ಬ್ರೇಕಿಂಗ್ ನ್ಯೂಸ್
08-03-23 07:45 pm Source: Vijayakarnataka ಡಿಜಿಟಲ್ ಟೆಕ್
ನಿಮಗೆ ದುಬಾರಿ ಬೆಲೆಯ ಇತ್ತೀಚಿನ ಐಫೋನ್ 14 ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲವೇ. ಹಾಗಾದರೆ, ಚಿಂತಿಸಬೇಡಿ. ಏಕೆಂದರೆ, ಇನ್ನೇನು ಕೆಲವೇ ದಿನಗಳಲ್ಲಿ 10,000 ರೂ. ಬೆಲೆಯಲ್ಲಿ ಐಫೋನ್ 14 ರೀತಿಯದ್ದೇ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಒಂದು ನಿಮ್ಮ ಕೈಸೇರಲು ಬರುತ್ತಿದೆ.! ಹೌದು, ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಹೆಸರಾಗಿರುವ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Tecno ಮಾರುಕಟ್ಟೆಗೆ ತನ್ನ ವಿನೂತನ "Tecno Spark 10 Pro" ಸ್ಮಾರ್ಟ್‌ಫೋನನ್ನು ಬಿಡುಗಡೆಗೊಳಿಸಿ ಭರ್ಜರಿ ಸದ್ದು ಮಾಡಿದ್ದು, ಸೆಲ್ಫಿ-ಕೇಂದ್ರಿತವಾಗಿರುವ ಬಂದಿರುವ ಈ ಸ್ಮಾರ್ಟ್‌ಫೋನಿನ ಹಿಂಭಾಗದ ಕ್ಯಾಮೆರಾದ ಡಿಸೈನ್ ಗಮನಿಸಿದರೆ ಐಫೋನ್ 14 ರೀತಿಯ ವಿನ್ಯಾಸವನ್ನು ಹೊಂದಿದೆ. ಹಾಗಾದರೆ, ಈ ಹೊಸ Tecno Spark 10 Pro ಸ್ಮಾರ್ಟ್‌ಫೋನ್ ಹೇಗಿದೆ? ಮತ್ತು ಈ ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಎಂಬುದನ್ನು ನೋಡೋಣ ಬನ್ನಿ.
ಹೇಗಿದೆ ಹೊಸ Tecno Spark 10 Pro ಸ್ಮಾರ್ಟ್‌ಫೋನ್?
ನೂತನ Tecno Spark 10 Pro ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ಪಂಚ್-ಹೋಲ್ ಡಿಸ್‌ಪ್ಲೇ ಕಟೌಟ್ ಮತ್ತು ಹಿಂಭಾಗದಲ್ಲಿ ದೊಡ್ಡದಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನನ್ನು ನೋಡಿದ ತಕ್ಷಣವೇ ಇದು ಐಫೋನ್ 14 ಸ್ಮಾರ್ಟ್‌ಫೋನಿನ ಕ್ಲೋನ್ ಡಿವೈಸ್‌ನಂತೆ ಕಾಣುತ್ತದೆ. ಈ ಸ್ಮಾರ್ಟ್‌ಫೋನ್ ಹೊಂದಿರುವ ವೈಶಿಷ್ಟ್ಯಗಳನ್ನು ನೋಡುವುದಾದರೆ, 2,460 x 1,080 ಪಿಕ್ಸೆಲ್ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 68ಇಂಚಿನ FHD+ IPS LCD ಡಿಸ್‌ಪ್ಲೇ ಹೊಂದಿರುವ Tecno Spark 10 Pro ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್ ಜೊತೆಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G88 12nm ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 13 ಬೆಂಬಲದ HiOS 12.6 ನಲ್ಲಿ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ ವಿಭಾಗದಲ್ಲಿ, Tecno Spark 10 Pro ಸ್ಮಾರ್ಟ್‌ಫೋನ್ ಕ್ವಾಡ್-LED ಫ್ಲಾಶ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು AI ಲೆನ್ಸ್ ಜೊತೆಗೆ 50 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಖ್ಯ ಲೆನ್ಸ್ ಮತ್ತು 2 ಮೆಗಾಫಿಕ್ಸೆಲ್ ಡೆಪ್ತ್ ಲೆನ್ಸ್‌ಗಳನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಡ್ಯುಯೆಲ್ ಎಲ್ಇಡಿ ಫ್ಲ್ಯಾಶ್ ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಡ್ಯುಯಲ್ 4ಜಿ ಎಲ್ ಟಿಇ, ವೈ-ಫೈ 802.11, ಬ್ಲೂಟೂತ್ 5, ಜಿಪಿಎಸ್, ಟೈಪ್-ಸಿ, ಎನ್ಎಫ್ಸಿ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನಿನಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, 18W ಫಾಸ್ಟ್ ಚಾರ್ಜಿಂಗ್ ಬೆಂಬಲವಿರವ 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ವೈಶಿಷ್ಟ್ಯಗಳು ವಿಶೇಷವಾಗಿವೆ.
Tecno Spark 10 Pro ಸ್ಮಾರ್ಟ್‌ಫೋನ್ ಬೆಲೆ ಎಷ್ಟು?
ಇದೀಗ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಹೊಸ Tecno Spark 10 Pro ಸ್ಮಾರ್ಟ್‌ಫೋನ್ ಬೆಲೆಯನ್ನು ಕಂಪೆನಿ ಈ ವರೆಗೂ ಬಹಿರಂಗಪಡಿಸಿಲ್ಲ. ಆದರೆ, 6GB RAM ಮತ್ತು 128GB ಹಾಗೂ 8GB RAM ಮತ್ತು 256GB ಸ್ಟೋರೇಜ್ ಎರಡು ಮಾದರಿಗಳಲ್ಲಿ ಬರಲಿರುವ ಈ ಸ್ಮಾರ್ಟ್‌ಫೋನ್(6GB RAM ಮತ್ತು 128GB) ಸುಮಾರು $ 122 (ಸುಮಾರು 10,000 ರೂ.) ಬೆಲೆಯಲ್ಲಿ ಬರಬಹುದು ಎಂದು ಕಂಪೆನಿಯ ಮೂಲಗಳನ್ನು ಉಲ್ಲೇಖಿಸಿ ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ. ಮುಂದಿನ ಒಂದೆರಡು ವಾರಗಳಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಈ Tecno Spark 10 Pro ಸ್ಮಾರ್ಟ್‌ಫೋನಿನ ಅಧಿಕೃತ ಬೆಲೆ ಬಹಿರಂಗಗೊಳ್ಳುವ ನಿರೀಕ್ಷೆಯಿದೆ.
tecno spark 10 pro launched with 50mp camera and 5,000mah battery.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm