ಬ್ರೇಕಿಂಗ್ ನ್ಯೂಸ್
30-03-23 07:55 pm Source: Vijayakarnataka ಡಿಜಿಟಲ್ ಟೆಕ್
ಶಿಯೋಮಿ ಕಂಪೆನಿಯ ಜನಪ್ರಿಯ Note 12 ಸರಣಿಯಲ್ಲಿ 4G ಸಾಮರ್ಥ್ಯದ Redmi Note 12 4G ಸ್ಮಾರ್ಟ್‌ಫೋನ್ ದೇಶದಲ್ಲಿಂದು ಬಿಡುಗಡೆಯಾಗಿದೆ. ದೇಶದಲ್ಲಿ Note 12 ಸರಣಿಯಲ್ಲಿ Redmi Note 12 5G, Note 12 Pro 5G ಮತ್ತು Note 12 Pro+ 5G ಎಂಬ ಮೂರು ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಲಭ್ಯವಿದ್ದವು. ಇವುಗಳ ಜೊತೆಗೆ ಇದೇ ಮೊದಲ ಬಾರಿಗೆ 4G ಸಾಮರ್ಥ್ಯದಲ್ಲಿ ಹೊಸದಾಗಿ Redmi Note 12 4G ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿದೆ. ಈ ಹೊಸ ಸ್ಮಾರ್ಟ್‌ಫೋನ್ Qualcomm Snapdragon 685, ಪ್ರೊಸೆಸರ್, 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 33W ಫಾಸ್ಟ್ ಚಾರ್ಜಿಂಗ್ ಬೆಂಬಲವಿರುವ 5,000mAh ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯಗಳೊಂದಿಗೆ ಅತ್ಯುತ್ತಮ ಬೆಲೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದಲೆ.
Redmi Note 12 4G ವಿಶೇಷಣಗಳು, ವೈಶಿಷ್ಟ್ಯಗಳು
4G-ಬೆಂಬಲಿತ ಡ್ಯುಯಲ್ ನ್ಯಾನೊ SIM ಸಾಮರ್ಥ್ಯದ ನೂತನ Redmi Note 12 4G ಸ್ಮಾರ್ಟ್‌ಫೋನ್ 6.67-ಇಂಚಿನ ಫುಲ್-HD+ (2400 x 1080 ಪಿಕ್ಸೆಲ್‌ಗಳು) ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಾಮರ್ಥ್ಯದಲ್ಲಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, 8GB LPDDR4X RAM ಮತ್ತು 128GB UFS2.2 ಸ್ಟೋರೇಜ್ ಜೊತೆಗೆ ಸಂಯೋಜಿಸಲಾದ 6nm ಆಕ್ಟಾ-ಕೋರ್ Qualcomm Snapdragon 685 ಪ್ರೊಸೆಸರ್ ಮತ್ತು Adreno 610 GPU ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸಲಿದೆ. ಮತ್ತು ಮೈಕ್ರೋ ಎಸ್‌ಡಿ ಕಾರ್ಡ್ ಸಹಾಯದಿಂದ 1TB ವರೆಗೆ.ಮೆಮೊರಿ ವಿಸ್ತರಿಸಬಹುದಾಗಿದೆ.
ಈ Redmi Note 12 4G ಸ್ಮಾರ್ಟ್‌ಫೋನ್ ಎಡಭಾಗದಲ್ಲಿ ಆಯತಾಕಾರದ ಮಾಡ್ಯೂಲ್‌ನಲ್ಲಿ LED ಫ್ಲ್ಯಾಷ್ ಜೊತೆಗೆ 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ಗಳಿಂದ ಶಕ್ತವಾಗಿದೆ. ಸೆಲ್ಫಿಗಳಿಗಾಗಿ, 13-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನುಳಿದಂತೆ, 33W ಫಾಸ್ಟ್ ಚಾರ್ಜಿಂಗ್ ಬೆಂಬಲವಿರುವ 5,000mAh ಬ್ಯಾಟರಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, IP53 ರೇಟಿಂಗ್, GPS, Wi-Fi 802.11a/b/g/n/ac, ಮತ್ತು ಬ್ಲೂಟೂತ್ 5.0 ಬೆಂಬಲದಂತಹ ವೈಶಿಷ್ಟ್ಯಗಳನ್ನು ಈ Redmi Note 12 4G ಸ್ಮಾರ್ಟ್‌ಫೋನ್ ಹೊಂದಿದೆ. ಇನ್ನು ಹೆಸರಿನಲ್ಲೇ ಸೂಚಿಸಿರುವಂತೆ, ಈ ಸ್ಮಾರ್ಟ್‌ಫೋನ್ ಕೇವಲ 4Gಯನ್ನು ಮಾತ್ರ ಬೆಂಬಲಿಸಲಿದೆ
ಭಾರತದಲ್ಲಿ Redmi Note 12 4G ಬೆಲೆ, ಲಭ್ಯತೆ
ದೇಶದಲ್ಲಿ Redmi Note 12 4G ಸ್ಮಾರ್ಟ್‌ಫೋನ್ 6GB + 64GB ಮತ್ತು 6GB + 128GB ಎರಡು ಮಾದರಿಗಳಲ್ಲಿ ಕ್ರಮವಾಗಿ 14,999 ರೂ. ಮತ್ತು 16,999 ರೂ. ಬೆಲೆಗಳಲ್ಲಿ ಬಿಡುಗಡೆಯಾಗಿದೆ. ಲೂನಾರ್ ಬ್ಲ್ಯಾಕ್, ಫ್ರಾಸ್ಟೆಡ್ ಐಸ್ ಬ್ಲೂ ಮತ್ತು ಸನ್‌ರೈಸ್ ಗೋಲ್ಡ್ ಮೂರು ಬಣ್ಣಗಳಲ್ಲಿ ಪರಿಚಯಗೊಂಡಿರುವ ಈ Redmi Note 12 4G ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ICICI ಬ್ಯಾಂಕ್ ಕಾರ್ಡ್ ಗ್ರಾಹಕರಿಗೆ 1,000 ರಿಯಾಯಿತಿ ಸಹ ದೊರೆಯಲಿದ್ದು, ಇದೇ ಏಪ್ರಿಲ್ 6 ರಂದು ಮಧ್ಯಾಹ್ನ 12 PMಗಂಟೆಯಿಂದ Amazon, mi.com ವೆಬ್‌ಸೈಟ್‌ಗಳು ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪೆನಿ ತಿಳಿಸಿದೆ.
redmi note 12 4g with 33w fast charging launched in india.
22-11-24 05:16 pm
HK News Desk
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
Liquor Bandh, Mangalore: ನ.20ರ ಮದ್ಯ ವ್ಯಾಪಾರ ಬ...
19-11-24 11:05 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
22-11-24 10:33 pm
Mangalore Correspondent
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
Ullal news, Mangalore, Batapady; ಭ್ರಷ್ಟ ಅಧಿಕಾ...
22-11-24 11:55 am
22-11-24 10:47 pm
Mangalore Correspondent
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm
Mangalore court, crime, Rape: ಅಜ್ಜಿ ಮನೆಯಲ್ಲಿ...
22-11-24 01:33 pm