ಬ್ರೇಕಿಂಗ್ ನ್ಯೂಸ್
20-03-23 08:06 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದು ಎದುರುನೋಡುತ್ತಿರುವ iQOO Z7 5G ಸ್ಮಾರ್ಟ್‌ಫೋನ್ ನಾಳೆ (ಮಾರ್ಚ್ 21) ದೇಶದ ಮಾರುಕಟ್ಟೆಗೆ ಆಗಮನವಾಗುತ್ತಿರುವ ಸುದ್ದಿ ಈಗಾಗಲೇ ಅಧಿಕೃತವಾಗಿ ಬಹಿರಂಗವಾಗಿದೆ. ಇದೀಗ ದೇಶದಲ್ಲಿ iQOO Z7 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಒಂದು ದಿನದ ಮೊದಲೇ ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಮತ್ತು ಫೀಚರ್ಸ್ ಯಾವುವು ಎಂಬ ಬಗ್ಗೆ ಅಧಿಕೃತ ಮಾಹಿತಿಗಳು ದೊರೆತಿವೆ.! ಹೌದು, ವಿಶ್ವ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಭರ್ಜರಿ ಸದ್ದು ಮಾಡುತ್ತಿರುವ ಜನಪ್ರಿಯ ಮೊಬೈಲ್ ಬ್ರ್ಯಾಂಡ್ iQoo ದೇಶದಲ್ಲಿ iQOO Z7 5G ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬುದನ್ನು ಮೊದಲೇ ಬಹಿರಂಗಪಡಿಸಿದ್ದು, ಈ ಸ್ಮಾರ್ಟ್‌ಫೋನ್ 17,499 ರೂ. ಆರಂಭಿಕ ಬೆಲೆಯಲ್ಲಿ ಬರಲಿದೆ ಎಂಬುದಾಗಿ ದೃಢಪಡಿಸಿದೆ.!
ಮಾರ್ಚ್ 21 ರಂದು ಮಧ್ಯಾಹ್ನ 12 ಗಂಟೆ ದೇಶದಲ್ಲಿ iQOO Z7 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಮಾತ್ರವಲ್ಲದೇ, Amazon India ಮತ್ತು iQOO e ಸ್ಟೋರ್‌ನಲ್ಲಿ ಮಾರಾಟಕ್ಕೆ ಬರುತ್ತಿದೆ. ಈ iQOO Z7 5G ಸ್ಮಾರ್ಟ್‌ಫೋನ್ 6GB+128GB ಮತ್ತು 8GB+ 128GB ಎರಡು ಮಾದರಿಗಳಲ್ಲಿ ಕ್ರಮವಾಗಿ 18,999 ರೂ ಮತ್ತು 19,999 ರೂ. ಬೆಲೆಗಳಲ್ಲಿ ಲಭ್ಯವಿರಲಿದೆ. ಆದರೆ, ಗ್ರಾಹಕರು HDFC ಅಥವಾ SBI ಕಾರ್ಟ್‌ಗಳ ಮೇಲೆ 1,500 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದರಿಂದ ಈ ಎರಡೂ ಮಾದರಿ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 17,499 ಮತ್ತು 18,499 ರೂ.ಗಳ ಪರಿಣಾಮಕಾರಿ ಬೆಲೆಗಳಲ್ಲಿ ಖರೀದಿಗೆ ದೊರೆಯಲಿವೆ ಎಂದು ಕಂಪೆನಿ ತಿಳಿಸಿದೆ. ಇಷ್ಟೇ ಅಲ್ಲದೇ, ಈ ಹೊಸ iQOO Z7 5G ಸ್ಮಾರ್ಟ್‌ಫೋನಿನ ಫೀಚರ್ಸ್ ಬಗ್ಗೆಯೂ ಸಹ ಮಾಹಿತಿ ನೀಡಿದೆ.
ಮುಂಬರುವ iQOO Z7 5G ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು
iQOO ಕಂಪೆನಿ ಈಗಾಗಲೇ ಬಹಿರಂಗಪಡಿಸಿರುವಂತೆ, ಮುಂಬರುವ ನೂತನ iQOO Z7 5G ಸ್ಮಾರ್ಟ್‌ಫೋನ್ 6.38-ಇಂಚಿನ ಫುಲ್-ಎಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಇದರ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಗ್ ರೇಟ್ ಮತ್ತು 1300 nits ಗರಿಷ್ಠ ಪ್ರಕಾಶಮಾನ ಸಾಮರ್ಥ್ಯಗಳನ್ನು ಹೊಂದಿರಲಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, 8GB+ 128GB ಸ್ಟೋರೇಜ್ ಮರೆಗೂ ಸಂಯೋಜಿಸಲಾಗಿರುವ MediaTek Dimensity 920 5G ಪ್ರೆಸರ್ ಹೊಂದಿರುವ ಈ iQOO Z7 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಧಾರಿತ Funtouch OS 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೂ, ಮೂರು ವರ್ಷಗಳ ಮಾಸಿಕ ಭದ್ರತಾ ನವೀಕರಣಗಳನ್ನು ಮತ್ತು ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಸ್ವೀಕರಿಸುತ್ತದೆ ಎಂದು ಕಂಪನಿ ದೃಢಪಡಿಸಿದೆ
ಕ್ಯಾಮೆರಾ ವಿಭಾಗದಲ್ಲಿ, iQOO Z7 5G ಸ್ಮಾರ್ಟ್‌ಫೋನ್ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ನೊಂದಿಗೆ 64 ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಕ್ಯಾಮೆರಾ ಸಿಸ್ಟಮ್ ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ (ಎಫ್‌ಪಿಎಸ್) 4 ಕೆ ಗುಣಮಟ್ಟದ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಶಕ್ತವಾಗಿದೆ ಮತ್ತು ಇದು “ಸೂಪರ್ ನೈಟ್ ಮೋಡ್” ನೊಂದಿಗೆ ಬರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ, 25 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ 44W ಫ್ಲ್ಯಾಷ್ ಚಾರ್ಜ್ ಬೆಂಬಲಿಸುವ ಬ್ಯಾಟರಿ, ವೈಫೈ 6 ಸಂಪರ್ಕ, ಅಲ್ಟ್ರಾ ಗೇಮ್ ಮೋಡ್ ಮತ್ತು ಬಯೋಮೆಟ್ರಿಕ್ಸ್‌ಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನಂತಹ ಪ್ರಮುಖ ವೈಶಿಷ್ಟ್ಯಗಳು ಇದರಲ್ಲಿರಲಿವೆ.
iqoo z7 5g to launch in india: price at 17,499 rs!
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm