ಬ್ರೇಕಿಂಗ್ ನ್ಯೂಸ್
21-01-23 07:48 pm Source: Vijayakarnataka ಡಿಜಿಟಲ್ ಟೆಕ್
ಜಾಗತಿಕ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Techno ದೇಶದಲ್ಲಿ ತ್ತೀಚಿಗಷ್ಟೇ ಪರಿಚಯಿಸಿರುವ Tecno Phantom X2 Pro 5G ಸ್ಮಾರ್ಟ್‌ಫೋನ್ ಮಾರಾಟದ ದಿನಾಂಕ ಮತ್ತು ಕೊಡುಗೆಗಳ ಮಾಹಿತಿ ಬಹಿರಂಗವಾಗಿದೆ. ಇದೇ ಜನವರಿ 17 ರಂದು ದೇಶದಲ್ಲಿ Tecno Phantom X2 Pro 5G ಸ್ಮಾರ್ಟ್‌ಫೋನನ್ನು 49,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿತ್ತು ಮತ್ತು ಅಂದಿನಿಂದಲೇ ಮುಂಗಡವಾಗಿ ಬುಕ್ ಮಾಡಲು ಅವಕಾಶ ಒದಗಿಸಲಾಗಿತ್ತು ಇದೀಗ ಈ ಹೊಸ Tecno Phantom X2 Pro 5G ಸ್ಮಾರ್ಟ್‌ಫೋನ್ ಜನವರಿ 24 ರಂದು ಮೊದಲ ಮಾರಾಟಕ್ಕೆ ಬರುತ್ತಿದೆ. ಆರಂಭಿಕ ಖರೀದಿದಾರರಿಗೆ 5,000 ರೂ. ಬೋನಸ್ ಎಕ್ಸ್‌ಚೇಂಜ್ ಆಫರ್, 12-ತಿಂಗಳ Amazon Prime ಚಂದಾದಾರಿಕೆ ಮತ್ತು 6-ತಿಂಗಳ ನೋ-ಕಾಸ್ಟ್ EMI ಆಯ್ಕೆಯ ಲಾಭಗಳನ್ನು Techno ಕಂಪೆನಿ ಪ್ರಕಟಿಸಿದೆ. ಇಷ್ಟೇ ಅಲ್ಲದೇ, ಆಫ್‌ಲೈನ್ ಮೂಲಕ Tecno Phantom X2 Pro 5G ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿಯಾಗಿ ಉಚಿತ ಗಿಫ್ಟ್ ಬಾಸ್ಕೆಟ್ ನೀಡುವುದಾಗಿ ಕಂಪೆನಿ ತಿಳಿಸಿದೆ.
Techno ಕಂಪೆನಿಯ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ Tecno Phantom X2 Pro 5G ಸ್ಮಾರ್ಟ್‌ಫೋನನ್ನು ದೇಶದಲ್ಲಿ ಒಂದೇ 12GB + 256GB ಸ್ಟೋರೇಜ್ ಮಾದರಿಯಲ್ಲಿ 49,999 ರೂ. ಬೆಲೆಯಲ್ಲಿ ಹಾಗೂ ಮಾರ್ಸ್ ಆರೆಂಜ್ ಮತ್ತು ಸ್ಟಾರ್‌ಡಸ್ಟ್ ಗ್ರೇ ಎರಡು ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ದೇಶದಲ್ಲಿ Tecno Phantom X2 5G ಸ್ಮಾರ್ಟ್‌ಫೋನ್ ಪರಿಚಯಿಸಿದ್ದ Tecno ಕಂಪೆನಿ ಇಂದು ಇದರ ಪ್ರೊ ಮಾದರಿಯಾಗಿ ಹೊಸ Tecno Phantom X2 Pro 5G ಸ್ಮಾರ್ಟ್‌ಫೋನನ್ನು ಬಿಡುಗಡೆಗೊಳಿಸಿದ್ದು, ಈ ಹೊಸ ಸ್ಮಾರ್ಟ್‌ಫೋನ್ MediaTek Dimensity 9000 ಪ್ರೊಸೆಸರ್, 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 6.8-ಇಂಚಿನ ಫುಲ್ HD+ 120Hz AMOLED ಡಿಸ್‌ಪ್ಲೇಯಂತಹ ಪ್ರೀಮಿಯಂ ವೈಶಿಷ್ಟ್ಯಗಳ ಜೊತೆಗೆ ಬಾಕ್ಸ್‌ನಲ್ಲಿ 45W ಚಾರ್ಜರ್‌ನೊಂದಿಗೆ ಬಿಡುಗಡೆಯಾಗಿದೆ. ಹಾಗಾದರೆ, ಹೊಸ Tecno Phantom X2 Pro 5G ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
Tecno Phantom X2 Pro 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ನೂತನ Tecno Phantom X2 Pro 5G ಸ್ಮಾರ್ಟ್‌ಫೋನ್ 6.8-ಇಂಚಿನ ಫುಲ್-HD+ ಕರ್ವ್ಡ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್ ವೈಶಿಷ್ಟ್ಯಗಳ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಪಡೆದಿದೆ. ಹುಡ್ ಅಡಿಯಲ್ಲಿ, 12GB RAM ಮತ್ತು 256GB ಮೆಮೊರಿಯೊಂದಿಗೆ ಜೋಡಿಸಲಾದ ಶಕ್ತಿಯುತ MediaTek Dimensity 9000 ಪ್ರೊಸೆಸರ್ ಮತ್ತು Mali-G710 MC10 GPU ಅಳವಡಿಸಲಾಗಿರುವ ಈ ಸ್ಮಾರ್ಟ್‌ಫೋನಿನಲ್ಲಿ ಆಂತರಿಕ ಮೆಮೊರಿಯನ್ನು 5GB ವರೆಗೆ ವರ್ಚುವಲ್ RAM ಸ್ವಯಂ ಹೆಚ್ಚಿಸಿಕೊಳ್ಳಬಹುದಾದ 'ಮೆಮೊರಿ ಫ್ಯೂಷನ್' ವೈಶಿಷ್ಟ್ಯವಿದೆ. ಬ್ಯಾಟರಿ ವಿಭಾಗದಲ್ಲಿ, ಬಾಕ್ಸ್‌ನಲ್ಲಿ 45W ಚಾರ್ಜರ್‌ನೊಂದಿಗೆ ಈ ಸ್ಮಾರ್ಟ್‌ಫೋನ್ 5,160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, ಹೊಸ Tecno Phantom X2 Pro 5G ಸ್ಮಾರ್ಟ್‌ಫೋನ್ ಇಮ್ಯಾಜಿಕ್ 790 ಇಮೇಜ್ ಸಿಗ್ನಲ್ ಪ್ರೊಸೆಸರ್ (ISP) ಸಾಮರ್ಥ'ದ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು 50-ಮೆಗಾಪಿಕ್ಸೆಲ್ ಪ್ರತಿಫಲಿತ ಪೋಟ್ರೇಟ್ ಲೆನ್ಸ್, ಜೊತೆಗೆ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 13-ಮೆಗಾಪಿಕ್ಸೆಲ್ ಸೆಕೆಂಡರಿ ಮತ್ತು 13-ಮೆಗಾಪಿಕ್ಸೆಲ್ ಸಂವೇದಕಗಳನ್ನು ಹೊಂದಿದೆ. ಈ ಕ್ಯಾಮೆರಾ ಸೆಟಪ್ 2.5x ಆಪ್ಟಿಕಲ್ ಜೂಮ್ ಒದಗಿಸಲಿದೆ ಮತ್ತು 4K ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, HDR ಬೆಂಬಲವಿರುವ 32-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನುಳಿದಂತೆ, 11 ಬ್ಯಾಂಡ್‌ಗಳಿಗೆ 5G ಬೆಂಬಲ, ವೈ-ಫೈ 6 ಮತ್ತು ಬ್ಲೂಟೂತ್ 5.3 ವೈರ್‌ಲೆಸ್ ಸಂಪರ್ಕದಂತಹ ವೈಶಿಷ್ಟ್ಯಗಳಿವೆ.
Tecno Phantom X2 Pro 5g Check Sale Date, Price, Offers, Specifications, And Other Key Details.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm