ಬ್ರೇಕಿಂಗ್ ನ್ಯೂಸ್
08-02-23 06:56 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯರ ನೆಚ್ಚಿನ OnePlus Q ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಸರಣಿಗೆ 65 ಇಂಚಿನಷ್ಟು ದೊಡ್ಡದಾದ ವಿನೂತನ OnePlus TV 65 Q2 Pro ಸ್ಮಾರ್ಟ್‌ಟಿವಿ ಸೇರಿಕೊಂಡಿದೆ. ಮಂಗಳವಾರ ಸಂಜೆ OnePlus ಕಂಪೆನಿ ಆಯೋಜಿಸಿದ್ದ OnePlus Cloud 11 ಬಿಡುಗಡೆ ಸಮಾರಂಭದಲ್ಲಿ ಹಲವು OnePlus ಉತ್ಪನ್ನಗಳ ಜೊತೆಗೆ ಬಹುನಿರೀಕ್ಷಿತ OnePlus TV 65 Q2 Pro ಸ್ಮಾರ್ಟ್‌ಟಿವಿ ಕೂಡ ಬಿಡುಗಡೆಯಾಗಿದ್ದು, ಇದು ಅತ್ಯುತ್ತಮ-ದರ್ಜೆಯ ಪ್ರದರ್ಶನ ಮತ್ತು ತಲ್ಲೀನಗೊಳಿಸುವ ಧ್ವನಿ ಗುಣಮಟ್ಟದೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ. ದೇಶದಲ್ಲಿ OnePlus ಕಂಪೆನಿಯ ಸ್ಮಾರ್ಟ್‌ಟಿವಿಗಳಲ್ಲೇ ಅತ್ಯಂತ ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಿರುವ ನೂತನ OnePlus TV 65 Q2 Pro ಸ್ಮಾರ್ಟ್‌ಟಿವಿ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.
OnePlus TV 65 Q2 Pro ಸ್ಮಾರ್ಟ್‌ಟಿವಿ ವೈಶಿಷ್ಟ್ಯಗಳು
OnePlus ಪರಿಚಯಿಸಿರುವ 65-ಇಂಚಿನ ನೂತನ Q2 Pro ಸ್ಮಾರ್ಟ್‌ಟಿವಿ 4K QLED ಡಿಸ್‌ಪ್ಲೇ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಂದಿದೆ. 120Hz ರಿಫ್ರೆಶ್ ರೇಟ್, 1200nits ಬ್ರೈಟ್‌ನೆಸ್, HDR10+, HDR10, HLG ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ DCI-P3 97% ವೈಡ್ ಕಲರ್ ಗ್ಯಾಮಟ್‌ನೊಂದಿಗೆ ಶಕ್ತವಾಗಿರುವ ಈ ಸ್ಮಾರ್ಟ್‌ಟಿವಿ 120Hz MEMC ಮತ್ತು AI ಸೂಪರ್ ರೆಸಲ್ಯೂಶನ್‌ನೊಂದಿಗೆ ನೈಜ-ಜೀವನದ ಚಿತ್ರದ ಬಣ್ಣವನ್ನು ಒದಗಿಸುತ್ತವೆ ಮತ್ತು ಬಳಕೆದಾರರಿಗೆ ಉತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಇಷ್ಟೇ ಅಲ್ಲದೇ, ಈ ಹೊಸ OnePlus TV 65 Q2 Pro ಸ್ಮಾರ್ಟ್‌ಟಿವಿ Gamma Engine ತಂತ್ರಜ್ಞಾನದೊಂದಿಗೆ ಬಂದಿದ್ದು, ಇದು ಪ್ರದರ್ಶನ ಗುಣಮಟ್ಟವನ್ನು ಆಪ್ಟಿಮೈಸ್ ಮಾಡುತ್ತದೆ ಮತ್ತು ಪ್ರತಿ ದೃಶ್ಯದಲ್ಲೂ ನೈಜನೆಯನ್ನು ಒದಗಿಸಲಿದೆ ಎಂದು OnePlus ಕಂಪೆನಿ ಹೇಳಿಕೊಂಡಿದೆ
ಈ ಹೊಸ OnePlus TV 65 Q2 Pro ಸ್ಮಾರ್ಟ್‌ಟಿವಿಯು 70W ಧ್ವನಿ ಸಂಯೋಜಿತ ಔಟ್‌ಪುಟ್ ಒದಗಿಸಲಿದೆ. ಇದರಲ್ಲಿ 40W ಔಟ್‌ಪುಟ್ ಹೊರೈಜನ್ ಸೌಂಡ್‌ಬಾರ್‌ನಿಂದ ಮತ್ತು 30W ಔಟ್‌ಪುಟ್ ಸಬ್ ವೂಫರ್‌ನಿಂದ ಬರಲಿದೆ ಎಂದು ಕಂಪೆನಿ ತಿಳಿಸಿದೆ. ಹುಡ್ ಟಡಿಯಲ್ಲಿ, OnePlus TV 65 Q2 Pro ಸ್ಮಾರ್ಟ್‌ಟಿವಿ ಟಿವಿಯು 3GB ಮೆಮೊರಿ ಮತ್ತು 32GB ಫ್ಲ್ಯಾಶ್ ಸ್ಟೋರೇಜ್ ಜೊತೆಗೆ ಜೋಡಿಸಲಾಗಿರುವ MediaTek 4K ಇಮೇಜ್ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, Android 11 ಆಧಾರಿತ Google TV ಯಲ್ಲಿ ರನ್ ಆಗಲಿದೆ. ಇನ್ನುಳಿದಂತೆ ಮೂರು HDMI ಪೋರ್ಟ್‌ಗಳು, ಡೈನಾಡಿಯೊ ಜೊತೆಗೆ ಅಕೌಸ್ಟಿಕ್ ಆಡಿಯೋ, 270 ಕ್ಕೂ ಹೆಚ್ಚು ಲೈವ್ ಚಾನಲ್‌ಗಳು ಮತ್ತು ಸ್ಮಾರ್ಟ್‌ಫೋನ್ ಮೂಲಕ ಟಿವಿ ನಿಯಂತ್ರಿಸಲು OnePlus ಕನೆಕ್ಟ್ 2.0 ವೈಶಿಷ್ಟ್ಯ ಮತ್ತು 2.1-ಚಾನೆಲ್ ಸ್ಟಿರಿಯೊ ಆಡಿಯೊ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
OnePlus TV 65 Q2 Pro ಸ್ಮಾರ್ಟ್‌ಟಿವಿ ಬೆಲೆ ಮತ್ತು ಲಭ್ಯತೆ.
ಭಾರತದ ಮಾರುಕಟ್ಟೆಗೆ ನೂತ OnePlus TV 65 Q2 Pro ಸ್ಮಾರ್ಟ್‌ಟಿವಿಯನ್ನು 99,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿದೆ. ಮುಂದಿನ ಮಾರ್ಚ್ 2023 ರಲ್ಲಿ ಖರೀದಿಗೆ ಲಭ್ಯವಿರಲಿರುವ ಈ ಹೊಸ OnePlus TV 65 Q2 Pro ಸ್ಮಾರ್ಟ್‌ಟಿವಿ ಖರೀದಿಯ ಮೇಲೆ ಗ್ರಾಹಕರಿಗೆ 2 ವರ್ಷಗಳ ವಾರಂಟಿ ನೀಡುವುದಾಗಿ ಕಂಪೆನಿ ತಿಳಿಸಿದೆ.
Oneplus Tv 65 Q2 Pro Launched In India Specs And Price Details.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm