ಬ್ರೇಕಿಂಗ್ ನ್ಯೂಸ್
31-03-23 07:43 pm Source: Vijayakarnataka ಡಿಜಿಟಲ್ ಟೆಕ್
ಲ್ಯಾಪ್‌ಟಾಪ್ ತಯಾರಿಕೆಯಲ್ಲಿ ಹೆಸರಾಂತ ಟೆಕ್ ಬ್ರ್ಯಾಂಡ್ Acer ದೇಶದಲ್ಲಿಂದು ಎರಡು ವಿನೂತನ 4K ಆಂಡ್ರಾಯ್ಡ್ QLED ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆಗೊಳಿಸಿದೆ. Acer ಕಂಪೆನಿಯ ಜನಪ್ರಿಯ Acer W ಸರಣಿಯಲ್ಲಿ 55 ಮತ್ತು 65 ಇಂಚಿನ ಎರಡು ಮಾದರಿಗಳಲ್ಲಿ ಈ ಎರಡೂ 4K ಆಂಡ್ರಾಯ್ಡ್ QLED ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಾಗಿದ್ದು, ಈ ಎರಡೂ ಸ್ಮಾರ್ಟ್‌ಟಿವಿಗಳು ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಅದ್ಭುತ ಚಿತ್ರ ಗುಣಮಟ್ಟವನ್ನು ನೀಡುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾದರೆ, Acer W ಸರಣಿಯಲ್ಲಿ ಪರಿಚಯಿಸಲಾಗಿರುವ ನೂತನ Acer W ಸರಣಿ ಸ್ಮಾರ್ಟ್‌ಟಿವಿಗಳು ಹೇಗಿವೆ ಮತ್ತು ಇವುಗಳ ಬೆಲೆಗಳು ಎಷ್ಟು ಎಂಬ ಎಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
Acer ಪರಿಚಯಿಸಿರುವ Acer W ಸರಣಿಯ ಎರಡೂ ಮಾದರಿ ಸ್ಮಾರ್ಟ್‌ಟಿವಿಗಳು ಪೂರ್ಣ-ಚಲನೆಯ ಸ್ಲಿಮ್ ವಾಲ್ ಮೌಂಟ್‌ನೊಂದಿಗೆ ಬಂದಿವೆ. ಪ್ರೀಮಿಯಂ ನೋಟವನ್ನು ನೀಡುವಂತಹ ಸೊಗಸಾದ ಫ್ರೇಮ್‌ಲೆಸ್, ಎಡ್ಜ್-ಟು-ಎಡ್ಜ್ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿಗಳು ಆಂಟಿ-ಗ್ಲೇರ್ ಡಿಸ್ಪ್ಲೇ ಮತ್ತು 95% DCI-P3 ಬಣ್ಣದ ಗ್ಯಾಮಟ್‌ನೊಂದಿಗೆ ಬರುತ್ತದೆ, ಇದು ವ್ಯಾಪಕ ಶ್ರೇಣಿಯ ಬಣ್ಣಗಳನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ನಾವು ಮೊದಲೇ ಹೇಳಿದಂತೆ, ಈ ಸ್ಮಾರ್ಟ್‌ಟಿವಿಗಳು ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ 4K ಅಲ್ಟ್ರಾ ಎಚ್‌ಡಿ ರೆಸಲ್ಯೂಶನ್ ಹೊಂದಿದ್ದು, ಇದು ಅದ್ಭುತವಾದ ದೃಶ್ಯಗಳನ್ನು ನೀಡುವಂತಹ ಇತ್ತೀಚಿನ ತಂತ್ರಜ್ಞಾನವಾಗಿದೆ.
ಕಾರ್ಯನಿರ್ವಹಣೆ ವಿಭಾಗದಲ್ಲಿ, 2GB RAM ಮತ್ತು 16GB ಸ್ಟೋರೇಜ್‌ನೊಮದಿಗೆ 64 ಬಿಟ್ ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್ TV 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಪ್ರಮಾಣೀಕೃತ ಆಂಡ್ರಾಯ್ಡ್ ಟಿವಿ 11 ಜೊತೆಗೆ ಗೂಗಲ್ ಅಪ್ಲಿಕೇಶನ್‌ಗಳು, ಫಾರ್ ಫೀಲ್ಡ್ ಮೈಕ್, ಮೋಷನ್ ಸೆನ್ಸರ್ ಮತ್ತು ಧ್ವನಿ-ನಿಯಂತ್ರಿತ ಸ್ಮಾರ್ಟ್ ರಿಮೋಟ್ ಸಹ ಒಳಗೊಂಡಿವೆ. ಟಿವಿ ರಿಮೋಟ್ ಅಂತರ್ನಿರ್ಮಿತ ಗೂಗಲ್ ಅಸಿಸ್ಟೆಂಟ್ ವೈಶಿಷ್ಟ್ಯವನ್ನು ಹೊಂದಿದ್ದು, ಇದು ಬಳಕೆದಾರರಿಗೆ ತಮ್ಮ ಧ್ವನಿಯ ಮೂಲಕ ಟಿವಿಯನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ, ಇದು ವಿಷಯವನ್ನು ಹುಡುಕಲು ಮತ್ತು ಟಿವಿಯನ್ನು ನಿರ್ವಹಿಸಲು ಸುಲಭವಾಗುತ್ತದೆ ಎನ್ನಲಾಗಿದೆ.
AcerW ಸರಣಿಯ ಸ್ಮಾರ್ಟ್‌ಟಿವಿಗಳು HDMI, USB, ಮತ್ತು ಈಥರ್ನೆಟ್ ಪೋರ್ಟ್‌ಗಳು ಸೇರಿದಂತೆ ಹಲವಾರು ಸಂಪರ್ಕ ಆಯ್ಕೆಗಳನ್ನು ಸಹ ನೀಡುತ್ತದೆ. ಟಿವಿಯು ಅಂತರ್ನಿರ್ಮಿತ Wi-Fi ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ಬರುತ್ತದೆ, ಇದು ಬಳಕೆದಾರರು ತಮ್ಮ ಸಾಧನಗಳನ್ನು ಟಿವಿಗೆ ವೈರ್‌ಲೆಸ್ ಆಗಿ ಸುಲಭವಾಗಿ ಸಂಪರ್ಕಿಸಲು ಸುಲಭಗೊಳಿಸುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿಗಳು 30W ಆರಲ್ ಸೌಂಡ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಪ್ರಭಾವಶಾಲಿ ಧ್ವನಿ ಗುಣಮಟ್ಟವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ, ಈ ಸ್ಮಾರ್ಟ್‌ಟಿವಿಗಳಲ್ಲಿರುವ MEMC ಮತ್ತು ALLM ವೈಶಿಷ್ಟ್ಯಗಳು ಸುಗಮ ಮತ್ತು ತಡೆರಹಿತ ಪ್ಲೇಬ್ಯಾಕ್ ಒದಗಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
Acer W ಸ್ಮಾರ್ಟ್‌ಟಿವಿಗಳ ಬೆಲೆ ಮತ್ತು ಲಭ್ಯತೆ.
ಭಾರತದಲ್ಲಿ Acer W ಸರಣಿಯಲ್ಲಿನ 55 ಮತ್ತು 65 ಇಂಚಿನ ಎರಡು ಮಾದರಿಗಳು ಕ್ರಮವಾಗಿ 69,999 ರೂ. ಮತ್ತು 89,999ರೂ. ಬೆಲೆಯಲ್ಲಿ ಬಿಡುಗಡೆಯಾಗಿವೆ. Acer ಕಂಪೆನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್.ಇನ್ ನಂತಹ ವಿವಿಧ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟಕ್ಕೆ ಬರಲಿರುವ ಈ ಎರಡೂ ಮಾದರಿಯ ಸ್ಮಾರ್ಟ್‌ಟಿಟಿಗಳ ಮೇಲೆ ಯಾವುದೇ ವೆಚ್ಚವಿಲ್ಲದ EMI ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಲಭ್ಯವಿರಲಿವೆ ಎಂದು ಕಂಪೆನಿ ತಿಳಿಸಿದೆ.
acer launches 55 and 65 w series 4k android qled tvs in india .
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm