ಬ್ರೇಕಿಂಗ್ ನ್ಯೂಸ್
22-02-23 08:17 pm Source: Vijayakarnataka ಡಿಜಿಟಲ್ ಟೆಕ್
ಕಳೆದ ವರ್ಷ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋ (CES) ನಲ್ಲಿ Lenovo ಪರಿಚಯಿಸಿದ್ದ ಉದ್ಯಮದಲ್ಲೇ ಹಲವು ಮೊದಲ ವೈಶಿಷ್ಟ್ಯಗಳನ್ನು ಒಳಗೊಂಡಿದ್ದ ThinkBook Plus Gen 3 ಲ್ಯಾಪ್‌ಟಾಪ್ ದೇಶದ ಮಾರುಕಟ್ಟೆಗೆ ಇದೀಗ ಬಿಡುಗಡೆಯಾಗಿದೆ. ದೇಶದಲ್ಲಿ ಸೃಜನಾತ್ಮಕ ಮತ್ತು ಎಂಟರ್‌ಪ್ರೈಸ್ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು Lenovo ತನ್ನ ThinkBook Plus Gen 3 ಪ್ರೀಮೀಯಂ ಲ್ಯಾಪ್‌ಟಾಪ್ ಸಾಧನವನ್ನು ಪರಿಚಯಿಸಿದ್ದು, ಹೈ-ಎಂಡ್ ವೈಶಿಷ್ಟ್ಯಗಳುಳ್ಳ ಈ ಡ್ಯುಯಲ್ ಸ್ಕ್ರೀನ್ ಲ್ಯಾಪ್‌ಟಾಪ್ ಇದೀಗ ಭಾರತೀಯ ಗ್ರಾಹಕರನ್ನು ಮನಸೂರೆಗೊಳಿಸಲು ಬಂದಿದೆ. ಹಾಗಾದರೆ, ಉದ್ಯಮದಲ್ಲೇ ಹಲವು ಮೊದಲ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ThinkBook Plus Gen 3 ಪ್ರೀಮಿಯಂ ಲ್ಯಾಪ್‌ಟಾಪ್ ಹೇಗಿದೆ ಮತ್ತು ಈ ಸಾಧನದ ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
ThinkBook Plus Gen 3 ಲ್ಯಾಪ್‌ಟಾಪ್ ವೈಶಿಷ್ಟ್ಯಗಳು
ನೂತನ ThinkBook Plus Gen 3 ಲ್ಯಾಪ್‌ಟಾಪ್ ಸಾಧನವು ಡ್ಯುಯಲ್ ಸ್ಕ್ರೀನ್ ಜೊತೆಗೆ ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ. ಲ್ಯಾಪ್‌ಟಾಪ್‌ನ ಬೇಸ್ ಕೀಬೋರ್ಡ್‌ನ ಬಲಭಾಗದಲ್ಲಿ ಎಂಬೆಡೆಡ್ ಟ್ಯಾಬ್ಲೆಟ್‌ನಂತೆ ಕಾಣುವ ಎರಡನೇ ಸ್ಕ್ರೀನ್ ಕಾರ್ಯನಿರತ ಬಳಕೆದಾರರಿಗೆ ಅನುಕೂಲವಾಗುವಂತೆ ನಿರ್ಮಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಲ್ಯಾಪ್‌ಟಾಪ್‌ನ ಮುಖ್ಯ ಡಿಸ್‌ಪ್ಲೇಯು 21:10 ಅಲ್ಟ್ರಾ-ವೈಡ್ ಅನುಪಾತದೊಂದಿಗೆ 17.3-ಇಂಚಿನಷ್ಟು ದೊಡ್ಡದಾದ 3K ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 99 ಪ್ರತಿಶತ DCI-P3 ಮತ್ತು 400 nits ಬ್ರೈಟ್‌ನೆಸ್ ಜೊತೆಗೆ ಟಚ್ ಇನ್‌ಪುಟ್ ಮತ್ತು ಡಾಲ್ಬಿ ವಿಷನ್ ವೈಶಿಷ್ಟ್ಯಗಳನ್ನು ಹೊಂದಿದ್ದರೆ, ದ್ವಿತೀಯ ಡಿಸ್‌ಪ್ಲೇಯು HD+ ರೆಸಲ್ಯೂಶನ್, 60Hz ರಿಫ್ರೆಶ್ ರೇಟ್, 350 nits ಗರಿಷ್ಠ ಬ್ರೈಟ್‌ನೆಸ್, 60 ಪ್ರತಿಶತ NTSCಕಲರ್ ಗ್ಯಾಮೆಟ್ ಮತ್ತು ಟಚ್ ಸ್ಕ್ರೀನ್ ಬೆಂಬಲದ ವೈಶಿಷ್ಟ್ಯಗಳಲ್ಲಿ 8-ಇಂಚಿನಷ್ಟು ದೊಡ್ಡದಾಗಿದೆ. ಇಷ್ಟೇ ಅಲ್ಲದೇ, ಈ ಲ್ಯಾಪ್ 100W ಚಾರ್ಜಿಂಗ್ ಬೆಂಬಲದ 70Wh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.
ಕಾರ್ಯನಿರ್ವಹಣೆ ವಿಭಾಗದಲ್ಲಿ, ಹೊಸ Lenovo ThinkBook Plus Gen 3 ಲ್ಯಾಪ್‌ಟಾಪ್ 16GB LPDDR5 RAM ಮತ್ತು 1TB SSD ಸ್ಟೋರೇಜ್ (ಎರಡನ್ನೂ ಕ್ರಮವಾಗಿ 32GB ಮತ್ತು 2TB ವರೆಗೆ ಅಪ್‌ಗ್ರೇಡ್ ಮಾಡುವ ಸಾಮರ್ಥ್ಯ ಇದೆ) ಜೊತೆಗೆ ಜೋಡಿಸಲಾದ 12 ನೇ ತಲೆಮಾರಿನ Intel Core i7 ಪ್ರೊಸೆಸರ್ ಹೊಂದಿದೆ. ಇದು ಇಂಟಿಗ್ರೇಟೆಡ್ ಐರಿಸ್ Xe ಗ್ರಾಫಿಕ್ಸ್ ಆನ್‌ಬೋರ್ಡ್‌ನೊಂದಿಗೆ ಸುಸಜ್ಜಿತವಾಗಿದೆ ಮತ್ತು ಲ್ಯಾಪ್‌ಟಾಪ್ Windows 11 Pro OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಲ್ಯಾಪ್‌ಟಾಪ್ ಮುಂಭಾಗದಲ್ಲಿ, ಡಾಲ್ಬಿ ಅಟ್ಮಾಸ್‌ಗೆ ಬೆಂಬಲ ಹೊಂದಿರುವ 2W ಹರ್ಮನ್ ಕಾರ್ಡನ್-ಚಾಲಿತ ಸ್ಟೀರಿಯೊ ಸ್ಪೀಕರ್‌ಗಳನ್ನು ನೀಡಲಾಗಿದೆ. ಜೊತಗೆ ಬ್ಯಾಕ್‌ಲಿಟ್ ಕೀಬೋರ್ಡ್ ಮತ್ತು FHD ಇನ್‌ಫ್ರಾರೆಡ್ ವೆಬ್‌ಕ್ಯಾಮ್ ಅಳವಡಿಸಲಾಗಿದೆ. ಸಂಪರ್ಕ ಆಯ್ಕೆಗಳಲ್ಲಿ, 4 USB-C Thunderbolt ಪೋರ್ಟ್, USB-A ಪೋರ್ಟ್, HDMI ಪೋರ್ಟ್, 3.5mm ಜ್ಯಾಕ್, Wi-Fi 6E ಮತ್ತು ಬ್ಲೂಟೂತ್ ಆವೃತ್ತಿ 5.2 ನಂತಹ ಸಂಪರ್ಕ ವೈಶಿಷ್ಟ್ಯಗಳಿವೆ.
ThinkBook Plus Gen 3 ಲ್ಯಾಪ್‌ಟಾಪ್ ಬೆಲೆ ಎಷ್ಟು?
ಭಾರತದಲ್ಲಿ ThinkBook Plus Gen 3 ಲ್ಯಾಪ್‌ಟಾಪ್ 1,94,990 ರೂ. ಆರಂಭಿಕ ಬೆಲೆಯಲ್ಲಿ ಮಾರಾಟಕ್ಕೆ ಬರಲಿದೆ ಎಂದು Lenovo ಕಂಪೆನಿ ತಿಳಿಸಿದೆ. ಈ ThinkBook Plus Gen 3 ಲ್ಯಾಪ್‌ಟಾಪ್ ಮಾರಾಟದ ದಿನಾಂಕವನ್ನು ಕಂಪೆನಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲವಾದರೂ ಶೀಘ್ರದಲ್ಲೇ ಕಂಪನಿಯ ವೆಬ್‌ಸೈಟ್ ಮತ್ತು ದೇಶಾದ್ಯಂತದ ಚಿಲ್ಲರೆ ಮಳಿಗೆಗಳ ಮೂಲಕ ಈ ಲ್ಯಾಪ್‌ಟಾಪ್ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ.
lenovo thinkbook plus gen 3 with 12th gen core i7 soc launched in india.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm