ಬ್ರೇಕಿಂಗ್ ನ್ಯೂಸ್
31-01-23 06:35 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಪ್ರೀಮಿಯಂ ಸ್ಮಾರ್ಟ್‌ಫೋನ್ ದೈತ್ಯ ಬ್ರ್ಯಾಂಡ್ OnePlus ಕಂಪೆನಿ ಭಾರತೀಯ ಗ್ರಾಹಕರಿಗಾಗಿಯೇ ವಿಶೇಷವಾಗಿ ಪರಿಚಯಿಸುತ್ತಿರುವ ಬಹುನಿರೀಕ್ಷಿತ 'OnePlus 11R' ಸ್ಮಾರ್ಟ್‌ಫೋನ್ ಇದೇ ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ ಎಂಬ ಭರ್ಜರಿ ಸಿಹಿಸುದ್ದಿ ಇತ್ತೀಚಿಗಷ್ಟೇ ಹೊರಬಿದ್ದಿತ್ತು. ಇದೀಗ ಈ ಹೊಸ 'OnePlus 11R' ಸ್ಮಾರ್ಟ್‌ಫೋನ್ ಹೊಂದಿರುವ ಪ್ರೊಸೆಸರ್, ಡಿಸ್‌ಪ್ಲೇ ಮತ್ತು ಬ್ಯಾಟರಿ ಫೀಚರ್ಸ್ ಸೇರಿದಂತೆ ಬಹುತೇಕ ಎಲ್ಲಾ ವೈಶಿಷ್ಟ್ಯಗಳ ಅಧಿಕೃತ ಮಾಹಿತಿಗಳನ್ನು ಸಹ ಬಹಿರಂಗಪಡಿಸಲಾಗಿದೆ.! ಇದರಿಂದ ದೇಶದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ.! ಹಾಗಾದರೆ, ಭಾರತೀಯರಿಗಾಗಿಯೇ ವಿಶೇಷವಾಗಿ ನಿರ್ಮಿಸಲಾಗಿರುವ ಹೊಸ 'OnePlus 11R' ಸ್ಮಾರ್ಟ್‌ಫೋನ್ ಹೇಗಿದೆ ಎಂಬ ಅತ್ಯಂತ ಕುತೂಹಲದ ಮಾಹಿತಿಯನ್ನು ತಿಳಿಯೋಣ ಬನ್ನಿ.
ಹೇಗಿದೆ ಹೊಸ OnePlus 11R' ಸ್ಮಾರ್ಟ್‌ಫೋನ್?
OnePlus ಕಂಪೆನಿಯು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿರುವಂತೆ, ಭಾರತೀಯರಿಗಾಗಿಯೇ ಮೊದಲು ಬರುತ್ತಿರುವ ನೂತನ OnePlus 11R ಸ್ಮಾರ್ಟ್‌ಫೋನ್ ADFR 2.0 ತಂತ್ರಜ್ಞಾನದೊಂದಿಗೆ 120Hz ಸಾಮರ್ಥ್ಯದ ಲಿಕ್ವಿಡ್ ಪ್ರದರ್ಶನ ಒಳಗೊಂಡಿರುತ್ತದೆ. ಈ ಡಿಸ್‌ಪ್ಲೇಯ ತಂತ್ರಜ್ಞಾನವು ವಿಷಯದ ಆಧಾರದ ಮೇಲೆ ರಿಫ್ರೆಶ್ ರೇಟ್ ಹೊಂದಿಸಲು ಫೋನ್‌ಗೆ ಸಹಾಯ ಮಾಡುತ್ತದೆ ಎಂದು ಕಂಪೆನಿ ತಿಳಿಸಿದ್ದು, ಇದರಿಂದ ಬ್ಯಾಟರಿ ಅವಧಿಯು ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದೆ.
ಹುಡ್ ಅಡಿಯಲ್ಲಿ, R ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲೇ ಮೊದಲನೆ ಬಾರಿಗೆ 16GB RAM ನೊಂದಿಗೆ ಜೋಡಿಸಲಾದ ಶಕ್ತಿಯುತ Snapdragon 8+ Gen 1 ಪ್ರೊಸೆಸರ್ ಹೊಂದಿರಲಿರುವ OnePlus 11R ಸ್ಮಾರ್ಟ್‌ಫೋನ್, "ವೇಗವಾದ ಸಿಸ್ಟಮ್ ಪ್ರತಿಕ್ರಿಯೆ ಸಮಯ ಮತ್ತು ಸ್ಥಿರತೆಗಾಗಿ" RAM ಮರುಹಂಚಿಕೆಯನ್ನು ವೇಗಗೊಳಿಸಲು RAM-Vita ಟೆಕ್ ಕಂಪೆನಿಯ ಮಷಿನ್ ಲರ್ನಿಂಗ್ AI ಸಾಮರ್ಥ್ಯಗಳನ್ನು ನಿಯಂತ್ರಿಸುತ್ತದೆ ಎಂದು OnePlus ಕಂಪೆನಿ ಹೇಳಿಕೊಂಡಿದೆ.
OnePlus ಕಂಪೆನಿ ನೂತನ OnePlus 11R ಸ್ಮಾರ್ಟ್‌ಫೋನನ್ನು ಗೇಮರ್-ಕೇಂದ್ರಿತ ಸ್ಮಾರ್ಟ್‌ಫೋನ್ ಎಂದು ಹೇಳಿಕೊಂಡಿದ್ದು, ಇದು ಮಷಿನ್ ಲರ್ನಿಂಗ್ AI ಸಾಮರ್ಥ್ಯಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೇ 3D ಕೂಲಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಇದು ಕಳೆದ ಬಾರಿಯ OnePlus 10 Pro ಸ್ಮಾರ್ಟ್‌ಫೋನಿನಲ್ಲಿದ್ದ ವೇಪರ್ ಆ ಚೇಂಬರ್‌ಗಿಂತ 63.8 ಶೇ ದೊಡ್ಡದಾದ ಮೇಲ್ಮೈ ವಿಸ್ತೀರ್ಣವನ್ನು ಒಳಗೊಂಡಿದ್ದು, ಶಾಖವನ್ನು ತಕ್ಷಣವೇ ಸಂಗ್ರಹಿಸಲಿದೆ ಎನ್ನಲಾಗಿದೆ.
ಬ್ಯಾಟರಿ ವಿಭಾಗದಲ್ಲಿ, ಹೊಸ OnePlus 11R ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ. ಇದು 100W ಸಾಮರ್ಥ್ಯದ ಚಾರ್ಜರ್ ಜೊತೆಗೆ 25 ನಿಮಿಷಗಳಲ್ಲಿ 1-100 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ, ಸ್ವಯಂಚಾಲಿತ ಡಿಸ್‌ಪ್ಲೇ ರೇಟ್ ವೈಶಿಷ್ಟ್ಯದ ಬಗ್ಗೆ ತಿಳಿಸಲಾಗಿದೆ. ಆದರೆ, ಕ್ಯಾಮೆರಾ ವಿವರಗಳು ಸ್ಪಷ್ಟವಾಗಿಲ್ಲ, ಆದರೆ ಪೋಸ್ಟರ್ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಇರುವುದನ್ನು ಬಹಿರಂಗಪಡಿಸಿದೆ.
OnePlus 11R' ಸ್ಮಾರ್ಟ್‌ಫೋನ್ ಬೆಲೆ ಎಷ್ಟು?
OnePlus ಕಂಪೆನಿ ಈವರೆಗೂ OnePlus 11R ಸ್ಮಾರ್ಟ್‌ಫೋನ್ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಹೊಸ OnePlus 11R ಸ್ಮಾರ್ಟ್‌ಫೋನ್ ಕೂಡ OnePlus 10 Pro ಮತ್ತು OnePlus 9 ಸರಣಿ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಹ್ಯಾಸ್ಲ್ಬಾಲ್ಡ್-ಟ್ಯೂನ್ಡ್ ಕ್ಯಾಮೆರಾಗಳನ್ನು ಹೊಸ OnePlus 11R ಸ್ಮಾರ್ಟ್‌ಫೋನಿನಲ್ಲೂ ಉಳಿಸಿಕೊಳ್ಳಲಾಗಿದೆ ಎಂದು ಎಂದು ಹೇಳಲಾಗಿದೆ. ಇನ್ನು ಈ ಮೇಲಿನ ವೈಶಿಷ್ಟ್ಯಗಳಿಂದ ಈ ಸ್ಮಾರ್ಟ್‌ಫೋನ್ ಸುಮಾರು 40,000 ರೂ. ಆಸುಪಾಸಿನ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ಟೆಕ್ ತಜ್ಞರು ಅಂದಾಜಿಸಿದ್ದಾರೆ. ಕಳೆದ ವರ್ಷ 150W ವೇಗದ ಚಾರ್ಜಿಂಗ್‌ನೊಂದಿಗೆ ಬಿಡುಗಡೆಯಾಗಿದ್ದ OnePlus 10R ಸ್ಮಾರ್ಟ್‌ಫೋನ್ 37,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದ್ದನ್ನು ನಾವಿಲ್ಲಿ ಗಮನಿಸಬಹುದು.
Oneplus 11rs Official Specifications Revealed Ahead Of February 7 Launch.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm