ಬ್ರೇಕಿಂಗ್ ನ್ಯೂಸ್
23-01-23 08:35 pm Source: Vijayakarnataka ಡಿಜಿಟಲ್ ಟೆಕ್
ಇದೇ ಫೆಬ್ರವರಿ 7 ರಂದು ಭಾರತದ ಮೊಬೈಲ್ ಮಾರುಕಟ್ಟೆಗೆ ದಾಂಗುಡಿ ಇಡುತ್ತಿರುವ OnePlus 11 ಸ್ಮಾರ್ಟ್‌ಫೋನ್ ಜೊತೆಗೆ OnePlus Buds Pro 2 ಇಯರ್‌ಬಡ್ಸ್ ಕೂಡ ಬಿಡುಗಡೆಯಾಗುವುದ ಖಚಿತವಾಗಿದೆ. ಫೆಬ್ರವರಿ 7 ರಂದು ನವದೆಹಲಿಯಲ್ಲಿ ಸಂಜೆ 7:30 PM ISTಕ್ಕೆ ಆಯೋಜನೆಯಾಗಿರುವ OnePlus ಆಫ್‌ಲೈನ್ ಈವೆಂಟ್‌ನಲ್ಲಿ OnePlus Buds Pro 2 ಡಿವೈಸ್ ಲಾಂಚ್ ಆಗಲಿದ್ದು, ಅಬ್ಸಿಡಿಯನ್ ಕಪ್ಪು ಮತ್ತು ಆರ್ಬರ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಲಭ್ಯವಿರುತ್ತದೆ ಎಂಬುದನ್ನು OnePlus ಕಂಪೆನಿ ದೃಢಪಡಿಸಿದೆ. ಅಚ್ಚರಿ ಎಂದರೆ, ಬಹುನಿರೀಕ್ಷಿತ OnePlus 11 ಸ್ಮಾರ್ಟ್‌ಫೋನ್ ಅಮೆಜಾನ್ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಬರಲಿದೆ
OnePlus ಕಂಪೆನಿಯ ಜನಪ್ರಿಯ OnePlus Buds ಆಡಿಯೋ ಸರಣಿಯಲ್ಲಿ ಹೊಸ OnePlus Buds Pro 2 ಇಯರ್‌ಬಡ್ಸ್ ಸಾಧನವು ಚೀನಾದಾಲ್ಲಿ ಈಗಾಗಲೇ ಬಿಡುಗಡೆಯಾಗಿದೆ. OnePlus Buds ಸರಣಿಯಲ್ಲಿ ಪರಿಚಯಿಸಲಾಗಿರುವ ಈ ಹೊಸ OnePlus Buds Pro 2 ಸಾಧನವು OnePlus Buds Pro ಸಾಧನದ ಉತ್ತರಾಧಿಕಾರಿಯಾಗಿ ಬಿಡುಗಡಗೊಂಡಿದ್ದು, ಈ ಹೊಸ ಇಯರ್‌ಬಡ್ಸ್ ಸಾಧನವು ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್, 11 mm ಡೈನಾಮಿಕ್ ಡ್ರೈವರ್‌ಗಳು, ಡೀಫಾಲ್ಟ್ EQ ಸೆಟ್ಟಿಂಗ್ ಮತ್ತು 39 ಗಂಟೆಗಳ ಬ್ಯಾಟರಿ ಅವಧಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ಹೊಸ OnePlus Buds Pro 2 ಸಾಧನ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
OnePlus Buds Pro 2 ಇಯರ್‌ಬಡ್ಸ್ ಸಾಧನದ ವೈಶಿಷ್ಟ್ಯಗಳು
ನೂತನ OnePlus Buds Pro 2 ಇಯರ್‌ಬಡ್ಸ್ ಸಾಧನವು ನೀರು ಮತ್ತು ಧೂಳು ನಿರೋಧಕ IP55 ರೇಟಿಂಗ್‌ನೊಂದಿಗೆ ಪ್ರೀಮಿಯಂ ಇನ್ ಇಯರ್ ವಿನ್ಯಾಸ ಮತ್ತು ಕೇಸ್‌ನೊಂದಿಗೆ ಬಿಡುಗಡೆಯಾಗಿದೆ. ಇದರಲ್ಲಿರುವ ಇಯರ್‌ಬಡ್‌ಗಳು 11 mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, 6 mm ಪ್ಲ್ಯಾನರ್ ಡಯಾಫ್ರಾಮ್‌ನೊಂದಿಗೆ ಪ್ಯಾಕ್ ಆಗಿವೆ. ಇಷ್ಟೇ ಅಲ್ಲದೇ, ಈ ಟ್ರೂ ವೈರ್‌ಲೆಸ್ ಇಯರ್‌ಬಡ್‌ಗಳು ಹೆಚ್ಚಿನ ಮತ್ತು ಕಡಿಮೆ ಆಡಿಯೊ ಆವರ್ತನಗಳನ್ನು ಸುಲಭವಾಗಿ ನಿಭಾಯಿಸಲು 11mm ವೂಫರ್ ಮತ್ತು 6mm ಟ್ವೀಟರ್‌ಗಳನ್ನು ಹೊಂದಿವೆ ಎಂದು ಕಂಪೆನಿ ತಿಳಿಸಿದೆ. ಇಷ್ಟೇ ಅಲ್ಲದೇ, ತಲ್ಲೀನಗೊಳಿಸುವ ವರ್ಚುವಲ್ ಸರೌಂಡ್ ಸೌಂಡ್ ಅನುಭವಕ್ಕಾಗಿ ಸ್ಪೇಷಿಯಲ್ ಆಡಿಯೊ ಬೆಂಬಲದೊಂದಿಗೆ ಬಂದಿರುವ ಈ ಸಾಧನವು AI ಶಬ್ದ-ಕಡಿತ ವೈಶಿಷ್ಟ್ಯವನ್ನು ಸಹ ಹೊಂದಿವೆ.
OnePlus Buds Pro 2 ಸಾಧನದ ಸಂಪರ್ಕ ಆಯ್ಕೆಗಳಲ್ಲಿ LHDC, AAC, SBC, ಮತ್ತು LC3 ಆಡಿಯೊ ಕೊಡೆಕ್‌ಗಳಿಗೆ ಬೆಂಬಲದೊಂದಿಗೆ ಬ್ಲೂಟೂತ್ v5.3 ಸಂಪರ್ಕ ವೈಶಿಷ್ಟ್ಯಗಳಿವೆ. ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕಾರ್ಯನಿರ್ಬಹಿಸುವ ಈ ಸಾಧನವು ಡಾಲ್ಬಿ ಅಟ್ಮಾಸ್ ಪ್ರಾದೇಶಿಕ ಆಡಿಯೋ ಬೆಂಬಲ ಹಾಗೂ ಡೈನಾಡಿಯೊ ಟ್ಯೂನಿಂಗ್ ಫೀಚರ್ ಹೊಂದಿದೆ. ಇದರಲ್ಲಿರುವ ANC ವೈಶಿಷ್ಟ್ಯವು 48dB ವರೆಗಿನ ಹೊರಗಿನ ಶಬ್ದವನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ಕರೆಗಳಿಗೆ ಉತ್ತರಿಸಲು ಮತ್ತು ಸಂಗೀತ ಪ್ಲೇಬ್ಯಾಕ್ ನ್ಯಾವಿಗೇಟ್ ಮಾಡಲು ಸ್ಪರ್ಶ ನಿಯಂತ್ರಣಗಳನ್ನು ಸಹ ಪಡೆದಿರುವ ಈ ಸಾಧನವು ಡ್ಯುಯಲ್ ಕನೆಕ್ಷನ್, 9 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡುವ 520mAh ಬ್ಯಾಟರಿ, Qi ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯಗಳನ್ನು ಹೊಂದಿದೆ.
ಇದೀಗ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿರುವ ನೂತನ OnePlus Buds Pro 2 ಇಯರ್‌ಬಡ್ಸ್ ಸಾಧನದ ಬೆಲೆಯನ್ನು 899 ಯುವಾನ್ ( ಅಂದಾಜು 10,821 ರೂ.)ಗೆ ನಿಗಧಿಪಡಿಸಲಾಗಿದೆ. ಅಬ್ಸಿಡಿಯನ್ ಬ್ಲಾಕ್ ಮತ್ತು ಆರ್ಬರ್ ಗ್ರೀನ್ ಬಣ್ಣದ ಎರಡು ಆಯ್ಕೆಗಳಲ್ಲಿ ಪರಿಚಯಿಸಲಾಗಿರುವ ಈ ಸಾಧನವು ದೇಶದಲ್ಲಿ 6 ರಿಂದ 8 ಸಾವಿರ ರೂ. ಬೆಲೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
Oneplus Buds Pro 2 Flipkart Availability Confirmed Ahead Of India Launch Expected Price.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm