನವನ್ನು ಪ್ರೀ-ಬುಕ್ ಮಾಡಬಹುದು. ಇದಕ್ಕಾಗಿ, Samsung ಕಂಪೆನಿ 1999 ರೂ.ಗೆ ಪ್ರೀ ಬುಕ್ಕಿಂಗ್ ಬೆಲೆಯನ್ನು ನಿಗಧಿಪಡಿಸಿದೆ. ಹೀಗೆ 1999 ರೂ. ಪಾವತಿಸಿ ಪ್ರೀ-ಬುಕ್ ಮಾಡುವ ಗ್ರಾಹಕರಿಗೆ 5000 ಮೌಲ್ಯದ ಪ್ರಯೋಜನಗಳನ್ನು ಒದಗಿಸುವುದಾಗಿ Samsung ಕಂಪೆನಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೇ, Galaxy S23 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪ್ರೀ-ಬುಕ್ ಮಾಡುವ ಗ್ರಾಹಕರಿಗೆ ಆರಂಭಿಕ ವಿತರಣೆ, ವಿಶೇಷ ಬಣ್ಣದ ಆಯ್ಕೆಗಳು ಮತ್ತು 2000 ರೂ. ವೆಲ್‌ಕಮ್ ಕೂಪನ್ ಸಹ ದೊರೆಯಲಿವೆ.
Samsung ಆಯೋಜಿಸಿರುವ Galaxy Unpacked 2023 ಕಾರ್ಯಕ್ರಮವು ದೇಶದಲ್ಲಿ ಇದೇ ಫೆಬ್ರವರಿ 1 ರಂದು ರಾತ್ರಿ 11: 30 ಕ್ಕೆ ಪ್ರಾರಂಭವಾಗಲಿದೆ ಮತ್ತು ಕಾರ್ಯಕ್ರಮವನ್ನು ಕಂಪನಿಯ ಅಧಿಕೃತ ಚಾನೆಲ್‌ಗಳ ಮೂಲಕ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಇತ್ತೀಚಿನ Snapdragon 8 Gen 2 ಪ್ರೊಸೆಸರ್ ಹೊತ್ತು Galaxy S23, Galaxy S23+, ಮತ್ತು Galaxy S23 Ultra ಮೂರು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ ಎಂದು ಹೇಳಲಾಗಿದೆ. ಇತ್ತೀಚಿಗೆ ಸೋರಿಕೆಯಾದ ಹಲವು ಮಾಹಿತಿಗಳ ಪ್ರಕಾರ, ದೇಶದಲ್ಲಿ Galaxy S23 ಮತ್ತು Galaxy S23+ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಮತ್ತು Galaxy S23 Ultra 100 ಎಕ್ಸ್ ಜೂಮ್ ಸಾಮರ್ಥ್ಯದ 200-MP ಕ್ವಾಡ್ ಕ್ಯಾಮೆರಾ ಸಟಪ್‌ನೊಂದಿಗೆ ಬರಲಿದೆ ಎನ್ನಲಾಗಿದೆ.
Samsung Galaxy S23 Series Price Leaked Online.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm