ಬ್ರೇಕಿಂಗ್ ನ್ಯೂಸ್
24-02-23 08:11 pm Source: Vijayakarnataka ಡಿಜಿಟಲ್ ಟೆಕ್
ಭವಿಷ್ಯದ ಪ್ರೀಮಿಯಂ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ ಆಪಲ್ 'ಐಫೋನ್ 15 ಪ್ರೊ' ವಿನ್ಯಾಸ ಹೇಗಿರಲಿದೆ ಎಂಬ ವದಂತಿಯ ಸುದ್ದಿಯೊಂದು ಇತ್ತೀಚಿಗಷ್ಟೆ ಹೊರಬಿದ್ದಿತ್ತು. ಈ ಹೊಸ ಐಫೋನ್ 15 ಪ್ರೊ ಸ್ಮಾರ್ಟ್ಪೋನಿನಲ್ಲಿ 'ಕ್ಲಿಕ್ ಮಾಡಬಹುದಾದ' ಪವರ್ ಬಟನ್ ಮತ್ತು ವಾಲ್ಯೂಮ್ ಬಟನ್ಗಳು ಇರುವುದಿಲ್ಲ ಎಂದು ಹೇಳಲಾದ ಸುದ್ದಿ ಸಾಕಷ್ಟು ವೈರಲ್ ಕೂಡ ಆಗಿತ್ತು. ಇದೀಗ ಈ ಐಫೋನ್ 15 ಪ್ರೊ ಹೊಂದಿರಲಿದೆ ಎನ್ನಲಾದ ಪ್ರಮುಖ ವೈಶಿಷ್ಟ್ಯಗಳ ವದಂತಿಯ ಮಾಹಿತಿ ಇದೇ ಮೊದಲ ಬಾರಿಗೆ ಹೊರಬಿದ್ದಿದೆ. ಭವಿಷ್ಯದ ಐಫೋನ್ 15 ಪ್ರೊ ಸ್ಮಾರ್ಟ್ಪೋನ್ ನಿರೀಕ್ಷಿತ A17 ಬಯೋನಿಕ್ ಪ್ರೊಸೆಸರ್, 48MP ಸಾಮರ್ಥ್ಯದ ಕ್ಯಾಮೆರಾ ಮತ್ತು 8GB RAM ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. !
ಹೌದು, ಮೊಬೈಲ್ ಉದ್ಯಮ ಮೂಲಗಳನ್ನು ಉಲ್ಲೇಖಿಸಿ ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿದ್ದು, ಮುಂದಿನ ಫ್ಲ್ಯಾಗ್ಶಿಪ್ ಐಫೋನ್ 15 ಸರಣಿಯಲ್ಲಿ ಸ್ಟ್ಯಾಂಡರ್ಡ್ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಸ್ಮಾರ್ಟ್ಫೋನ್ಗಳು 6GB RAM ಹೊಂದಿರುವ ನಿರೀಕ್ಷೆಯಿದೆ, ಆದರೆ ಕಳೆದ ವರ್ಷ iPhone 14 Pro ಮಾದರಿಗಳಂತೆ ಐಫೋನ್ 15 ಪ್ರೊ ಸ್ಮಾರ್ಟ್ಫೋನನ್ನು 8GB RAMಗೆ ಅಪ್ಗ್ರೇಡ್ ಮಾಡಬಹುದು. ಇದು ನಿರೀಕ್ಷಿತ A17 ಬಯೋನಿಕ್ ಪ್ರೊಸೆಸರ್ ಜೊತೆಗೆ ಜೋಡಿಯಾಗಲಿದೆ ಎಂದು ಹೇಳಲಾಗಿದೆ. ಹಿನ್ನಲೆಯಲ್ಲಿ ಏಕಕಾಲದಲ್ಲಿ ಹೆಚ್ಚಿನ ಪ್ರೋಗ್ರಾಂಗಳನ್ನು ನಿರ್ವಹಿಸುವ ಸಲವುವಾಗಿ 'ಐಫೋನ್ 15 ಪ್ರೊ' ಸ್ಮಾರ್ಟ್ಫೋನನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ವರದಿಗಳು ಹೇಳಿವೆ.
ಇತ್ತೀಚಿಗಷ್ಟೇ, ಐಫೋನ್ 15 ಪ್ರೊ ಸ್ಮಾರ್ಟ್ಪೋನಿನಲ್ಲಿ 'ಕ್ಲಿಕ್ ಮಾಡಬಹುದಾದ' ಪವರ್ ಮತ್ತು ವಾಲ್ಯೂಮ್ ಬಟನ್ಗಳು ಇರುವುದಿಲ್ಲ ಎಂಬ ಸುದ್ದಿ ಹೊರಬಿದ್ದಿತ್ತು, ಭವಿಷ್ಯದ ಐಫೋನ್ 15 ಪ್ರೊ ಸ್ಮಾರ್ಟ್ಫೋನಿನಲ್ಲಿ ಅತ್ಯಂತ ತೆಳುವಾದ ಬೆಲೆಲ್ ಮತ್ತು ಕರ್ವ್ಡ್( thinner bezels and curved edges) ಅಂಚುಗಳು ಇರುವ ಅಲ್ಟ್ರಾ ಸ್ಲಿಮ್ ವಿನ್ಯಾಸದಲ್ಲಿ ಇರತ್ತವೆ ಎಂದು ಹೇಳಲಾಗಿದೆ. ಜನಪ್ರಿಯ ಲೀಕ್ಸ್ಟರ್ ShirmpApplePro ಪ್ರಕಟಿಸಿರುವ ಹೊಸ ವರದಿಯಲ್ಲಿ, ಐಫೋನ್ 15 ಪ್ರೊ ಸ್ಮಾರ್ಟ್ಫೋನಿನಲ್ಲಿ ಪ್ರಮುಖ ವಿನ್ಯಾಸ ಬದಲಾವಣೆಗಳನ್ನು ಗುರುತಿಸಲಾಗಿದೆ. ಐಫೋನ್ 15 ಪ್ರೊ ಸರಣಿಯು ಬಾಗಿದ ಅಂಚಿನೊಂದಿಗೆ ಹೆಚ್ಚು ತೆಳುವಾದ ಬೆಜೆಲ್ಗಳನ್ನು ಹೊಂದಿರುವುದನ್ನು ಸೂಚಿಸಿದೆ.
ಭವಿಷ್ಯದ "ಐಫೋನ್ 15 ಪ್ರೊ" ಸಾಧನದಲ್ಲಿ ಕ್ಲಿಕ್ ಮಾಡಬಹುದಾದ ಹೋಮ್ ಮತ್ತು ವಾಲ್ಯೂಮ್ ಬಟನ್ಗಳು ಇರುವುದಿಲ್ಲ ಎಂಬುದನ್ನು ಸಹ ತಂತ್ರಜ್ಞಾನ ವಿಶ್ಲೇಷಕರು ಹಂಚಿಕೊಂಡಿದ್ದಾರೆ. ಭವಿಷ್ಯದ ಐಫೋನ್ 15 ಪ್ರೊ ಸಾಧನದಲ್ಲಿ ಘನ ಸ್ಥಿತಿಯ ಅಥವಾ ಕ್ಲಿಕ್ ಮಾಡಬಹುದಾದ ಹೋಮ್ ಮತ್ತು ವಾಲ್ಯೂಮ್ ಬಟನ್ಗಳ ಬದಲಾಗಿ, ಟ್ಯಾಪ್ಟಿಕ್ ಎಂಜಿನ್ಗಳೊಂದಿಗೆ ಸಜ್ಜುಗೊಳಿಸಲಾದ ಟಚ್ ರೀತಿಯ ಬಟನ್ಗಳು ಕಾಣಿಸಿಕೊಳ್ಳಬಹುದು. ಇದರಿಂದ ಇದೇ ಮೊದಲ ಬಾರಿಗೆ ಆಪಲ್ ಐಫೋನ್ ಸಾಧನವು ಕ್ಲಿಕ್ ಮಾಡಬಹುದಾದ ಹೋಮ್ ಮತ್ತು ವಾಲ್ಯೂಮ್ ಬಟನ್ಗಳನ್ನು ಹೊಂದಿಲ್ಲದೇ ಇರಬಹುದು ಮತ್ತು ಸಂಪೂರ್ಣ ಟಚ್ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ಹೇಳಲಾಗಿದೆ.
iphone 15 pro to come with 8gb ram? everything we know about iphone 15.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm