ಬ್ರೇಕಿಂಗ್ ನ್ಯೂಸ್
27-03-23 07:14 pm Source: Vijayakarnataka ಡಿಜಿಟಲ್ ಟೆಕ್
ಟೆಕ್ ದೈತ್ಯ Samsung ಭಾರತದಲ್ಲಿ ಇತ್ತೀಚಿಗಷ್ಟೇ Galaxy A34 5G ಮತ್ತು Galaxy A54 5G ಎರಡು ಗ್ಯಾಲಕ್ಸಿ A-ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಅಗ್ಗದ ಮಾದರಿಯಾಗಿ ಪರಿಚಯಗೊಂಡಿರುವ Galaxy A34 5G ಸ್ಮಾರ್ಟ್‌ಫೋನ್ 8GB RAM ಮಾದರಿಯಲ್ಲಿ 30,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು, ಇದೀಗ ಈ ಸ್ಮಾರ್ಟ್‌ಫೋನ್ ಹೊಸದಾಗಿ 6GB RAM ಮಾದರಿಯಲ್ಲಿ ಬಿಡುಗಡೆಯಾಗಲಿದ್ದು, ಇದು 28,999 ರೂ. ಬೆಲೆ ಹೊಂದಿರಲಿದೆ ಎಂದು 91ಮೊಬೈಲ್ಸ್ ವರದಿಯು ಹೇಳಿದೆ. ಈ ಹೊಸ ಹೊಸ ಮಾದರಿಯು 8GB RAM ಮಾದರಿಗಿಂತ 3,000 ರೂ. ಅಗ್ಗದ ಬೆಲೆಯಲ್ಲಿ ಬರಲಿದೆ. ಜೊತೆಗೆ 3,000 ವರೆಗೆ ಬ್ಯಾಂಕ್ ರಿಯಾಯಿತಿ ಮತ್ತು 1,000 ರೂ. Samsung Shop ಅಪ್ಲಿಕೇಶನ್ ವೋಚರ್‌ನೊಂದಿಗೆ ಹೊಸ 6GB RAM ಮಾದರಿಯು 24,999 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತದ ಎಂದು ವರದಿಯಲ್ಲಿ ತಿಳಿಸಲಾಗಿದೆ.!
ದೇಶದಲ್ಲಿ ಬಹುನಿರೀಕ್ಷಿತ Samsung Galaxy A54 5G ಮತ್ತು Samsung Galaxy A34 5G ಸ್ಮಾರ್ಟ್‌ಫೋನ್‌ಗಳು ಇದೇ ಮಾರ್ಚ್ 23ರಿಂದ ಮೊದಲ ಬಾರಿಗೆ ಮಾರಾಟಕ್ಕೆ ಬಂದಿವೆ. ಕಳೆದ ಮಾರ್ಚ್ 16 ರಂದು ದೇಶದಲ್ಲಿ Galaxy A34 5G ಸ್ಮಾರ್ಟ್‌ಫೋನ್ 30,999 ರೂ.ಗಳ ಆರಂಭಿಕ ಬೆಲೆಯಲ್ಲಿ ಹಾಗೂ Galaxy A54 5G ಸ್ಮಾರ್ಟ್‌ಫೋನ್ 38,999 ರೂ.ಗಳ ಬೆಲೆಯಲ್ಲಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಿದ್ದವು. ಇದೀಗ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಪ್ರಮುಖ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮತ್ತು ಅಧಿಕೃತ ಸ್ಯಾಮ್‌ಸಂಗ್ ಇ-ಸ್ಟೋರ್ ಹಾಗೂ ದೇಶದ ಪ್ರಮುಖ ರಿಟೇಲ್ ಸ್ಯಾಮ್‌ಸಂಗ್ ಪಾಲುದಾರ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿವೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳ ಖರೀದಿಯ ಕೊಡುಗೆಯಾಗಿ ಆಯ್ದ ಬ್ಯಾಂಕ್ ಕಾರ್ಡ್ ಗ್ರಾಹಕರಿಗೆ 3,000 ಕ್ಯಾಶ್‌ಬ್ಯಾಕ್ ಒದಗಿಸುವುದಾಗಿ Samsung ಕಂಪೆನಿ ತಿಳಿಸಿದೆ.
ದೇಶದಲ್ಲಿ ಪ್ರಸ್ತುತ Samsung Galaxy A34 5G ಸ್ಮಾರ್ಟ್‌ಫೋನಿನ 8GB RAM + 128GB ಸ್ಟೋರೇಜ್ ಮಾದರಿಯು 30,999 ರೂ. ಬೆಲೆಯಲ್ಲಿ, ಇದರ ಟಾಪ್-ಆಫ್-ಲೈನ್ 8GB RAM +256 GB ಸ್ಟೋರೇಜ್ ಮಾದರಿಯು 32,999 ರೂ. ಬೆಲೆಯಲ್ಲಿ ಅದ್ಭುತ ಲೈಮ್, ಅದ್ಭುತ ಗ್ರ್ಯಾಫೈಟ್ ಮತ್ತು ಅದ್ಭುತ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಮಾರಾಟಕ್ಕಿದೆ. ಇತ್ತ Samsung Galaxy A54 5G ಸ್ಮಾರ್ಟ್‌ಫೋನಿನ 8 GB RAM + 128GB ಸ್ಟೋರೇಜ್ ಮಾದರಿಯು 38,999 ರೂ.ಬೆಲೆಯಲ್ಲಿ, ಇದರ ಟಾಪ್-ಆಫ್-ಲೈನ್ 8GB RAM + 256GB ಸ್ಟೋರೇಜ್ ಮಾದರಿಯು 40,999 ರೂ. ಬೆಲೆಯಲ್ಲಿ ಅದ್ಭುತ ಲೈಮ್, ಅದ್ಭುತ ಗ್ರ್ಯಾಫೈಟ್ ಮತ್ತು ಅದ್ಭುತ ನೇರಳೆ ಬಣ್ಣ ಆಯ್ಕೆಗಳಲ್ಲಿ ಮಾರಾಟಕ್ಕೆ ಬಂದಿದೆ. ಹಾಗಾದರೆ, ದೇಶದಲ್ಲಿ Samsung Galaxy A54 5G ಮತ್ತು Samsung Galaxy A34 5G ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
Samsung Galaxy A54 5G ಮತ್ತು Samsung Galaxy A34 5G ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳು
ದೇಶದಲ್ಲಿ ಬಿಡುಗಡೆಯಾಗಿರುವ ನೂತನ Samsung Galaxy A54 5G ಮತ್ತು Samsung Galaxy A34 5G ಎರಡೂ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ Android 13 ನಲ್ಲಿ UI 5.1 ಜೊತೆಗೆ ರನ್ ಆಗುತ್ತವೆ ಮತ್ತು ನಾಲ್ಕು ತಲೆಮಾರುಗಳ OS ಅಪ್‌ಡೇಟ್‌ಗಳು ಮತ್ತು ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಸ್ವೀಕರಿಸುತ್ತವೆ ಎಂದು Samsung ತಿಳಿಸಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಫುಲ್-HD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಇರುವ ಮತ್ತು ಸೂರ್ಯನ ಬೆಳಕಿನಲ್ಲಿ ಹೆಚ್ಚಿನ ಗೋಚರತೆಗಾಗಿ 'ಐ ಬೂಸ್ಟರ್' ಬೆಂಬಲದೊಂದಿಗೆ ಸೂಪರ್ AMOLED ಡಿಸ್‌ಪ್ಲೇಗಳನ್ನು ಒಳಗೊಂಡಿವೆ. ಆದರೆ, ಇವುಗಳಲ್ಲಿ Samsung Galaxy A54 5G ಸ್ಮಾರ್ಟ್‌ಫೋನ್ 6.4-ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, Samsung Galaxy A34 5G ಸ್ಮಾರ್ಟ್‌ಫೋನ್ ಸ್ವಲ್ಪ ದೊಡ್ಡದಾದ 6.6-ಇಂಚಿನ ಡಿಸ್‌ಪ್ಲೇ ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, Samsung Galaxy A54 5G ಸ್ಮಾರ್ಟ್‌ಫೋನ್ f/1.8 ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್, 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ಗಳನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇತ್ತ Samsung Galaxy A34 5G ಸ್ಮಾರ್ಟ್‌ಫೋನ್ ಕೂಡ OIS ಮತ್ತು f/1.8 ಲೆನ್ಸ್‌ನೊಂದಿಗೆ 48-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ಗಳನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ, ಇದು 13-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಒಳಗೊಂಡಿದೆ.
ಕಾರ್ಯನಿರ್ವಹಣೆ ವಿಭಾಗದಲ್ಲಿ, Samsung Galaxy A54 5G ಮತ್ತು Samsung Galaxy A34 5G ಎರಡು ಸ್ಮಾರ್ಟ್‌ಫೋನ್‌ಗಳು 8GB RAM ಮತ್ತು 256GB ಆನ್‌ಬೋರ್ಡ್ ಮೆಮೊರಿಯೊಂದಿಗೆ ಜೋಡಿಸಲಾದ ಆಕ್ಟಾ-ಕೋರ್ ಪ್ರೊಸೆಸರ್‌ಗಳಿಂದ (ಪ್ರೊಸೆಸರ್ ಹೆಸರು ಬಹಿರಂಗವಾಗಿಲ್ಲ) ಚಾಲಿತವಾಗಿವೆ. Samsung ಕಂಪೆನಿಯ ಸ್ವಂತ ಮತ್ತು ಹೆಚ್ಚು ಸುರಕ್ಷಿತವಾದ ನಾಕ್ಸ್ ಭದ್ರತಾ ವ್ಯವಸ್ಥೆಯನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮೈಕ್ರೋ SD ಕಾರ್ಡ್ ಸಹಾಯದಿಂದ 1TB ವರೆಗೆ ಆಂತರಿಕ ಮೆಮೊರಿ ವಿಸ್ತರಣೆಗೆ ಅವಕಾಶ ಹೊಂದಿವೆ. ಸಂಪರ್ಕ ಆಯ್ಕೆಗಳಲ್ಲಿ, ಈ ಎರಡೂ Samsung ಸ್ಮಾರ್ಟ್‌ಫೋನ್‌ಗಳಲ್ಲಿ 5G, Wi-Fi 802.11 a/b/g/n/ac, ಬ್ಲೂಟೂತ್ 5.3, GPS/ A-GPS, GPS, Glonas, Beidou, Galileo, QZSS ಮತ್ತು USB ಟೈಪ್-C ಪೋರ್ಟ್ ನಂತಹ ವೈಶಿಷ್ಟ್ಯಗಳಿವೆ.
ಬ್ಯಾಟರಿ ವಿಭಾಗದಲ್ಲಿ, Samsung Galaxy A54 5G ಮತ್ತು Samsung Galaxy A34 5G ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಒಂದೇ ಚಾರ್ಜ್‌ನಲ್ಲಿ ಬ್ಯಾಟರಿಯು ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿಂದತೆ, ಈ ಎರಡೂ ಮಾದರಿ Samsung ಸ್ಮಾರ್ಟ್‌ಫೋನ್‌ಗಳು IP67-ಪ್ರಮಾಣೀಕೃತ ನಿರ್ಮಾಣವನ್ನು ಹೊಂದಿವೆ. ಜೊತೆಗೆ ಡಾಲ್ಬಿ ತಂತ್ರಜ್ಞಾನದಿಂದ ವರ್ಧಿಸಲ್ಪಟ್ಟ ಸ್ಟಿರಿಯೊ ಸ್ಪೀಕರ್‌ಗಳು, ಕಡಿಮೆ ಬೆಳಕಿನಲ್ಲಿ ಪ್ರಕಾಶಮಾನವಾದ ಫೋಟೋಗಳು ಮತ್ತು ವೀಡಿಯೊಗಳನ್ನು ಚಿತ್ರೀಕರಿಸಲು ಕ್ಯಾಮರಾ ಘಟಕಗಳು ನೈಟೋಗ್ರಫಿ ವೈಶಿಷ್ಟ್ಯದ ಬೆಂಬಲ, ಅಕ್ಸೆಲೆರೊಮೀಟರ್, ಲೈಟ್, ಫಿಂಗರ್‌ಪ್ರಿಂಟ್, ಗೈರೊ, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕವನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಒಳಗೊಂಡಿವೆ.
samsung may launch 6gb variant of galaxy a34 5g in india soon.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 09:24 pm
HK News Desk
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm