ಬ್ರೇಕಿಂಗ್ ನ್ಯೂಸ್
29-03-23 07:17 pm Source: Vijayakarnataka ಡಿಜಿಟಲ್ ಟೆಕ್
ಕಳೆದ CES 2023 ಈವೆಂಟ್‌ನಲ್ಲಿ ಜಾಗತಿಕವಾಗಿ ಪರಿಚಯಿಸಲಾಗಿದ್ದ ASUS ಕಂಪೆನಿಯ ಬಹುನಿರೀಕ್ಷಿತ ROG Strix Scar 16 ಮತ್ತು ROG Strix Scar 18 ಗೇಮಿಂಗ್ ಲ್ಯಾಪ್‌ಟಾಪ್‌ಗಳು ದೇಶದಲ್ಲಿಂದು ಭರ್ಜರಿಯಾಗಿ ಬಿಡುಗಡೆಯಾಗಿವೆ. ಗೇಮಿಂಗ್ ಪ್ರಿಯರಿಗಾಗಿ ASUS ಅತ್ಯುತ್ತಮ ಅಡಾಪ್ಟಿವ್ ಸಿಂಕ್‌ನೊಂದಿಗೆ 240Hz ರಿಫ್ರೆಶ್ ರೇಟ್ ಬೆಂಬಲಿಸುವ QHD ರೆಸಲ್ಯೂಶನ್ ಡಿಸ್‌ಪ್ಲೇ, ಕಸ್ಟಮೈಸ್ ಮಾಡಬಹುದಾದ 'ಆರ್ಮರ್ ಕ್ಯಾಪ್ಸ್' ಮತ್ತು ಇಂಟೆಲ್‌ನ ಇತ್ತೀಚಿನ ಹೈ-ಎಂಡ್ ಪ್ರೊಸೆಸರ್‌ಗಳು ಸೇರಿದಂತೆ ಬಳಕೆದಾರರಿಗೆ ಉನ್ನತ ಮಟ್ಟದ ಗೇಮಿಂಗ್ ಮತ್ತು ಕಂಟೆಂಟ್ ಕ್ರಿಯೇಟ್ ಅನುಭವಗಳನ್ನು ಒದಗಿಸುವ ಭರವಸೆಯಲ್ಲಿ ಈ ಎರಡೂ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಹಾಗಾದರೆ, ದೇಶದಲ್ಲಿ ಬಿಡುಗಡೆಯಾಗಿರುವ ಹೊಸ ROG Strix Scar 16 ಮತ್ತು ROG Strix Scar 18 ಗೇಮಿಂಗ್ ಲ್ಯಾಪ್‌ಟಾಪ್‌ಗಳು ಹೇಗಿವೆ ಮತ್ತು ಇವುಗಳ ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ROG Strix Scar 16 ಮತ್ತು ROG Strix Scar 18 ಲ್ಯಾಪ್‌ಟಾಪ್‌ಗಳ ಪ್ರಮುಖ ವೈಶಿಷ್ಟ್ಯಗಳು.
ಭಾರತದಲ್ಲಿ ಗೇಮಿಂಗ್ ಲ್ಯಾಪ್‌ಟಾಪ್ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವ Asus ROG ಬ್ರಾಂಡ್‌ನಲ್ಲಿ ಅಪ್‌ಗ್ರೇಡ್ ಮಾಡಿರುವ ROG Strix Scar 16 ಮತ್ತು 18 ಲ್ಯಾಪ್‌ಟಾಪ್‌ಗಳು ಕಪ್ಪು ಬಣ್ಣದೊಂದಿಗೆ ಹೊಸ ಮತ್ತು ನವೀಕರಿಸಿದ ಕ್ಲೀನ್ ಕಟ್ ವಿನ್ಯಾಸವನ್ನು ಒಳಗೊಂಡಿವೆ. ಈ ಲ್ಯಾಪ್‌ಟಾಪ್‌ಗಳು ಅಡಾಪ್ಟಿವ್ ಸಿಂಕ್‌ನೊಂದಿಗೆ 240Hz ರಿಫ್ರೆಶ್ ರೇಟ್ ಬೆಂಬಲಿಸುವ QHD ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದ್ದು, ಇದು ಕಸ್ಟಮೈಸ್ ಮಾಡಬಹುದಾದ 'ಆರ್ಮರ್ ಕ್ಯಾಪ್ಸ್' ತಂತ್ರಜ್ಞಾನವನ್ನು ಒಳಗೊಂಡಿದೆ. ಇನ್ನು ಆರ್ಮರ್ ಕ್ಯಾಪ್ಸ್ ಮೂಲಕ 3D ಪ್ರಿಂಟ್ ತೆಗೆಯುವುದಕ್ಕೆ ಅವಕಾಶವಿದೆ. ಈ ಎರಡು ಲ್ಯಾಪ್‌ಟಾಪ್‌ಗಳು ಇಂಟೆಲ್ 13ನೇ ತಲೆಮಾರಿನ ಪ್ರೊಸೆಸರ್‌ನಲ್ಲಿ ಪೂರ್ವ-ಸ್ಥಾಪಿತ ವಿಂಡೋಸ್ 11 ನೊಂದಿಗೆ ಕಾರ್ಯನಿರ್ವಹಿಸಲಿವೆ. ಗ್ರಾಫಿಕ್ಸ್ ಕಾರ್ಡ್‌ಗೆ ಬಂದರೆ, ನೀವು MUX ಸ್ವಿಚ್‌ನೊಂದಿಗೆ Nvidia RTX 4000 ಹೊಂದಿರುವ ಈ ಲ್ಯಾಪ್‌ಟಾಪ್‌ಗಳು DDR5 RAM ಬೆಂಬಲ ಹೊಂದಿವೆ.
ROG Strix Sxar 16 ಲ್ಯಾಪ್‌ಟಾಪ್ ವಿಶೇಷತೆಗಳು
ROG Strix Sxar 16 ಎರಡು ವಿಧಗಳಲ್ಲಿ 16 ಇಂಚಿನ ಡಿಸ್‌ಪ್ಲೇಗಳನ್ನು ಹೊಂದಿದೆ. ಮೊದಲ ಮಾದರಿಯು 240Hz ರಿಫ್ರೆಶ್ ರೇಟ್‌ನೊಂದಿಗೆ QHD+ ನೆಬ್ಯುಲಾ HDR ಡಿಸ್‌ಪ್ಲೇ ಹೊಂದಿದ್ದರೆ, ಎರಡನೇ ಮಾದರಿಯು 165Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇವೆರಡೂ 100% DCI-P3 ಬಣ್ಣದ ಹರವು, 16:10 ಆಕಾರ ಅನುಪಾತ, G-ಸಿಂಕ್ ಬೆಂಬಲ, ಡಾಲ್ಬಿ ವಿಷನ್ ಮತ್ತು MUX ಸ್ವಿಚ್ ಮತ್ತು ಎನ್ವಿಡಿಯಾ ಅಡ್ವಾನ್ಸ್ಡ್ ಆಪ್ಟಿಮಸ್‌ನೊಂದಿಗೆ ಬರುತ್ತವೆ. ಈ ಲ್ಯಾಪ್‌ಟಾಪ್ 13ನೇ ಜನ್ ಇಂಟೆಲ್ ಕೋರ್ i9-13980HX CPU ಮತ್ತು Nvidia GeForce RTX 4090 GPU ನಲ್ಲಿ ಚಾಲಿತವಾಗಿದ್ದು, 32GB ವರೆಗಿನ DDR5 RAM (64GB ವರೆಗೆ ಅಪ್‌ಗ್ರೇಡ್ ಮಾಡಬಹುದಾದ) ಮತ್ತು 1TB SSD (4TB ಮತ್ತು Raid0 ಕಾನ್ಫಿಗರೇಶನ್ ವರೆಗೆ) ಬೆಂಬಲವಿದೆ.
ROG Strix Sxar 16 ಲ್ಯಾಪ್‌ಟಾಪ್‌ನಲ್ಲಿ I/O ಪೋರ್ಟ್ ವಿಂಗಡಣೆಯು ಥಂಡರ್‌ಬೋಲ್ಟ್ 4 ಪೋರ್ಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್, 2 ಯುಎಸ್‌ಬಿ 3.2 ಪೋರ್ಟ್‌ಗಳು, ಎಚ್‌ಡಿಎಂಐ 2.1 ಪೋರ್ಟ್, ಡಿಸಿ ಪವರ್ ಇನ್‌ಪುಟ್ ಪೋರ್ಟ್, ಆರ್‌ಜೆ-45 ಜ್ಯಾಕ್ ಮತ್ತು ಆಡಿಯೊ ಕಾಂಬೊ ಜ್ಯಾಕ್ ಕನೆಕ್ಟಿವಿಟಿ ವೈಶಿಷ್ಟ್ಯಗಳಿವೆ. ಸ್ಟ್ರಿಕ್ಸ್ ಸ್ಕಾರ್ 16 ಡಾಲ್ಬಿ ಅಟ್ಮಾಸ್ ಮತ್ತು ಸ್ಮಾರ್ಟ್ ಆಂಪ್ ಟೆಕ್ನಾಲಜಿಗೆ ಬೆಂಬಲದೊಂದಿಗೆ 4-ಸ್ಪೀಕರ್ ಸೆಟಪ್ , AI ಶಬ್ದ-ರದ್ದು ಮಾಡುವ ತಂತ್ರಜ್ಞಾನಕ್ಕೆ ಬೆಂಬಲ ಸೇರಿದಂತೆ, 330W ಅಡಾಪ್ಟರ್‌ನೊಂದಿಗೆ 90Wh ಬ್ಯಾಟರಿ ಮತ್ತು 720p ವೆಬ್ ಕ್ಯಾಮೆರಾವನ್ನು ಹೊಂದಿದೆ.
ROG Strix Sxar 18 ಲ್ಯಾಪ್‌ಟಾಪ್ ವಿಶೇಷತೆಗಳು
ROG Strix Scar ಲ್ಯಾಪ್‌ಟಾಪ್ ಬಹುತೇಕವಾಗಿ ROG Strix Sxar 16 ವೈಶಿಷ್ಟ್ಯಗಳನ್ನೇ ಹೋಲುತ್ತದೆ. ಇದು ಅದೇ 13 ನೇ ಜನ್ ಇಂಟೆಲ್ ಕೋರ್ i9-13980HX ಚಿಪ್‌ನಿಂದ ನಡೆಸಲ್ಪಡುತ್ತದೆ, ಜೊತೆಗೆ Nvidia GeForce RTX 4090 GPU ಮತ್ತು 32GB RAM ಮತ್ತು 2TB ವರೆಗಿನ SSD ಸಂಗ್ರಹಣೆಯನ್ನು ಸಹ ಬೆಂಬಲಿಸುತ್ತದೆ.ಈ ಲ್ಯಾಪ್‌ಟಾಪ್ ಕೂಡ 330W ಅಡಾಪ್ಟರ್‌ನೊಂದಿಗೆ 90Wh ಬ್ಯಾಟರಿಯನ್ನು ಹೊಂದಿದೆ, ಡಾಲ್ಬಿ ಅಟ್ಮಾಸ್ ಬೆಂಬಲ, 720p ವೆಬ್ ಕ್ಯಾಮೆರಾ ಮತ್ತು ROG ಸ್ಟ್ರಿಕ್ಸ್ ಸ್ಕಾರ್ 16 ರಂತೆಯೇ ಅದೇ ಪೋರ್ಟ್ ಸಂಗ್ರಹವನ್ನು ಸಹ ಹೊಂದಿದೆ. ಇವುಗಳ ವ್ಯತ್ಯಾಸವು ಡಿಸ್‌ಪ್ಲೇಯಲ್ಲಿದ್ದು,. ಇದು 100% DCI-P3 ಬಣ್ಣದ ಹರವು, Dolby Vision HDR, G-Sync, Pantone ಪ್ರಮಾಣೀಕರಣ ಮತ್ತು ಹೆಚ್ಚಿನವುಗಳೊಂದಿಗೆ ದೊಡ್ಡ 18-ಇಂಚಿನ QHD+ ಡಿಸ್‌ಪ್ಲೇ ಹೊಂದಿದೆ. ಇದು ಎರಡು 240Hz ಮತ್ತು 165Hz ರಿಫ್ರೆಶ್ ರೇಟ್ ಆಯ್ಕೆಗಳೊಂದಿಗೆ ಬರುತ್ತದೆ. ಮತ್ತು MUX ಸ್ವಿಚ್ ಮತ್ತು RGB ಕೀಬೋರ್ಡ್ ಸಹ ಬೆಂಬಲಿಸುತ್ತದೆ.
ಬೆಲೆ ಮತ್ತು ಲಭ್ಯತೆ
Asus ROG Strix Scar 16 ಮತ್ತು ROG Strix Scar 18 ಎರಡೂ ಲ್ಯಾಪ್‌ಟಾಪ್‌ಗಳು ಭಾರತದಲ್ಲಿ 2,79,990 ಆರಂಭಿಕ ಪ್ರಾರಂಭವಾಗುತ್ತವೆ ಮತ್ತು Amazon, Flipkart, Asus ಇ-ಶಾಪ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಿರುತ್ತವೆ ಎಂದು ಕಂಪೆನಿ ತಿಳಿಸಿದೆ.
asus rog strix scar 16 and scar 18 laptops introduced in india.
06-01-25 09:41 pm
Bengaluru Correspondent
Chamarajanagar, Heart Attack School Student:...
06-01-25 06:53 pm
Bangalore Suicide, Software engineer family:...
06-01-25 02:03 pm
HMPV virus Karnataka, Guidelines: ಹೆಚ್ಎಂಪಿವ...
06-01-25 01:39 pm
ಬೆಂಗಳೂರಿನಲ್ಲಿ ಎರಡು ಶಿಶುಗಳಲ್ಲಿ ಎಚ್ಎಂಪಿವಿ ವೈರಸ್...
06-01-25 01:04 pm
07-01-25 06:32 pm
HK News Desk
ಹಾರ್ಟ್ ಅಟ್ಯಾಕ್ ಆಗಿ ಸತ್ತಿದ್ದಾನೆಂದು ತಿಳಿದು ಅಂತ್...
05-01-25 09:41 pm
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
07-01-25 11:13 pm
Mangaluru Correspondent
Mangalore University, Phd Admission: ಮಂಗಳೂರು...
07-01-25 10:22 pm
Vice President Jagdeep Dhankhar, Dharmasthala...
07-01-25 09:15 pm
Mangalore News, Misfire, Police: ಸೆಕೆಂಡ್ ಹ್ಯಾ...
07-01-25 02:50 pm
Naxal Surrender, Sundari, Kuthlur Village: ನಕ...
07-01-25 11:30 am
07-01-25 03:50 pm
Mangalore Correspondent
Digital Arrest, I4C database, Cyber Frau: ಸೈಬ...
06-01-25 05:37 pm
Mangalore Robbery, Singari Beedi owner, Crime...
04-01-25 11:31 am
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm